05:50 am Wednesday, July 24, 2019
 • ಮಹಿಳೆಯರ ಮೇಲಿನ ಹಿಂಸೆ ನಿಲ್ಲಲಿ, ನಮ್ಮ ಸಂರಕ್ಷಣೆಗಾಗಿ ಹೊರಾಡೋಣ” ವಿಚಾರ ಸಂಕಿರಣ

  By admin - Thu Feb 28, 2:26 am

  • Comments Off on ಮಹಿಳೆಯರ ಮೇಲಿನ ಹಿಂಸೆ ನಿಲ್ಲಲಿ, ನಮ್ಮ ಸಂರಕ್ಷಣೆಗಾಗಿ ಹೊರಾಡೋಣ” ವಿಚಾರ ಸಂಕಿರಣ
  • 0 views
  ಮಹಿಳೆಯರ ಮೇಲಿನ ಹಿಂಸೆ ನಿಲ್ಲಲಿ, ನಮ್ಮ ಸಂರಕ್ಷಣೆಗಾಗಿ ಹೊರಾಡೋಣ” ವಿಚಾರ ಸಂಕಿರಣ
  ಮಂಗಳೂರು: ವುಮೆನ್ ಇಂಡಿಯಾ ಮೂಮೆಂಟ್ ದೇಶದಾದ್ಯಂತ ಮಹಿಳಾ ದೌರ್ಜನ್ಯದ ವಿರುದ್ಧ ನಡೆಸುತ್ತಿರುವ “ಮಹಿಳೆಯರ ಮೇಲಿನ ಹಿಂಸೆ ನಿಲ್ಲಲಿ, ನಮ್ಮ ಸಂರಕ್ಷಣೆಗಾಗಿ ಹೋರಾಡೋಣ” ಎಂಬ ರಾಷ್ಟç ವ್ಯಾಪಿ ಅಭಿಯಾನವನ್ನು ಹಮ್ಮಿಕೊಂಡಿದೆ.2018 ಸಪ್ಟೆಂಬರ್ 23 ರಿಂದ 2019 ಮಾರ್ಚ್ 8 ರ ವರೆಗೆ ವಿವಿದ ಮಹಿಳಾ ಜಾಗೃತಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದ್ದು ಈ ರಾಷ್ಟಿçÃಯ ಅಭಿಯಾನದ ಅಂಗವಾಗಿ ವಿಮ್ ದ.ಕ ಜಿಲ್ಲಾ ಸಮಿತಿ ವತಿಯಿಂದ ವಿಚಾರ ಸಂಕಿರಣವನ್ನು ದಿನಾಂಕ 26-02-2019 ಮಂಗಳೂರಿನ ನೇತ್ರಾವತಿ ಸಭಾ ಭವಣದಲ್ಲಿ ನಡೆಸಲಾಯಿತು.
  ಕಾರ್ಯಕ್ರಮದ ಉದ್ಘಾಟಣೆಯನ್ನು ಮಾಡಿದ ವಿಮೆನ್ಸ್ ಇಂಡಿಯಾ ಮೂಮೆಂಟ್ ಇದರ ರಾಜ್ಯಧ್ಯಕ್ಷೆಯಾದ ಶಾಹಿದಾ ತಸ್ಲಿಮ್ ರವರು ಮಾತನಾಡಿ ರಾಷ್ಟç ಮಟ್ಟದ ಮಹಿಳಾ ಸಂಘಟನೆಯಾಗಿರುವ ವಿಮೆನ್ಸ್ ಇಂಡಿಯಾ ಮೂಮೆಂಟ್ ವಿಮ್ ತಳಮಟ್ಟದಲ್ಲಿ ಎಲ್ಲಾ ಭಾಷೆ, ಜಾತಿ ಧರ್ಮಗಳ ಮಹಿಳೆಯರನ್ನು ಸಂಘಟಿಸಿ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಜಾಗೃತಿ ಮೂಡಿಸುತ್ತದೆ. ಸರಕಾರಗಳು ಮಹಿಳೆಯರ ಅಭಿವೃದ್ಧಿ ವಿಷಯದಲ್ಲಿ ಕೇವಲ ಷೋಷಣೆ ಮತ್ತು ಬರವಸೆಗಳನ್ನು ಮಾತ್ರ ನೀಡುತ್ತದೆ. ಸಮಾಜದ ಅರ್ಧಭಾಗವಾಗಿರುವ ಮಹಿಳೆಯರ ಹಕ್ಕು, ಅಭಿವೃದ್ಧಿ ಘನತೆ ಮತ್ತು ಸ್ವಾಭಿಮಾನ ರಕ್ಷಣೆಗಾಗಿ ಎಂದೂ ಹೋರಾಡುತ್ತಿರುವ ಮಹಿಳಾ ಸಂಘಟಣೆಯಾಗಿದೆ ಎಂದು ತಿಳಿಸಿದರು.
  ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಎರ್ಮಾಳು ಉಡುಪಿ ಇದರ ಪ್ರಾಂಶುಪಾಲರಾದ ಡಾ| ಜ್ಯೊÃತಿ ಚೆಳ್ಯಾರು ಇವರು ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ಬಗ್ಗೆ ಎಂಬ ವಿಷಯವನ್ನು ಮಂಡಿಸಿದರು. ಮಹಿಳೆಯರ ಹಕ್ಕುಗಳು ಮತ್ತು ಉಲ್ಲಂಘಣೆ ಎಂಬ ವಿಷಯದ ಬಗ್ಗೆ ಮಂಗಳೂರಿನ ವಕೀಲರಾದ ಸಿಸ್ಟರ್ ಆಶಾ ಪ್ರಿÃತಿ ಯವರು ವಿಷಯವನ್ನು ಮಂಡಿಸಿದರು. ಹಾಗೂ ಇನ್ನೊÃರ್ವ ಮುಖ್ಯ ಅಥಿತಿ ಓWಈ ಇದರ ರಾಜ್ಯಾಧ್ಯಕ್ಷೆ ಝೀನತ್ ಫಿರೋಝ್ ರವರು ಮಹಿಳಾ ಹೋರಾಟದ ಅವಶ್ಯಕತೆಗಳು ಎಂಬ ವಿಷಯವನ್ನು ಮಂಡಿಸಿದರು. ವಿಮೆನ್ಸ್ ಇಂಡಿಯಾ ಮೂವ್‌ಮೆಂಟ್ ಇದರ ಜಿಲ್ಲಾಧ್ಯಕ್ಷೆಯಾದ ನಸ್ರಿಯಾ ಬೆಳ್ಳಾರೆಯವರು ಎರಡುವರೆ ವರ್ಷ ಗಳಲ್ಲಿ ದ.ಕ ಜಿಲ್ಲೆಯಲ್ಲಿ ಮಹಿಳೆಯರಿಗಾದ ದೌರ್ಜನ್ಯದ ಬಗ್ಗೆ ನಮ್ಮ ಸಂಘಟಣೆ ನಡೆಸಿದ ಹೋರಾಟಗಳನ್ನು ವಿವರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದ ಫಾತಿಮಾ ನಝ್ರತ್ ಸ್ವಾಗತಿಸಿ, ಜಿಲ್ಲಾ ಸಮಿತಿ ಸದಸ್ಯೆಯಾದ ಸಝರಾ  ಪುತ್ತೂರು ವಂದಿಸಿದರು ಕಾರ್ಯಕ್ರಮವನ್ನು ರಮ್ಲತ್ ಮಂಗಳೂರು ರವರು ನಿರೂಪಿಸಿದರು.
  ವುಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ
  ಮಂಗಳೂರು : ವುಮೆನ್ ಇಂಡಿಯಾ ಮೂವ್ಮೆಂಟ್ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮವು ನಿನ್ನೆ ಮಂಗಳೂರಿನ ನೇತ್ರಾವತಿ ಸಭಾ ಭವನದಲ್ಲಿ WIಒ ಇದರ ರಾಜ್ಯಧ್ಯಕ್ಷೆಯಾದ ಶಾಹಿದಾ ತಸ್ಲಿಮಾ ಇವರ ಅದ್ಯಕ್ಷತೆಯಲ್ಲಿ ನೂತನ ಸಮಿತಿಯನ್ನು ಘೋಷಿಸಿದರು.
  ನೂತನ ಜಿಲ್ಲಾಧ್ಯಕ್ಷೆಯಾಗಿ ನಸ್ರಿಯಾ ಬೆಳ್ಳಾರೆ, ಉಪಾಧ್ಯಕ್ಷೆಯಾಗಿ ಯಶೋಧ ಅಲಂಗಾರು, ಪ್ರಧಾನ ಕಾರ್ಯದರ್ಶಿಯಾಗಿ ಫಾತಿಮಾ ನಝ್ರತ್, ಕಾರ್ಯದರ್ಶಿಯಾಗಿ ಅಡ್ವಕೇಟ್ ರುಬಿಯಾ ಮಂಗಳೂರು, ಕೋಶಾಧಿಕಾರಿಯಾಗಿ ಝುಳೇಖಾ ಬಂಟ್ವಾಳ, ಸಮಿತಿಯ ಸದಸ್ಯರಾಗಿ ಮರಿಯಮ್ಮ ಬೆಳ್ತಂಗಡಿ, ಸಜರಾ ಪುತ್ತೂರು, ಝುಹನಾ ಬಂಟ್ವಾಳ, ಸಫೀಯ ಬೆಂಗರೆ, ಸಹನಾಝ್ ಒಟ್ಟು ಹನ್ನೊಂದು ಮಂದಿಯ ಸಮಿತಿಯನ್ನು ಘೋಷಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಯಾದ  ಆಯಿಶಾ ಬಜ್ಪೆಯವರು ನೂತನ ಸಮಿತಿಗೆ ಹೂ ಗುಚ್ಚ ನೀಡುವ ಮೂಲಕ ಅಭಿನಂದಿಸಿದರು.
  • Comments Off on ಮಹಿಳೆಯರ ಮೇಲಿನ ಹಿಂಸೆ ನಿಲ್ಲಲಿ, ನಮ್ಮ ಸಂರಕ್ಷಣೆಗಾಗಿ ಹೊರಾಡೋಣ” ವಿಚಾರ ಸಂಕಿರಣ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.