07:38 pm Thursday, March 21, 2019
  • ಬಹುಜನ ಚಳುವಳಿಯ ಮೂಲ ಬೇರುಗಳಲ್ಲೊಬ್ಬರು ಹೆಚ್.ಮೋಹನ್ ಕುಮಾರ್

    By admin - Sat Dec 08, 6:43 am

    • Comments Off on ಬಹುಜನ ಚಳುವಳಿಯ ಮೂಲ ಬೇರುಗಳಲ್ಲೊಬ್ಬರು ಹೆಚ್.ಮೋಹನ್ ಕುಮಾರ್
    • 0 views

    ಬಹುಜನ ಚಳುವಳಿಯ ಮೂಲ ಬೇರುಗಳಲ್ಲೊಬ್ಬರು ಅಣ್ಣ ಹೆಚ್.ಮೋಹನ್ ಕುಮಾರ್

    ಇವರು ಹೆಚ್.ಮೋಹನ್ ಕುಮಾರ್. ಕ್ಷಮಿಸಿ, ಹಾಗೆ ಹೇಳಿದರೆ ತಪ್ಪಾಗುತ್ತದೆ, ಮೋಹನಣ್ಣ ಎನ್ನುವುದೇ ಹೆಚ್ಚು ಸೂಕ್ತ. 90 ರ ದಶಕದಲ್ಲಿ ದಲಿತ್ ವಾಯ್ಸ್, ಬಹುಜನ್ ವಾಯ್ಸ್ ಪತ್ರಿಕೆಗಳಲ್ಲಿ ಬಹುಜನ ಚಳುವಳಿ ಕುರಿತ ತಮ್ಮ ಲೇಖನಗಳ ಮೂಲಕ ಚಳುವಳಿ ಬಗ್ಗೆ ನಮಗೆ ಪಾಠ ಮಾಡಿದ್ದೇ ಇವರು. ಇವರ ಭಾಷಣ ಅಂದರೆ ಅತ್ಯಂತ ತರ್ಕಬದ್ಧ, ಕೇಳುಗರನ್ನು ಯಾವುದೋ ಲೋಕಕ್ಕೆ ಕೊಂಡೊಯ್ಯುವ ಮಾದರಿಯದ್ದು. 2001-2003 ರ ನಡುವೆ ನಿರಂತರವಾಗಿ ಕೇಳುತ್ತಿದ್ದ ಇವರ ಮಾತುಗಳು ಕಲ್ಲಿನ ಮೇಲೆ ಕೆತ್ತಿದ ಶಾಸನದಂತಿರುತ್ತಿದ್ದವು. ಅಷ್ಟೊಂದು ಖಚಿತ, ಸ್ಪಷ್ಟತೆ ಅವರ ಮಾತುಗಳಲ್ಲಿ ತುಂಬಿರುತ್ತಿತ್ತು.

    ಅದರಲ್ಲೂ 2002 ಸೆಪ್ಟೆಂಬರ್ ತಿಂಗಳು ಇರಬೇಕು ಮೈಸೂರಿನ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ತುಂಬಿದ ಸಭಾಂಗಣದಲ್ಲಿ ನಾನು ನೆಲದ ಮೇಲೆ ಕುಳಿತು ಪೂನಾ ಒಪ್ಪಂದ ಕುರಿತು ಕೇಳಿದ ಇವರ ಭಾಷಣ one of the best speeches that I ever heard in my lifetime. ಯಾಕೆಂದರೆ ಎಲ್ಲರೂ ಭಾಷಣ ಎಂದರೆ ಮನಸ್ಸಿಗೆ ಬಂದದ್ದನ್ನು ಹೇಳುತ್ತಾರೆ. ಆದರೆ ಅದಲ್ಲ. ಭಾಷಣ ಎಂದರೆ ಒಂದು ಹೊಸ ಕೃತಿ ಬರೆದಂತಿರಬೇಕು. ಹೆಚ್.ಮೋಹನ್ ಕುಮಾರ್ ಆ ಮಾದರಿಯ ಮೋಡಿಯ ಮಾತುಗಾರರು.

    ಹಾಲಿ ಹೆಚ್. ಮೋಹನ್ ಕುಮಾರ್ ರವರು ಹೈಕೋರ್ಟ್ ನಲ್ಲಿ ವಕೀಲರಾಗಿ ಸೇವೆಗೈಯುತ್ತಿದ್ದಾರೆ. ಬಹುಜನ ಚಳುವಳಿ ಕಟ್ಟಿ, ತಮ್ಮ ಲೇಖನಗಳು, ಭಾಷಣಗಳ ಮೂಲಕ ನನ್ನಂತಹ ನೂರಾರು ಮಂದಿ ಮೇಲೆ ಪ್ರಭಾವ ಬೀರಿ ವೃತ್ತಿ ನಿರತರಾಗಿದ್ದಾರೆ. ಜನಪರ ಚಳುವಳಿಗಳ ಕತೆ ಏನೆಂದರೆ ಇಂತಹ ಸೇವೆಗೈದವರನ್ನು ಗುರುತಿಸುವುದೇ ಇಲ್ಲ. ಬದಲಿಗೆ, ಕಾಲದ ಕಡಲಲ್ಲಿ ತಾನು ಇದ್ದಕ್ಕಿದ್ದಂತೆ ಆವಿರ್ಭವಿಸಿದೆ, ತಾನು ಯಾರಿಗೂ ಋಣಬಾಧ್ಯಸ್ಥನಲ್ಲ ಎಂದು ಮುಂದೆ ಸಾಗುತ್ತದೆ. ಖಂಡಿತ, ಇಂತಹ ನಡೆ ಅಪಾಯಕಾರಿ. ಈ ನಿಟ್ಟಿನಲ್ಲಿ ಚಳುವಳಿಗಳು ಅಣ್ಣ ಹೆಚ್.ಮೋಹನ್ ಕುಮಾರ್ ರಂತಹ ಇಂತಹ ಮೂಲ ಬೇರುಗಳನ್ನು ಗುರುತಿಸಲಿ, ತನ್ನ ಬೆಳವಣಿಗೆಗೆ ಬೀಜ ನೆಟ್ಟು, ಹನಿ ನೀರೆರೆದು ಈಗ ಎಲೆಮರೆಕಾಯಿಯಂತಿರುವವರನ್ನು ಗೌರವಿಸಲಿ. ಆ ಮೂಲಕ ಹೊಸ ಹುಟ್ಟು ಪಡೆಯಲಿ ಎಂಬುದೇ ಸದ್ಯದ ಕಳಕಳಿ.
    -ರಘೋತ್ತಮ ಹೊ.ಬ

    • Comments Off on ಬಹುಜನ ಚಳುವಳಿಯ ಮೂಲ ಬೇರುಗಳಲ್ಲೊಬ್ಬರು ಹೆಚ್.ಮೋಹನ್ ಕುಮಾರ್
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.