ಶಿವಮೊಗ್ಗ ಏಪ್ರಿಲ್ 15 : ಕರ್ನಾಟಕ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಶಿವಮೊಗ್ಗ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಹಿರಿಯ ಬಿಜೆಪಿ ಮುಖಂಡ ಯಡಿಯೂರಪ್ಪನವರ ಮಗ ಹಾಲಿ ಸಂಸದ ರಾಘವೇಂದ್ರ ಮತ್ತೊಮ್ಮೆ ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಉಪಮುಖ್ಯಮಂತ್ರಿ
ಬಿಜೆಪಿಯಲ್ಲಿ ಕುರುಬ ಸಮುದಾಯದ ಹಿರಿಯ ಮುಖಂಡ ಈಶ್ವರಪ್ಪ ರವರು ಸ್ಪರ್ಧಿಸುತ್ತಿದ್ದಾರೆ.  ಮಾಜಿ ಮುಖ್ಯಮಂತ್ರಿ  ಬಂಗಾರಪ್ಪನವರ ಮಗಳು , ನಟ ಶಿವರಾಜ್ ಕುಮಾರ್ ರವರ ಪತ್ನಿ ಗೀತಾ ರವರು ಸ್ಪರ್ಧಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಬಂಗಾರಪ್ಪನವರ ಕೊಡುಗೆ ಈ ಬಾರಿ ಜನರು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಇರುವ ಒಲವು ಮತ್ತು ಗೀತಾ ರವರ ಪ್ರಚಾರಶೈಲಿಯಲ್ಲಿ ಈ ಬಾರಿ ಗೆಲುವು ನಿಶ್ಚಿತ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಪೋಲಿಸ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಹಲವು ಪದಕಗಳನ್ನು ಪಡೆದು ಡಿಸಿಪಿಯಾಗಿ ನಿವೃತ್ತಿ ಹೊಂದಿರುವ ಕಾಂಗ್ರೆಸ್ ಮುಖಂಡ ಜಿ.ಎ.ಬಾವ ರವರು ಶಿವಮೊಗ್ಗ ಭಾಗದಲ್ಲಿ ಗೀತಾ ಗೆಲುವಿಗೆ ಪಣತೊಟ್ಟಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ವಿಶೇಷ ಆದ್ಯತೆ ನೀಡಿ ಶಿವಮೊಗ್ಗ ಕ್ಷೇತ್ರದ ಜವಾಬ್ದಾರಿ ನೀಡಲಾಗಿದೆ. ಉಡುಪಿ ಜಿಲ್ಲೆಯ ಭಾಗವಾಗಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಜಿಎ ಬಾವ ರವರು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಜಿಎ ಬಾವ ರವರು ದೊಡ್ಡ ಹೆಸರು ಗಳಿಸಿದ್ದರು. ಈಗಲೂ ಅವರ ಸಾವಿರಾರು ಅಭಿಮಾನಿಗಳು ಈ  ಭಾಗದಲ್ಲಿದ್ದಾರೆ. ಅವರು ಮೂಲತಹ ಕರಾವಳಿ ಭಾಗದಲ್ಲಿ ಹುಟ್ಟಿ ಬೆಳೆದವರು.


ಈ ಬಾರಿ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗಡೆಯವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು ಜಿಎ ಬಾವ. ಕರ್ನಾಟಕದ ಕರಾವಳಿ ಭಾಗ ಮತ್ತು ಮಲೆನಾಡು ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದ ವಾತಾವರಣವಿದೆ. ಮಹಿಳೆಯರು ಯುವಕರು ಮತ್ತು ರೈತರು ಹೆಚ್ಚಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಸಂಭಾವ್ಯ ಹೆಚ್ಚಿದೆ. ಶಿವಮೊಗ್ಗ ಕ್ಷೇತ್ರದ ಅಸೆಂಬ್ಲಿ ಮಟ್ಟದ ಕಾಂಗ್ರೆಸ್ ನಾಯಕರುಗಳು ಮತ್ತು ಬ್ಲಾಕ್ ಮಟ್ಟದ ನಾಯಕರುಗಳು ಅಲ್ಲದೆ ತಲಮಟ್ಟದ ಕಾರ್ಯಕರ್ತರು ಜಿಎ ಭಾವ ಮತ್ತು ಶಿವರಾಜ್ ಕುಮಾರ್ ರವರ ಮಾರ್ಗದರ್ಶನದಂತೆ ಹಗಲಿರಲು ಮನೆ ಭೇಟಿ ನೀಡುತ್ತಿದ್ದಾರೆ.