07:40 pm Friday, January 18, 2019
  • ದಲಿತರ ಮೇಲೆ ದೌರ್ಜನ್ಯಗಳು ಶೇ.500ರಷ್ಟು ಹೆಚ್ಚಾಗಿದ್ದರೂ ಕೇಂದ್ರ ಸರ್ಕಾರ ನಿಷ್ಕ್ರಿಯ – ಖರ್ಗೆ

    By admin - Mon Apr 23, 2:33 pm

    • Comments Off on ದಲಿತರ ಮೇಲೆ ದೌರ್ಜನ್ಯಗಳು ಶೇ.500ರಷ್ಟು ಹೆಚ್ಚಾಗಿದ್ದರೂ ಕೇಂದ್ರ ಸರ್ಕಾರ ನಿಷ್ಕ್ರಿಯ – ಖರ್ಗೆ
    • 0 views

    ಹೆಣ್ಣುಮಕ್ಕಳ ಮೇಲೆ ಹಾಗೂ ದಲಿತರ ಮೇಲೆ ನಡೆಯುವ ದೌರ್ಜನ್ಯಗಳು ಶೇ. 500ರಷ್ಟು ಹೆಚ್ಚಾಗಿದ್ದರೂ ಕೇಂದ್ರ ಸರ್ಕಾರದ ನಿಷ್ಕ್ರಿಯವಾಗಿದೆ’
    -ಮಲ್ಲಿಕಾರ್ಜುನ ಖರ್ಗೆ

    ಹೆಣ್ಣುಮಕ್ಕಳ ಮೇಲೆ ಹಾಗೂ ದಲಿತರ ಮೇಲೆ ನಡೆಯುವ ದೌರ್ಜನ್ಯಗಳು ಶೇ. 500ರಷ್ಟು ಹೆಚ್ಚಾಗಿದ್ದರೂ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

    ನಗರದ ಕೆಪಿಸಿಸಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    “ಹೆಣ್ಣುಮಕ್ಕಳ, ದಲಿತರ ಮೇಲೆ ನಡೆಯುವ ದೌರ್ಜನ್ಯ ತಡೆಯುವ ಕಾನೂನುಗಳನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಲಿದೆ. ಆದರೆ ಈಗಾಗಲೇ ಚಾಲ್ತಿಯಲ್ಲಿರುವ ನಿರ್ಬಯ ಕಾನೂನನ್ನು ಏಕೆ ಸಮರ್ಪಕವಾಗಿ ಜಾರಿಗೆ ತಂದಿಲ್ಲ? ಹಳೇ ಕಾನೂನಿಗೆ ಹೊಸ ಸ್ವರೂಪ ನೀಡುವುದೇಕೆ? ಮತ್ತು ಹೊಸ ಕಾನೂನುಗಳನ್ನು ತಂದಿದ್ದೇವೆ ಎಂದು ಚಪ್ಪಾಳೆ ಗಿಟ್ಟಿಸಿಕೊಳ್ಳುವುದೇಕೆ?” ಎಂದು ಮೋದಿ ಸರ್ಕಾರವನ್ನು ಖರ್ಗೆಯವರು ಪ್ರಶ್ನಿಸಿದರು.

    ದೇಶದ ಆರ್ಥಿಕ ವ್ಯವಸ್ಥೆಯ ಕುರಿತು ಮಾತನಾಡಿದ ಖರ್ಗೆಯವರು ಆರ್ಥಿಕ ವ್ಯವಸ್ಥೆ ಹದಗೆಡಲು ಮೋದಿ ಸರ್ಕಾರವೇ ಕಾರಣವೆಂದು ಟೀಕಿಸಿದರು. ಅಸಂಘಟಿತ ಕಾರ್ಮಿಕರಿಗೆ, ರೈತರಿಗೆ, ಬಡವರಿಗೆ ತೊಂದರೆಯಾಗಿದೆ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.

    ಲೋಕಸಭೆಯ ಕಲಾಪಗಳ ಕುರಿತು ಮಾತನಾಡಿದ ಖರ್ಗೆಯವರು “ಕಲಾಪ ಹಾಳು ಮಾಡಿದ ಕುರಿತು ಬಿಜೆಪಿಯವರು ಉಪವಾಸ ಮಾಡುತ್ತಾರೆ. ಆದರೆ ಕಲಾಪವನ್ನು ಕಾಂಗ್ರೆಸ್ ಹಾಳು ಮಾಡಿಲ್ಲ. ಬದಲಿಗೆ ಎನ್ ಡಿ ಎ ಸಹಪಕ್ಷಗಳಾದ ಟಿಡಿಪಿ, ವೈಎಸ್ ಆರ್ ಕಾಂಗ್ರೆಸ್, ಎಐಎಡಿಎಂಕೆಗಳೇ ಕಾರಣ. ತಮ್ಮ ಸ್ಥಳೀಯ ಸಮಸ್ಯೆಗಳ ಕುರಿತು ಅವರು ಮಾಡಿದ ಗದ್ದಲಗಳನ್ನು ನಮ್ಮ ಮೇಲೆ ಹೊರೆಸಿ, ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಬರುವಂತೆ ಮಾಡಿದ್ದಾರೆ” ಎಂದು ಖರ್ಗೆ ಸಮರ್ಥಿಸಿಕೊಂಡರು.

    ‘ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು 50 ಸದಸ್ಯರು ಸಾಕು ನಾವು 80 ಸದಸ್ಯರಿದ್ದರೂ ನಮಗೆ ಅವಿಶ್ವಾಸ ಮಂಡಿಸಲು ಅವಕಾಶ ನೀಡಲಿಲ್ಲ. ಅನಗತ್ಯವಾಗಿ ಅಧಿವೇಶನವನ್ನು ಮುಂದೂಡುತ್ತಾ ಬಂದರು. ಅವಕಾಶ ನೀಡಿದ್ದರೆ ನಾವು ದಲಿತರ, ರ್ಯಾಫಲ್, ಅನಾಣ್ಯೀಕರಣ ಕುರಿಂತೆ ನಾವು ಚರ್ಚೆ ಮಾಡುತ್ತಿದ್ದೆವು” ಎಂದರು.

    “ಪ್ರಧಾನಿಗಳು ಲೋಕಸಭೆಯಲ್ಲಿ, ರಾಜ್ಯಸಭೆಯಲ್ಲೂ ಮಾತನಾಡುವುದಿಲ್ಲ. ಪತ್ರಿಕಾಗೋಷ್ಠಿ ಕರೆದು ಅಲ್ಲೂ ಸ್ಪಷ್ಟಪಡಿಸುವುದಿಲ್ಲ. ಪತ್ರಿಕಾಗೋಷ್ಠಿ ಎದುರಿಸಲೂ ಅವರು ಸಿದ್ಧರಿಲ್ಲ” ಎಂದರು.
    ಇಂಧನಗಳ ಬೆಲೆ ನಿಯಂತ್ರಿಸುವಲ್ಲಿ, ರೈತರ ಸಮಸ್ಯೆ ಪರಿಹರಿಸುವಲ್ಲಿ, ಉದ್ಯೋಗ ಸೃಷ್ಟಿಸುವಲ್ಲಿ… ಹೀಗೆ ಹಲವು ರಂಗಗಳಲ್ಲಿ ಕೇಂದ್ರ ಸರ್ಕಾರವ ವಿಫಲವಾಗಿದೆ ಎಂದು ಖರ್ಗೆ ಆರೋಪಿಸಿದರು.

    ಮೋದಿ ಕೂಡ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು:
    ಪತ್ರಕರ್ತರೊಬ್ಬರು ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಬಗೆಗೆ ಪ್ರಶ್ನಿಸಿದಾಗ ಅದಕ್ಕೆ “ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದರಲ್ಲಿ ತಪ್ಪೇನು ಎಂದರು. ಮೋದಿಯವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಸಿಎಂ ಎರಡೂ ಕ್ಷೇತ್ರಗಳಲ್ಲೂ ಗೆದ್ದು ಬರುವರೆಂಬ ವಿಶ್ವಾಸ ವ್ಯಕ್ತಪಡಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಪ್ರಿಯಾಂಕ ಚತುರ್ವೇದಿ, ಕೆಪಿಸಿಸಿ ಮಾಧ್ಯಮ ಮುಖ್ಯಸ್ಥ ಪ್ರೊ. ರಾಧಾಕೃಷ್ಣ ಮೊದಲಾದವರು ಹಾಜರಿದ್ದರು.

    • Comments Off on ದಲಿತರ ಮೇಲೆ ದೌರ್ಜನ್ಯಗಳು ಶೇ.500ರಷ್ಟು ಹೆಚ್ಚಾಗಿದ್ದರೂ ಕೇಂದ್ರ ಸರ್ಕಾರ ನಿಷ್ಕ್ರಿಯ – ಖರ್ಗೆ
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.