07:38 pm Tuesday, June 25, 2019
 • ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವಿವಿಧ ಯೋಜನೆಗಳು.

  By admin - Sun Jul 29, 11:08 am

  • Comments Off on ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವಿವಿಧ ಯೋಜನೆಗಳು.
  • 0 views

  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ.),

  ಮತೀಯ ಅಲ್ಪಸಂಖ್ಯಾತ ವರ್ಗದವರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಪಾರ್ಸಿ, ಸಿಖ್ಖರು, ಬೌದ್ಧ ಜನಾಂಗದವರು ನಿಗಮದಿಂದ ಅನುಷ್ಟನಗೊಳ್ಳುತ್ತಿರುವ ವಿವಿಧ ಯೋಜನೆಗಳು.

  1) *ಸ್ವಯಂ ಉದ್ಯೋಗ ಯೋಜನೆ*
  2) *ಸ್ವಯಂ ಉದ್ಯೋಗ ಯೋಜನೆ*
  3) *ಶ್ರಮಶಕ್ತಿ ಯೋಜನೆ*
  4) *ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆ*
  5) *ಕಿರುಸಾಲ ಯೋಜನೆ*
  6) *ಕೃಷಿ ಯಂತ್ರೋಪಕರಣ ಖರೀದಿ ಯೋಜನೆ*
  7) *ಗಂಗಾಕಲ್ಯಾಣ ಯೋಜನೆ*
  8) *ಪಶು ಸಂಗೋಪನಾ ಯೋಜನೆ*
  9) *ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ*
  1) *ಸ್ವಯಂ ಉದ್ಯೋಗ ಯೋಜನೆ*:

  ವ್ಯಾಪಾರ, ಸಣ್ಣ ಕೈಗಾರಿಕೆ, ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳು ಸೇವಾ ವಲಯದಲ್ಲಿ ಬರುವ ಚಟುವಟಿಕೆಗಳಿಗೆ ಬ್ಯಾಂಕ್ಗವಳು/ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಗರಿಷ್ಠ 5.00 ಲಕ್ಷ ರೂವರೆಗೆ ಆರ್ಥಿಕ ನೆರವು ಒದಗಿಸುವುದು. ಘಟಕ ವೆಚ್ಚ 5,00,000/- ರೂಗಳವರೆಗೆ ನಿಗಮದಿಂದ ಘಟಕ ವೆಚ್ಚದ ಶೇ.33 ಅಥವಾ ಗರಿಷ್ಠ ಮಿತಿ ರೂ.1,65,000/-ಗಳ ಸಹಾಯಧನ ಹಾಗೂ ಘಟಕವೆಚ್ಚದ ರೂ.1,00,000/-ರೂಗಳ ಒಳಗೆ ಇರುವ ಚಟುವಟಿಕೆಗಳಿಗೆ ಶೇಕಡಾ 50% ಅಥವಾ ಗರಿಷ್ಟ ಮಿತಿ ರೂ. 35,000/- ಸಹಾಯಧನ ಮಂಜೂರು ಮಾಡುವುದು. ಉಳಿಕೆ ಮೊತ್ತವನ್ನು ಬ್ಯಾಂಕ್ಗಿಳು ಭರಿಸುವುದು.
  ಬೇಕಾಗುವ ದಾಖಲಾತಿಗಳು :

  1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು.
  2)ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್.
  3)ಕೊಟೇಶನ್/ಯೋಜನಾವರದಿ ಮತ್ತು ಲೈಸಸ್ಸ್
  4.)ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ.
  5) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನುಾ ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
  6)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು.(ವಾಸ್ತವ್ಯ ದೃಡೀಕರಣ ಪತ್ರ)
  7) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು
  8)ಅರ್ಜಿದಾರರು ಬ್ಯಾಂಕ್ ಪ್ರಭಂದಕರನ್ನು ಸಂರ್ಪಕಿಸಿ ಸಾಲ ನಿಡುವ ಬಗ್ಗೆ ಕಚಿತಪಡಿಸುವುದು.
  2) *ಶ್ರಮಶಕ್ತಿ ಯೋಜನೆ*

  ಈ ಯೋಜನೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಕಡು ಬಡವರು ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ವೃತ್ತಿಕುಲಕಸುಬುದಾರರು ಆಧುನಿಕತಂತ್ರಜ್ಞಾನ ಬಳಕೆಯಿಂದಾಗಿ ತಮ್ಮ ಸಾಂಪ್ರದಾಯಿಕ ಮಾರುಕಟ್ಟೆಯನ್ನು ಹಾಗೂ ವೃತ್ತಿಕೌಶಲತೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಿಕೊಳ್ಳಲು ಮತ್ತು ಆದಾಯಾ ಹೆಚ್ಚಿಸುವ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅಗತ್ಯವಿರುವ ಆರ್ಥಿಕ ನೆರವನ್ನು ಕಲ್ಪಿಸುವ ಉದ್ದೇಶದಿಂದ, „ಶ್ರಮಶಕ್ತಿ‟ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಹಾಗೂ ಸಾಂಪ್ರದಾಯಿಕ ವೃತ್ತಿ ಕುಲಕಸುಬುಗಳಾದ ಅಟೋಮೊಬೈಲ್ರಿಿಪೇರಿ ಮತ್ತು ಸರ್ವಿಸಿಂಗ್, ಗ್ಯಾಸ್ ಅಂಡ್ ಅರ್ಕ್ ವೆಲ್ಡಿಂಗ್, ಬೆಡ್ ಮೇಕಿಂಗ್, ವಲ್ಕನೈಸಿಂಗ್ ಮರದಕೆತ್ತನೆ ಕೆಲಸ, ಬಡಗಿ, ಟೈಲರಿಂಗ್, ಬಟ್ಟ ಮೇಲೆ ಬಣ್ಣಗಾರಿಕೆ ಮತ್ತು ಮುದ್ರಣಗಾರಿಕೆ, ಬೆತ್ತದ ಕೆಲಸ ಸಿಲ್ಕ್ ರೀಲಿಂಗ್ ಮತ್ತು ಟ್ವಸ್ಟಿಂಗ್ ಕೆಲಸ, ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ, ಮರದ ಆಟಿಕೆ ತಯಾರಿಕೆ ಮಂಡಕ್ಕೆ ಬಟ್ಟಿ, ಅವಲಕ್ಕೆ ಬಟ್ಟಿ, ಬಿದರಿ ವರ್ಕ್, ಕುಮ್ಮಾರಿಕೆ, ಎಲೆಕ್ಟೀಕಲ್ ವೈರಿಂಗ್ ಅಂಡ್ ರೀವೈಡಿಂಗ್ ಆಫ್ ಮೋಟಾರ್ಸ್, ಮೀನುಗಾರಿಕೆ ಸಲಕರಣೆ ಖರೀದಿ, ಹ್ಯಾಂಡಿಕ್ರಾಪ್ಟ್, ಹೈನುಗಾರಿಕೆ, ಕಲ್ಲುಕತ್ತನೆ ಕೆಲಸ, ಪಾತ್ರೆ ತಯಾರಿಕೆ, ಕಲಾಯಿ ಕೆಲಸ, ಸುಣ್ಣದಕಲ್ಲು ಸುಡುವಿಕೆ, ಗಾಜಿನ ಅಲಂಕಾರಿಕ ವಸ್ತುಗಳ ತಯಾರಿಕೆ, ಅಡಿಕೆತಟ್ಟೆ ಕಾಗದ ತಟ್ಟೆ ತಾಯಾರಿಕೆ, ಕಿರಾಣಿ ಅಂಗಡಿ, ಫಾಸ್ಟ್ ಪುಡ್ ಸೆಂಟರ್, ಬೇಕರಿ ಮತ್ತು ಕಾಂಡಿಮೆಂಟ್ಸ್, ತಂಪು ಪಾನೀಯ, ಕಬ್ಬಿನರಸ, ರೇμÉ್ಮ/ಹತ್ತಿ ನೇಕಾರಿಕೆ, ಏಲಕ್ಕಿ ಹಾರತಯಾರಿಕೆ, ಮೇಣದ ಬತ್ತಿ ತಯಾರಿಕೆ, ತೆಂಗಿನ ನಾರಿನ ವಸ್ತುಗಳ ತಯಾರಿಕೆ, ಪೊರಕೆ ತಯಾರಿಕೆ, ಸೋಫಾ ಸೆಟ್ ತಯಾರಿಕೆ, ಬ್ಯೂಟಿ ಪಾರ್ಲರ್, ಎಲೆಕ್ಟಿಕಲ್ ಲಾಂಡ್ರಿ ಎ.ಸಿ/ಪ್ರಿಡ್ಜ್ರಿಪೇರಿ, ಜರ್ಡೋಸಿ/ಎಂಬ್ರಾಯಿಡರಿ, ಫೋಟೋ ಫ್ರೇಮಿಂಗ್ ಮುಂತಾದ ಅವಶ್ಯಕತೆಗೆ ಇರುವ ಯಂತರೋಪಕರಣಗಳು/ಸಲಕರಣೆಗಳು ಹಾಗೂ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಲು ರೂ. 50,000/- ದವರೆಗೆ ಸಾಲ:ಸಹಾಯಧನ ಸೌಲಭ್ಯವನ್ನು ನೀಡಲಾಗುವುದು. ಘಟಕ ವೆಚ್ಚ ರೂ. 50,000/-ಗಳ ಸಾಲದ ಮಂಜೂರಾತಿಯು ಸಾಂಪ್ರದಾಯಿಕ (ಪರಂಪರಾಗತ ಕುಶಲಕಮಿಗಳು/ವೃತ್ತಿ ಕುಲಕಸುಬುದಾರರಿಗೆ ಅನ್ವಯವಾಗುತ್ತದೆ. ಇತರೆ ವೃತ್ತಿಗಳಿಗೆ ಯೋಜನೆಯ ಲಾಭದಾಯಕೆತೆ ಮತ್ತು ಆದಾಯಗಳಿಕಗೆ ಅನುಗುಣವಾಗಿ ರೂ.25,000/-ಕ್ಕೆ ಮೀರದಂತೆ ಸಾಲವನ್ನು ಮಂಜೂರು ಮಾಡಲಾಗುವುದು. ಈ ಸಾಲಕ್ಕೆ ಶೇಕಡಾ 50% ರಷ್ಟು ಸಹಾಯಧನವನ್ನು ಬ್ಯಾಕ್ ಎಂಡ್ ಸಬ್ಸಿಡಿಯಾಗಿ ಪರಿಗಣಿಸಲಾಗುವುದು ನಿಗಮದಿಂದ ಬಿಡುಗಡೆ ಮಾಡಿದ ಸಾಲಕ್ಕೆ ಶೇಕಡಾ 4%ರ ಬಡ್ಡಿ ದರದಲ್ಲಿ ಮರುಪಾವತಿ ಪಡೆಯಲಾಗುತ್ತದೆ. ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಸಾಲ ಮಂಜೂರು ಮಾಡಲಾಗುವುದು.

  ಬೇಕಾಗುವ ದಾಖಲಾತಿಗಳು:

  1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು.
  2).ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್.
  3) ಕೊಟೇಶನ್ ಅಥವಾ ಯೋಜನಾವರದಿ ಮತ್ತು ಲೈಸಸ್ಸ್
  4)ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ.
  5)ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
  6)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು.(ವಾಸ್ತವ್ಯ ದೃಡೀಕರ ಪತ್ರ)
  7)ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು.
  3) *ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆ*

  ಈ ಯೋಜನೆಯ ಅಡಿಯಲ್ಲಿ ವೃತ್ತಿನಿರತ ವಿದ್ಯಾಭ್ಯಾಸಕ್ಕಾಗಿ ಅಂದರೆ ಎಂ.ಬಿ.ಬಿ.ಎಸ್, ಇಂಜಿನಿಯರಿಂಗ್, ಎಂ.ಬಿ.ಎ, ಎಂ.ಸಿ.ಎ, ಎಂ.ಟೆಕ್, ಪಿ.ಎಚ್.ಡಿ, ಎಂ.ಇ, ಎಂ.ಎಸ್(ಎಗ್ರಿ), ಎಂ.ಡಿ, ಎಂ.ಎಫ್.ಎ, ಎಂ.ಡಿ.ಎಸ್, ಎಂ.ಟಿ.ಎ, ಎಂ.ಐ.ಬಿ, ಬಿ.ಎ, ಬಿ.ಕಾಂ, ಡಿ.ಎಡ್, ಐ.ಟಿ.ಐ, ಡಿಪ್ಲೋಮಾ, ನರ್ಸಿಂಗ್, ಬಿ.ಡಿ.ಎಸ್, ಎಂ.ಎ, ಬಿ.ಎಸ್ಸಿ ಬಿ.ಎ, ಬಿ.ಕಾಂ, ಏರ್ ಕ್ರಾಫ್ಟ್ ಮೈಂಟನೆನ್ಸ್ ಇಂಜಿನಿಯರಿಂಗ್, ಟೆಕ್ನಕಲ್ ಮ್ಯಾನೆಜ್ಮೆಂ ಟ್ ಇತ್ಯಾದಿ ವಿದ್ಯಾಭ್ಯಾಸಕ್ಕಾಗಿ ಅಭ್ಯರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರಿಗೆ ಪ್ರತಿ ವರ್ಷಕ್ಕೆ ರೂ. 10,000/- ದಿಂದ ರೂ.75,000/-ದವರೆಗೆ ವಿವಿಧ ವ್ಯಾಸಂಗಕ್ಕೆ ಅನುಗುಣವಾಗಿ ನಿಗಮದಿಂದ ಸಾಲ ಸೌಲಭ್ಯವನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಬಿ.ಇ, ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಯು.ಎಂ.ಎಸ್ ಹಾಗೂ ಬಿ.ಎ.ಎಂ.ಎಸ್ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಸಿ.ಇ.ಟಿಯವರು ನಿಗದಿಪಡಿಸಿದ ಶುಲ್ಕದಂತೆ ಸಾಲ ಬಿಡುಗಡೆ ಮಾಡಲಾಗುವುದು. ಇದಕ್ಕೆ ವಾರ್ಷಿಕವಾಗಿ ಶೇಕಡಾ 2% ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ ಹಾಗೂ ವ್ಯಾಸಂಗ ಮುಗಿಸಿದ ಒಂದು ವರ್ಷದ ನಂತರ ಫಲಾನುಭವಿಯು ನಿಗಮಕ್ಕೆ ಮರುಪಾವತಿಯನ್ನು ಮಾಡಬೇಕಾಗಿದೆ.

  ‘ಅರಿವು’ (CET) ಯೋಜನೆ

  ಸಾಮಾನ್ಯ ಪ್ರವೇಶ ಪರೀಕ್ಷೆಗೆ (CET) ಹಾಜರಾದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಯು ರ್ಯಾಕಿಂಗ್ ಪಡೆದು ವೃತ್ತಿಪರಶಿಕ್ಷಣಕ್ಕೆ ಸೀಟನ್ನು ಆಯ್ಕೆಮಾಡಿಕೊಂಡ ಕೂಡಲೇ ನಿಗಮವು ಅಂತಹ ವಿದ್ಯಾರ್ಥಿಗೆ ಮುಂಚಿತವಾಗಿ ಸಾಲವನ್ನು ಮಂಜೂರು ಮಾಡುತ್ತದೆ. ಅಂತಹ ವಿದ್ಯಾರ್ಥಿಯು ಸಂಬಂಧ ಪಟ್ಟ ಕಾಲೇಜಿಗೆ ಪಾವತಿಸಬೇಕಾದ ಬೋಧನ ಶುಲ್ಕವನ್ನು ನಿಗಮವು ನೇರವಾಗಿ ಏಇಂ ಮೂಲಕ ಪಾವತಿಸುತ್ತದೆ.

  ‘ಅರಿವು’ (NEET) ಯೋಜನೆ

  ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು NEET ಪರೀಕ್ಷೆಗೆ ಹಾಜರಾದಲ್ಲಿ, ಅವರ ಬೋಧನಾ ಶುಲ್ಕದ ಸರ್ಕಾರಿ ಸೀಟ್ನಂ ಶೇ.100ರಷ್ಟು ಅಥವಾ ಖಾಸಗಿ ಸೀಟ್ನಹ ಶೇ.50ರಷ್ಟು ಸಾಲವನ್ನಾಗಿ ಮಂಜೂರು ಮಾಡಲಾಗುತ್ತದೆ.

  ಬೇಕಾಗುವ ದಾಖಲಾತಿಗಳು:

  1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 6,00,000/-ರೂಗಳ ಒಳಗಿರಬೇಕು.
  2) ವಿದ್ಯಾರ್ಥಿಯ 4 ಭಾವಚಿತ್ರ ಮತ್ತು ತಂದೆ ಅಥವಾ ತಾಯಿಯ 2 ಭಾವಚಿತ್ರ.
  3)ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್.
  4) ಎಸ್.ಎಸ್.ಎಲ್.ಸಿ, ಡಿಪ್ಲೋಮಾ, ಪಿಯುಸಿ, ಡಿಗ್ರಿ ಮತ್ತು ಸೆಮಿಸ್ಟರ್ ಮಾಕ್ರ್ಸ್ ಕಾರ್ಡ್(ದೃಡಿಕರಿಸಿದ ಪ್ರತಿ)
  5) ಸ್ಟಡಿ ಸರ್ಟಿಫಿಕೇಟ್ ಮೂಲ ಪ್ರತಿ
  6)ಫೀಸ್ ಸ್ಟ್ರಕ್ಚರ್ (ಒಟ್ಟು ವ್ಯಾಸಂಗದ ಅವಧಿ).
  7) ಸಿಇಟಿ/ನೀಟ್ ಪ್ರಮಾಣ ಪತ್ರದ ಜರಾಕ್ಸ್.
  8) 50 ರೂಪಾಯಿಯ ಛಾಪಾ ಕಾಗದ (Indemnity Bond) ತಂದೆ ಅಥವಾ ತಾಯಿಯ ಹೆಸರಿನಲ್ಲಿ (ನೋಟರಿಯೊಂದಿಗೆ) 2nd Party DM KMDC ಎಂದು ನಮೂದಿಸಬೇಕು.
  9) ವಿದ್ಯಾರ್ಥಿಯು ಅಭ್ಯಾಸ ಮಾಡುವ ಕಾಲೇಜಿನ ಬ್ಯಾಂಕ್ ಖಾತೆ, (Bank name, Account payee name, Account number, ifsc code) ಮತ್ತು ಇಮೇಲ್ ಐಡಿ.

  4) *ಕಿರುಸಾಲ ಯೋಜನೆ*.

  ಈ ಯೋಜನೆಯಡಿಯಲ್ಲಿ ನಗರ ಪ್ರದೇಶದಲ್ಲಿ ಮತ್ತು ಗ್ರಾಮಗಳಲ್ಲಿ ವಾಸವಾಗಿರುವ ಮತೀಯ ಅಲ್ಪಸಂಖ್ಯಾತರು ಸಾಮನ್ಯಾವಾಗಿ ಅನಕ್ಷರಸ್ಥರಾಗಿದ್ದು, ಅಂತಹ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಕುಶಲ ಅಥವಾ ಕುಶಲಯಲ್ಲದ ವ್ಯಕ್ತಿಗಳ ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದ ವ್ಯಾಪಾರವನ್ನು ಮಾಡಲು ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.
  ನಿಗಮದಿಂದ ಫಲಾನುಪೇಕ್ಷಿಗಳು ಸ್ವ-ಸಹಾಯ ಗುಂಪುಗಳನ್ನು ಇತರೆ ಇಲಾಖೆಗಳ ಅಥವಾ ಸರ್ಕಾರೇತರ ಸಂಸ್ಥೆಗಳ ಮೂಲಕ ಸಂಘಟನೆ ಮಾಡಿ ಸ್ವ ಸಹಾಯ ಗುಂಪುಗಳು ಮೂಲಕ ಯೋಜನೆಯನ್ನು ಸಿದ್ದಪಡಿಸಿ ಅನುμÁ್ಠನಗೊಳಿಸಬುದಾಗಿದೆ. ಸ್ವ-ಸಹಾಯ ಸಂಘವು ಆರ್ಥಿಕ ಚಟುವಟಿಕೆಗಳಲ್ಲಿ ಲಾಭದಲ್ಲಿರಬೇಕು. ಸ್ವ-ಸಹಾಯ ಗುಂಪಿನ ಸದಸ್ಯರಾಗಿರುವ ಫಲಾನುಭವಿ ಜಮೀನು ಹೊಂದಿದ್ದಲ್ಲಿ ಅಥವಾ ಸರ್ಕಾರಿ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಲ್ಲಿ ಅವರಿಗೆ ಸಣ್ಣ ಪ್ರಮಾಣದ ಆರ್ಥಿಕ ಸಾಲ ಯೋಜನೆಯಡಿಯಲ್ಲಿ ಸಾಲ ಮಂಜೂರು ಮಾಡತಕ್ಕದ್ದಲ್ಲ. ಮೈಕ್ರೋ ಕ್ರೆಡಿಟ್ ಹಣಕಾಸು ಯೋಜನೆಯಡಿ ಮತ್ತು ಸ್ವಯಂ ಉದ್ಯೋಗ ಯೋಜನೆಯಡಿ ಶೇಕಡ 50 ರಷ್ಟು ಸಹಯಾಧನ, ಗರಿಷ್ಟ ರೂ.5,000/-ಗಳು ಪ್ರತಿ ಫಲಾನುಭವಿಗೆ ಫಲಾನುಭವಿಯ ಹೆಸರಿನಲ್ಲಿ ಮಂಜೂರು ಮಾಡಿ ಬಿಡುಗಡೆ ಮಾಡಿರುವ ಸಾಲವನ್ನು ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕಿನಲ್ಲಿ ತೆರೆದಿರುವ ಖಾತೆಯ ಸಂಖ್ಯೆ ನಮೂದಿಸಿ ಚೆಕ್ಕುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ. ಸ್ವ ಸಹಾಯ ಸಂಘಗಳು ಸಾಲವನ್ನು ಫಲಾನುಭವಿಗೆ ಶೇಕಡ 5ರಬಡ್ಡಿ ದರದಲ್ಲಿ ನೀಡಬೇಕು.

  ಬೇಕಾಗುವ ದಾಖಲಾತಿಗಳು :

  1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು.
  2)ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್.
  3) ಕೊಟೇಶನ್ ಅಥವಾ ಯೋಜನಾವರದಿ
  4) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ.
  5) ಸಂಘದ ಹೆಸರಿನ ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ. ಮತ್ತುssಸಂಘ ರಚನೆಯಾಗಿ ಕನಿಷ್ಟ 1 ವರ್ಷ ಆಗಿರಬೇಕು
  6) ಬ್ಯಾಂಕ್ ಬೇ ಬಾಕಿ ಪ್ರಮಾಣ ಪತ್ರ.
  7) ಸಂಘದ ನಡಾವಳಿ ಪುಸ್ತಕ.
  8) ಸ್ವಸಹಾಯ ಗುಂಪಿನ ಗಾತ್ರ ಕನಿಷ್ಟ 10 ರಿಂದ ಗರಿಷ್ಟ 20 ಸದಸ್ಯರ ಮಿತಿಯಲ್ಲಿರಬೇಕು.
  9)ಪ್ರತಿ ಸದಸ್ಯರ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಜರಾಕ್ಸ್ಪ್ರರತಿ.
  10)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. (ವಾಸ್ತವ್ಯ ದೃಡೀಕರಣ ಪತ್ರ) 10) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು.
  5) *ಕೃಷಿ ಯಂತ್ರೋಪಕರಣ ಖರೀದಿ ಯೋಜನೆ* (Minoritys Farmers Scheme) :

  ಅಲ್ಪಸಂಖ್ಯಾತರ ಸಮುದಾಯಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಟಿಲ್ಲರ್, ಉಕ್ಕಿನ ನೇಗಿಲು, ಡ್ರಿಲ್ಸ್, ಕಳೆ ಕೀಳುವ ಯಂತ್ರ, ಪಂಪ್ಸೆ ಟ್, ಟ್ರಾಕ್ಟರ್, ಮುಂತಾದ ನೂತನ ಕೃಷಿ ಸಲಕರಣಿಗಳನ್ನು sಶೇ.50 ರಷ್ಟು ಸಹಾಯಧನ ಸೇರಿ ಗರಿಷ್ಟ 1 ಲಕ್ಷ ರೂ. ಘಟಕ ವೆಚ್ಚದಲ್ಲಿ ನೀಡಲಾಗುವುದು.

  ಬೇಕಾಗುವ ದಾಖಲಾತಿಗಳು:

  1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು.
  2)ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ ಪತ್ರ)
  3) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು.
  4) ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್
  5) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ.
  6) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು್ ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
  7) )ಆರ್.ಟಿ.ಸಿಯ ಮೂಲಪ್ರತಿ
  8) ಕೊಟೇಶನ್
  9) ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ(Affidavit).
  10) ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ (Affidavit).

  6) *ಗಂಗಾಕಲ್ಯಾಣ ಯೋಜನೆ*

  ಈ ಯೋಜನೆಯಲ್ಲಿ ಪ್ರಮುಖವಾಗಿ ವೈಯಕ್ತಿಕ ನೀರಾವರಿ ಯೋಜನೆಯಗಳಲ್ಲಿ ಉಚಿತವಾಗಿ ನೀರಾವರಿ ಸೌಲಭ್ಯ ಒದಗಿಸುವುದು. ಮತೀಯ ಅಲ್ಪಸಂಖ್ಯಾತ ವರ್ಗಗಳ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರು ಒಂದೇ ಕಡೆ ಕನಿಷ್ಠ 1 ಎಕರೆ ಒಣ ಜಮೀನಿಗೆ 2.00 ಲಕ್ಷ ರೂಗಳ ಘಟಕ ವೆಚ್ಚದಲ್ಲಿ ಕೊಳವೆ ಬಾವಿ/ತೆರೆದ ಬಾವಿ ಕೊರೆಯಿಸಿ ಪಂಪ್ಸೆ ಟ್ ಮತ್ತು ಇತರ ಉಪಕರಣಗಳನ್ನು ಸರಬರಾಜು ಮಾಡಿ ಹಾಗೂ ಬೆಸ್ಕಾಂಗಳಿಗೆ ವೈಎಂಡಿ ಮತ್ತು ಇಎಂಡಿ ಹಣ ಪಾವತಿಸಿ ನೀರಾವರಿ ಸೌಲಭ್ಯ ಒದಗಿಸುವುದು.
  ಬೇಕಾಗುವ ದಾಖಲಾತಿಗಳು :

  1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/
  2) ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್.
  3)ಆರ್.ಟಿ.ಸಿಯ ಮೂಲಪ್ರತಿ ಹಾಗೂ ಅರ್ಜಿದಾರರ 4 ಭಾವಚಿತ್ರ
  4) ಇಸಿ, ಭೂ ನಕ್ಷೆ, ವಂಶವೃಕ್ಷ(ಸಂತತಿ ನಕ್ಷೆ) ಮತ್ತು ಕಂದಾಯ ರಶೀದಿ ಮೂಲ ಪ್ರತಿ
  5) ಸಣ್ಣ ಹಿಡುವಳಿದಾರರ ಪ್ರಮಾಣಪತ್ರ.(ತಹಶೀಲ್ದಾರರಿಂದ)
  6).ಕೃಷಿ ಅವಲಂಬಿತರಾಗಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯವರಿಂದ ದೃಢೀಕರಣ ಪತ್ರ.
  7) ಬೇರೆ ನೀರಾವರಿ ಸೌಲಭ್ಯ ಇಲ್ಲದ ಬಗ್ಗೆ ಸ್ವಯಂ ಘೋಷಣಾ ಪತ್ರ.
  8) ಕೊಳವೆ ಬಾವಿ ಕೊರೆಯುವ ಬಗ್ಗೆ ಗ್ರಾಮ ಪಂಚಾಯತ್ನ ಪಿ.ಡಿ.ಒ ರಿಂದ ಪಡೆದ ಆಕ್ಷೇಪಣಾ ರಹಿತ ಪ್ರಮಾಣ ಪತ್ರ. 9)ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಮಾಣ ಪತ್ರ.
  10) ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. (ವಾಸ್ತವ್ಯ ದೃಡೀಕರಣ ಪತ್ರ) 11)ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು.

  7) *ಪಶು ಸಂಗೋಪನಾ ಯೋಜನೆ*

  ಈ ಯೋಜನೆಯಡಿ ಪಶುಸಂಗೋಪನೆಗೆ ಉತ್ತೇಜನ ನೀಡಿ ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತರು ನಿರಂತರ ಆದಾಯ ಹೊಂದುವ ಸಲುವಾಗಿ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಮುಂತಾದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಶೇ.50 ರಷ್ಟು ಸಹಾಯಧನ ಸೇರಿ ರೂ.40,000 ಘಟಕ ವೆಚ್ಚದಲ್ಲಿ ಸಹಾಯ ನೀಡಲಾಗುವುದು. ಈ ಯೋಜನೆಯಡಿ ಶೇ.100ರಷ್ಟು ಮಹಿಳೆಯರಿಗೆ ಮೀಸಲಾತಿಯನ್ನು ನೀಡಲಾಗುವುದು.

  ಬೇಕಾಗುವ ದಾಖಲಾತಿಗಳು:
  1) ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ. 1,03,000/- ಒಳಗಿರಬೇಕು.
  2) ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್.
  3) ಜಾನುವಾರು ಮೌಲ್ಯ ಬಗ್ಗೆ ಪಶು ವೈದ್ಯಾದಿಕಾರಿಯಿಂದ ಪ್ರಮಾಣ ಪತ್ರ
  4) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ.
  5) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
  6)ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ ಪತ್ರ).
  7) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು.
  8) ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ
  9) ಕಳೆದ 05 ವರ್ಷಗಳಲ್ಲಿ ಪಶುಪಾಲನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದಿಲ್ಲದಿರುವುದರ ಬಗ್ಗೆ ಧೃಢೀಕರಣ ಪತ್ರ.
  10) ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ.

  8) *ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ*

  ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದವರು ನಗರಗಳಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲೂ ಸಹ ಹೆಚ್ಚಿನ ವಿಧ್ಯಾಭ್ಯಾಸವನ್ನು ಪೂರೈಸಲು ಸಾಧ್ಯವಾಗದೇ ವಾಹನ ಚಾಲಕರಾಗಿ ತಮ್ಮ ನಿತ್ಯ ಜೀವನವನ್ನು ಸಾಗಿಸುತ್ತಿದ್ದಾರೆ ಇಂತಹ ಆರ್ಥಿಕವಾಗಿ ಹಿಂದುಳಿದ ಫಲಾನುಭವಿಗಳನ್ನು ಆಯ್ಕೆ ಮಾಡಿ ಇವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ಟ್ಯಾಕ್ಸಿ/ಗೂಡ್ಸ್ ವಾಹನಗಳನ್ನು ಖರೀದಿಸಲು ಗರಿಷ್ಟ 3.00ಲಕ್ಷಗಳ ಸಹಾಯಧನವನ್ನು ನೀಡಲಾಗುವುದು. ಈ ಯೋಜನೆಯಡಿಯಲ್ಲಿ ಖರೀದಿಸುವ ವಾಹನದ ಮೌಲ್ಯವು ಕನಿಷ್ಟ ರೂ. 4.00 ಲಕ್ಷಗಳಿಂದ ಗರಿಷ್ಟ ರೂ. 7.50ಲಕ್ಷಗಳಾಗಿರತಕ್ಕದ್ದು (ತೆರಿಗೆಯನ್ನು ಹೊರತುಪಡಿಸಿ).

  ಬೇಕಾಗುವ ದಾಖಲಾತಿಗಳು:
  1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು.
  2. ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್.
  3ಕೊಟೇಶನ್ ಮತ್ತು ಲೈಸಸ್ಸ್ ಬ್ಯಾಡ್ಜ್ನೊಂ.ದಿಗೆ.
  4. ಅರ್ಜಿದಾರರ ತಲಾ ಮೂರು ಭಾವಚಿತ್ರ.
  5. ಅರ್ಜಿದಾರರ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಪ್ರತಿ.
  6. ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
  7.ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ ಪತ್ರ)
  8. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು.
  9. ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ.
  10. ಕಳೆದ 05 ವರ್ಷಗಳಲ್ಲಿ ಟ್ಯಾಕ್ಸಿ/ಗೂಡ್ಸ್ ವಾಹನವನ್ನು ಖರೀದಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದಿಲ್ಲದಿರುವುದರ ಬಗ್ಗೆ ಧೃಢೀಕರಣ ಪತ್ರ.
  11. ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ.

  *_ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :_*

  *ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ.)*
  ಮೌಲಾನ ಅಜಾಜ್ ಕಟ್ಟಡ
  ಓಲ್ಡ್ ಕೆಂಟ್ ರಸ್ತೆ
  ಕೇರಳ ಸಮಾಜ ಸ್ಕೂಲ್ ಎದುರುಗಡೆ
  ಪಾಂಡೇಶ್ವರ
  ಮಂಗಳೂರು – 575001

  • Comments Off on ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವಿವಿಧ ಯೋಜನೆಗಳು.
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.