03:32 am Friday, June 21, 2019
 • ಎಸ್‍ಡಿಪಿಐಗೆ ವಿವಿಧ ಸಮುದಾಯಗಳ ಬೆಂಬಲ

  By admin - Sat May 05, 1:09 am

  • Comments Off on ಎಸ್‍ಡಿಪಿಐಗೆ ವಿವಿಧ ಸಮುದಾಯಗಳ ಬೆಂಬಲ
  • 0 views


  ಎಸ್‍ಡಿಪಿಐಗೆ ವಿವಿಧ ಸಮುದಾಯಗಳ ಬೆಂಬಲ

  ಕಳೆದ ಹತ್ತು ವರ್ಷಗಳಿಂದ ಜನಪರ ರಾಜಕಾರಣದಲ್ಲಿ ಸಕ್ರಿಯವಾಗಿರುವ ಎಸ್‍ಡಿಪಿಐಗೆ ಈ ಬಾರಿಯ
  ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ
  ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು, ಸಮುದಾಯಗಳ ಪ್ರಮುಖರು, ವಿವಿಧ ಕ್ಷೇತ್ರಗಳ
  ಹೋರಾಟಗಾರರ ಎಸ್‍ಡಿಪಿಐ ಸೇರ್ಪಡೆಯು ಪಕ್ಷದ ಬಲವನ್ನು ಇಮ್ಮಡಿಗೊಳಿಸಿರುವುದಕ್ಕೆ ನಿದರ್ಶನವಾಗಿದೆ.
  ಬದಲಾದ ರಾಜಕೀಯ ಸನ್ನಿವೇಶಗಳಿಗೆ ಅನುಗುಣವಾಗಿ ಎಸ್‍ಡಿಪಿಐ ಪಕ್ಷ ರಾಜ್ಯದಲ್ಲಿ ಮೈಸೂರಿನ
  ನರಸಿಂಹರಾಜ ಕ್ಷೇತ್ರ, ಬೆಂಗಳೂರಿನ ಚಿಕ್ಕಪೇmõÉ ಮತ್ತು ಗುಲ್ಬರ್ಗದ ಉತ್ತರ ಈ ಮೂರು ಕ್ಷೇತ್ರಗಳಲ್ಲಿ ಮಾತ್ರ
  ಸ್ಪರ್ಧಿಸುತ್ತಿದೆ. ಉಳಿದೆಡೆ ಪ್ರಬಲ ಜಾತ್ಯತೀತ ಅಭ್ಯರ್ಥಿಗಳಿಗೆ ಬೆಂಬಲಿಸುತ್ತಿದೆ. ಈ ಮಹತ್ವದ ನಿರ್ಧಾರದಿಂದಾಗಿ
  ರಾಜ್ಯಾದ್ಯಂತ ಎಸ್‍ಡಿಪಿಐ ಬೆಂಬಲಿಗರ ಮತ್ತು ಮತದಾರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರುತ್ತಿದೆ. ವಿವಿಧ
  ಜಾತಿ-ಧರ್ಮ, ಭಾಷೆ, ವರ್ಗಗಳ ಜನರು ಎಸ್‍ಡಿಪಿಐಗೆ ಮತವನ್ನು ನೀಡುವ ವಾಗ್ದಾನ ಮಾಡಿದ್ದಾರೆ.
  ಪಕ್ಷದ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ನೇತತ್ವದಲ್ಲಿ ರಾಜ್ಯದ ಹೊಳೆಯ, ಮಾದಿಗ ಮತ್ತಿತರ
  ದಲಿತ ಹಿಂದುಳಿದ ವರ್ಗದವರನ್ನು ಸೆಳೆಯಲು ಕಳೆದ ಮೂರು ವರ್ಷದಿಂದ ಕೆಲಸ ಮಾಡಿದ್ದಾರೆ. ಈಗ
  ಚುನಾವಣಾ ಸಂದರ್ಭದಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಮತ ನೀಡುವ ಭರವಸೆ ನೀಡಿದ್ದಾರೆ.
  ರಾಜ್ಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ ನೇತೃತ್ವದಲ್ಲಿ ಕ್ರೈಸ್ತರು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರು,
  ಎನ್‍ಜಿಒಗಳು ಎಸ್‍ಡಿಪಿಐಯೊಂದಿಗೆ ಕೈ ಜೋಡಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತಮ್ಮ ಸಮುದಾಯದ
  ಮತ ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
  ಕಾರ್ಮಿಕ ಮುಖಂಡ ಆಲೂರು ಮಲ್ಲಣ್ಣ ನಾಯಕತ್ವದಲ್ಲಿ ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ಕನ್ನಡ ಪರ
  ಹೋರಾಟಗಾರರು ಮತ್ತಿತರ ಪ್ರಗತಿಪರರನ್ನು ಎಸ್‍ಡಿಪಿಐಯತ್ತ ಸೆಳೆದಿದ್ದಾರೆ. ಕಾರ್ಮಿಕ ಸಂಘಟನೆಯಾದ
  ಸೋಶಿಯಲ್ ಡೆಮಾಕ್ರೆಟಿಕ್ mõÉ್ರೀಡ್ ಯೂನಿಯನ್ ಸದಸ್ಯರು ಎಸ್‍ಡಿಪಿಐಯನ್ನು ಬೆಂಬಲಿಸುತ್ತಿದ್ದಾರೆ. ಈ ಎಲ್ಲಾ
  ಪ್ರಯತ್ನದ ಫಲವಾಗಿ ಎಸ್‍ಡಿಪಿಐ ಪಕ್ಷವು ರಾಜ್ಯದ ಎಲ್ಲಾ ಜನಸಮುದಾಯಗಳ ಪಕ್ಷವೆಂದು ಜನಮನ್ನಣೆ ಗಳಿಸಿದೆ.
  ಎಸ್‍ಡಿಪಿಐ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ವಿವಿಧ ಸಮುದಾಯಗಳ ಜನರು, ಮಹಿಳಾ ಸಂಘಟನೆಗಳು,
  ಸ್ತ್ರೀ ಶಕ್ತಿ ಸಂಘಗಳು, ವಿದ್ಯಾರ್ಥಿಗಳು ಈಗಾಗಲೇ ಬೆಂಬಲ ಸೂಚಿಸಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮನೆ
  ಮನೆ ಭೇಟಿ ಮಾಡಿ ಮತಯಾಚಿಸುತ್ತಿದ್ದಾರೆ.
  ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಸ್‍ಡಿಪಿಐ ಪಕ್ಷದ ಮೂವರು ಶಾಸಕರು ಖಂಡಿತ
  ಗೆಲ್ಲುತ್ತಾರೆ ಎಂದು ನಿಷ್ಪಕ್ಷ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ಪಕ್ಷಗಳ ಒಳ-ಹೊರ
  ಮೈತ್ರಿ ಇಲ್ಲದೆ, ಕಾಪೆರ್Çರೇಟ್ ಹಣಬಲವಿಲ್ಲದೆ ಪ್ರಾಮಾಣಿಕ ಹೋರಾಟಗಾರರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ
  ರಾಜ್ಯದಲ್ಲಿ ಮೌಲ್ಯಾಧಾರಿತ ರಾಜಕಾರಣದ ಹೊಸ ಮಾದರಿಯನ್ನು ರೂಪಿಸುವುದು ಎಸ್‍ಡಿಪಿಐನ ಗುರಿಯಾಗಿದೆ.
  ಅಕ್ರಮ್ ಹಸನ್
  ರಾಜ್ಯ ಕಾರ್ಯದರ್ಶಿ
  ಎಸ್‍ಡಿಪಿಐ, ಕರ್ನಾಟಕ

  • Comments Off on ಎಸ್‍ಡಿಪಿಐಗೆ ವಿವಿಧ ಸಮುದಾಯಗಳ ಬೆಂಬಲ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.