07:39 pm Tuesday, June 25, 2019
 • ಉಳ್ಳಾಲದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಭೇಟಿ ಬಿ ಎಂ ಫಾರೂಕ್ ನೇತೃತ್ವ

  By admin - Sun Oct 14, 8:16 am

  • Comments Off on ಉಳ್ಳಾಲದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಭೇಟಿ ಬಿ ಎಂ ಫಾರೂಕ್ ನೇತೃತ್ವ
  • 0 views

   

  ಮಂಗಳೂರು ವಿಧಾನಸಭಾ ಕ್ಷೇತ್ರ ಜೆಡಿಎಸ್ ಮುಖಂಡರು, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಮತ್ತು ಸನ್ಮಾನ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯ ಮಹಾ ಕಾರ್ಯದರ್ಶಿ ಬಿ ಎಂ ಫಾರೂಕ್ ರವರ ನೇತೃತ್ವದಲ್ಲಿ ಭೇಟಿಯಾಗಿ ಉಳ್ಳಾಲದ ಜ್ವಲಂತ ಸಮಸ್ಯೆಗಳಾದ ಶುದ್ಧ ಕುಡಿಯುವ ನೀರಿನ ಯೋಜನೆ, ಕಡಲ ಕೊರತೆಗೆ ಶಾಶ್ವತ ಯೋಜನೆ ಮತ್ತು ಉಳ್ಳಾಲದ ಸಮಗ್ರ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆಯೂ, ಹಾಗೂ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು .ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳಾದ ಹಾಜಿ ಅಬೂಬಕ್ಕರ್ ನಾಟೆಕಲ್ ನಜೀರ್ ಉಲ್ಲಾಲ್ ,ಮುಸ್ತಫಾ ಎವರೆಸ್ಟ್ ,ಯು ಎಚ್ ಫಾರೂಕ್, ಹೈದರ್ ಉಲ್ಲಾಲ್, ಅಶ್ರಫ್ ಕೋಡಿ ಮತ್ತು ಉಳ್ಳಾಲ ನಗರಸಭೆ ಕೌನ್ಸಿಲರ್ ಗಳಾದ ಯು ಎಂ ಜಬ್ಬಾರ್, ಖಲೀಲ್ ಮುಕ್ಕಚ್ಚೇರಿ, ಬಶೀರ್ ಉಪಸ್ಥಿತರಿದ್ದರು

  ಉಳ್ಳಾಲದ ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ: ಮಂಗಳೂರು ವಿಧಾನಸಭಾ ಕ್ಷೇತ್ರ ಜೆಡಿಎಸ್ ಮುಖಂಡರು ದಿನಾಂಕ 11-10-2018 ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮತ್ತು ಸನ್ಮಾನ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿರವರನ್ನು ಜೆಡಿಎಸ್ ರಾಜ್ಯ ಮಹಾ ಕಾರ್ಯದರ್ಶಿ ಬಿ ಎಂ ಫಾರೂಕ್ ರವರ ನೇತೃತ್ವದಲ್ಲಿ ಉಳ್ಳಾಲ ಕಡಲ ಕೊರತೆ ಬಗ್ಗೆ ಮನವಿ ಸಲ್ಲಿಸಿ ಕೂಡಲೇ ಸಂತ್ರಸ್ತರಿಗೆ ಶಾಶ್ವತ ಪರಿಹಾರವಾದಂತಹ ವಸತಿಯನ್ನು ನೀಡಬೇಕೆಂದು ಮನವಿ ಸಲ್ಲಿಸಿದರು. ಮುಖ್ಯಮಂತ್ರಿಯವರು ಕೂಡಲೇ ಸ್ಪಂದಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ಸೂಚನೆಯನ್ನು ನೀಡಿದರು ಮುಖ್ಯಮಂತ್ರಿಯ ಸೂಚನೆ ಮೇರೆಗೆ ಕೂಡಲೇ ಜಿಲ್ಲಾಧಿಕಾರಿಯವರು ದಿನಾಂಕ13-10-2018 ರಂದು ಉಳ್ಳಾಲ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ವಾಗಿ ಆರು ತಿಂಗಳ ಒಳಗೆ ಎರಡು ಬೆಡ್ ರೂಮಿನ ಮನೆ ಕಟ್ಟಡವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು .ಈ ಸಂದರ್ಭದಲ್ಲಿ ತಹಶೀಲ್ದಾರರು, ಉಳ್ಳಾಲ ನಗರಸಭೆ ಪೌರಾಯುಕ್ತ ವಾಣಿ ವಿ ಕಂದಾಯ ನಿರೀಕ್ಷಕರು ಗ್ರಾಮಲೆಕ್ಕಿಗ ಮತ್ತು ಜೆಡಿಎಸ್ ಮುಖಂಡ ನಜೀರ್ ಉಲ್ಲಾಲ್, ಮುಸ್ತಫ ಎವರೆಸ್ಟ್, ಯು ಎಚ್ ಫಾರೂಕ್ ,ಅಶ್ರಫ್ ಕೋಡಿ, ಹಮೀದ್ ಉಲ್ಲಾಲ್ ನಗರಸಭೆ ಕೌನ್ಸಿಲರ್ ಆದಂತಹ ಬಶೀರ್, ಯು ಎಂ ಜಬ್ಬಾರ್ , ಮಹಮ್ಮದ್ ಮುಕ್ಕಚ್ಚೇರಿ ಹಾಗೂ ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  ಉಳ್ಳಾಲ ನಗರ ಜನತಾ ದಳ ಜಾತ್ಯಾತೀತ ಅಧ್ಯಕ್ಷರಾಗಿ ಯು.ಕೆ.ಮಹಮ್ಮದ್ ಮುಸ್ತಫಾ ನೇಮಕ : ಉಳ್ಳಾಲ ನಗರ ವೀಕ್ಷಕರ ಶಿಫಾರಸಿನ ಮೇರೆಗೆ ರಾಜ್ಯ ,ಜಿಲ್ಲಾ ನಾಯಕರ ಸೂಚನೆಯ ಮೇರೆಗೆ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಮೋಹನ್ ದಾಸ್ ಆಲ್ವಾ ರವರು ಯು.ಕೆ. ಮಹಮ್ಮದ್ ಮುಸ್ತಫಾ ರವರನ್ನು ಉಳ್ಳಾಲ ನಗರ ಜನತಾ ದಳ( ಜಾತ್ಯತೀತ) ಅಧ್ಯಕ್ಷರನ್ನಾಗಿಯುೂ,ಹೈದರ್ ಉಲ್ಲಾಲ್ ರವರನ್ನು ಉಳ್ಳಾಲ ನಗರ ಪ್ರಧಾನ ಕಾರ್ಯದರ್ಶಿಯನ್ನಾಗಿಯೂ ನೇಮಕ ಮಾಡಿ ಆದೇಶಿಸಿದ್ದಾರೆ

   

   

   

   

   

  • Comments Off on ಉಳ್ಳಾಲದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಭೇಟಿ ಬಿ ಎಂ ಫಾರೂಕ್ ನೇತೃತ್ವ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.