10:57 am Saturday, May 25, 2019
 • ಮಧುಕರ್ ಶೆಟ್ಟಿ ನಿಧನ ಸೋಶಿಯಲ್ ಫೋರಂ ಸೌದಿ ಅರೇಬಿಯಾ ಸಂತಾಪ

  By admin - Mon Dec 31, 8:36 am

  • Comments Off on ಮಧುಕರ್ ಶೆಟ್ಟಿ ನಿಧನ ಸೋಶಿಯಲ್ ಫೋರಂ ಸೌದಿ ಅರೇಬಿಯಾ ಸಂತಾಪ
  • 0 views

  *ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ- ಇಂಡಿಯನ್ ಸೋಶಿಯಲ್ ಫೋರಂ ಪೂರ್ವ ಪ್ರಾಂತ್ಯ ದಮ್ಮಾಮ್ ಸೌದಿ ಅರೇಬಿಯಾ ಸಂತಾಪ*

  ಇತ್ತೀಚೆಗೆ ಅಕಾಲಿಕವಾಗಿ ನಮ್ಮನ್ನು ಅಗಲಿದ ಪ್ರಖ್ಯಾತ ಹಿರಿಯ ನಿಷ್ಠಾವಂತ ಐಪಿಎಸ್ ಅಧಿಕಾರಿಯಾದ ಮಧುಕರ್ ಶೆಟ್ಟಿಯವರು ತನ್ನ ಸಾರ್ವಜನಿಕ ಸೇವೆಯುದ್ಧಕ್ಕೂ ಪ್ರಾಮಾಣಿಕವಾಗಿ ಸೇವೆಗೈದ ಓರ್ವ ನಿಷ್ಕಳಂಕ ಮತ್ತು ಪ್ರಶ್ನಾತೀತ ಅಧಿಕಾರಿಯಾಗಿದ್ದರು. ಇವರು ಭ್ರಷ್ಟಚಾರಿಗಳನ್ನು ದಿಟ್ಟವಾಗಿ ಮಟ್ಟ ಹಾಕುತ್ತಾ ತನ್ನ ಬಳಿ ನ್ಯಾಯಕ್ಕಾಗಿ ಬರುವವರನ್ನು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ನ್ಯಾಯ ದೊರಕಿಸಿ ಕೊಡುತ್ತಿದ್ದರು.

  ಪ್ರಖ್ಯಾತ ಪತ್ರಕರ್ತ ದಿವಂಗತ ರಘುರಾಮ್ ಶೆಟ್ಟಿಯವರ ಮಗನಾದ ಇವರು ತಂದೆಗೆ ತಕ್ಕ ಮಗನಂತೆ ಸಾರ್ವಜನಿಕರಲ್ಲಿ ಬಹಳ ವಿನಮ್ರತೆಯಿಂದ ವರ್ತಿಸುತ್ತಾ ಪ್ರಶಂಸೆಗೆ ಪಾತ್ರರಾಗಿದ್ದರು. ಇವರ ಅಕಾಲಿಕ ಮರಣವು ಸಮಾಜಕ್ಕೆ ತುಂಬಲಾರದ ನಷ್ಟ ತಂದಿದೆ.

  ಇವರ ಮರಣದ ದುಃಖವನ್ನು ಸಹಿಸುವ ಶಕ್ತಿ ಪರಮಾತ್ಮನು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತಾ *ಇಂಡಿಯನ್ ಸೋಶಿಯಲ್ ಫೋರಂ ಪೂರ್ವ ಪ್ರಾಂತ್ಯ ದಮಾಮ್* ಕರ್ನಾಟಕ ಸಮೀತಿಯು ಸಂತಾಪ ಸೂಚಿಸುತ್ತಿದೆ.

  • Comments Off on ಮಧುಕರ್ ಶೆಟ್ಟಿ ನಿಧನ ಸೋಶಿಯಲ್ ಫೋರಂ ಸೌದಿ ಅರೇಬಿಯಾ ಸಂತಾಪ
  • 1 Star2 Stars3 Stars4 Stars5 Stars (1 votes, average: 3.00 out of 5)
   Loading...Loading...
  • 0 views

  Leave a Reply

  Comments are closed on this post.