02:48 am Friday, June 21, 2019
 • ಆತೂರು ಪರಿಸರವು ಶಿಕ್ಷಣದ ಹಬ್ ಆಗಿ ಬೆಳೆದಿದೆ.

  By admin - Sun Jun 17, 1:51 pm

  • Comments Off on ಆತೂರು ಪರಿಸರವು ಶಿಕ್ಷಣದ ಹಬ್ ಆಗಿ ಬೆಳೆದಿದೆ.
  • 0 views

  *ಅಲ್ ಹಾಜ್ ಡಾ| ಶಾಹ್ ಮುಸ್ಲಿಯಾರ್ ರಿಂದ Blossom Dreamz ಶಾಲೆಯ ಉದ್ಘಾಟನೆ:*

  ಇಂದು ಬೆಳಗ್ಗೆ 10:30 ಕ್ಕೆ ಆತೂರಿನ ಗೋಳಿತ್ತಡಿಯಲ್ಲಿ Blossom Dreamz school of excellence ನ್ನು ಹಿರಿಯ ವಿದ್ವಾಂಸರಾದ ಶಾಹ್ ಮುಸ್ಲಿಯಾರ್ ರವರು ಉದ್ಘಾಟಿಸಿದರು.ಮುಖ್ಯ ಅಥಿತಿಗಳಾಗಿ ಭಾಗವಹಿಸಿ‌ ಮಾತನಾಡಿದ TRF ಮಂಗಳೂರು ಇದರ ಸಲಹೆಗಾರರಾದ ರಫೀಕ್ ಮಾಸ್ಟರ್ ರವರು *” ಇದೊಂದು ಐತಿಹಾಸಿಕ ದಿನ, ಮರಳಿ ಬಾ ಶಾಲೆಯ ಮುಖಾಂತರ ಆರಂಭವಾದ ಈ ವಿದ್ಯಾಸಂಸ್ಥೆಯು ಇಂದು ಬಹಳ ಎತ್ತರಕ್ಕೆ ಬೆಳೆದು ನಿಂತಿದೆ.ಇಂದು ಆತೂರು ಪರಿಸರವು ಶಿಕ್ಷಣದ ಹಬ್ ಆಗಿ ಬೆಳೆದಿದೆ.ಎಲ್ಲಾ ವರ್ಗದ ಜನರಿಗೆ ಸಮಾನ ಶಿಕ್ಷಣ‌ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಇನ್ನೂ ಎತ್ತರಕ್ಕೆ ‌ಬೆಳೆಯಲಿ ಎಂದು ಹಾರೈಸಿದರು.*
  ನಂತರ ಮಾತನಾಡಿದ ಎಂಪವರ್ ಇಂಡಿಯಾ ಫೌಂಡೇಶನ್ ನ ರಾಜ್ಯ ಸಂಚಾಲಕರಾದ ಅಯ್ಯೂಬ್ ಅಗ್ನಾಡಿಯವರು *”ಇಚ್ಛಾಶಕ್ತಿ ಮತ್ತು ಸಂಘ ಶಕ್ತಿಯಿಂದ ಸಾಧನೆ ಮಾಡಬಹುದು ಎಂದು ಈ ಸಂಸ್ಥೆಯು ತೋರಿಸಿಕೊಟ್ಟಿದೆ.ಈ ಸಂಸ್ಥೆಯು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.* ನಂತರ ಅಧ್ಯಕ್ಷೀಯ ಭಾಷಣ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ B.K ರವರು *”ನಮ್ಮೊಂದಿಗೆ ಇದುವರೆಗೆ ಸಹಕರಿಸಿದ ಊರ ಪರವೂರ‌ ಎಲ್ಲಾ ಹಿತೈಷಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.ಇನ್ನು ಮುಂದೆಯೂ ಇದೇ ರೀತಿ ನಮ್ಮನ್ನು ಪ್ರೋತ್ಸಾಹಿಸಿ ಎಂದು ವಿನಂತಿಸಿದರು.*

  ವೇದಿಕೆಯಲ್ಲಿ ಇಕ್ಬಾಲ್ ಹಲ್ಯಾರ( ಬ್ಲಾಕ್ ಕಾಂಗ್ರೆಸ್‌ ಉಪಾಧ್ಯಕ್ಷರು ಕೈಕಂಬ)
  ಹಾಜಿ ಆದಂ .ಪಿ ( ಸಂಚಾಲಕರು, ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲೆ, ಆತೂರು )
  ಅಬ್ದುಲ್ಲಾ ಹಾಜಿ ಕುಂಡಾಜೆ ( ಸಂಚಾಲಕರು VBVK,Athoor )
  ಅಶ್ರಫ್ D.A.( M.D.Al Ahad group ,UAE)
  ನಝೀರ್ ಕೋಡಿಂಬಾಡಿ ( ಮಾಲಕರು Zain phones, Oman)
  Azad K.N Earth movers
  ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಆತೂರು
  ಸಮದ್ ಕುಂತೂರ್ (ಖಝಾರಿಯಾ ಗ್ರೂಪ್, ಬೆಂಗಳೂರು)
  ಉಪಸ್ಥಿತರಿದ್ದರು.ಸದಕತುಲ್ಲಾರವರು ಸ್ವಾಗತಿಸಿ ಖಾದರ್ ಬಿ.ಎಸ್ ರವರು ವಂದಿಸಿದರು.ಹಾಜಿ ಹುಸೇನ್ ಸಿರಾಜ್ ರವರು ಕಾರ್ಯವನ್ನು ನಿರೂಪಿಸಿದರು.

  • Comments Off on ಆತೂರು ಪರಿಸರವು ಶಿಕ್ಷಣದ ಹಬ್ ಆಗಿ ಬೆಳೆದಿದೆ.
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.