10:50 am Saturday, May 25, 2019
 • Qatar Indian Social Forum conducted a public event memory of Tipu Sultan.*

  By admin - Thu Nov 29, 5:46 am

  • Comments Off on Qatar Indian Social Forum conducted a public event memory of Tipu Sultan.*
  • 0 views

   

  Qatar Indian Social Forum conducted a public event in the memory of the country’s lover, Shahide Millath Hz Tipu Sultan.*

  The Tipu Sultan Memorial Program was organized at the Opd Ideal Indian School Hall, Doha on 23-11-2018 by the Karnataka State Indian Social Forum, a non-resident Indian organization.
  The program was held under the chairmanship of Qatar Indian Social Forum Central Committee Secretary Latif Madikeri. Central Committee President Saeed Komachi inaugurated the program. In his inaugural speech, He said that the modern world reflects the revolutionary plans of Tipu Sultan during his tenure to uplift the socially financially backward communities in their vision. Some rulers of South India have surrendered to the British and others have committed suicide. But, in contrast, Tippu Sultan described the martyr’s sole ruler as fighting in the battlefield with enemies.


  Speaking about Tipu Sultan, Vice President of South Karnataka Muslim Welfare Association, he said that Tipu was “loving all religions and empowering justice and also he put forth Tippu and his father Hyderali’s life history to the audience.

  Nazir Pasha, president of the Qatar Indian Social Forum Karnataka State Committee, delivered the keynote address. Tippu’s contributions, Tippu’s struggles, and bold measures taken by Tippu for agricultural activities. The history of ruler like Tipu is ideal for today’s generation. Tippu’s help to many temples in the state was a mirror of his religion. Tipu Sultan gave special offers to the areas of education, irrigation and infrastructure, and also said Tipu Sultan, the first ruler of the country to distribute land in the landowner’s hands to the poor and implement the Historical Land Acquisition Act. Today the same theories oppose Tippu, who had taken action against colonialism and brahminist forces. Even though the evil spirits try to divert the history of Tippu, country lovers should do the work of knowing the truth of today’s generation.

  The song was sung by Irshad Kulai and the band. Program coordinator Zakaria Pandeshwar, Zamir Haleangadi, Abdul Rahiman Bantwal, Mujeeb Khan, were present. Anwar Sadat Bajattur welcomed the gathering and vote of thanks delivered by Fasiuddin Tumkur, Secretary of the Karnataka Indian Social Forum. Committee members Kalim Khadri and Niaz Todar lead the task.

  *ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕದ ವತಿಯಿಂದ ದೇಶ ಪ್ರೇಮಿ ಶಹಿದೇ ಮಿಲ್ಲತ್ ಟಿಪ್ಪು ಸುಲ್ತಾನ್ ರವರ ಸ್ಮರಣೆ ಕಾರ್ಯ ಕ್ರಮ *

  ಅನಿವಾಸಿ ಭಾರತೀಯ ಸಂಘಟನೆಯಾದ ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯದ ವತಿಯಿಂದ ದಿನಾಂಕ 23-11-2018 ರಂದು ದೊಹಾದ ಐಡಿಯಲ್ ಇಂಡಿಯನ್ ಸ್ಕೂಲ್ ಸಬಾಂಗಣದಲ್ಲಿ “ಟಿಪ್ಪು ಸುಲ್ತಾನ್ ಸ್ಮರಣೆ” ಕಾರ್ಯ ಕ್ರಮ ಆಯೋಜಿಸಲಾಯಿತು.

  ಈ ಕಾರ್ಯಕ್ರಮವು ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಇದರ ಕೇಂದ್ರ ಸಮಿತಿ ಕಾರ್ಯದರ್ಶಿ ಯವರಾದ ಲತೀಫ್ ಮಡಿಕೇರಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು .. ಕೇಂದ್ರ ಸಮಿತಿ ಅಧ್ಯಕ್ಷರಾದ ಸಯೀದ್ ಕೊಮಾಚಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ತನ್ನ ಉದ್ಘಾಟನಾ ಭಾಷಣದಲ್ಲಿ ಟಿಪ್ಪು ಸುಲ್ತಾನ್ ದೇಶಕ್ಕೆ ಕೊಟ್ಟ ಕೊಡುಗೆಗಳು ಹಾಗೂ ಹಿಂದುಳಿದ ಸಮುದಾಯವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಮೇಲೆತ್ತಲು ಟಿಪ್ಪು ಸುಲ್ತಾನ್ ತನ್ನ ಆಡಳಿತ ಕಾಲದಲ್ಲಿ ಕೈಗೊಂಡ ಕ್ರಾಂತಿಕಾರಿ ಯೋಜನೆಗಳನ್ನು ಆಧುನಿಕ ಜಗತ್ತು ಕೂಡ ಸ್ಮರಿಸಿಕೊಳ್ಳುವುದು ಅವರ ದೂರದೃಷ್ಟಿಯ ಆಡಳಿತವನ್ನು ಪ್ರತಿಬಿಂಬಿಸುತ್ತದೆ ಎಂದರು . ದಕ್ಷಿಣ ಭಾರತದ ಕೆಲವೊಂದು ರಾಜರುಗಳು ಬ್ರಿಟೀಷರಿಗೆ ಕಪ್ಪ ಕಾಣಿಕೆ ನೀಡಿ ಶರಣಾಗಿದ್ದರೆ ಇನ್ನು ಕೆಲವರು ಹೆದರಿ ಆತ್ಮ ಹತ್ಯೆ ಮಾಡಿ ಕೊಂಡಿದ್ದಾರೆ ಆದರೆ ಇದೆಲ್ಲಕ್ಕು ವ್ಯತಿರಿಕ್ತವಾಗಿ ಟಿಪ್ಪು ಸುಲ್ತಾನ್ ಶತ್ರುಗಳೊಂದಿಗೆ ರಣಾಂಗಣದಲ್ಲಿ ಹೋರಾಡುತ್ತಲೇ ಹುತಾತ್ಮರಾದ ಜಗತ್ತಿನ ಏಕೈಕ ದೊರೆ ಎಂದು ಬಣ್ಣಿಸಿದರು.
  ಇನ್ನೋರ್ವ ಮುಖ್ಯ ಅಥಿತಿಯಾದ ಸೌತ್ ಕರ್ನಾಟಕ ಮುಸ್ಲಿಂ ವೆಲ್ ಫೇರ್ ಅಸೋಷಿಯೇಶನ್ ಇದರ ಉಪಾಧ್ಯಕ್ಷರಾದ ಮುಹಮ್ಮದ್ ಕಾಸಿಂ ರವರು ಟಿಪ್ಪು ಸುಲ್ತಾನರ ಬಗ್ಗೆ ಮಾತನಾಡುತ್ತ ಟಿಪ್ಪು ಎಲ್ಲಾ ಧರ್ಮದವರನ್ನು ಸಮಾನವಾಗಿ ಪ್ರೀತಿಸಿ ನ್ಯಾಯ ಪರಿಪಾಲನೆಗೆ ಒತ್ತುಕೊಟ್ಟು ಆಡಳಿತ ನಡೆಸುತ್ತಿದ್ದರು ಎಂದರು .ಟಿಪ್ಪು ಹಾಗು ಅವರ ತಂದೆ ಹೈದಾರಾಲಿಯ ಜೀವನದ ಇತಿಹಾಸವನ್ನು ಸಬಿಕರ ಮುಂದೆ ತೆರೆದಿಟ್ಟರು.

  ಕಾರ್ಯಕ್ರಮದಲ್ಲಿ ಕತಾರ್ ಇಂಡಿಯನ್ ಸೋಶಿಯಲ್ ಫಾರಂ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ ನಝೀರ್ ಪಾಷಾ ರವರು ಮುಖ್ಯ ಭಾಷಣ ಗೈದರು ಟಿಪ್ಪುವಿನ ಕೊಡುಗೆಗಳು , ಟಿಪ್ಪುವಿನ ಹೋರಾಟಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ಟಿಪ್ಪು ಕೈಗೊಂಡ ದಿಟ್ಟ ಕ್ರಮಗಳ ಬಗ್ಗೆ ವಿವರಿಸಿದರು. ಟಿಪ್ಪುವಿನಂತಹ ಆಡಳಿತಗಾರನ ಇತಿಹಾಸವು ಇಂದಿನ ತಲೆಮಾರಿಗೆ ಮಾದರಿಯಾಗಿದೆ. ರಾಜ್ಯದ ಹಲವಾರು ದೇವಾಸ್ಥಾನಗಳಿಗೆ ಟಿಪ್ಪು ನೀಡಿದ ನೆರವುಗಳು ಆತನ ಧರ್ಮ ಸಹಿಷ್ಣತೆಗೆ ಹಿಡಿದ ಕೈಗನ್ನಡಿ ಯಾಗಿದೆ ಎಂದರು. ಶಿಕ್ಷಣ , ನೀರಾವರಿ , ಮೂಲಭೂತ ಸೌಕರ್ಯ ಕ್ಷೇತ್ರಗಳಿಗೆ ಟಿಪ್ಪು ಸುಲ್ತಾನ್ ರವರು ವಿಶೇಷ ಕೊಡುಗೆಗಳನ್ನು ನೀಡಿದರು , ಭೂ ಮಾಲೀಕರ ಕೈಯಲ್ಲಿದ್ದ ಜಮೀನನ್ನು ಬಡವರಿಗೆ ಹಂಚಿಕೆಮಾಡಿ ಐತಿಹಾಸಿಕ ಭೂಸುಧಾರಣ ಕಾನೂನನ್ನು ಜಾರಿಗೆ ತಂದ ದೇಶದ ಮೊಟ್ಟ ಮೊದಲ ದೊರೆ ಟಿಪ್ಪು ಸುಲ್ತಾನ್ ಎಂದು ತಿಳಿಸಿದರು. ವಸಾಹತುಶಾಯಿ ಹಾಗೂ ಬ್ರಾಹ್ಮಣಶಾಹಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಂಡಿದ್ದ ಟಿಪ್ಪುವನ್ನು ಇಂದು ಅದೇ ಸಿದ್ಧಾಂತಗಳು ವಿರೋಧಿಸುತ್ತದೆ. ಟಿಪ್ಪುವಿನ ಇತಿಹಾಸವನ್ನು ದುಷ್ಟ ಶಕ್ತಿಗಳು ಎಷ್ಟೇ ತಿರುಚಲು ಪ್ರಯತ್ನಿಸಿದರೂ ದೇಶ ಪ್ರೇಮಿಗಳಾದ ನಾವುಗಳು ಇಂದಿನ ತಲೆಮಾರಿನ ಸತ್ಯವನ್ನು ತಿಳಿಹೇಳುವ ಕೆಲಸವನ್ನು ಮಾಡಬೇಕು . ಅದಾಗಿದೆ ಹುತಾತ್ಮರಿಗೆ ನಾವು ಸಲ್ಲಿಸುವ ಗೌರವ ಎಂದು ನಝೀರ್ ಪಾಷಾ ರವರು ತಮ್ಮ ಭಾಷಣ ದಲ್ಲಿ ಹೇಳಿದರು.
  ಕಾರ್ಯಕ್ರಮದಲ್ಲಿ ಇರ್ಷಾದ್ ಕುಳಾಯಿ ಮತ್ತು ತಂಡದವರಿಂದ ಟಿಪ್ಪುವಿನ ಬಗ್ಗೆ ಹಾಡು ಹಾಡಲಾಯಿತು . ಕಾರ್ಯಕ್ರಮದ ಸಂಯೋಜಕರಾದ ಝಕಾರಿಯಾ ಪಾಂಡೇಶ್ವರ , ಝಮೀರ್ ಹಳೆಯಂಗಡಿ , ಅಬ್ದುಲ್ ರಹಿಮಾನ್ ಬಂಟ್ವಾಳ , ಮುಜೀಬ್ ಖಾನ್ , ಉಪಸ್ಥಿತರಿದ್ದರು. ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯದ ಪ್ರದಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರ್ ಸ್ವಾಗತಿಸಿ ಕಾರ್ಯದರ್ಶಿ ಫಸೀವುಲ್ಲಾ ತುಮಕೂರ್ ಧನ್ಯವಾದ ಅರ್ಪಿಸಿದರು. ಸಮೀತಿಯ ಸದಸ್ಯರಾದ ಕಲೀಮ್ ಖಾದ್ರಿ ಹಾಗೂ ನಿಯಾಝ್ ತೋಡಾರ್ ಕಾರ್ಯ ಕ್ರಮವನ್ನು ನಿರೂಪಿಸಿದರು.
  ವರದಿ : ಅಮ್ಮಿ ಸವಣೂರ್ ದೋಹಾ ಕತಾರ್

   

   

  • Comments Off on Qatar Indian Social Forum conducted a public event memory of Tipu Sultan.*
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.