02:56 am Friday, June 21, 2019
 • ಮಾನವೀಯತೆಯನ್ನು ಎತ್ತಿಹಿಡಿದ, ಉಳ್ಳಾಲ ಕ್ರಿಕೆಟ್ ಬೋರ್ಡ್*,

  By admin - Tue Jan 01, 5:37 am

  • Comments Off on ಮಾನವೀಯತೆಯನ್ನು ಎತ್ತಿಹಿಡಿದ, ಉಳ್ಳಾಲ ಕ್ರಿಕೆಟ್ ಬೋರ್ಡ್*,
  • 0 views

  ಮಾನವೀಯತೆಯನ್ನು ಎತ್ತಿಹಿಡಿದ, ಉಳ್ಳಾಲ ಕ್ರಿಕೆಟ್ ಬೋರ್ಡ್*,
  *ನಿಮಗಿದೋ, ನನ್ನದೊಂದು ಬಿಗ್ ಸೆಲ್ಯೂಟ್ !*- ಫಾರೂಕ್ ಉಳ್ಳಾಲ್.
  *********************************************************
  ಅಕ್ಷಯ್, ಉಳ್ಳಾಲದ ‘ಸ್ವಸ್ತಿಕ್’ ಕ್ರಿಕೆಟ್ ತಂಡದ ಸದಸ್ಯ. ಆತ ಉದ್ಯೋಗ ನಿರತರಾಗಿದ್ದಾಗ ಮೇಲಿಂದ ಬಿದ್ದು ಗಂಭೀರ ಸ್ಥಿತಿ ತಲುಪಿದನ್ನುಅನುಸರಿಸಿ ಸ್ಥಳೀಯರು ಆಸ್ಪತ್ರೆ ಸೇರಿಸಿದ್ದರು. ಆತ್ಮೀಯನಾದ ಅಕ್ಷಯ್ ಆಸ್ಪತ್ರೆಯಲ್ಲಿ ಸುದ್ಧಿ ತಿಳಿದಾಗ, ಚಿಕಿತ್ಸೆ ಫಲಿಸದೆ ಅಕ್ಷಯ್ ಅಕಾಲಿಕ ಮೃತ್ಯುವಿಗೆ ತುತ್ತಾದಾಗ
  ಉಳ್ಳಾಲ ಕ್ರಿಕೆಟ್ ಬೋರ್ಡ್’ ನ ಸದಸ್ಯ ತಂಡದವರು, ಹಿತೈಷಿ ಗಳು, ತಮ್ಮೆಲ್ಲಾ ಚಟುವಟಿಕೆಗಳನ್ನು ಬದಿಗಿರಿಸಿ ಸ್ಪಂದಿಸಿದ ಪ್ರೀತಿಗೆ, ಮಾನವೀಯತೆಯನ್ನು ಎತ್ತಿ ಹಿಡಿದ ರೀತಿಗೆ, ‘ಉಳ್ಳಾಲ್ ಕ್ರಿಕೆಟ್ ಬೋರ್ಡ್’ ನ ಸರ್ವ ಸದಸ್ಯರನ್ನು ಅಭಿನಂದಿಸಲೇಬೇಕು.
  ಆಟದ ಮೈದಾನದಲ್ಲಿರುವ ಕ್ರೀಡಾ ಸ್ಪೂರ್ತಿ- ಬಾಂಧವ್ಯ ಆಟದ ನೆಲದ ಹೊರಗೂ ಇಷ್ಟೊಂದು ಗಾಢವಾಗಿ ಇರುತ್ತದೆ ಎಂದು ನಾನು ಕಲ್ಪಿಸಿ ಕೊಂಡಿರಲಿಲ್ಲ.
  ಜಾತಿ- ಸಂಘ, ಸಂಘಟನೆ, ಅಂತ:ಸ್ತುಗಳನ್ನು ಮೀರಿ ಮನುಷ್ಯ ಪ್ರೀತಿಯನ್ನು ತೋರಿಸುತ್ತದೆ ಎಂಬ ಊಹೆ ನನಗಿರಲಿಲ್ಲ!.
  *ಪಂದ್ಯಾಟಗಳಿಗೆ ಅತಿಥಿಯಾಗಿ ಹೋದಾಗಲೆಲ್ಲಾ ಅಲ್ಲಿನ ಬ್ಯಾನರ್- ಪಾಂಪ್ಲೆಟ್ಸ್ ,ಕಮೆಂಟ್ರಿಯನ್ ಮತ್ತು ಕಾರ್ಯಕ್ರಮ ನಿರೂಪಕರ ಮಾತುಗಳಲ್ಲಿರುತ್ತಿದ್ದ ‘ಶಾಂತಿಗಾಗಿ ಕ್ರೀಡೆ’ ‘ಸಹೋದರತೆಗಾಗಿ ಕ್ರೀಡೆ’ ಮುಂತಾದ ಉದ್ಘೋಷಣೆಗಳು ನನಗೆ ಅದೊಂದು ಸಿದ್ಧ ಘೋಷ ವಾಕ್ಯ ಎಂದನಿಸುತ್ತಿತ್ತೇ ಹೊರತು, ಅದು ‘ಆಟಗಾರರ ಪಾಲಿನ ಸತ್ಯ ಪ್ರತಿಜ್ಞೆ’ಎಂದು ಗಂಭೀರವಾಗಿ ಪರಿಗಣಿಸಿದವನೂ ನಾನಲ್ಲ* !.
  ಆಟ ಮತ್ತದರ ಓಟ ತಂದಿಡುವ ‘ರನ್ನು’ಗಳ ಬಗ್ಗೆಯೇ ಮಹಾ ಸಾಧನೆ ಎಂಬಂತೆ ಚರ್ಚಿಸುವ ಕ್ರಿಕೆಟ್ ಆಟಗಾರರು, ಮನುಷ್ಯ ಬದುಕಿನ ಮೂಲ ಧ್ಯೇಯವಾದ ಕಷ್ಟ – ಸಂಕಷ್ಟ ದಲ್ಲಿದ್ದವರ ಸಲುವಾಗಿ ಮಾತೃ ಪ್ರೀತಿ ತೋರಿಸುತ್ತಾರೆ, ಜಾತಿ- ಧರ್ಮಗಳನ್ನೂ ದಾಟಿ ಮನುಷ್ಯತ್ವ ಕ್ಕೆ ಆದ್ಯತೆ ನೀಡುತ್ತಾರೆ ಎಂಬ ನಂಬಿಕೆಯೂ ಇಷ್ಟೊಂದು ಗಟ್ಟಿಯಾಗಿರಲಿಲ್ಲ.
  *’ವೀಕೆಂಡ್ ಮಜಾ’ ದ ಖರ್ಚಿ ಹೊಂದಿಸುವುದಕ್ಕೇ ಟೂರ್ನ್ ಮೆಂಟ್, ಎಂದು ಕೊಂಕು ನುಡಿಯುವರನ್ನೂ ಕಂಡಿದ್ದೇನೆ*.
  *ಆದರೆ ಆಟಕ್ಕಾಗಿ ಒಟ್ಟಾಗುವವರಲ್ಲಿ ಇತರ ಕ್ಷೇತ್ರಗಳಲ್ಲಿರುವವರಿಗಿಂತ ಒಂದು ಪಟ್ಟು ಹೆಚ್ಚೇ ಸಹೋದರತೆಯ ಸೆಳೆತ,ನೋವಿಗೆ ಸ್ಪಂದಿಸುವ ಕಾತುರತೆ ಇದೆ ಎಂಬುವುದನ್ನು ‘ಉಳ್ಳಾಲ್ ಕ್ರಿಕೆಟ್ ಬೋರ್ಡ್’ ನ ಅಧ್ಯಕ್ಷ- ಪದಾಧಿಕಾರಿಗಳಲ್ಲಿ , ಸದಸ್ಯ ತಂಡಗಳ ಆಟಗಾರರಲ್ಲಿ ಕಂಡು ನಿಜಕ್ಕೂ ದಂಗಾದೆ!.*
  ಅಕ್ಷಯ್!,
  *ಲವಲವಿಕೆಯಉತ್ಸಾಹಿ ಯುವಕ.ಬ್ಯಾಟ್ ಹಿಡಿದು ನಿಂತನೆಂದರೆ ಅಲ್ಲಿ ರನ್ನುಗಳು ರಾಶಿ ರಾಶಿ*.!
  *ಹೆಸರಿನಂತೆಯೇ, ಆಟದಲ್ಲಿ ಆತನ ಹೊಡೆತ ಅಕ್ಷಯವೇ ಆಗಿತ್ತು*!.
  *ಸ್ವಸ್ತಿಕ್’ ತಂಡದ ಹಿರಿಮೆಯಂತಿದ್ದ,ಇನ್ನೂ ಇಪ್ಪತ್ತರ ಆಸು-ಪಾಸಿನಲ್ಲಿದ್ದ ಅಕ್ಷಯ್, ಕ್ರಿಕೆಟ್ ಪ್ರೇಮಿಗಳೆಲ್ಲರ ನೆಚ್ಚಿನ ಆಟಗಾರನಾಗಿದ್ದ*.
  *”ಎಲ್ಲರಲ್ಲೂ ಬೆರೆಯುವ ಆತನ ಗುಣ, ಅಕ್ಷಯ್ ಬೇರೆ ತಂಡದವ, ಇನ್ನೊಂದು ಜಾತಿಯವ ಎಂದು ಉಳ್ಳಾಲದ ಯಾವ ಆಟಗಾರನಿಗೂ ಅನಿಸುತ್ತಿರಲಿಲ್ಲ…..ಎಂದುನನ್ನೊಂದಿಗೆ ಹೇಳುತ್ತಿದ್ದಂತೆ ಮೊನ್ನೆ ಶನಿವಾರ ಮಾತು ಬಾರದೆ, ತಡವರಿಸುತ್ತಾ ಗದ್ಗದಿತರಾದರು ‘ಉಳ್ಳಾಲ್ ಕ್ರಿಕೆಟ್ ಬೋರ್ಡ್’ ನ ಅಧ್ಯಕ್ಷರಾದ ಕೌನ್ಸಿಲರ್ ಖಲೀಲ್ ಅಬ್ಬಾಸ್‌*.
  *ಒಡ ಹುಟ್ಟಿದವನನ್ನೇ ಕಳಕೊಂಡ ನೋವಿನಂತಿತ್ತು ಆ ಭಾವ*!.
  *ಆಸ್ಪತ್ರೆ ಯ ಆವರಣದಲ್ಲಿ ನೆರೆದ ಯುವಕರ ಮುಖಗಳೂ ದು:ಖ ತಪ್ತವಾಗಿತ್ತು*.
  ಇನ್ನೆಂದೂ ತಮ್ಮೊಂದಿಗೆ ಕೂಡಿ ಆಡಲು ಅಕ್ಷಯ್ ಇಲ್ಲ’ಎಂಬ ದಿಗಿಲಿನೊಂದಿಗೆ,
  ಮಡಿದವ ತಮ್ಮವನೇ ಎಂಬ ಭಾವನೆ ಅವರಲ್ಲೂ ಎದ್ದು ಕಾಣುತ್ತಿತ್ತು!
  ಅಕ್ಷಯ್ ನ ಮೃತ ಶರೀರ ಕೊಂಡೊಯ್ಯಲು ಬಂದವರಲ್ಲಿ ಬಹುತೇಕರು ಮುಸ್ಲಿಮ್ ಯುವಕರು. ಆತನನ್ನು ಹೆಗಲಿಗಿಟ್ಟು ಹೊತ್ತು ಕೊಂಡು,ಅಂತಿಮ ಕರ್ಮ-ಕರ್ತವ್ಯಗಳಿಗೆ ಅಣಿಯಾಗುವಲ್ಲೂ ಮುಸ್ಲಿಂ ಯುವಕರೇ ಮುಂಛೂಣಿಯಲ್ಲಿದ್ದರು.!
  *ಉಳ್ಳಾಲದಂತಹ ಕ್ಷುಲ್ಲಕ ವಿಷಯಕ್ಕೆ ಕೋಮು ಜ್ವಾಲೆ ಉರಿಸಿ ಹಲ್ಲೆ-ಕೊಲೆಗಳಲ್ಲಿ ಕೊನೆಯಾಗುವ, ಪೋಲಿಸರ ಕಡತದಲ್ಲಿ ‘ಸೂಕ್ಷ್ಮ ಪ್ರದೇಶ’ ಎಂದೇ ಗುರುತಿಸಲ್ಪಟ್ಟ ಊರಲ್ಲಿ ಇದು ನಡೆದಿದೆ ಎನ್ನುವುದೇ ಅಚ್ಚರಿ?. ಇಲ್ಲ, ಉಳ್ಳಾಲದಲ್ಲಿ ಸಾಮರಸ್ಯ ಹದಗೆಟ್ಟಿಲ್ಲ. ಸೌಹಾರ್ದ-ಸಹೋದರತೆಯ ಪರಂಪರೆ ಯನ್ನು ಉಳಿಸಿ ಬೆಳೆಸುವ ಜನರು ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ. ದುರಾದೃಷ್ಠವಶಾತ್ ಕೆಲವೇ ಕೆಲವು ಸಮಾಜಘಾತುಕರ ಕುಕೃತ್ಯಗಳಿಂದ ಉಳ್ಳಾಲಕ್ಕೆ ಅಪಖ್ಯಾತಿ ಬಂದಿವೆ!. ‘ಉಳ್ಳಾಲ ಕ್ರಿಕೆಟ್ ಬೋರ್ಡ್’ ನ ಸದಸ್ಯರಂತೆ ಮನುಷ್ಯತ್ವವೇ ಮೊದಲ ಧರ್ಮ ಎನ್ನುವ ಸಾವಿರಾರು ಯುವಕರು-ವಯಸ್ಕರು ನಮ್ಮ ಉಳ್ಳಾಲದಲ್ಲಿದ್ದಾರೆ.
  ಅಕ್ಷಯ್, ಅನಿರೀಕ್ಷಿತ ವಾಗಿ ಸಾವಿಗೀಡಾದಾಗ,ಸಮಯೋಚಿತವಾಗಿ ಸ್ಪಂದಿಸಿದಂತೆಯೇ, ಖಲೀಲ್ ನೇತೃತ್ವದಲ್ಲಿ ಹಣ ಸಂಚಯಿಸಿದ ಯುವಕರು ಅಕ್ಷಯ್ ಚಿಕಿತ್ಸೆಗೆ ಆದ ಆಸ್ಪತ್ರೆ ಬಿಲ್ ಪಾವತಿಸಲೂ ಕೆಲವೇ ಗಂಟೆಗಳಗೊಳಗಾಗಿ ಒಂದು ಲಕ್ಷದಷ್ಟು ಹಣ ಹೊಂದಿಸಿ, ಉಳ್ಳಾಲದ ಜನಮನದ ಅಭಿಮಾನಕ್ಕೆ ಪಾತ್ರರಾದ ‘ಉಳ್ಳಾಲ್ ಕ್ರಿಕೆಟ್ ಬೋರ್ಡ್’ ಸದಸ್ಯರ ಶ್ರಮ ಊರಿಗೇ ಮಾದರಿಯಾಗಿದೆ !
  ಒಂದು ಮಾತೃ ಹೃದಯದಂತೆ ಮಿಡಿದ,
  ಬ್ಯಾಟ್ -ಬಾಲ್ ನ ಆಚೆಗೂ ನಾವು ಒಂದಾಗಿರುತ್ತೇವೆ ಎಂದು ಸಾಬೀತು ಪಡಿಸಿದ ಸಹೃದಯರಿಗಲ್ಲದ, ಸೆಲ್ಯೂಟ್ ಇನ್ಯಾರಿಗೇ!?.
  ಈ ಮನುಷ್ಯ ಪ್ರೀತಿಯನ್ನು ಜತನದಿಂದ ಪೋಷಿಸುವ ಕರ್ತವ್ಯ ನಮ್ಮದಾಗ ಬೇಕು. ಉಳ್ಳಾಲದಲ್ಲಿ ಹತ್ತು ಹಲವು ಉದ್ದಿಮೆ- ಉದ್ಯಮಿಗಳು ಮನಸ್ಸು ಮಾಡಿದರೆ ಉಳ್ಳಾಲದ ಜನ ಜೀವನವನ್ನು ಸ್ವಸ್ಥವಾಗಿಡಲು ‘ಉಳ್ಳಾಲ್ ಕ್ರಿಕೆಟ್ ಬೋರ್ಡ್’ ಮತ್ತು ಸೇವಾ ಮನೋಭಾವ ಹೊಂದಿದ ಇತರ ಸಂಘ ಸಂಸ್ಥೆಗಳೂ ಶಕ್ತವಾಗುವುದರಲ್ಲಿ ಸಂಶಯವೇ ಇಲ್ಲ!. ನಮ್ಮ ಉದ್ಯಮಿ ಗಳು ‘ಉಳ್ಳಾಲ ಕ್ರಿಕೆಟ್ ಬೋರ್ಡ್’ಅನ್ನು ಆದರಿಸಿ, ಆರ್ಥಿಕ ಶಕ್ತಿ ತುಂಬುವ ಅಗತ್ಯ ಸಕಾಲಿಕ ಮತ್ತು ಕರ್ತವ್ಯವೂ ಹೌದು.
  ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮಾನವೀಯತೆಯ ಹರಿಕಾರರಂತೆ ನೊಂದವರ ಕಷ್ಟಕ್ಕೆ ನೆರವು ಹಾಸುವ ‘ಉಳ್ಳಾಲ್ ಕ್ರಿಕೆಟ್ ಬೋರ್ಡ್’ ನ ಸೇವೆಯನ್ನು ಪರಿಗಣಿಸಿ ಸೂಕ್ತ ಬೆಂಬಲ- ಗೌರವ ಸಲ್ಲಿಸುವಂತಾಗಲಿ.
  —– ಫಾರೂಕ್ ಉಳ್ಳಾಲ್.

  • Comments Off on ಮಾನವೀಯತೆಯನ್ನು ಎತ್ತಿಹಿಡಿದ, ಉಳ್ಳಾಲ ಕ್ರಿಕೆಟ್ ಬೋರ್ಡ್*,
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.