03:44 am Friday, June 21, 2019
 • ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

  By admin - Sun Jun 24, 12:24 am

  • Comments Off on ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
  • 0 views
   
  ಜನಸ್ನೇಹಿಯಾಗಿ ಕೆಲಸ ನಿರ್ವಹಿಸಿ: ಸಿಎಂ ಹೆಚ್.ಡಿ.ಕುಮಾರಸ್ವಾಮಿ
  ಬೆಂಗಳೂರು, ಜೂನ್ 22 (ಕರ್ನಾಟಕ ವಾರ್ತೆ)
  ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ನಿರ್ವಹಿಸಿ ಸರ್ಕಾರಕ್ಕೆ ಗೌರವ ತರಬೇಕು ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ತಿಳಿಸಿದರು.
  ಅವರು ಇಂದು ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.
  ಜನರಿಗೆ ಎಲ್ಲಾ ರೀತಿಯ ರಕ್ಷಣೆ ನೀಡುವುದು ಹೊಸ ಸರ್ಕಾರದ ಮುಖ್ಯ ಉದ್ದೇಶವಾಗಿದೆ.  ಕರ್ನಾಟಕ ರಾಜ್ಯ ಪೊಲೀಸ್ ಜನರ ಉಪಯೋಗಕ್ಕೆ ಒಂದು ಹೊಸ ಆ್ಯಪ್ ಬಿಡುಗಡೆಗೊಳಿಸಿದ್ದು, ಇದನ್ನು ಜನರು ಕುಳಿತಲ್ಲೇ ಬಳಸಿ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದು.  ಕಾನೂನು ವ್ಯವಸ್ಥೆ ಕಾಪಾಡಿ, ಅಪರಾಧ ತಡೆಗೆ ಇಲಾಖೆ ಶ್ರಮಿಸಬೇಕು. ಹೊಸ ನೇಮಕಾತಿ, ಇಲಾಖೆ ಸಿಬ್ಬಂದಿಗೆ ನಿವೇಶನ ಮುಂತಾದವುಗಳ ಬಗ್ಗೆ ಸರ್ಕಾರ ಸಕಾರತ್ಮಾತವಾಗಿ ಪ್ರತಿಕ್ರಿಯಿಸುತ್ತದೆ.  ಅಲ್ಲದೆ, ಯಾವುದೇ ಸಮಾಜಘಾತುಕ ವ್ಯಕ್ತ ಅಥವಾ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಖಾತೆ ಹೊಂದಿರುವ ಉಪಮುಖ್ಯಮಂತ್ರಿ  ಡಾ. ಜಿ. ಪರಮೇಶ್ವರ್ ಮಾತನಾಡಿ, ಹೊಸ ಸರ್ಕಾರದ ನೀತಿ ಅನಿಸಿಕೆಗಳನ್ನು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದೇವೆ.  ಇದು ಶಿಸ್ತಿನ ಇಲಾS.É ರಾಜ್ಯದ ಜನತೆಯೂ ಶಿಸ್ತಿನಿಂದ ಇರಬೇಕು.  ಅಪರಾಧಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಬೇಕು.  ಅಪರಾಧಗಳ ಸಂಖ್ಯೆಯಲ್ಲಿ ನಮ್ಮ ರಾಜ್ಯ 10ನೇ ಸ್ಥಾನದಲ್ಲಿದೆ.  ರಾಜ್ಯದಲ್ಲಿ ಟ್ರಾಫಿಕ್ ಸಮಸ್ಯೆ ಸುಧಾರಿಸಬೇಕು.   ಪೊಲೀಸ್ ಇಲಾಖೆಯಲ್ಲಿ ಈ ಹಿಂದೆ 30,000ಕ್ಕೂ ಹೆಚ್ಚು ಪೊಲೀಸ್ ಹಾಗೂ ಹೆಡ್ ಕಾನ್ಸ್‍ಟೇಬಲ್‍ಗಳನ್ನು ನೇಮಕ ಮಾಡಲಾಗಿದ್ದು,  ಇದೀಗ 14,000 ಕ್ಕೂ ಹೆಚ್ಚು ಪೊಲೀಸ್ ಕಾನ್ಸ್‍ಟೇಬಲ್ ಗಳ  ಹುದ್ದೆ ಖಾಲಿಯಿದ್ದು, ಸದ್ಯದಲ್ಲೇ ನೇಮಕ ಮಾಡಲಾಗುವುದು.  ಪೊಲೀಸ್ ಇಲಾಖೆಯ ಸಿಬ್ಬಂದಿಗೆ 11,000 ಮನೆಗಳನ್ನು ನಿರ್ಮಾಣ ಮಾಡಲು 118 ಕೋಟಿ ರೂ ಅನುದಾನ ಒದಗಿಸಲಾಗಿತ್ತು.  ಇದನ್ನು ಮುಂದುವರಿಸಿ 2020 ರ ವೇಳೆಗೆ ಮನೆ ಕಟ್ಟಿಕೊಡಲಾಗುವುದು.  ಪೊಲೀಸ್ ಅಧಿಕಾರಿಗಳು ಕಾನೂನಿಗೆ ವಿರುದ್ಧ ನಡೆದುಕೊಂಡರೆ ಅವರೇ ಹೊಣೆಗಾರರು.  ಹಳ್ಳಿಗಳಲ್ಲಿ ಸಬ್‍ಬೀಟ್ ಸಿಸ್ಟಮ್ ಜಾರಿಗೆ ತಂದು, ಅಲ್ಲಿ ಜನರಿಗೆ ಉತ್ತಮ ಸ್ಪಂದನೆ ನೀಡಲಾಗುವುದು.   ಪೊಲೀಸ್ ಇಲಾಖೆಗೆ ಸರ್ಕಾರ ಎಲ್ಲಾ ರೀತಿಯ ಹಣಕಾಸು ನೆರವು ನೀಡಲಿದೆ.  ಕೋಮು ಗಲಭೆಗಳನ್ನು ತಡೆ ಹಾಕಿ,  ಇದಕ್ಕೆ ಪ್ರಚೋದನೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
  ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ರತ್ನಪ್ರಭಾ, ಪೊಲೀಸ್ ಡಿಜಿ ಹಾಗೂ ಐ.ಜಿಪಿ. ನೀಲಮಣಿ ಎನ್. ರಾಜು, ಗೃಹ ಇಲಾಖೆ ಕಾರ್ಯದರ್ಶಿಗಳಾದ ಡಾ. ರಜನೀಶ್ ಗೋಯಲ್, ಎ.ಡಿ.ಜಿ.ಪಿ. ಆಡಳಿತ
   ವಾಣಿಜ್ಯ ತೆರಿಗೆ ಇಲಾಖೆಯಿಂದ ದಾಳಿ
  37 ಕೋಟಿ ರೂ. ವಂಚನೆ ಪತ್ತೆ
  ಬೆಂಗಳೂರು, ಜೂನ್ 22 (ಕರ್ನಾಟಕ ವಾರ್ತೆ)
  ವಾಣಿಜ್ಯ ತೆರಿಗೆ ಇಲಾಖೆಯು ಅಂಕಿ ಅಂಶಗಳ ವಿಶ್ಲೇಷಣೆಯ ಆಧಾರದ ಮೇಲೆ ಪ್ರಮುಖ ತೆರಿಗೆ ವಂಚನೆ ಪತ್ತೆ ಹಚ್ಚುವ ಕಾರ್ಯದ ಭಾಗವಾಗಿ, ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ರ ಅಡಿಯಲ್ಲಿ ನೋಂದಾಯಿತ ವರ್ತಕರಾಗಿರುವ ಹಾಗೂ ಇಂಟರ್ನೆಟ್ ಸೇವೆಗಳು ಮತ್ತು ಟೆಲಿ ಕಮ್ಯೂನಿಕೇಷನ್ ಸೇವೆಗಳ ವ್ಯವಹಾರದಲ್ಲಿ ತೊಡಗಿರುವ ಮೆ: ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಮತ್ತು ಮೆ: ರಿಲಿಯನ್ಸ್ ಐಡಿಸಿ ಲಿಮಿಟೆಡ್ ಇವರು ತೆರಿಗೆ ಹಾಗೂ ಬಡ್ಡಿಯೂ ಸೇರಿದಂತೆ 37 ಕೋಟಿ ರೂಪಾಯಿಗಳನ್ನು ಪಾವತಿಸದಿರುವುದನ್ನು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಯು ಪತ್ತೆ ಹಚ್ಚಿರುತ್ತದೆ.
  ಸದರಿಯವರು ಈ ದಿನದವರೆಗೆ ತೆರಿಗೆ ಹಾಗೂ ಬಡ್ಡಿಯೂ ಸೇರಿದಂತೆ 37 ಕೋಟಿ ರೂ. ಗಳನ್ನು ಪಾವತಿಸಿರುವುದಿಲ್ಲ.  ಜುಲೈ 2017 ರಿಂದ ಮೇ 2018 ರವರೆಗಿನ ಅವಧಿಯ ಮಾಡಿಕ ರಿಟರ್ನ್‍ಗಳನ್ನು ಸಹ ಸಲ್ಲಿಸಿರುವುದಿಲ್ಲ ಹಾಗೂ ಸರ್ಕಾರಕ್ಕೆ ಕಾನೂನಾತ್ಮಕವಾಗಿ ಬರಬೇಕಾದ ಬಾಕಿ ತೆರಿಗೆ ಮೊತ್ತವನ್ನು ಪಾವತಿಸದೇ ಇರುವ   ಹಿನ್ನೆಲೆಯಲ್ಲಿ ಕರ್ನಾಟಕ ವಾಣಿಜ್ಯ ತೆರಿಗೆಗಳ ಇಲಾಖೆಯ ದಕ್ಷಿಣ ವಲಯ ಜಾರಿ ವಿಭಾಗದ ಅಧಿಕಾರಿಗಳು ಜೂನ್ 20 ರಂದು ತಪಾಸಣೆ ಕೈಗೊಂಡಿರುತ್ತಾರೆ.  ಈ ವರ್ತಕರು ತೆರಿಗೆ ಹಾಗೂ ಬಡ್ಡಿಯನ್ನು ಪಾವತಿಸದಿರುವುದನ್ನು ಒಪ್ಪಿಕೊಂಡು , 15.05 ಕೋಟಿ ರೂ. ಗಳನ್ನು ಜೂನ್ 21 ರಂದು ಪಾವತಿಸಿರುತ್ತಾರೆ ಹಾಗೂ ಬಾಕಿ ಮೊತ್ತವನ್ನು ಪಾವತಿಸಲು ಒಪ್ಪಿರುತ್ತಾರೆ.  ಬಾಕಿ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ಇಲಾಖೆಯು ಸರಕು ಮತ್ತು ಸೇವಾ ತೆರಿಗೆಯ ಕಾನೂನಿನ ಅನ್ವಯ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ವಾಣಿಜ್ಯ ಮತ್ತು ತೆರಿಗೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
  ಬೆಂಗಳೂರು, ಜೂನ್ 21 (ಕರ್ನಾಟಕ ವಾರ್ತೆ)
  ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ – ಎ ಮತ್ತು ಬಿ ತಾಂತ್ರಿಕ/ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ಆಯೋಗದ ಕೇಂದ್ರ ಕಚೇರಿ, ಬೆಂಗಳೂರು ಇಲ್ಲಿ ಸಂದರ್ಶನವನ್ನು ನಡೆಸಲಿದೆ.
  ಜೂನ್ 25 ರಿಂದ 29 ರವರೆಗೆ ಹಾಗೂ ಜುಲೈ 2 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿಗಳ 52 ಹುದ್ದೆ ಹಾಗೂ ಅಧೀಕ್ಷಕರು ದರ್ಜೆ–1 78 ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.
  ಜುಲೈ 2 ರಂದು ಅಲ್ಪಸಂಖ್ಯಾತ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಂಶುಪಾಲರು 06 (05+01 (ಹೈಕ) ಹುದ್ದೆಗಳ ಅಲ್ಪಸಂಖ್ಯಾತ  ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ  ಶಾಲೆಗಳಲ್ಲಿನ (ನವೋದಯ) ಪ್ರಾಂಶುಪಾಲರು 04 (03+01) ಹುದ್ದೆಗಳು  ಹಾಗೂ ಅಲ್ಪಸಂಖ್ಯಾತ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ ಉರ್ದು ಭಾಷಾ ಉಪನ್ಯಾಸಕರು 05 + 01 (ಹೈಕ) ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.
  ಜುಲೈ 3 ರಂದು ಅಲ್ಪಸಂಖ್ಯಾತ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರು 04 + 01 (ಹೈಕ) ಹುದ್ದೆಗಳು, ಅಲ್ಪಸಂಖ್ಯಾತ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ ಇಂಗ್ಲೀಷ್ ಉಪನ್ಯಾಸಕರು 05+01 (ಹೈಕ) ಹುದ್ದೆಗಳು, ಅಲ್ಪಸಂಖ್ಯಾತ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ  ಪ್ರಾಂಶುಪಾಲರು 02 (01+01) ಹುದ್ದೆಗಳು/ಅಲ್ಪಸಂಖ್ಯಾತರೆ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗಳಲ್ಲಿ ಉಪ ಪ್ರಾಂಶುಪಾಲರು  – 02 (01+01) ಹುದ್ದೆಗಳಿಗಾಗಿ ಸಂದರ್ಶನ ನಡೆಯಲಿದೆ.
  ಜುಲೈ 4 ಮತ್ತು 5 ರಂದು ಪೌರಾಡಳಿತ ನಿರ್ದೇಶನಾಲಯದ ಮಹಾನಗರಪಾಲಿಕೆಗಳಲ್ಲಿ ಪರಿಸರ ಅಭಿಯಂತರರು 19 ಹುದ್ದೆಗಳು/ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಸರ ಅಭಿಯಂತರರು – 45 (35+10) ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ
  ಅಭ್ಯರ್ಥಿಗಳಿಗೆ ಸಂದರ್ಶನ ಸೂಚನಾಪತ್ರಗಳನ್ನು ಕಳುಹಿಸಲಾಗುತ್ತಿದೆ.  ಸಂದರ್ಶನದ ಅಭ್ಯರ್ಥಿಗಳ ಪಟ್ಟಿಗಳನ್ನು ಮಾಹಿತಿಗಾಗಿ ಆಯೋಗದ ವೆಬ್‍ಸೈಟ್ http://kpsc.kar.nic.in/Eligibility List” ಗಳಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.
   ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
  ಬೆಂಗಳೂರು, ಜೂನ್ 22, (ಕರ್ನಾಟಕ ವಾರ್ತೆ)
            2018-19 ನೇ ಸಾಲಿನ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಸಿಎಂಇಜಿಪಿ)ಯಡಿಯಲ್ಲಿ ಗ್ರಾಮೀಣ ಪ್ರದೇಶದ ಯುವಕ-ಯವತಿಯರು ಸೂಕ್ಷ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜಿಸಿ ಅವರನ್ನು ಮೊದಲ ಪೀಳಿಗೆ ಉದ್ಯಮಿಗಳನ್ನಾಗಿ ಮಾಡಲು ಅರ್ಹ ಗ್ರಾಮೀಣ ಪ್ರದೇಶದ ಯುವ-ಯುವತಿಯರಿಂದ ಸಾಲ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
  ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಅವಕಾಶವಿರುತ್ತದೆ.  ಯಾವುದಾದರೂ ಬೇರೆ ಯೋಜನೆಗಳಲ್ಲಿ ಉದ್ದಿಮೆ ಸ್ಥಾಪನೆಗೆ ಸಾಲ ಸೌಲಭ್ಯ ಪಡೆದಿದ್ದಲ್ಲಿ ಈ ಯೋಜನೆಗೆ ಅವಕಾಶವಿರುವುದಿಲ್ಲ.  ಅರ್ಜಿಗಳನ್ನು 30-6-2018 ರೊಳಗಾಗಿ ಆನ್‍ಲೈನ್  cmegp.kar.nic.in ಮುಖಾಂತರ ಸಲ್ಲಿಸುವುದು.  ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರು ನಗರ ಜಿಲ್ಲೆ ರಾಜಾಜಿನಗರ, ಕೈಗಾರಿಕಾ ವಸಾಹತು, ರಾಜಾಜಿನಗರ, ಬೆಂಗಳೂರು -560 010 ದೂರವಾಣಿ ಸಂಖ್ಯೆ 080-23501478  ಇವರನ್ನು ಸಂಪರ್ಕಿಸಬಹುದು.
  • Comments Off on ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.