02:15 am Tuesday, June 18, 2019
 • ಹಂಝ ಅಫ್ನಾನ್ ನಿಧನಕ್ಕೆ* *ವೆಲ್‍ಫೇರ್ ಪಾರ್ಟಿಯಿಂದ ಸಂತಾಪ*

  By admin - Fri Oct 12, 1:13 am

  • Comments Off on ಹಂಝ ಅಫ್ನಾನ್ ನಿಧನಕ್ಕೆ* *ವೆಲ್‍ಫೇರ್ ಪಾರ್ಟಿಯಿಂದ ಸಂತಾಪ*
  • 0 views

   

  ಖೈರಉಮ್ಮ:*
  *ಕಂಬನಿ ಮಿಡಿದವರು*
  😥😥😥😥😥😥😥😥😥😥😥
  ಇನ್ನಾಲಿಲ್ಲಾಹಿ ವ ಇನ್ನಾಇಲೈಹಿ ರಾಜಿವೂನ್…
  ಹಂಝರವರ ಮರಣ ಅರಗಿಸಿಕೊಳ್ಳಕ್ಕಾಗುತ್ತಿಲ್ಲ. ನನ್ನ ಸ್ನೇಹಿತರೂ ಹಿತಕಾಂಕ್ಷಿಯೂ ಆಗಿದ್ದ ಹಂಝರವರು ಉತ್ತಮ ಗುಣ ಸ್ವಭಾವದವರಾಗಿದ್ದರು.ಅವರ ಚಿಕನ್ ಸೆಂಟರ್ ಉದ್ಘಾಟನೆಗೆ ನಾನು ಹೋಗಿದ್ದೆ. ಅವರ ಕುಟುಂಬ ವರ್ಗಕ್ಕೆ ತಾಳ್ಮೆಯ ಶಕ್ತಿ ಅಲ್ಲಾಹು ನೀಡಲಿ. ಹಂಝರ ಪರಲೋಕ ಜೀವನ ಸಮೃದ್ಧಿ ಗೊಳಿಸಲಿ

  *ಹಾಜಿI ಎಸ್ ಬಿ ಮುಹಮ್ಮದ್ ದಾರಿಮಿ*
  ➖➖➖➖➖➖➖➖➖➖➖ *ಇನ್ನಾಲಿಲ್ಲಾಹಿ ವಇನ್ನಾ ಇಲೈಹಿ ರಾಜಿವೂನ್*

  ಅಫ್ನಾನ್ ಹಂಝ ರವರ ಮರಣದ ವಾರ್ತೆ ನಂಬಲು ಸಾಧ್ಯವಿಲ್ಲ. ಜನನಾಯಕನ ವಿದಾಯ ಅರಗಿಸಿಕೊಳ್ಳಲಾಗುತ್ತಿಲ್ಲ.😢
  ಪುತ್ತೂರಿಗೆ ಎಲ್ಲೇ ಹೊದರೂ ಸಾಕು ಅವರೇ ಕಾಣುತ್ತಿದ್ದದ್ದು..
  *ಕೈ ಕುಲುಕಿ ರಹಾತಾ* ಎಂದು ಕೇಳುವ ಆ ಪುಂಚಿರಿಯ ಮುಖವನ್ನು ಇನ್ನು ಯಾವಾಗ ನೋಡಲು ಸಾಧ್ಯ😢…
  ಪುತ್ತೂರು ಎಸ್ಡಿಪಿಐ ಎಂದರೆ ಆಕ್ಷಣದಲ್ಲಿ ಚಿತ್ರಣ ಬರುತ್ತಿದ್ದದ್ದು ಅಫ್ನಾನ್ ಹಂಝರವರ ನಗುಮುಖ..!! ಯಾ ಅಲ್ಲಾಹ್ ಅವರೊಂದಿಗೆ ನಮ್ಮನ್ನೂ ಜನ್ನಾತುಲ್ ಫಿರ್ದೌಸಿನಲ್ಲಿ ಒಂದು ಗೂಡಿಸು. ಆಮೀನ್..
  *Rest in Peace Brother Afnan Hamza*

  *🌱ಹಂಝತ್ ಅಲಿ ಕೆಪಿ..*
  ➖➖➖➖➖➖➖➖➖➖➖
  *ಪುತ್ತೂರಿನ ಹಂಝಾ ಅಫ್ನಾನ್ ರವರ ನಿಧನ ಸಮುದಾಯಕ್ಕೆ ದೊಡ್ಡ ನಷ್ಟ*

  *ಪುತ್ತೂರಿನ ಎಸ್ ಡಿ ಪಿ ಐ ನಾಯಕರಾಗಿದ್ದು ಕೊಂಡು ಸಮಾಜ ಸೇವೆಯಲ್ಲಿ ಸಕ್ರಿಯವಾಗಿದ್ದರು*

  *ಪೋಲೀಸ್ ಠಾಣೆ ಮತ್ತು ಸರಕಾರಿ ಅಧಿಕಾರಿಗಳು ಮತ್ತು ಸಮುದಾಯ ಮುಖಂಡರು ಗಳೊಂದಿಗೆ ಉತ್ತಮ ಸಂಭಂಧ ಇಟ್ಟು ಕೊಂಡಿದ್ದ ಹಂಝಾ ಅಫ್ನಾನ್ ರವರು ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚಿನ ಸಮಯ ಕೊಟ್ಟು ಪ್ರಯತ್ನ ಮಾಡುತ್ತಿದ್ದರು*

  *ಎಸ್ ಡಿ ಪಿ ಐ ಪಕ್ಷದ 12/10ರ ಪುತ್ತೂರಿನ ಸಮಾವೇಶಕ್ಕಾಗಿ ರಾತ್ರಿ ಕೆಲಸದಲ್ಲಿ ತೊಡಗಿಸಿಕೊಂಡಾಗ ವಿದ್ಯುತ್ ಅವಘಡದಿಂದ ಮರಣ ಸಂಭವಿಸಿದೆ(ಇನ್ನಾಲಿಲ್ಲಾಹಿ….)*

  *ಅವರ ಜೀವನ ಕಾಲದಲ್ಲಿ ಮಾಡಿದ ಎಲ್ಲಾ ಪುಣ್ಯ ಕೆಲಸವನ್ನು ಅಲ್ಲಾಹನು ಸ್ವೀಕರಿಸಲಿ ಮಗ್ ಫಿರತ್, ಮರ್ ಹಮತ್ ನೊಂದಿಗೆ ಪರಲೋಕ ಜೀವನದಲ್ಲಿ ರಕ್ಷಣೆ ನೀಡಿ ಸ್ವರ್ಗದಲ್ಲಿ ಪ್ರವೇಶಿಸಲಿ*

  *ಅವರ ಮನೆಯವರಿಗೂ, ಕುಟುಂಬದವರಿಗೂ, ಸಹಪಾಠಿಗಳಿಗೂ ತಾಳ್ಮೆ, ಸಮಾಧಾನದೊಂದಿಗೆ ಇಹಪರ ವಿಜಯವನ್ನು ಅಲ್ಲಾಹನು ದಯಪಾಲಿಸಲಿ-ಆಮೀನ್ ಎಂದು ನಾವೆಲ್ಲರೂ ಅವರಿಗಾಗಿ ದುಆ ಮಾಡೋಣ*

  *ಜಾಫರ್ ಸಾಧಿಕ್ ಫೈಝೀ*
  ➖➖➖➖➖➖➖➖➖➖➖
  *ಅಫ್ನಾನ್ ಹಂಝ ಎಂಬ ಆಪತ್ಬಾಂಧವ!*
  ಆಕಸ್ಮಿಕವಾಗಿ ಮರಣವನ್ನಪ್ಪಿದ ಅಫ್ನಾನ್ ಸ್ನೇಹ ಜೀವಿ. ಮಾನವೀಯ ಗುಣವಿರುವ ಆಪತ್ಬಾಂಧವ! ಎಂದು ಗೆಳೆಯರೊಬ್ಬರು ಹೇಳಿ, ಆತನ ಅನಿರೀಕ್ಷಿತ ಅಗಲಿಕೆ ನೊಂದು ಕೊಂಡರು. ಅಫ್ನಾನ್ ತಂದೆ ಬಹಳ ಒಳ್ಳೆಯ ವ್ಯಕ್ತಿ.
  ಗತ್ತು, ಧಿಮಾಕಿಲ್ಲದವರು. ಆರ್ಥಿಕವಾಗಿ ಸದೃಢರಾಗಿದ್ದರೂ ಅಫ್ನಾನ್ ಕುಟುಂಬ ಬಡವರಿಗಾಗಿ ನೆರವು ನೀಡುವುದಕ್ಕೆ ಎಂದೂ ಮುಂದೆ ಇರುವವರು ಎಂದು ಉಳ್ಳಾಲದ ಪ್ರಸಿದ್ದ ಮತ್ಸೋದ್ಯಮಿ ಅಬೂಬಕ್ಕರ್ ಹಾಜಿ ಹೇಳಿದರೆಂದು ಅವರ ನಿಕಟ ಸಂಬಂಧಿ ತಿಳಿಸಿದರು.
  ಅಫ್ನಾನ್ ನಿಂದ ಕುಟುಂಬ- ಸಮಾಜ ಸಾಕಷ್ಟು ನಿರೀಕ್ಷೆಯನ್ನಿಟ್ಟಿರಲೇ ಬೇಕು, ಯಾಕೆಂದರೆ ಆತ ಬದುಕಿದ್ದರೆ, ಭವಿಷ್ಯದಲ್ಲಿ ಅಪಾರ ಸಾಧನೆಗಳಿಗೆ ಕಾರಣರಾಗುತ್ತಿದ್ದರು. ಆದರೆ ಅಲ್ಲಾಹನ ನಿರ್ಣಯ ಉಲ್ಲಂಘಿಸಲು ಸಾಧ್ಯವಿಲ್ಲ. ಉತ್ತಮರನ್ನು ಬಹು ಬೇಗ ಕರೆಯುತ್ತಾನೆ ದೇವರು. ಎಂಬ ಹಿರಿಯರ ಮಾತು ಸತ್ಯವೇ ಆಗಿರ ಬೇಕು!
  ಅಲ್ಲಾಹನು ಅಫ್ನಾನನ ಅಕಾಲಿಕ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಆತನ ಕುಟುಂಬಕ್ಕೂ ಮಿತ್ರರಿಗೂ ದಯಪಾಲಿಸಲಿ, ಅಫ್ನಾನ್ ಅಲ್ಲಾಹನ ಇಷ್ಟಪಾತ್ರರ ಜೊತೆ ಸ್ವರ್ಗವಾಸಿಯಾಗಲಿ, ಆಮೀನ್.
  *– ಫಾರೂಕ್ ಉಳ್ಹಾಲ್.*
  ➖➖➖➖➖➖➖➖➖➖➖
  ಸಂಘಟನಾ ಚತುರ ನ್ಯಾಯಕ್ಕಾಗಿ ಸಮುದಾಯಕ್ಕಾಗಿ ಸರ್ವಸ್ವವನ್ನೇ ಮುಡಿಪಾಗಿಟ್ಟ ನೊಂದವರೊಂದಿಗೆ ಸದಾ ಬೆರೆತು ಧೈರ್ಯತುಂಬಿ ನ್ಯಾಯ ಒದಗಿಸಿಕೊಡುತ್ತಿದ್ದ ನೆಚ್ಚಿನ ಕೆಚ್ಚೆದೆಯ ನಾಯಕ ಅಫ್ನಾನ್ ಹಂಝ ರವರ ಮರಣದ ವಾರ್ತೇ ನೋವು ತಂದಿದೆ.
  ಅಲ್ಲಾಹು ಅವರೆಲ್ಲಾ ತಪ್ಪುಗಳನ್ನು ಮನ್ನಿಸಲಿ ಆಮೀನ್..

  👁 *ರಿಯಾಝ್ ಬಜಿಪೆ*
  ➖➖➖➖➖➖➖➖➖➖➖

  *ಸಾವಿರಾರು ನೆನಪುಗಳನ್ನು ನೆನಪಾಗಿಸಿಯೇ ಮರೆಯಾದ ಹಂಝ ಆಫ್ನಾನ್..!!*

  ಮಧ್ಯರಾತ್ರಿಯ ಸಮಯದಲ್ಲಿ ಅಫ್ನಾನ್ ಹಂಝ ನಿಧನ ಅನ್ನುವ ವಾಟ್ಸ್ ಅಪ್ ಸಂದೇಶವೊಂದನ್ನು ನೋಡಿದಾಗ ಹಂಝ ಶಾಶ್ವತವಾಗಿ ನಮ್ಮಿಂದ ಇಷ್ಟು ಬೇಗ ಮರೆಯಾಗಬಹುದು ಅಂತ ಅಂದುಕೊಳ್ಳಲು ಮನಸ್ಸು ಒಪ್ಪಲೇ ಇಲ್ಲ. ನಮ್ಮೊಳಗಿನ ಆತ್ಮೀಯತೆ ನಾಲ್ಕು ವರ್ಷದ್ದಾದರೂ ಯಾವತ್ತೂ ನಮ್ಮ‌ ನಡುವಿನ ಮಾತುಕತೆಯಲ್ಲಿ ಯಾವತ್ತೂ ಆತ ಸಂಘಟನೆಯನ್ನೋ, ಪಕ್ಷವನ್ನೋ ತಂದಿರಲಿಲ್ಲ. ಎಲ್ಲರೊಂದಿಗೂ ಆತ್ಮೀಯತೆಯಿಂದ ಮುಗುಳ್ನಗೆಯಿಂದ ಮಾತನಾಡುವ ಕಲೆ ಆತನಲ್ಲಿತ್ತು. ಯಾರೊಡನೆಯೂ ದ್ವೇಷ ಕಟ್ಟಿಕೊಂಡವನೂ ಆಗಿರಲಿಲ್ಲ. ಯಾರಿಗಾದರೂ ಅನ್ಯಾಯವಾದಲ್ಲಿ ನ್ಯಾಯ ಕೇಳುವವರ ಸಾಲಿನಲ್ಲಿ ಪುತ್ತೂರಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವನಲ್ಲಿ ಈತನೂ ಒಬ್ಬನಾಗಿದ್ದ. ಆತನಿಗೆ ಎಲ್ಲಾ ಪಕ್ಷದಲ್ಲೂ ಆತ್ಮೀಯರಿದ್ದರು..!
  ಪುತ್ತೂರಿನ ದರ್ಬೆಯಲ್ಲಿ ಪಕ್ಷದ ಬ್ಯಾನರ್ ಕಟ್ಟುವಾಗ ವಿದ್ಯುತ್ ತಗುಲಿ ಮರಣವನ್ನಪ್ಪಿದ ವಾರ್ತೆ ಸಿಕ್ಕಿದೊಡನೆ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲೂ, ನಂತರ ಸರ್ಕಾರೀ ಆಸ್ಪತ್ರೆಯಲ್ಲೂ ಜನಗಳ ದಂಡೇ ಸೇರಿದ್ದವು. ನಂತರ ಜನಾಝ ಕೊಡಾಜೆಯ ಮನೆಗೆ ಕೊಂಡೊಯ್ದಾಗ ಕೊಡಾಜೆಯ ಮನೆ ರಾತ್ರಿಯಿಂದಲೇ ಜನಸಾಗರದಿಂದ ತುಂಬಿದ್ದವು.
  ಇಂದು ರಸ್ತೆಯ ಇಕ್ಕೆಲಗಳಲ್ಲೂ ಕಿ.ಮೀ ದೂರದವರೆಗೂ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು.
  ಬಂದವರೆಲ್ಲರ ಕಣ್ಣುಗಳೂ ಒದ್ದೆಯಾಗುತ್ತಿದ್ದವು. ಕೆಲವರು ಬಿಕ್ಕಿ ಬಿಕ್ಕಿ ಅಳುವುದನ್ನು ನೋಡಿ ಉಳಿದವರ ಕಣ್ಣುಗಳೂ ತೇವಗೊಳ್ಳುತ್ತಿದ್ದವು.
  ಹಂಝ ನ ಏನೂ ಹರಿಯದ ಮುಗ್ಧ ಮಗುವೊಂದು ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬರು ಚಪ್ಪಲಿ ಧರಿಸಿಕೊಂಡು ನಡೆದಾಡು ಅಂದಾಗ ನನ್ನ ಚಪ್ಪಲಿ ಇಲ್ಲಿಲ್ಲ, ಅದು ಆಸ್ಪತ್ರೆಯಲ್ಲಿ ಇದೆ, ನನ್ನ ಬಾಪ ಆಸ್ಪತ್ರೆಯಲ್ಲಿದ್ದಾರೆ ಅಂತ ಹೇಳುತ್ತಿತ್ತು ಅಂತ ಒಬ್ಬರು ಹೇಳುವಾಗ ನಮಗೆ ಮಾತನಾಡಲು ಮಾತುಗಳಿರಲಿಲ್ಲ.
  ಸಾವಿರಾರು ಜನರೊಂದಿಗೆ ಮಯ್ಯತ್ ನನ್ನು ಮಸೀದಿಗೆ ಸಾಗಿಸುತ್ತಿರುವಾಗ ರಾಜ್ಯ ಹೆದ್ದಾರಿ ಸ್ಥಬ್ಧವಾಗಿ ವಾಹನಗಳು ಬದಿಯಲ್ಲಿ ನಿಂತುಕೊಂಡು ಮಯ್ಯತ್ ಸಾಗಿಸಲು ಅನುವು ಮಾಡಿಕೊಟ್ಟ ದೃಶ್ಯಗಳು ಕಣ್ಣನ್ನು ತೇವಗೊಳಿಸುತ್ತಲೇ ಇದ್ದವು. ಮಸೀದಿಯಲ್ಲಿ ಮಯ್ಯತ್ ನಮಾಝ್ ಮಾಡಲು ಸಾವಿರಾರು ಜನರು ಇದ್ದರು, ಮಯ್ಯತ್ ನಮಾಝ್ ಮಾಡುವಾಗಲೂ ಹಲವರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು, ಇಮಾಮರು ಸಹನೆಯನ್ನು ಕಳೆದುಕೊಂಡು ಕಣ್ಣೀರು ಹಾಕಿದ್ದರು.
  ಸಮಾಜದಲ್ಲಿ ಗೌರವಯುತವಾಗಿ ಬಾಳಿ ಬದುಕಿದ ಹಂಝ ತನ್ನ ಮರಣಾನಂತರವೂ ಹಲವರ ಸ್ನೇಹವನ್ನು ಉಳಿಸಿಕೊಂಡಿದ್ದ.
  ಅದೆಷ್ಟೇ ದೊಡ್ಡವರಾದರೂ ಮರಣದ ಮುಂದೆ ಸೋಲೊಪ್ಪಲೇಬೇಕಾಗಿದೆ.
  ಹಂಝರವರ ಪಾರತ್ರಿಕ ಜೀವನವನ್ನು ಅಲ್ಲಾಹನು ಸಂತುಷ್ಟಗೊಳಿಸಲಿ.
  ಆಮೀನ್ ಯಾ ಅಲ್ಲಾಹ್ 😭

  ಸ್ನೇಹಜೀವಿ ಅಡ್ಕ
  (ಅಧ್ಯಕ್ಷರು SSF ಮೈದಾನಿಮೂಲೆ ಶಾಖೆ)

  ________________________
  ಎಲ್ಲರಿಗೂ ಬೇಕಾಗುವ, ಎಲ್ಲರನ್ನೂ ನಗುಮುಖದಿಂದಲೇ ಗೆದ್ದ ಸಮಾಜ ಸ್ನೇಹಿ, ಅಫ್ನಾನ್ ಹಂಝರವರಿಗೆ ಅಲ್ಲಾಹು ಮಗ್ಫಿರತ್, ಮರ್ಹಮತ್ ಪ್ರಧಾನಿಸಲಿ.ಸತ್ಕರ್ಮಗಳನ್ನು ಸ್ವೀಕರಿಸಿ ಸ್ವರ್ಗ ಪ್ರಾಪ್ತಿ ಕರುಣಿಸಲಿ.
  ಸಂಘಟನೆ ಅವರೊಂದಿಗಿನ ವೈಯಕ್ತಿಕ ಸಂಬಂಧಕ್ಕೆ ಯಾವತ್ತೂ ಅಡ್ಡಿಯಾಗಿರಲಿಲ್ಲ. ಕೆಐಸಿಗೆ ಸದಾ ನೆರವಾಗುವ ಕುಟುಂಬ..,ಯಾ ಅಲ್ಲಾಹ್!
  ಮರಣದ ಮನೆಗೆ ತಲುಪುವಾಗ ಸ್ವಲ್ಪ ತಡವಾಗಿತ್ತು.ಮಯ್ಯಿತ್ ದಫನ ಕಾರ್ಯ ಮುಗಿದ ನಂತರವೂ ನೂರಾರು ವಿಶ್ವಾಸಿಗಳು ತೇವಗೊಂಡ ಕಣ್ಣಿನೊಂದಿಗೆ ಪ್ರಾರ್ಥಿಸುತ್ತಿರುವುದನ್ನು ಕಂಡೆ …

  *ಅನೀಸ್ ಕೌಸರಿ*
  ➖➖➖➖➖➖➖➖➖➖➖
  *ಹಂಝ ಅಫ್ನಾನ್ ನಿಧನಕ್ಕೆ*
  *ವೆಲ್‍ಫೇರ್ ಪಾರ್ಟಿಯಿಂದ ಸಂತಾಪ*

  *ಪುತ್ತೂರು:* ಇಲ್ಲಿನ ಕೂರ್ನಡ್ಕ ನಿವಾಸಿಯಾಗಿರುವ SDPI ಪಕ್ಷದ ಪೂತ್ತೂರು ನಗರ ಸಭೆ ಅಧ್ಯಕ್ಷ ಹಂಝ ಅಫ್ನಾನ್ ವಿದ್ಯುತ್ ತಂತಿ ಸ್ಪರ್ಶಗೊಂಡು ಮರಣ ಹೊಂದಿರುವುದಕ್ಕೆ ವೆಲ್‍ಫೇರ್ ಪಾರ್ಟಿ ಪೂತ್ತೂರು ವಿಧಾನಸಭಾ ಅಧ್ಯಕ್ಷ ಅಲ್ತಾಫ್ ಉಪ್ಪಿನಂಗಡಿ ದು:ಖವನ್ನು ವ್ಯಕ್ತಪಡಿಸಿದ್ದಾರೆ.

  ಸರಳ, ಸಜ್ಜನ ವ್ಯಕ್ತಿತ್ವವನ್ನು ಹೊಂದಿದ್ದ ದಿವಂಗತ ಹಂಝ ಅಫ್ನಾನ್‍ರ ಆತ್ಮಕ್ಕೆ ದೇವನು ಮೋಕ್ಷವನ್ನು ದಯಪಾಲಿಸಿ, ಸ್ವರ್ಗದಲ್ಲಿ ಉನ್ನತ ಸ್ಥಾನವನ್ನು ನೀಡಲಿ ಹಾಗೂ ಅವರ ಕುಟುಂಬದವರಿಗೆ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಸಂತಾಪ ಸೂಚಿಸಿದರು.

  *ವೆಲ್ಫೇರ್ ಪಾರ್ಟೀ ಆಫ್ ಇಂಡಿಯಾ*

  Report: the third eye..
  🏴

  • Comments Off on ಹಂಝ ಅಫ್ನಾನ್ ನಿಧನಕ್ಕೆ* *ವೆಲ್‍ಫೇರ್ ಪಾರ್ಟಿಯಿಂದ ಸಂತಾಪ*
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.