02:48 am Friday, June 21, 2019
 • ಎಂಟು ಮಂದಿ ಸಚಿವರಾಗಿ ರಾಜಭವನದಲ್ಲಿ ಪ್ರಮಾನವಚನ ಸ್ವೀಕರಿಸಿದರು

  By admin - Sat Dec 22, 1:26 pm

  • Comments Off on ಎಂಟು ಮಂದಿ ಸಚಿವರಾಗಿ ರಾಜಭವನದಲ್ಲಿ ಪ್ರಮಾನವಚನ ಸ್ವೀಕರಿಸಿದರು
  • 0 views

   

  ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಾಗಿ ಆರು ತಿಂಗಳ ಬಳಿಕ ಮೊದಲ ಬಾರಿಗೆ ನಡೆದ ಸಂಪುಟ ಪುನಾರಚನೆಯಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ ನಾಲ್ವರು ಸೇರಿದಂತೆ ಎಂಟು ಮಂದಿ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶನಿವಾರ ದೇವರ ಹೆಸರಿನಲ್ಲಿ ಪ್ರಮಾನವಚನ ಸ್ವೀಕರಿಸಿದರು.

  ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ರಾಜಭವನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

  ಸಿಎಸ್ ಶಿವಳ್ಳಿ, ಎಂಟಿಬಿ ನಾಗರಾಜ್, ತುಕಾರಾಂ, ಪಿಟಿ ಪರಮೇಶ್ವರ್ ನಾಯ್ಕ್, ಸತೀಶ್ ಜಾರಕಿಹೊಳಿ, ತಿಮ್ಮಾಪುರ್, ಎಂಬಿ ಪಾಟೀಲ್, ರಹೀಂಖಾನ್ ಅವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

  ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

  ರಾಮಲಿಂಗಾರೆಡ್ಡಿ ಬೆಂಬಲಿಗರಿಂದ ಪ್ರತಿಭಟನೆ:

  ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕಾಗಿ ಚಾಲುಕ್ಯ ಸರ್ಕಲ್ ಸಮೀಪ ಬೆಂಬಲಿಗರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

   

  ವಿಸ್ತರಣೆಯ ಬೆನ್ನಲ್ಲೇ ನೂತನ ಸಚಿವರಿಗೆ ಖಾತೆ

  ಬೆಂಗಳೂರು, ಡಿ.22- ಸಂಪುಟ ವಿಸ್ತರಣೆಯ ಬೆನ್ನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಬಳಿ ಇರುವ ಗೃಹ,ಯುವಜನಸೇವೆ ಖಾತೆಯನ್ನು ನೂತನ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಇ.ತುಕಾರಾಂಗೆ ಹಂಚುವ ಸಾಧ್ಯತೆ ಇದೆ.

  ಸಂಪುಟದಿಂದ ಕೈ ಬಿಡಲಾದ ಪಕ್ಷೇತರ ಶಾಸಕ ಆರ್.ಶ‌ಂಕರ್ ಬಳಿಯಿದ್ದ ಅರಣ್ಯ ಖಾತಯನ್ನ ಸತೀಶ್ ಜಾರಕಿಹೊಳಿಗೆ, ಸಂಪುಟದಿಂದ ಕೈ ಬಿಡಲಾದ ಮತ್ತೊಬ್ಬ ಕಾಂಗ್ರೆಸ್ ನವರಾದ ರಮೇಶ್ ಜಾರಕಿಹೊಳಿ ಅವರ ಬಳಿ ಇದ್ದ ಪೌರಾಡಳಿತವನ್ನು ಸಿ.ಎಸ್.ಶಿವಳ್ಳಿ ಅವರಿಗೆ, ಡಿ.ಕೆ.ಶಿವಕುಮಾರ್ ಬಳಿ ಇರುವ ವೈದ್ಯಕೀಯ ಖಾತೆಯನ್ನು ಆರ್.ಬಿ.ತಿಮ್ಮಾಪುರ್ ಅವರಿಗೆ, ಯು.ಟಿ.ಖಾದರ್ ಬಳಿ ಇರುವ ನಗರಾಭಿವೃದ್ಧಿ ಖಾತೆಯನ್ನು ಎಂಟಿಬಿ ನಾಗರಾಜ್ ಅವರಿಗೆ, ಜಮೀರ್ ಅಹಮದ್ ಖಾನ್ ಬಳಿ ಇರುವ ಅಲ್ಪಸಂಖ್ಯಾಯತರ ಖಾತೆಯನ್ನು ರಹಿಂಖಾನ್ ಗೆ, ಪಿ.ಟಿ.ಪರಮೇಶ್ವರ್ ಗೆ ಮೂಲಸೌಲಭ್ಯ, ಕೌಶಲ್ಯಾಭಿವೃದ್ಧಿ ಖಾತೆ ನೀಡುವ ಸಾಧ್ಯತೆ ಇದೆ.

  ಜೊತೆಯಲ್ಲಿ ಜಯಮಾಲ‌ ಹಾಗು ಇತರ ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡುವ ಚಿಂತನೆ ನಡೆದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಎಂ.ಬಿ.ಪಾಟೀಲ್‌ಗೆ ಗೃಹ, ಸತೀಶ್ ಜಾರಕಿಹೊಳಿ ಅರಣ್ಯ, ರಹಿಂಖಾನ್ ಅಲ್ಪಸಂಖ್ಯಾತರ ಅಭಿವೃದ್ಧಿ, ಪಿ.ಟಿ.ಪರಮೇಶ್ವರ್ ನಾಯಕ್ ಮೂಲಸೌಲಭ್ಯ, ಕೌಶಲ್ಯಾಭಿವೃದ್ಧಿ, ಸಿ.ಎಸ್.ಶಿವಳ್ಳಿ ಪೌರಾಡಳಿತ, ಆರ್.ಬಿ.ತಿಮ್ಮಾಪುರ್ ವೈದ್ಯಕೀಯ ಶಿಕ್ಷಣ, ಎಂಟಿಬಿ ನಾಗರಾಜ್ ನಗರಾಭಿವೃದ್ಧಿ, ಇ.ತುಕಾರಾಂ ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.

   

  • Comments Off on ಎಂಟು ಮಂದಿ ಸಚಿವರಾಗಿ ರಾಜಭವನದಲ್ಲಿ ಪ್ರಮಾನವಚನ ಸ್ವೀಕರಿಸಿದರು
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.