05:59 am Wednesday, July 24, 2019
 • ದೇರಳಕಟ್ಟೆ ಶೈಕ್ಷಣಿಕ, ವೈದ್ಯ ಕೀಯ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಸರುವಾಸಿಯಾಗಿದೆ.ಸಚಿವ ಯು.ಟಿ. ಖಾದರ್‌

  By admin - Thu Jan 17, 4:04 pm

  • Comments Off on ದೇರಳಕಟ್ಟೆ ಶೈಕ್ಷಣಿಕ, ವೈದ್ಯ ಕೀಯ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಸರುವಾಸಿಯಾಗಿದೆ.ಸಚಿವ ಯು.ಟಿ. ಖಾದರ್‌
  • 0 views

  ಮಂಗಳೂರು : ಮಣಿಪಾಲದ ಬಳಿಕ ಕೊಣಾಜೆ, ದೇರಳಕಟ್ಟೆ ಪ್ರದೇಶ ಆರೋಗ್ಯ ಮತ್ತು ಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯನ್ನು ಪಡೆಯುತ್ತಿದ್ದು, ಇದರೊಂದಿಗೆ ಕುಂದಾಪುರದಿಂದ ಕಾಸರ ಗೋಡುವರೆಗೆ ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಈ ನಿಟ್ಟಿನಲ್ಲಿ ಆರೋಗ್ಯ, ಜ್ಞಾನ ಮತ್ತು ಪ್ರವಾಸೋದ್ಯಮ ಕಾರಿ ಡಾರ್‌ ನಿರ್ಮಾಣಕ್ಕೆ ಯೋಜನೆ ತರಲು ಮುಂದಿನ ಬಜೆಟ್‌ನಲ್ಲಿ ಪ್ರಯತ್ನಿ ಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದರು.

  ಕುರ್ನಾಡು ಜಿ.ಪಂ. ಕ್ಷೇತ್ರದ ಜಿ. ಪಂ., ಬಂಟ್ವಾಳ ತಾ. ಪಂ. ಮತ್ತು ಕುರ್ನಾಡು ಕ್ಷೇತ್ರಕ್ಕೆ ಒಳಪಡುವ ಗ್ರಾಮಗಳಾದ ಪಜೀರು, ಕುರ್ನಾಡು, ಬಾಳೆಪುಣಿ, ನರಿಂಗಾನ, ಇರಾ, ಸಜೀಪನಡು ಗ್ರಾಮ ಪಂಚಾಯತ್‌ಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದ.ಕ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದ.ಕ., ಬಂಟ್ವಾಳ ತಾಲೂಕು ಪಂಚಾಯತ್‌ ಇದರ ಸಂಯುಕ್ತ ಆಶ್ರಯದಲ್ಲಿ ಬಾಳೆಪುಣಿ ಗ್ರಾಮದ ಹೂಹಾಕುವ ಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ವಿಕಲಾಂಗರ, ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣೆ, ವಿಕಲಾಂಗರ ಬೃಹತ್‌ ಆರೋಗ್ಯ ಶಿಬಿರ ಮತ್ತು ಫಲಾನುಭವಿಗಳಿಗೆ ಗಾಲಿ ಕುರ್ಚಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

  ದೇರಳಕಟ್ಟೆ ಸಹಿತ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಂದ ಈ ಪ್ರದೇಶದ ಜನರ ಆರೋಗ್ಯ ಸಂಬಂಧಿ ವಿಚಾರಗಳು ಉತ್ತಮವಾಗಿದ್ದು, ಕೊಣಾಜೆ ಸಹಿತ ದೇರಳಕಟ್ಟೆಗಳಲ್ಲಿ ಶೈಕ್ಷಣಿಕ, ವೈದ್ಯ ಕೀಯ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಸರುವಾಸಿಯಾಗಿದೆ. ಈ ನಿಟ್ಟಿನಲ್ಲಿ ಮಣಿಪಾಲದಿಂದ ಕೊಣಾಜೆವರೆಗೆ ಕಾರಿ ಡಾರ್‌ ಪಾಲಿಸಿಯನ್ನು ತಂದರೆ ರಸ್ತೆ ಸಹಿತ ಮೆಟ್ರೋ ರೈಲು, ಆಧುನಿಕ ಸಂಪರ್ಕಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿದ್ದು, ಇದರೊಂದಿಗೆ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿಗೆ ಪೂರಕ ವಾಗುತ್ತದೆ. ಈ ನಿಟ್ಟಿನಲ್ಲಿ ತಜ್ಞರೊಂದಿಗೆ ಚರ್ಚಿಸಿ ಕಾರಿಡಾರ್‌ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು

   

  • Comments Off on ದೇರಳಕಟ್ಟೆ ಶೈಕ್ಷಣಿಕ, ವೈದ್ಯ ಕೀಯ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಸರುವಾಸಿಯಾಗಿದೆ.ಸಚಿವ ಯು.ಟಿ. ಖಾದರ್‌
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.