03:54 am Saturday, March 23, 2019
 • ರಾಮನಗರದಿಂದ ಮುಸ್ಲಿಂ ಶಾಸಕ ಆಯ್ಕೆಯಾಗಲಿ

  By admin - Wed Oct 10, 4:32 am

  • Comments Off on ರಾಮನಗರದಿಂದ ಮುಸ್ಲಿಂ ಶಾಸಕ ಆಯ್ಕೆಯಾಗಲಿ
  • 0 views

  *ರಾಮನಗರದಿಂದ ಮುಸ್ಲಿಂ ಶಾಸಕ ಆಯ್ಕೆಯಾಗಲಿ: ಸಾರ್ವಜನಿಕರಿಂದ ಒತ್ತಾಯ*

  ರಾಮನಗರ: ರಾಮನಗರ ಅಸೆಂಬ್ಲಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿ ಸ್ಪರ್ಧಿಸಿ 70 ಸಾವಿರ ಮತ ಪಡೆದರೂ ಸೋತಿದ್ದಾರೆ. ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸ್ಪರ್ಧಿಸುವ ತಯಾರಿ ನಡೆಸಲಾಗುತ್ತಿದೆ. ಆದರೆ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ಸಿಗದಂತೆ ನೋಡಿಕೊಳ್ಳಲಾಗುತ್ತಿರುವುದು ಅಲ್ಪಸಂಖ್ಯಾತ ಸಮುದಾಯವನ್ನು ಮತ್ತಷ್ಟು ಅಭಿವೃದ್ಧಿ ವಂಚಿತ ಸಮುದಾಯ ಮಾಡುವ ಅಜೆಂಡಾ ಕಾಣಿಸುತ್ತಿರುವುದು ವಿಪರ್ಯಾಸ. ರಾಮನಗರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಮುಸ್ಲಿಮರಿಗೆ ಅವಕಾಶ ನೀಡಬೇಕೆಂದು ಮುಸ್ಲಿಂ ಸಮುದಾಯ ಮಾತ್ರವಲ್ಲದೆ ಸಾರ್ವಜನಿಕರು ಒತ್ತಾಯಿಸುತ್ತದೆ.

  ಕರ್ನಾಟಕದಲ್ಲಿ 1 ಕೋಟಿ ಮುಸ್ಲಿಮರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗಲಿಲ್ಲ. 10 ವರ್ಷದಿಂದ ಒಬ್ಬನೇ ಒಬ್ಬ ಸಂಸದನಿಲ್ಲ. ಜನ ಸಂಖ್ಯೆ ಅನುಪಾತದಂತೆ 32 ಮುಸ್ಲಿಂ ಶಾಸಕರಿರಬೇಕಿತ್ತು. ಆದರೆ ಕಳೆದ ಅವಧಿಯಲ್ಲಿ 12 ಶಾಸಕರಿದ್ದು ಈಗಿರುವುದು ಕೇವಲ ಏಳು ಮಾತ್ರ. ಇದು ಅಲ್ಪಸಂಖ್ಯಾತ ಸಮುದಾಯಕ್ಕೆ ಜಾತ್ಯಾತೀತ ಪಕ್ಷಗಳೆಂದು ಕೊಚ್ಚಿಕೊಳ್ಳುತ್ತಿರುವ ಪಕ್ಷಗಳು ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು? ಜೆಡಿಎಸ್ ಪಕ್ಷದಿಂದ ಮುಸ್ಲಿಮರನ್ನು ಈ ಬಾರಿ ಮಂತ್ರಿ ಸ್ಥಾನದಿಂದಲೂ ವಂಚಿಸಲಾಗಿದೆ. ಹಾಗೂ ರಾಜ್ಯದಲ್ಲಿ ಕೇವಲ ಇಬ್ಬರಿಗೆ ಮಾತ್ರ ಸಚಿವ ಸ್ಥಾನವನ್ನು ನೀಡಲಾಗಿದೆ.

  ಹಿಂದೆ ದೇವೇಗೌಡರು ಪ್ರಧಾನಿಯಾಗಲು ಮುಖ್ಯ ಕಾರಣ ಆಗಿನ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಜನತಾದಕ್ಕೆ ಮತ ನೀಡಿ ಹೆಚ್ಚು ಸಂಸದರು ಆ ಪಕ್ಷದಿಂದ ಆಯ್ಕೆಯಾಗಿದ್ದರು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ಕೊಡುತ್ತಿಲ್ಲ. ಜೆಡಿಎಸ್ ಪಕ್ಷ ಮುಸ್ಲಿಮರಿಗೆ ಈ ಬಾರಿ ಬಜೆಟ್‍ನಲ್ಲೂ ಯಾವುದೇ ರೀತಿಯ ನೂತನ ಯೋಜನೆಯನ್ನು ತಂದಿಲ್ಲ. ಕುಮಾರಸ್ವಾಮಿ ರಾಜ್ಯದ ಮುಸ್ಲಿಮರ ಮನ ಗೆಲ್ಲಬೇಕೆಂದರೆ ರಾಮನಗರದಿಂದ ಮುಸ್ಲಿಂ ಶಾಸಕರಾಗಲು ಅವಕಾಶÀ ಕೊಡಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಅಲ್ಪಸಂಖ್ಯಾತ ಸಮುದಾಯ ಜಾಗೃತರಾಗುತ್ತಿದ್ದು, ರಾಜಕೀಯವಾಗಿಯೂ ಪ್ರಬಲರಾಗುತ್ತಿದ್ದಾರೆ. ಒಂದು ವೇಳೆ ಅಲ್ಪಸಂಖ್ಯಾತರನ್ನು ರಾಜಕೀಯ ಕ್ಷೇತ್ರದಿಂದ ದೂರ ನಿಲ್ಲುವಂತೆ ಪ್ರಯತ್ನಿಸಿದರೆ ಅದರ ಪರಿಣಾಮ ಇಲ್ಲಿನ ಜಾತ್ಯಾತೀತ ಪಕ್ಷಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಪಕ್ಷಗಳು ಪರಿಣಾಮವನ್ನು ಎದುರಿಸಬೇಕಾಗಬಹುದು ಎಂಬುದು ಅತ್ಯಂತ ಸ್ಪಷ್ಟವಾಗಿದೆ. ಆದುದರಿಂದ ರಾಮನಗರ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದ ಅನ್ವಯ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರ ಮೂಲಕ ತಮ್ಮ ಜಾತ್ಯಾತೀತ ಸಿದ್ಧಾಂತವನ್ನು ತೋರ್ಪಡಿಸುವುದು ತಮ್ಮ ಕರ್ತವ್ಯವಾಗಿದೆ. ಇಲ್ಲದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಅದೇ ಸಮುದಾಯದ ಜನತೆ ಪಾಠ ಕಲಿಸಲಿದ್ದಾರೆ ಎಂಬ ಎಚ್ಚರಿಕೆಯನ್ನು ಜಾತ್ಯಾತೀತ ರಾಷ್ಟ್ರೀಯ ಪಕ್ಷಗಳು ಮನಗಾನಬೇಕೆಂದು ರಾಮನಗರ ನಾಗರಿಕರು ಎಚ್ಚರಿಸಿದ್ದಾರೆ.

  • Comments Off on ರಾಮನಗರದಿಂದ ಮುಸ್ಲಿಂ ಶಾಸಕ ಆಯ್ಕೆಯಾಗಲಿ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.