08:09 pm Tuesday, June 25, 2019
 • ಹಜ್ ಯಾತ್ರಿಕರ ತಂಡವನ್ನು ಮದೀನಾ ದಲ್ಲಿ ಸ್ವಾಗತಿಸುತ್ತಿರುವ ಇಂಡಿಯಾ ಫ್ರೆಟರ್ನಿಟಿ ಫೋರಮ್

  By admin - Sun Jul 22, 1:01 pm

  • Comments Off on ಹಜ್ ಯಾತ್ರಿಕರ ತಂಡವನ್ನು ಮದೀನಾ ದಲ್ಲಿ ಸ್ವಾಗತಿಸುತ್ತಿರುವ ಇಂಡಿಯಾ ಫ್ರೆಟರ್ನಿಟಿ ಫೋರಮ್
  • 0 views

  ಮದೀನಾ ತಲುಪಿದ ಮಂಗಳೂರಿನ ಪ್ರಥಮ ಹಜ್ ಯಾತ್ರಿಕರ ತಂಡವನ್ನು ಮದೀನಾ ದಲ್ಲಿ ಸ್ವಾಗತಿಸುತ್ತಿರುವ ಇಂಡಿಯಾ ಫ್ರೆಟರ್ನಿಟಿ ಫೋರಮ್ ಸದಸ್ಯರು.

  ಮದೀನಾ( ಸೌದಿ ಅರೇಬಿಯಾ) : ಪವಿತ್ರ ಹಜ್ ನಿರ್ವಹಿಸಲು ಮಂಗಳೂರಿನಿಂದ ಪ್ರಯಾಣ ಹೊರಟ 146 ಮಂದಿ ಹಜ್ ಯಾತ್ರಾರ್ಥಿಗಳ ತಂಡ ಶನಿವಾರ ರಾತ್ರಿ ಮದೀನಾದ ಪ್ರಿನ್ಸ್ ಮೊಹಮ್ಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು.

  ಇಂಡಿಯಾ ಫ್ರೆಟರ್ನಿಟಿ ಫೋರರಂ(ಐ.ಎಫ್.ಎಫ್ )ನ ಕಾರ್ಯಕರ್ತರು ಹಜ್ಜಾಜಿಗಳಿಗೆ ನೀರು, ಖರ್ಜೂರ ಮತ್ತು ಬಾಳೆಹಣ್ಣು ನೀಡಿ ಆದರದಿಂದ ಸ್ವಾಗತಿಸಿದರು.
  ನಂತರ ಹಜ್ಜಾಜಿಗಳು ತಂಗುವ ವಸತಿಗೆ ತೆರಳಿದ ಐ.ಎಫ್.ಎಫ್ ಕಾರ್ಯಕರ್ತರು ಹಜ್ಜಾಜಿಗಳ ಲಗೇಜ್ ಸಾಗಿಸಲು ಸಹಕರಿಸಿ, ಹಜ್ ವೇಳೆ ಪಾಲಿಸಬೇಕಾದ ಮುನ್ನೆಚ್ಚರಿಕೆಗಳನ್ನು ಮಾಹಿತಿ ನೀಡಿದರು.
  ಈ ವೇಳೆ ಐ.ಎಫ್.ಎಫ್ ಮದೀನಾ ಘಟಕದ ಅಧ್ಯಕ್ಷ ಝಫರುಲ್ಲಾ ಗೂಡಿನಬಳಿ, ಕಾರ್ಯಕರ್ತರಾದ ಅಶ್ರಫ್ ಮರವೂರ್, ಆಸಿಫ್ ಕುಂಜತ್ತಬೈಲ್, ಅಬ್ದುಲ್ ಅಝೀಝ್ ಸುರಿಬೈಲ್, ಹಾರಿಸ್ ಮಳಲಿ, ಹನೀಫ್ ಮಡಂತ್ಯಾರ್, ಜಾವೇದ್ ಬಂದರ್ ಮತ್ತಿತರರು ಉಪಸ್ಥಿತರಿದ್ದರು.
  ಮದೀನಾದಲ್ಲಿ ಐ.ಎಫ್.ಎಫ್, ಇಂಡಿಯಾ ಹಜ್ ವೆಲ್ಫೇರ್ ಫೋರಂನ ಸಹಭಾಗಿಯಾಗಿ ಹಜ್ಜಾಜಿಗಳ ಸೇವೆಯಲ್ಲಿ ನಿರತವಾಗಿದೆ.

  • Comments Off on ಹಜ್ ಯಾತ್ರಿಕರ ತಂಡವನ್ನು ಮದೀನಾ ದಲ್ಲಿ ಸ್ವಾಗತಿಸುತ್ತಿರುವ ಇಂಡಿಯಾ ಫ್ರೆಟರ್ನಿಟಿ ಫೋರಮ್
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.