02:46 am Friday, June 21, 2019
 • 12 ಜೋಡಿಗೆ ವಿವಾಹಕ್ಕೆ ಸಾಕ್ಷಿ ಯಾಗಲಿದೆ ಕೃಷ್ಣಾಪುರದ ಪಿಝಾ ಮೈದಾನ*

  By admin - Sat Nov 17, 12:33 pm

  • Comments Off on 12 ಜೋಡಿಗೆ ವಿವಾಹಕ್ಕೆ ಸಾಕ್ಷಿ ಯಾಗಲಿದೆ ಕೃಷ್ಣಾಪುರದ ಪಿಝಾ ಮೈದಾನ*
  • 0 views

  ಕಾರುಣ್ಯ ಸೇವೆಯಲ್ಲಿ ತೊಡಗಿಸಿ ಮುನ್ನಡೆಯುವ BM ಪಾರೂಕ್*

  *ನಾಳೆ 12 ಜೋಡಿಗೆ ಸಮೂಹಿಕ ವಿವಾಹಕ್ಕೆ ಸಾಕ್ಷಿ ಯಾಗಲಿದೆ ಕೃಷ್ಣಾಪುರದ ಪಿಝಾ ಮೈದಾನ*

  *ಅದೇ ಜನರ ಸೇವೆ ಮಾಡುತ್ತಾ ಮುನ್ನುಗ್ಗುವ ಅದೆಷ್ಟೋ ಮಂದಿ ನಮ್ಮ ಕರಾವಳಿಯಲ್ಲಿ ನಾವೂ ಕಾಣುತ್ತಾ ಇದ್ದೇವೆ .ಎಷ್ಟೋ ಮಂದಿಯ ಪಟ್ಟಿಯೂ ಕೂಡ ನಮ್ಮ ಮುಂದಿದೆ ನ್ಯೂಸ್ ಪೇಪರ್ ನಲ್ಲಿ ಸಹಾಯಾಸ್ತವ ನೀಡಿದಾತನ ವಿವರಗಳು ನಾವೂ ದಿನೇ ದಿನೇ ಕಾಣುತ್ತಾ ಇದ್ದೇವೆ ಆದರೆ ಕೇವಲ ಹೆಸರಿಗಾಗಿ ನನ್ನ ಸೇವೆ ಅಲ್ಲ , ಸೇವೆ ಜನರಿಗೆ ಉಪಕಾರಿಯಾಗಬೇಕು ಎಂದು ಮನಸಾರೆಯಿಂದ ಸೇವೆಗೈಯ್ಯುವ ಇಲ್ಲಿ ಒಬ್ಬರನ್ನು ಕಾಣಬಹುದು ಅವರೇ BM ಪಾರೂಕ್ .ಜೆಡಿಎಸ್ ಪಕ್ಷದ ಪ್ರಬಲ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ BM ಪಾರೂಕ್ ರವರು ಹಲವಾರು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿದ ನೇತಾರರಾಗಿದ್ದಾರೆ ತನಗೆ ಬರುವ ಪರಿಷತ್ತಿನ ಸಂಭಾವನೆಯನ್ನು ಬಡವರಿಗೆ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. .ನಾಳೆ 12 ಬಡ ಜೋಡಿಗೆ ವಿವಾಹ ಮಾಡಿಕೊಡಳಿದ್ದಾರೆ ಎಂದು ನನ್ನ ಸ್ನೇಹಿತ ಹೇಳಿದಾಗ ಅವರ ಕುರಿತು ನಾವೂ ಕಲಿತೆವು ಅಲ್ಲಾಹ್ ಅವರ ಸೇವೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ನಾನು ಮಾಡಿದ ಸೇವೆ ಅದು ಅಲ್ಲಾಹನಿಗಾಗಿ ಮಾತ್ರ ಎಂಬ ನಿಯ್ಯತ್ತಿನಿಂದ ಅನಾಥರ ಕೈ ಹಿಡಿದವರಾಗಿದ್ದಾರೆ BM ಪಾರೂಕ್ . ಇಂತಹ ಮನಸ್ಸಿನವರು ವಿರಳ ಆದರೆ ಇದ್ದವರು ಮಾಡುವಂತಹ ಸೇವೆ ಅಪಾರವಾದುದು . ಅನಾಥರನ್ನು ಆಶ್ರಮಕ್ಕೆ ಕರೆದುಕೊಂಡು ಅಲ್ಲಿ ಶುಶ್ರೂಸೆ ನೀಡುವವರು ಆಗಿದ್ದಾರೆ ಈ BM ಪಾರೂಕ್ . ಮಾನವ ಮಾಡುವ ಕೆಲಸದಲ್ಲಿ ಮುಕ್ಕಾಲು ಭಾಗ ತಮಗೆ ಮತ್ತು ಅದರಲ್ಲಿ ಬಾಕಿ ಭಾಗವನ್ನು ಇತರರಿಗೆ ಬೇಕಾಗಿ ಸಹಾಯ ಮಾಡಲು ಅಸ್ತವನ್ನೀಡುವವರು .ಅದು ಇದೀಗ ಕಡಿಮೆಯಾಗಿದೆ ಈ ಕಾಲದಲ್ಲಿ ಅಂತಹ ಸೇವೆಯೊಂದಿಗೆ ಮುನ್ನುಗ್ಗುವ ನಾಯಕರಾಗಿದ್ದಾರೆ BM ಪಾರೂಕ್ ಅವರಂತ ಸ್ನೇಹಿಗಳು . ಇವತ್ತಿನ ಯುವ ತಲೆಮಾರು ಪೈಶಾಚಿಕ ಕೃತ್ಯಗಳಲ್ಲೂ , ಅನಾಚಾರಗಳಲ್ಲೂ ಭಾಗಿಗಳಾಗಿ ಯುವ ಪೀಳಿಗೆಯ ಭವಿಷ್ಯವನ್ನು ಇಲ್ಲದಾಗಿಸುವಂತಹ ಯುವಕರಿಗೆ ಮಾದರಿಯಾದಂತಹ ನಾಯಕರಾಗಿದ್ದಾರೆ .ಇಂತಹ ನಾಯಕರಿಗೆ ಸಾಥನ್ನು ನೀಡಬೇಕಾಗಿದೆ , ಮನುಷ್ಯ ಮರಣ ಹೊಂದಿದಾಗ ಕೇವಲ ಮೂರು ಬಟ್ಟೆಯೊಂದಿಗೆ ಹೋಗುವುದೆಂಬುವುದನ್ನು ಮರೆಯದಿರಿ .ಜೀವಿತಾವಧಿಯಲ್ಲಿ ಮಾಡಿದಂತಹ ಸೇವೆಯಾಗಿದೆ ನಮಗೆ* *ಉಪಕಾರಿಯಾಗುವುದು ಎಂದು ಹೇಳುತ್ತಾ BM ಪಾರೂಕ್ ಅವರಂತ ಸೇವೆಯ ಸೇನಾನಿಗಳಿಗೆ ನಮ್ಮದೊಂದು ಸೆಲ್ಯೂಟ್* …

  • Comments Off on 12 ಜೋಡಿಗೆ ವಿವಾಹಕ್ಕೆ ಸಾಕ್ಷಿ ಯಾಗಲಿದೆ ಕೃಷ್ಣಾಪುರದ ಪಿಝಾ ಮೈದಾನ*
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.