07:32 pm Tuesday, June 25, 2019
 • ನೈಸ್ ಯೋಜನೆಯನ್ನೇ ಸರ್ಕಾರದ ಸುಪರ್ದಿಗೆ ಪಡೆಯಲು ಕುಮಾರಸ್ವಾಮಿ ಮುಂದಾಗಿದ್ರು

  By admin - Wed Mar 14, 10:47 am

  • Comments Off on ನೈಸ್ ಯೋಜನೆಯನ್ನೇ ಸರ್ಕಾರದ ಸುಪರ್ದಿಗೆ ಪಡೆಯಲು ಕುಮಾರಸ್ವಾಮಿ ಮುಂದಾಗಿದ್ರು
  • 0 views

  ಇಂದು ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದಂತಹ ವಿಕಾಸ ಪರ್ವ ಪಾದಯಾತ್ರೆಯಲ್ಲಿ ಮಾಜಿ ಪ್ರಧಾನಿ ಮಣ್ಣಿನಮಗ ಎಚ್ ಡಿ ದೇವೇಗೌಡರು, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ ಗೋಪಾಲಯ್ಯ, ಶಾಸಕರು ಕರ್ನಾಟಕ ವಿಧಾನ ಪರಿಷತ್ ಟಿಎ ಶರವಣ,
  ಬೆಂಗಳೂರು ನಗರಾಧ್ಯಕ್ಷರಾದ ಆರ್ ಪ್ರಕಾಶ್ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರು ಮುಖಂಡರು ಪಾಲ್ಗೊಂಡಿದ್ದರು…

  ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಗೆಳೆಯರ ಬಳಗ ವೃತ್ತದಲ್ಲಿ ವಿಕಾಸಪರ್ವ ಪಾದಯಾತ್ರೆ ಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹೇಳಿಕೆ

  ಬಿಜೆಪಿ ಕಾಂಗ್ರೆಸ್ ಪರಸ್ಪರ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ರು ಆದ್ರೆ ಕುಮಾರಸ್ವಾಮಿ 20.ತಿಂಗಳ ಆಡಳಿತದ ಬಗ್ಗೆ ಚಾರ್ಜ್ ಶೀಟ್ ಬಿಡುಗಡೆ ಮಾಡಲು ಸಾಧ್ಯವಿಲ್ಲ
  ಅಂತಹ ಉತ್ತಮ ಆಡಳಿತ ನೀಡಿದಾರೆ

  ಈಗ ಮತ್ತೆ ಉತ್ತಮ ಆಡಳಿತ ನೀಡಬೇಕಾದ್ರೆ ಬಹುಮತದ ಸರ್ಕಾರ ಬೇಕು ಪಟ್ಟಣದ ಬಡವರಿಗೂ ಅಕ್ಕಿ ಗೋದಿ ಕೊಡುವ ಕೆಲಸವನ್ನು ಅಂದು ಮಾಡಿದ್ದೆ ,, ಇವರು ಈಗ ಅನ್ನಭಾಗ್ಯ ಎನ್ನುತ್ತಿದ್ದಾರೆ, ಆ ಬಗ್ಗೆ ಚರ್ಚೆ ಮಾಡಲ್ಲ

  ಬಿಬಿಎಂಪಿಯಲ್ಲಿ ನೈಸ್ ಬಗ್ಗೆ ಪದ್ಮನಾಭ ರೆಡ್ಡಿ ಮಾತಾಡ್ತಾರೆ ಅಂದು ಕುಮಾರಸ್ವಾಮಿ ಕ್ಯಾಬಿನೆಟ್ ನಲ್ಲಿ ಈ ವಿಚಾರ ತಂದಾಗ ಬಿಜೆಪಿ ಬೆಂಬಲ ಕೊಟ್ಟಿಲ್ಲ

  ಇಲ್ಲದಿದ್ದರೆ ಅಂದೇ ಮಹಾವಂಚಕನಿಂದ ಭೂಮಿಯನ್ನ ವಾಪಸ್ ಪಡಿಯಬಹುದಿತ್ತು
  ನೈಸ್ ಯೋಜನೆಯನ್ನೇ ಸರ್ಕಾರದ ಸುಪರ್ದಿಗೆ ಪಡೆಯಲು ಕುಮಾರಸ್ವಾಮಿ ಮುಂದಾಗಿದ್ರು
  ಇದ್ಯಾವುದಕ್ಕೂ ಬಿಜೆಪಿ ಬೆಂಬಲ ಕೊಟ್ಟಿಲ್ಲ

  ಬೆಂಗಳೂರಿನ ನಾಗರಿಕರಿಗೆ ಪ್ರಬುದ್ಧತೆ ಇದೆ
  ರಾಜ್ಯದ ರಾಜಕಾರಣ ಅರ್ಥಮಾಡಿಕೊಳ್ಳುವ ಶಕ್ತಿ ಇದೆ

  ಕಾವೇರಿ ವಿಚಾರದಲ್ಲಿ 2007 ರಲ್ಲಿ ನಮಗೆ ವ್ಯತಿರಿಕ್ತ ತೀರ್ಪು ಬಂದಾಗ ಹೋರಾಟ ಮಾಡಿದೆ
  ಈಗ ತೀರ್ಪು ಬಂದಾಗ ಸಿಎಂ ಸೇರಿದಂತೆ ಸಚಿವರುಗಳು ಸಿಹಿ ಹಂಚಿಕೊಳ್ತಾರೆ
  ಇದು ಯಾರಿಂದ ಬಂತು ಹೇಗೆ ಬಂತು ಅಂತಾ ಹೇಳಲ್ಲ

  2011 ರ 89 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಕೊಟ್ಟಿದ್ದಾರೆ
  ಈಗ ಬೆಂಗಳೂರಿನಲ್ಲಿ 1 ಕೋಟಿ 20.ಲಕ್ಷ ಜನಸಂಖ್ಯೆ ದಾಟಿದೆ ಇದನ್ನ ಜನ ಅರ್ಥ ಮಾಡಿಕೊಳ್ಳಬೇಕು

  ಈಗ ಕುಡಿಯಲು ಕೊಟ್ಟಿರುವ ನೀರು ಎಲ್ಲಿಗೂ ಸಾಲದು ಬೆಂಗಳೂರನ್ನ ರಕ್ಷಿಸಿ, ಯಾರಿಂದ ಬೆಂಗಳೂರನ್ನ ರಕ್ಷಿಸಬೇಕು

  ಯಾರ್ಯಾರ ಬಳಿ ಆಸ್ತಿ ಉಂಟೋ ಅದನ್ನ ಕಿತ್ಕೋಬೇಕಾ ,, ಯಾರಬಳಿ ಎಷ್ಟು ಆಸ್ತಿ ಎನ್ನುವುದು ನನಗೆ ಗೊತ್ತು ಅದನ್ನ ಕಿತ್ಕೋಬೇಕು ಅಂದ್ರೆ ಅದಕ್ಕೆ ಬಿಲ್ ತರಬೇಕು
  ಅಂತಹ ಬಿಲ್ ತರಲು ಜೆಡಿಎಸ್ ಗೆ ಅಧಿಕಾರ ಕೊಡಿ

  ಹ್ಯಾರೀಸ್ ಮಗ ನಳಪಾಡ್ ಹಲ್ಲೆ ಮಾಡಿದ ರೀತಿಯಲ್ಲೇ ಮಾಗಡಿಯಲ್ಲಿ ಜೆಡಿಎಸ್ ನ ಪುರಸಭಾ ಸದಸ್ಯನ ಮೇಲೆ ಹಲ್ಲೆ ಮಾಡಿದ್ದಾರೆ
  ಇದೆಲ್ಲ ನೋಡಿದರೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದು ಗೊತ್ತಾಗುತ್ತದೆ ಎಂದು ರಾಜ್ಯ ಸರ್ಕಾರದ ವ್ಯಪಲ್ಯತೆ ಬಗ್ಗೆ ಮಾಜಿ ಪ್ರಧಾನಿ ಬೇಸರ ವ್ಯಕ್ತಪಡಿಸಿದರು

  • Comments Off on ನೈಸ್ ಯೋಜನೆಯನ್ನೇ ಸರ್ಕಾರದ ಸುಪರ್ದಿಗೆ ಪಡೆಯಲು ಕುಮಾರಸ್ವಾಮಿ ಮುಂದಾಗಿದ್ರು
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.