08:03 pm Tuesday, June 25, 2019
  • ಸಚಿವ ಜಮೀರ್ ಬಡವರ ಜೊತೆ ಬೆರೆತು ಕೆಲಸ ಮಾಡುವವ: ಸಿದ್ದರಾಮಯ್ಯ

    By admin - Wed Feb 13, 5:29 am

    • Comments Off on ಸಚಿವ ಜಮೀರ್ ಬಡವರ ಜೊತೆ ಬೆರೆತು ಕೆಲಸ ಮಾಡುವವ: ಸಿದ್ದರಾಮಯ್ಯ
    • 0 views

    ಮುಸ್ಲಿಮರ ಋಣ ತೀರಿಸುವ ಕೆಲಸ ಮಾಡಬೇಕು- ಸಿದ್ದರಾಮಯ್ಯ*

    ಬಾಗಲಕೋಟೆ : ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರವಾದ ಬಾದಾಮಿಯಲ್ಲಿ ನಡೆದ ಅಲ್ಪಸಂಖ್ಯಾತರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದು, ಬಾದಾಮಿ ಕ್ಷೇತ್ರದಲ್ಲಿ ನನಗೆ ಮುಸ್ಲಿಮರು ನೂರಕ್ಕೂ ನೂರು ವೋಟ್ ಕೊಟ್ಟಿದ್ದಾರೆ. ರಾಜ್ಯದಲ್ಲೇ ಮುಸ್ಲಿಮರು ನಮಗೆ ವೋಟ್ ಕೊಟ್ಟಿದ್ದಾರೆ. ಅದಕ್ಕೆ ಅವರ ಋಣ ತೀರಿಸುವ ಕೆಲಸ ಮಾಡ್ಬೇಕು ಎಂದು ಹೇಳಿದ್ದಾರೆ.

    ಅಲ್ಲದೇ, ಸರ್ಕಾರ ದಿಂದ ಏನೇನು ಸೌಲಭ್ಯಗಳಿವೆ ಅವನ್ನು ಕೊಡಬೇಕು. ವೈಯಕ್ತಿಕವಾಗಿ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಜಮೀರ್‌ಗೆ ಹೇಳಿದ್ದೇ. ಒಂದೇ ಬಾರಿಗೆ ಇಷ್ಟೊಂದು ಪರಿಹಾರ ಕೊಟ್ಟಿರೋ ನಿದರ್ಶನ ವಿಲ್ಲ. ಇದು ನಾವು ಮಾಡಬೇಕಾದ ಕೆಲಸ, ಕರ್ತವ್ಯ ಎಂದು ಹೇಳಿದ್ದಾರೆ.

    ಇನ್ನು ಸಚಿವ ಜಮೀರ್ ಅಹಮದ್‌ರನ್ನ ಹೊಗಳಿದ ಮಾಜಿ ಸಿಎಂ ಸಿದ್ದರಾಮಯ್ಯ, ನನಗೆ ಜಮೀರ್ ಅಹಮ್ಮದ್ ಮಂತ್ರಿ ಮಾಡಿ ಎಂದು ಕೇಳಿರಲಿಲ್ಲ. ಜಮೀರ್ ಬಡವರ ಜೊತೆ ಮುಸ್ಲಿಂರೊಂದಿಗೆ ಬೆರೆತು ಕೆಲಸ ಮಾಡುವವ. ಎಲ್ಲಕ್ಕಿಂತ ಮನಷ್ಯತ್ವವಿರುವ ವ್ಯಕ್ತಿ ಎಂದಿದ್ದಾರೆ.

    ಜಮೀರ್‌ ಮೊದಲು ಜೆಡಿಎಸ್ ನಲ್ಲಿದ್ರು. ಆಗ ಜಮೀರ್ ಅಹ್ಮದ್ ನಮ್ಮೊಂದಿಗೆ ಬಾ ಎಂದೆ. ನನ್ನ ಮಾತು ನಂಬಿ ಏಳು ಜನ ಕರೆದುಕೊಂಡು ಬಂದ್ರು. ಸಂಪೂರ್ಣವಾಗಿ ನಿಮ್ಮನ್ನು ರಕ್ಷಣೆ ಮಾಡೋದು ನನ್ನ ಜವಾಬ್ದಾರಿ ಎಂದಿದ್ದೆ. ಎಂಟು ಜನರಿಗೆ ಟಿಕೆಟ್ ಕೊಡಿಸಿದೆ. ಎಂಟು ಜನರಲ್ಲಿ ಮೂರು ಜನ ಗೆದ್ರು. ನಾನು ಬದುಕಬೇಕು ಬೇರೆಯವರು ಬದುಕಬೇಕು. ಎಲ್ಲರೂ ಮನುಷ್ಯರಾಗಿ ಬದುಕುಬೇಕು. ಇದನ್ನು ನಂಬಿಕೊಂಡು ಬಂದವ ಜಮೀರ್. ನಾನೇ ಜಮೀರ್ ಅಹ್ಮದ್‌ಖಾನ್‌ನನ್ನು ಮಂತ್ರಿ ಮಾಡಿದೆ. ಕೆಲವರು ನನ್ನೊಂದಿಗೆ ಮುನಿಸಿಕೊಂಡ್ರು. ಆಗ ನಾನು ಜನಪರ ಇರುವ ವ್ಯಕ್ತಿ ಜಮೀರ್ ಅಹ್ಮದ್ ಖಾನ್ ಎಂದು ಹೇಳಿದ್ದೇ ಎಂದು ಹೊಗಳಿದ್ದಾರೆ.

    ಕೇವಲ ಮುಸ್ಲಿಮರಷ್ಟೇ ಅಲ್ಲ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗ್ಬೇಕು. ಧರ್ಮ ಧರ್ಮಗಳ ಮಧ್ಯೆ,ಮನುಷ್ಯ ಮನುಷ್ಯರ ಮಧ್ಯೆ ಗೋಡೆ ಕಟ್ಟುವ ಕೆಲಸ ಮಾಡಬಾರದು. ನಾವು ಹಿಂದೂ ಧರ್ಮದಲ್ಲಿ ಹುಟ್ಟಿದ್ದೀವಿ. ನೀವೂ ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ರಿ. ನಾನು ಮುಖ್ಯಮಂತ್ರಿ ಆಗಿದ್ದಾಗ ಟಿಪ್ಪು ಜಯಂತಿ ಆಚರಣೆ ಮಾಡಿದೆ. ಆಗ ಕೆಲವರು ವಿರೋಧ ಮಾಡಿದ್ರು. ಆಗ ನಾನು ಟಿಪ್ಪು ಹಿಂದೂ ದೇಗುಲ ಕಟ್ಟಿಸೋ ಕೆಲಸ ಮಾಡಿದ್ದಾರೆ ಎಂದ.

    ಅಲ್ಲದೇ, ಶಾರದಾ ಶೃಂಗೇರಿ ಜೀರ್ಣೋದ್ಧಾರ ಮಾಡಿದವರು ಟಿಪ್ಪು. ಟಿಪ್ಪು ಯಾವಾಗಲೂ ಮತಾಂಧನಾಗಿರಲಿಲ್ಲ. ಟಿಪ್ಪು ಮಂತ್ರಿ ಪೂರ್ಣಯ್ಯ ಬ್ರಾಹ್ಮಣ. ಟಿಪ್ಪು ಮತಾಂಧನಾಗಿದ್ರೆ ಬ್ರಾಹ್ಮಣರನ್ನು ಮಂತ್ರಿ ಮಾಡುತ್ತಿರಲಿಲ್ಲ. ಟಿಪ್ಪು ದೇಶ ಪ್ರೇಮಿ, ಸ್ವಾತಂತ್ರ್ಯ ಪ್ರೇಮಿ. ನೀವೂ ಎಷ್ಟೇ ವಿರೋಧ ಮಾಡಿದ್ರೂ ಟಿಪ್ಪು ಜಯಂತಿ ಮಾಡಿಯೇ ತೀರುತ್ತೇನೆ ಎಂದಿದ್ದೆ ಎಂದು ಹೇಳಿದ್ದಾರೆ.

    ಇನ್ನು ಬಿಜೆಪಿಯವರ ವಿರುದ್ಧ ಕಿಡಿ ಕಾರಿದ ಸಿದ್ದರಾಮಯ್ಯ, ಬಿಜೆಪಿಯವರು ಢೋಂಗಿಗಳು. ಜಪ್ಪಯ್ಯ ಅಂದ್ರು ಹೆದರದೇ ಟಿಪ್ಪು ಜಯಂತಿ ಮಾಡಿದೆ. ನಾನು ಮುಖ್ಯಮಂತ್ರಿ ಆಗಿದ್ರೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 10ಸಾವಿರ ಕೋಟಿ ಅನುದಾನ ಬಜೆಟ್‌ನಲ್ಲಿ ಕೊಡ್ತಿದ್ದೆ. ಶಾದಿ ಭಾಗ್ಯ ಯೋಜನೆ ಜಾರಿಗೆ ತಂದಾಗ ಯಡಿಯೂರಪ್ಪ, ಶೋಭಕ್ಕ ವಿರೋಧಿಸಿದ್ರು. ಸಿದ್ದರಾಮಯ್ಯ ಮುಸ್ಲಿಂ ಪರವಾಗಿದ್ದಾರೆ ಎಂದು ಹೇಳಿದ್ರು. ನಾನು ಎಲ್ಲ ಧರ್ಮದ ಪರವಾಗಿದ್ದೇನೆ ಎಂದು ಹೇಳಿದ್ದಾರೆ.

    ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದ್ರು. ಎಲ್ಲಿದೆ ಮೋದಿಯವರೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದ ಸಿದ್ದು ವಾಗ್ದಾಳಿ. ಮುಸ್ಲಿಮರು ಶೇಕಡಾ 14ರಷ್ಟಿದ್ದಾರೆ. ಇವರನ್ನು ಮೋದಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೇಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗುತ್ತೆ. ವಿಶೇಷವಾಗಿ ಎಲ್ಲಜಾತಿ ಧರ್ಮದ ಪರವಾಗಿ ನಾವಿದ್ದೇವೆ. ನಾನು ಎಲ್ಲ ಭಾಗ್ಯ ಕೊಟ್ಟೆ. ಒಂದೇ ಜಾತಿಯವರಿಗೆ ಮಾಡಿದ್ವಾ..?? ಎಲ್ಲ ಜಾತಿಯವರಿಗೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

    • Comments Off on ಸಚಿವ ಜಮೀರ್ ಬಡವರ ಜೊತೆ ಬೆರೆತು ಕೆಲಸ ಮಾಡುವವ: ಸಿದ್ದರಾಮಯ್ಯ
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.