07:17 pm Thursday, March 21, 2019
  • ಅನಾಥವಾಗಿದ್ದ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ನೆರವಾದ ಎಸ್.ಡಿ.ಪಿ.ಐ

    By admin - Tue Sep 04, 3:08 am

    • Comments Off on ಅನಾಥವಾಗಿದ್ದ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ನೆರವಾದ ಎಸ್.ಡಿ.ಪಿ.ಐ
    • 0 views

    *ಅಡ್ಡೂರು : ಅನಾಥವಾಗಿದ್ದ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ನೆರವಾದ ಎಸ್.ಡಿ.ಪಿ.ಐ ಕಾರ್ಯಕರ್ತರು!*

    *ಮಾನವೀಯತೆ ಮೆರೆದ ಎಸ್.ಡಿ.ಪಿ.ಐ ಅಡ್ಡೂರು ಗ್ರಾಮ ಸಮಿತಿ*👏

    ಅಡ್ಡೂರು : ಕಳಸಗುರಿ ಪರಿಸರದಲ್ಲಿ ವಾಸಿಸುತ್ತಿದ್ದ ಸುಶೀಲಮ್ಮ ಪೂಜಾರಿ ಎಂಬವರು ಸುಮಾರು ಸಂಜೆ 4:00 ಕ್ಕೆ ತಮ್ಮ ಮನೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೆ ಮೃತ ದೇಹವು ಅನಾಥವಾಗಿದ್ದು, ಸುಮಾರು ರಾತ್ರಿ 9:00 ಘಂಟೆಯ ವರೆಗೂ ಯಾರು ಇಲ್ಲದೆ ಅನಾಥವಾಗಿದ್ದನ್ನು ಪಕ್ಕದ ಮನೆಯ ವ್ಯಕ್ತಿ ಒಬ್ಬರು ಎಸ್.ಡಿ.ಪಿ.ಐ ಅಡ್ಡೂರು ಗ್ರಾಮ ಸಮಿತಿ ಅಧ್ಯಕ್ಷರಾದ ಎ.ಕೆ. ಮುಸ್ತಾಕ್ ಅವರಿಗೆ ಕರೆ ಮಾಡಿ ಸುದ್ದಿ ತಿಳಿಸಿದರು.

    ತಕ್ಷಣ ಕಾರ್ಯ ಪ್ರವರ್ತರಾದ ಎಸ್.ಡಿ.ಪಿ.ಐ ಕಾರ್ಯಕರ್ತರು ಹಾಗೂ ಪಿ.ಎಫ್.ಐ ಕಾರ್ಯಕರ್ತರು ಎಸ್.ಡಿ.ಪಿ.ಐ ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಬಡಕಬೈಲ್ ಸುಡುಗಾಡಿಗೆ ಸಾಗಿಸಿದರು. ಹಿಂದೂ ಧರ್ಮದ ಸಾಂಪ್ರದಾಯದಂತೆ ಅಂತ್ಯ ಸಂಸ್ಕಾರಕ್ಕೆ ಬೇಕಾದ ಎಲ್ಲಾ ಸಿದ್ಧತೆಯನ್ನು ಮತ್ತು ವಸ್ತುಗಳನ್ನು ಎಸ್.ಡಿ.ಪಿ.ಐ ಕಾರ್ಯಕರ್ತರು ಸಿದ್ಧತೆ ಮಾಡಿದರು. ಸುಮಾರು 6000 ರೂಪಾಯಿ ಮೌಲ್ಯ ವೆಚ್ಚವನ್ನು ಭರಿಸಿದರು. ಮಾನವೀಯತೆ ನೆಲೆಯಲ್ಲಿ ಯಾವುದೇ ಜಾತಿ ಭೇಧ ಮರೆತು ತಕ್ಷಣ ಸ್ಪಂಧಿಸಿ ಎಸ್.ಡಿ.ಪಿ.ಐ ಕಾರ್ಯಕರ್ತರ ಕಾರ್ಯ ಶ್ಲಾಘನೀಯವಾಗಿದೆ.

    ಸುಮಾರು ರಾತ್ರಿ 1:30 ಘಂಟೆಗಳ ವರೆಗೆ ಎಸ್.ಡಿ.ಪಿ.ಐ ಕಾರ್ಯಕರ್ತರು ಕಾರ್ಯಚರಣೆ ನಡೆಸಿದರು.

    ಮಹಿಳೆಯು ಮೂಲತ ಕಟೀಲಿನವರು ಎಂದು ತಿಳಿದು ಬಂದಿದೆ. 3 ಮಕ್ಕಳು ಇರುವುದಾಗಿ ತಿಳಿಸಿದ್ದಾರೆ. ಮಕ್ಕಳನ್ನು ಸಂಪರ್ಕಿಸಿ ವಿಷಯ ತಿಳಿಸಿ ಅವರನ್ನು ಅಂತ್ಯ ಸಂಸ್ಕಾರಕ್ಕೆ ಬರಲು ತಿಳಿಸಿದರು.

    ಧರ್ಮ ಧರ್ಮಗಳ ನಡುವೆ ಕೋಮು ಗಲಭೆ ಎಬ್ಬಿಸುವ ಈ ಸಮಾಜದಲ್ಲಿ ಮಾನವೀಯತೆ ನೆಲೆಯಲ್ಲಿ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ನೆರೆವಾದ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಕಾರ್ಯಕರ್ತರ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

    • Comments Off on ಅನಾಥವಾಗಿದ್ದ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ನೆರವಾದ ಎಸ್.ಡಿ.ಪಿ.ಐ
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.