*ಡೈಮಂಡ್ ವಿದ್ಯಾರ್ಥಿಗಳ ಅದ್ಭುತ ಕೌಶಲ್ಯ ಪ್ರದರ್ಶಿಸಿದ ಸ್ಕಿಲ್ ಸ್ಪೆಕ್ಟ್ರ…….*

ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ಸಂಶೋಧನಾತ್ಮಕ ಜ್ಞಾನ ಬೆಳೆಸುವ ಉದ್ದೇಶದಿಂದ ಡೈಮಂಡ್ ಇಂಟರ್ ನ್ಯಾಶನಲ್ ಆಯೋಜಿಸಿದ *’ಸ್ಕಿಲ್ ಸ್ಪೆಕ್ಟ್ರ’* ಪ್ರದರ್ಶನವನ್ನು ಉದ್ಯಮಿ ಅಝಾದ್ ಮನ್ಸೂರ್ ರವರು ಉದ್ಘಾಟಿಸಿದರು. ಈ ಮೊದಲು ಡೈಮಂಡ್ ಸ್ಕೂಲ್ ನ ಪ್ರೌಢ ಶಾಲಾ ತರಗತಿಗಳ ಅತ್ಯಾಧುನಿಕ ಸೌಲಭ್ಯದ ಸುಂದರ ಕಟ್ಟಡವನ್ನು ಮಂಗಳೂರಿನ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ರವರು ಉದ್ಘಾಟಿಸಿ ದುವಾ ನೆರವೇರಿಸಿದರು.

ಬಿಸಿರೋಡ್ ಕೈಕಂಬದಲ್ಲಿ ಇರುವ ಡೈಮಂಡ್ ಇಂಟರ್ ನ್ಯಾಶನಲ್ ಸ್ಕೂಲ್ ಮಕ್ಕಳ ಸರ್ವಾಂಗೀಣ ಅಭಿವೃದ್ದಿಯ ಉದ್ದೇಶಗಳೊಂದಿಗೆ ವಿವಿಧ ಕಾರ್ಯಕ್ರಮ ಆಯೋಜಿಸುತ್ತದೆ. ವಿದ್ಯಾರ್ಥಿಗಳಲ್ಲಿ ಅಧ್ಯಯನ ಆಸಕ್ತಿ, ಸಂಶೋಧನಾತ್ಮಕ ಜ್ಞಾನ- ಅವಿಷ್ಕಾರಗಳ ಕೌಶಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ ಈ ಕೌಶಲ್ಯ ಪ್ರದರ್ಶನದಲ್ಲಿ ವಿದ್ಯಾರ್ಥಿಗಳೇ ನಿರ್ಮಿಸಿದ ವಿವಿಧ ಮಾದರಿಗಳನ್ನು ಪರಿಚಯಿಸಲಾಯಿತು. ವಿಜ್ಞಾನ, ತಂತ್ರಜ್ಞಾನ, ನಿರ್ಮಾಣ, ಇತಿಹಾಸ, ಸಂಪ್ರದಾಯ, ಸ್ಮಾರಕ, ಪ್ರಕೃತಿ, ಇನೊವೇಶನ್ ಗಳ ಮಾದರಿಗಳನ್ನು ಬಹಳ ಅದ್ಭುತವಾಗಿ ವಿದ್ಯಾರ್ಥಿಗಳು ಸೃಷ್ಠಿಸಿ ಅದರ ವಿವರಣೆ ನೀಡಿದರು. ಏಳನೇ ತರಗತಿಯಿಂದ ಕೆಳಗೆ ಇರುವ, ಸಣ್ಣ ಪ್ರಾಯದ ಈ ಮಕ್ಕಳು ಸೃಷ್ಠಿಸಿದ ವಿಭಿನ್ನ ಮತ್ತು ವಿಸ್ಮಯಗಳು ನಮ್ಮಲ್ಲಂತು ಅಚ್ಚರಿ ಮೂಡಿಸಿತು.

ಡೈಮಂಟ್ ಇಂಟರ್ ನ್ಯಾಶನಲ್ ಸ್ಕೂಲ್ ನ ನಿರ್ಧೇಶಕಿ ಶ್ರೀಮತಿ ಸನಾ ಅಲ್ತಾಫ್ ಮತ್ತು ಅವರ ತಂಡದ ಮಾರ್ಗದರ್ಶನದಲ್ಲಿ ಕೌಶಲ್ಯ ಕೇಂದ್ರಿತ ಜಗತ್ತಿಗೆ ನಮ್ಮ ಮಕ್ಕಳನ್ನು ತಯಾರುಗೊಳಿಸುವ ಈ ಮಹತ್ವಪೂರ್ಣ ಹೆಜ್ಜೆಯು ಶ್ಲಾಘನೀಯ. ವಿದ್ಯಾರ್ಥಿಗಳ ಆಸಕ್ತಿಯನ್ನು ಬೆಳೆಸುವ, ಅಭಿವೃದ್ದಿಪಡಿಸುವ ಪ್ರಯತ್ನ ನಿರಂತರ ಸಾಗಲಿ. ನಾವು ನಮ್ಮ ಮಕ್ಕಳನ್ನು ಜಾಗತಿಕ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳಲು ಅವರ ಆಸಕ್ತಿಗಳನ್ನು ಆ ನಿಟ್ಟಿನಲ್ಲಿ ಬೆಳೆಸುವ ವಾತಾವರಣ ಸೃಷ್ಠಿಸಲು ಹೆಚ್ಚು ಕ್ರೀಯಾಶೀಲರಾಗಬೇಕಿದೆ. ಕಾರ್ಯಕ್ರಮದಲ್ಲಿ ಉಧ್ಯಮಿ ಬಶೀರ್, ಡೈಮಂಡ್ ಸ್ಕೂಲ್ ನ ಅಲ್ತಾಫ್, ಕಮ್ಯುನಿಟಿ ಸೆಂಟರ್ ನ ಇಮ್ತಿಯಾಝ್ ಭಾಗವಹಿಸಿದ್ದರು.
✍️
*Haneef puttur*
*Sunni Today*