11:00 am Saturday, May 25, 2019
 • ಬ್ರಿಟೀಷ್ ಸರಕಾರ ಟಿಪ್ಪು ಸುಲ್ತಾನ್ ಹೆಸರಲ್ಲಿ ರೆಸ್ಟೋರೆಂಟ್ ನಡೆಸುತ್ತಾ ಇದೆ.

  By admin - Fri Mar 08, 9:26 am

  • Comments Off on ಬ್ರಿಟೀಷ್ ಸರಕಾರ ಟಿಪ್ಪು ಸುಲ್ತಾನ್ ಹೆಸರಲ್ಲಿ ರೆಸ್ಟೋರೆಂಟ್ ನಡೆಸುತ್ತಾ ಇದೆ.
  • 0 views

  ನಿಮಗಿದು ಗೊತ್ತೇ..!
  ಬ್ರಿಟನ್‌ನಲ್ಲಿದೆ ಹೆಮ್ಮಯ ಕನ್ನಡಿಗ ಟಿಪ್ಪು ಸುಲ್ತಾನ್ ಹೆಸರಿನ ರೆಸ್ಟೂರೆಂಟ್..😍🌳

  ತನ್ನ ಮೈಸೂರು ರಾಜ್ಯವನ್ನು ಉಳಿಸಲು ಬ್ರಿಟೀಷರೊಂದಿಗೆ ಕಾದಾಡಿದ ಟಿಪ್ಪು ಮಹಾಪರಾಕ್ರಮಿ ಆಗಿದ್ದ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅದೇನೋ ಹೇಳ್ತಾರಲ್ಲ ಶತ್ರು ಕೂಡ ಮೆಚ್ಚಿದ ವೀರ ಅಂತ, ಟಿಪ್ಪು ಅದೇ ಸಾಲಿಗೆ ಸೇರಿದವನು. ಬ್ರಿಟೀಷರು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ನಮ್ಮ ಕನ್ನಡದ ಗಂಡುಗಲಿ ಟಿಪ್ಪುವನ್ನು ಸೋಲಿಸಿರಬಹುದು. ಆದರೆ ಟಿಪ್ಪುವಿನ ಸ್ಥಾನ ಆತನ ಪರಾಕ್ರಮ ಆತನ ಘನತೆ ಎಂತಹದ್ದು ಎಂದು ಅವರಿಗೂ ಕೂಡ ಗೊತ್ತಿತ್ತು ಟಿಪ್ಪು ಸಾಮಾನ್ಯದವನಲ್ಲ ಎಂದು. ಆ ಕಾರಣಕ್ಕಾಗಿಯೇ ತನ್ನ ಜೀವಿತಕಾಲದಲ್ಲಿ ತಮ್ಮನ್ನು ಅಪಾರವಾಗಿ ಕಾಡಿದ ಟಿಪ್ಪುವಿನ ಸ್ಮರಣಾರ್ಥ ಬ್ರಿಟೀಷ್ ಸರಕಾರ ಟಿಪ್ಪು ಸುಲ್ತಾನ್ ಹೆಸರಲ್ಲಿ ರೆಸ್ಟೋರೆಂಟ್ ನಡೆಸುತ್ತಾ ಇದೆ. ಅದೂ ಕೂಡ ಸಾಮಾನ್ಯ ರೆಸ್ಟೋರೆಂಟ್ ಅಲ್ಲ.

  ಈ ರೆಸ್ಟೋರೆಂಟ್ ಬರ್ಮಿಂಗ್‌ಹ್ಯಾಮ್ ನಗರದಲ್ಲಿ ಸ್ವಾದಿಷ್ಟ ಇಂಡಿಯನ್ ಮತ್ತು ಪಾಕಿಸ್ತಾನಿ ಖಾದ್ಯಗಳಿಗೆ ಎತ್ತಿದ ಕೈ. ಭಾರತದಿಂದ ಅಥವಾ ಪಾಕಿಸ್ತಾನದಿಂದ ಹೋದವರಿಗೆ ಊರಿನ ಊಟ ಇಲ್ಲಿ ಸಿಗುತ್ತದೆ. ಬ್ರಿಟೀಷರು ಟಿಪ್ಪುವಿನ ಶತ್ರುಗಳಾಗಿದ್ದರೂ ಅವರಿಗೆ ಗೊತ್ತಿತ್ತು ಟಿಪ್ಪು ಯಾರೆಂದು… ಆದರೆ ನಮ್ಮವರು ಮಾತ್ರ ಆತನ ಧರ್ಮ ನೋಡಿ ಈ ನಾಡಲ್ಲಿ ಹುಟ್ಟಿದ ಒಬ್ಬ ವೀರ ಯೋಧ ಗಂಡುಗಲಿಯನ್ನು ಅವಮಾನಿಸುತ್ತಾರೆ.

  ಇದೀಗ ಇಂಗ್ಲೇಂಡಿನ ಎರಡು ಕಡೆ ಟಿಪ್ಪು ಸುಲ್ತಾನ್ ರೆಸ್ಟೊರೆಂಟ್ ಕಾರ್ಯಾಚರಿಸುತ್ತಿದೆ.

  #ShareMaximum
  #Tippusulthan

  – Irzan Addoor

  • Comments Off on ಬ್ರಿಟೀಷ್ ಸರಕಾರ ಟಿಪ್ಪು ಸುಲ್ತಾನ್ ಹೆಸರಲ್ಲಿ ರೆಸ್ಟೋರೆಂಟ್ ನಡೆಸುತ್ತಾ ಇದೆ.
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.