11:24 am Saturday, May 25, 2019
  • ಯಾವುದೇ ಪಕ್ಷ ಬೆಂಬಲ ನೀಡಲಿ ಅಥವಾ ನೀಡದಿರಲಿ ಚುನಾವಣೆ ಸ್ಪರ್ಧಿಸುವುದು ಖಚಿತ- ನಟ ಪ್ರಕಾಶ್ ರಾಜ್

    By admin - Fri Feb 22, 1:05 pm

    • Comments Off on ಯಾವುದೇ ಪಕ್ಷ ಬೆಂಬಲ ನೀಡಲಿ ಅಥವಾ ನೀಡದಿರಲಿ ಚುನಾವಣೆ ಸ್ಪರ್ಧಿಸುವುದು ಖಚಿತ- ನಟ ಪ್ರಕಾಶ್ ರಾಜ್
    • 0 views


    ಯಾವುದೇ ಪಕ್ಷ ಬೆಂಬಲ ನೀಡಲಿ ಅಥವಾ ನೀಡದಿರಲಿ
    ಚುನಾವಣೆ ಸ್ಪರ್ಧಿಸುವುದು ಖಚಿತ- ನಟ ಪ್ರಕಾಶ್ ರಾಜ್
    ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಬೆಂಬಲ ನೀಡಲಿ ಅಥವಾ ನೀಡದಿರಲಿ ಜನರ ವಿಶ್ವಾಸದಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
    ಹೊಸದಾಗಿ ಅಸ್ವಿತ್ವಕ್ಕೆ ಬಂದಿರುವ ರಾಷ್ಟ್ರೀಯ ಸೌಹಾರ್ದ ವೇದಿಕೆ ವತಿಯಿಂದ ರಾಜಾಜಿನಗರದಲ್ಲಿಂದು ನಡೆದ ಪುಲ್ವಾಮ್ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದು, ಈ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಬಿಜೆಪಿ ಹೊರತುಪಡಿಸಿ ಇನ್ನುಳಿದೆಲ್ಲ ಪಕ್ಷಗಳ ಮುಖಂಡರನ್ನು ಈಗಾಗಲೇ ಭೇಟಿ ಚರ್ಚಿಸಿದ್ದೇನೆ. ಆದರೆ, ಆ ಪಕ್ಷಗಳ ಮುಖಂಡರಿಂದ ಯಾವುದೇ ಅಂತಿಮ ನಿಲುವು ಪ್ರಕಟಗೊಂಡಿಲ್ಲ. ಆದರೂ ಎದೆಗುಂದುವುದಿಲ್ಲ ಜನರ ವಿಶ್ವಾಸ ಗಳಿಸಿ ಮುನ್ನಡೆಯುತ್ತೇನೆ ಎಂದರು.
    ಈಗಾಗಲೇ ಕ್ಷೇತ್ರಾದ್ಯಂತ ಸಂಚರಿಸಿ, ಜನರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಿದ್ದೇನೆ. ಮತ್ತೆ ಕ್ಷೇತ್ರದಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಆರಿತಿದ್ದೇನೆ. ರಾಷ್ಟ್ರೀಯ ಸೌಹಾರ್ದ ವೇದಿಕೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು, ಜನಪರ ಸಂಘಟನೆಗಳು ತಮಗೆ ಬೆಂಬಲ ವ್ಯಕ್ತಪಡಿಸಿದ್ದು, ಕ್ಷೇತ್ರದ ಜನರ ತೀರ್ಮಾನದಂತೆ ತಾವು ಮುನ್ನಡೆಯುವುದಾಗಿ ಪ್ರಕಾಶ್ ರಾಜ್ ಹೇಳಿದರು.
    ರಾಷ್ಟ್ರೀಯ ಸೌಹಾರ್ದ ವೇದಿಕೆ ಯ ಸಂಸ್ಥಾಪಕ ಅಧ್ಯಕ್ಷ ಎಸ್.ವಿ. ಸಮೀರ್ ಮಂಡ್ಯ ಮಾತನಾಡಿ, ಸಂವಿಧಾನತ್ಮಕ ಮೂಲಭೂತ ಸೌಕರ್ಯ ಪ್ರತಿಯೊಬ್ಬ ಪ್ರಜೆಗೂ ಮುಟ್ಟಿಸುವ ಉದ್ದೇಶದಿಂದ ವೇದಿಕೆಯನ್ನು ಹುಟ್ಟು ಹಾಕಲಾಗಿದೆ. ಈ ಸಂಘಟನೆಯು ಯಾವುದೇ ಜಾತಿ, ಧರ್ಮ, ಭಾಷೆಗೆ ಸೇರಿದಲ್ಲ. ಇದರ ಮೂಲ ಅಂಶವೇ ಸಂವಿಧಾನವೇ ಭಾರತೀಯರ ಧರ್ಮಗ್ರಂಥ. ಸಮಾನತೆ, ಸಹೋದರತ್ವ, ಸೌಹಾರ್ದವೇ ರಾಷ್ಟ್ರೀಯತೆ ಎಂದು ತಿಳಿಸಿದರು.


    ಕಾರ್ಯಕ್ರಮದಲ್ಲಿ ವೇದಿಕೆಯ ಗೌರವಾಧ್ಯಕ್ಷ ಶಹರಿಯಾರ್ ಖಾನ್, ಕಾರ್ಯಾಧ್ಯಕ್ಷ ದಸ್ತಗಿರಿ ಮುಲ್ಲಾ, ಪ್ರಧಾನ ಕಾರ್ಯದರ್ಶಿ ಎಂ.ಎಂ. ಬಳಬುಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಕೌಸರ್, ನ್ಯಾಯವಾದಿ ಸುರೇಂದ್ರ ಉಗಾರೆ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಹಾಗೂ ಕಾರ್ಮಿಕ ಮುಖಂಡ ಅಕ್ರಮ್ ಮತ್ತಿತರರು ಹಾಜರಿದ್ದರು.

    • Comments Off on ಯಾವುದೇ ಪಕ್ಷ ಬೆಂಬಲ ನೀಡಲಿ ಅಥವಾ ನೀಡದಿರಲಿ ಚುನಾವಣೆ ಸ್ಪರ್ಧಿಸುವುದು ಖಚಿತ- ನಟ ಪ್ರಕಾಶ್ ರಾಜ್
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.