06:22 am Wednesday, July 24, 2019
 • ಇಳಿಯುತ್ತಿದೆ ಬಡವರ ಸಂಖ್ಯೆ

  By admin - Fri Jun 29, 6:31 pm

  • Comments Off on ಇಳಿಯುತ್ತಿದೆ ಬಡವರ ಸಂಖ್ಯೆ
  • 0 views

  ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುವ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆ ಭಾರತದ್ದು. ಅದರ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡವರೂ ಇದ್ದಾರೆ. ಆದರೆ 2022ರ ವೇಳೆಗೆ ದೇಶದಲ್ಲಿರುವ ಬಡವರ ಸಂಖ್ಯೆ ಶೇ.3ಕ್ಕಿಂತಲೂ ಕಡಿಮೆಯಾಗಲಿದೆ. ಬ್ರೂಕಿಂಗ್ಸ್‌ ಸಂಸ್ಥೆಯ ಬ್ಲಾಗ್‌ನಲ್ಲಿ ಈ ಅಂಶ ಪ್ರಸ್ತಾವಿಸಲಾಗಿದೆ. ಇಷ್ಟೇ ಅಲ್ಲ, 2030ರ ವೇಳೆಗೆ ಭಾರತವು ಕಡು ಬಡವರನ್ನು ಹೊಂದಿದ ರಾಷ್ಟ್ರ ಎಂಬ ಹಣೆಪಟ್ಟಿಯನ್ನೂ ಕಳಚಿಕೊಳ್ಳಲು ಸಾಧ್ಯ ಎನ್ನುತ್ತದೆ ಈ ಅಧ್ಯಯನ.

   38.9%  - 21.2%  ವಿಶ್ವಬ್ಯಾಂಕ್‌ ಅಧ್ಯಯನ ಪ್ರಕಾರ ಭಾರ ತ ದಲ್ಲಿ 2004- 2011ರ ನಡುವೆ ಬಡತನ ಪ್ರಮಾಣ ಕುಸಿತ

  ಅಧ್ಯಯನದಲ್ಲಿ ಏನಿದೆ?

  ಪ್ರತಿ ನಿಮಿಷಕ್ಕೆ 44 ಭಾರತೀಯರು ಕಡು ಬಡತನ ಎಂಬ ವ್ಯಾಖ್ಯೆಯಿಂದ ಹೊರಬರುತ್ತಿದ್ದಾರೆ.

  ಹೀಗಾಗಿ ದೇಶಕ್ಕೆ ವಿಶ್ವದಲ್ಲೇ ಅತಿ ವೇಗವಾಗಿ ಬಡತನ ಕಡಿಮೆಯಾಗುತ್ತಿರುವ ರಾಷ್ಟ್ರವೆಂಬ ಹೆಗ್ಗಳಿಕೆ

  ಇದೇ ವೇಗ ಕಾಯ್ದುಕೊಂಡರೆ ದೇಶಕ್ಕೆ 3ನೇ ಸ್ಥಾನ ಲಭ್ಯವಾಗಲಿದೆ. ಹೆಚ್ಚು ಬಡವರಿರುವ 2ನೇ ರಾಷ್ಟ್ರ ಕಾಂಗೋ ಆಗಲಿದೆ

  ಭಾರತದಲ್ಲಿ 2030ರ ವೇಳೆಗೆ ಕಡು ಬಡವರ ಸಂಖ್ಯೆ ಇಳಿಮುಖವಾಗಲಿದೆ.

  ನೈಜೀರಿಯಾದಲ್ಲಿ ಪ್ರತಿ 6 ನಿಮಿಷಕ್ಕೆ ಬಡವರ ಸಂಖ್ಯೆ ಹೆಚ್ಚಾಗುತ್ತಿದೆ.

   ದಕ್ಷಿಣ ಏಷ್ಯಾ, ಪೂರ್ವ ಏಷ್ಯಾ ಮತ್ತು ಪೆಸಿಫಿಕ್‌ ಪ್ರದೇಶದಲ್ಲಿ ಬಡವರ ಸಂಖ್ಯೆ ಗಣನೀಯವಾಗಿ ಇಳಿಕೆ.

  ಭಾರತ, ಇಂಡೋನೇಷ್ಯಾ, ಬಾಂಗ್ಲಾ, ಫಿಲಿಪ್ಪೀನ್ಸ್‌ಗಳಲ್ಲಿ ತಲಾ ಆದಾಯ ಹೆಚ್ಚುತ್ತಿರುವುದರಿಂದ ಈ ಬೆಳವಣಿಗೆ.

  ಆಫ್ರಿಕಾದಲ್ಲಿ ವಿಶ್ವದ ಮೂರನೇ ಎರಡರಷ್ಟು ಕಡು ಬಡವರು

  8.70 ಕೋಟಿ ನೈಜೀರಿಯಾದಲ್ಲಿರುವ ಬಡವರು
  7.30 ಕೋಟಿ ಭಾರತದಲ್ಲಿರುವ ಬಡವರು
  64.70 ಕೋಟಿ ವಿಶ್ವಾದ್ಯಂತ ಕಡು ಬಡತನದಲ್ಲಿರುವವರ ಸಂಖ್ಯೆ ( 2017ರ ಸೆ.1ಕ್ಕೆ ಕೊನೆಗೊಂಡಂತೆ)
  1.9 ಡಾಲರ್‌ (68.56 ರೂ.) ಪ್ರತಿದಿನ ಇಷ್ಟು ರೂ. ವೆಚ್ಚ ಮಾಡಲೂ ಅಸಾಧ್ಯವಾಗಿರುವ ಪರಿಸ್ಥಿತಿ
  188 ಅಧ್ಯಯನ ನಡೆಸಲಾಗಿರುವ ರಾಷ್ಟ್ರಗಳು
  14 ರಾಷ್ಟ್ರಗಳು ಆಫ್ರಿಕಾದ ಇಷ್ಟು ರಾಷ್ಟ್ರಗಳಲ್ಲಿ ಕಡು ಬಡತನ 

  Udayavani
  • Comments Off on ಇಳಿಯುತ್ತಿದೆ ಬಡವರ ಸಂಖ್ಯೆ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.