06:33 am Wednesday, July 24, 2019
 • ಉಳ್ಳಾಲ ಪ್ರೀಮಿಯರ್ ಲೀಗ್ ಯುಪಿಎಲ್-2019 ಕ್ರಿಕೆಟ್ ಪಂದ್ಯಾಟ ಸಮಾರೋಪ*

  By admin - Tue Feb 12, 8:17 am

  • Comments Off on ಉಳ್ಳಾಲ ಪ್ರೀಮಿಯರ್ ಲೀಗ್ ಯುಪಿಎಲ್-2019 ಕ್ರಿಕೆಟ್ ಪಂದ್ಯಾಟ ಸಮಾರೋಪ*
  • 0 views

  🏆🏆🏆🏆🏆 *ಉಳ್ಳಾಲ ಪ್ರೀಮಿಯರ್ ಲೀಗ್ ಯುಪಿಎಲ್-2019 ಕ್ರಿಕೆಟ್ ಪಂದ್ಯಾಟ ಸಮಾರೋಪ* 🏆🏆🏆

  *ಉಳ್ಳಾಲ ಕ್ರಿಕೆಟ್ ಬೋರ್ಡ್ ಅರ್ಪಿಸುವ ಉಳ್ಳಾಲ ಪ್ರೀಮಿಯರ್ ಲೀಗ್ ಯುಪಿಎಲ್-2019 ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ಕಾರ್ಯಕ್ರಮ ಉಳ್ಳಾಲ ಸಿ ಗ್ರೌಂಡ್ ಮೈದಾನದಲ್ಲಿ ಭಾನುವಾರ ನಡೆಯಿತು*.

  *ಉಳ್ಳಾಲದಲ್ಲಿ 4 ದಿನಗಳ ಕಾಲ ನಡೆದ ಯುಪಿಎಲ್ ಕ್ರಿಕೆಟ್ ಪಂದ್ಯಾಟವನ್ನು 25 ಸಾವಿರ ಕ್ಕಿಂತಲೂ ಅಧಿಕ ಜನ ವೀಕ್ಷಿಸಿದರು*

  *ಯು.ಪಿ.ಎಲ್ ಕ್ರಿಕೆಟ್* *ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ  ಭಾಗವಹಿಸಿ ಮಾತನಾಡಿದ ಜೆ. ಡಿ. ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಯ್ಯದ್ ಅವರು ಉಳ್ಳಾಲ ಕ್ರಿಕೆಟ್ ಬೋರ್ಡ್ ಆಯೋಜಿಸಿದ್ದ  ಉಳ್ಳಾಲ ಪ್ರಿಮಿಯರ್ ಲೀಗ್-2019 ಕ್ರಿಕೆಟ್ ಪಂದ್ಯಾಟವನ್ನು ನೋಡಲು ಸುಮಾರು ಜನ ಸೇರಿದ್ದು, ತುಂಬಾ ಖುಷಿ ನೀಡುತ್ತಿದೆ. ಇದೇ ರೀತಿ ಇನ್ನು ಮುಂದಕ್ಕೂ ನಿಮ್ಮ ಪ್ರೋತ್ಸಾಹ ಕ್ರಿಕೆಟ್ ಆಟಗಾರರ ಮೇಲೆ ಇರಲಿ ಎಂದರು*
  *ನಾಲ್ಕು ದಿನಗಳಿಂದ ನಡೆಯುತ್ತಿರುವ  ಕ್ರಿಕೆಟ್ ಪಂದ್ಯಾಟದಲ್ಲಿ ಇಷ್ಟು ಜನ ಸೇರಿರುವುದನ್ನು  ನಾನು ಎಲ್ಲಿಯೂ ನೋಡಿಲ್ಲ. ತುಂಬಾ ಖುಷಿಯಾಗುತ್ತಿದೆ. ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲು ಎಲ್ಲರೂ ಸಹಕಾರ ನೀಡಬೇಕು ಎಂದು ಮಾಜಿ ಮೇಯರ್ ಅಶ್ರಫ್ ಹೇಳಿದರು*

  *ಉಳ್ಳಾಲದಲ್ಲಿ ಕ್ರಿಕೆಟ್ ಪಂದ್ಯಾಟ ನಡೆದರೆ ಹೊರಗಿನ ತೀರ್ಪುಗಾರರಿಗೆ ಉಳ್ಳಾಲಕ್ಕೆ ಬರಲು ಹೆದರಿಕೆ ಆಗುತ್ತಿತ್ತು. ಆದರೆ ಉಳ್ಳಾಲ ಕ್ರಿಕೆಟ್ ಬೋರ್ಡ್ ಯಾವಾಗ ಸ್ಥಾಪನೆ ಆಗಿದೆಯೋ, ಅಂದಿನಿಂದ  ಉಳ್ಳಾಲಕ್ಕೆ ತೀರ್ಪು ಗಾರರಾಗಿ ಬರಲು  ಹೆದರಿಕೆಯಾಗುತ್ತಿದೆ ಎಂದು ಯಾರು ಹೇಳುತ್ತಿದ್ದರೋ, ಅವರೇ ಈಗ ತೀರ್ಪುಗಾರಾಗಿ ಬರುತ್ತೇವೆ  ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಉಳ್ಳಾಲ ಕ್ರಿಕೆಟ್ ಬೋರ್ಡ್  ಮತ್ತು ಇದಕ್ಕೆ ಸಹಕಾರ ನೀಡಿದ ನಮ್ಮ ಉಳ್ಳಾಲದ ಕ್ರೀಡಾಭಿಮಾನಿಗಳು ಎಂದು ಯು.ಸಿ.ಬಿ. ಅಧ್ಯಕ್ಷ ಖಲೀಲ್ ಇಬ್ರಾಹಿಂ  ಹೇಳಿದರು* .

  *ಉಳ್ಳಾಲ ನಗರ ಸಭೆಯ ಮಾಜಿ ಸದಸ್ಯ ಫಾರೂಕ್ ಯು.ಎಚ್., ಅಶ್ರಫ್ ಬಾವಾ, ಉಳ್ಳಾಲ ಸಯ್ಯದ್ ಮದನಿ ದರ್ಗಾಸ ಪ್ರ. ಕಾ. ಹಾಜಿ ಮೊಹಮ್ಮದ್ ತ್ವಾಹಾ, ಉದ್ಯಮಿ ಯು.ಎಚ್. ಹಸೈನಾರ್, ಬದ್ರಿಯಾ ಮಸೀದಿ ಅಧ್ಯಕ್ಷ ಹಮೀದ್ ಕೋಡಿ, ನಗರ ಸಭೆ ಸದಸ್ಯ ಯು.ಎಂ. ಜಬ್ಬಾರ್, ರಮೀಝ್, ಅಬ್ದುಲ್ ಅಝೀಝ್, ನಿಝಾಂ, ಅಕ್ರಂ ಹಸನ್, ಮಂಗಳೂರು ವಿಧಾನಸಭಾ ಕ್ಷೇತ್ರ  ಎಸ್ಡಿಪಿಐ ಅಧ್ಯಕ್ಷ  ಎ.ಆರ್. ಅಬ್ಬಾಸ್, ಅಭಯಾ ಫ್ಯಾಶನ್ ಸಿರಾಜ್, ಕೊಪ್ಪಳದ ಕೆ.ಎಂ. ಮುಳ್ಳಾ, ಇಸ್ಮಾಯಿಲ್, (ಬಿ.ಎಂ. ಫಾರೂಕ್. ಪಿ.ಎ.)  ಉದ್ಯಮಿ ಭಾಸ್ಕರ್, ಮಾಜಿ ಆಟಗಾರರಾದ ಅಲ್ತಾಫ್ ಹಳೆಕೋಟೆ, ಯು.ಸಿ.ಬಿ.ಯ ಉಪಾಧ್ಯಕ್ಷ ಇಕ್ಬಾಲ್ ಕೆನರಾ, ಫಯಾಝ್ ಪಟ್ಲ, ಕಾರ್ಯದರ್ಶಿ ಇಂತಿಯಾಝ್, ಕೋಶಾಧಿಕಾರಿ ನಝೀರ್ ಆಲ್ಪಾ, ಮಂಗಳಸ್ಟೇಡಿಯಂನಿರ್ಕದೇಶಕ ಸಾಜಿದ್ ಉಳ್ಳಾಲ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು*.


  *ಉಳ್ಳಾಲ ಪ್ರೀಮಿಯಮ್ ಲೀಗ್ 2019ರ ಚಾಂಪಿಯನ್ ಪ್ರಶಸ್ತಿಯನ್ನು B.F.C ಬಸ್ತಿಪಡ್ಪು ತಂಡ ಮತ್ತು ರನ್ನರ್ ಆಗಿ B.M.FAROOK FANS KODI ತಂಡ ಪಡೆಯಿತು*.

  https://m.facebook.com/story.php?story_fbid=288087305217276&id=100020480250724

   

  • Comments Off on ಉಳ್ಳಾಲ ಪ್ರೀಮಿಯರ್ ಲೀಗ್ ಯುಪಿಎಲ್-2019 ಕ್ರಿಕೆಟ್ ಪಂದ್ಯಾಟ ಸಮಾರೋಪ*
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.