02:50 am Friday, June 21, 2019
 • ಮೌಲನಾ ಸಜ್ಜಾದ್ ನೊಮಾನಿ ವಿರುದ್ಧ ಸುಳ್ಳು ಮೊಕದ್ದಮೆ ಖಂಡನೀಯ- ಅಬ್ದುಲ್ ಮಜೀದ್.

  By admin - Mon Mar 12, 12:43 pm

  • Comments Off on ಮೌಲನಾ ಸಜ್ಜಾದ್ ನೊಮಾನಿ ವಿರುದ್ಧ ಸುಳ್ಳು ಮೊಕದ್ದಮೆ ಖಂಡನೀಯ- ಅಬ್ದುಲ್ ಮಜೀದ್.
  • 0 views

  ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ರಾಷ್ರೀಯ ವಕ್ತರಾದ ಮೌಲನಾ ಸಜ್ಜಾದ್ ನೊಮಾನಿ ರವರ ಮೇಲೆ ಸುಳ್ಳು ದೇಶದ್ರೋಹ ಆರೋಪದಡಿ ಉತ್ತರ ಪ್ರದೇಶದಲ್ಲಿ ಎಫ್.ಐ.ಆರ್ ದಾಖಲಿಸಿರುವುದು ಖಂಡನೀಯ- ಅಬ್ದುಲ್ ಮಜೀದ್.*

  *ಮೈಸೂರು*: ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ರಾಷ್ರೀಯ ವಕ್ತಾರಾದ ಮೌಲನಾ ಖಲೀಲ್ ಉರ್ ರಹ್‍ಮಾನ್ ಸಜ್ಜಾದ್ ನೊಮಾನಿ ರವರ ಮೇಲೆ ಸುಳ್ಳು ದೇಶದ್ರೋಹ ಆರೋಪÀ ಹಿನ್ನಲೆಯಲ್ಲಿ ಸಂಘ ಪರಿವಾರದ ವಿರುದ್ಧ ನಗರದ ಏಕ್ ಮಿನಾರ್ ಮಸೀದಿ ಹತ್ತಿರ, ಮಹದೇವಪುರ ಮಖ್ಯ ರಸ್ತೆಯಲ್ಲಿ ದಿನಾಂಕ 12/03/2018 ರಂದು ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು.

  *ಈ ಸಭೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎನ್.ಆರ್ ಕ್ಷೇತ್ರದ ಅಭ್ಯರ್ಥಿ ಅಬ್ದುಲ್ ಮಜೀದ್ ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ರಾಷ್ರೀಯ ವಕ್ತಾರಾದ ಮೌಲನಾ ಸಜ್ಜಾದ್ ನೊಮಾನಿ ಸಾಹೇಬ್ ರವರ ಮೇಲೆ ಸುಳ್ಳು ದೇಶದ್ರೋಹ ಆರೋಪÀದಡಿ ಉತ್ತರ ಪ್ರದೇಶದಲ್ಲಿ ಎಫ್.ಐ.ಆರ್ ದಾಖಲಿಸಿರುವುದು ಖಂಡನೀಯ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಹುಟ್ಟಿರುವ ಜನಾಬ್ ಸಜ್ಜಾದ್ ರವರು ಜೀವನದುದ್ದಕ್ಕೂ ಶಾಂತಿ, ಸೌರ್ಹಾದತೆ ಮತ್ತು ದೇಶ ಪ್ರೇಮದ ದೇಯ್ಯವನ್ನು ಎತ್ತಿಹಿಡಿದಂತವರು. ದೇಶದಲ್ಲಿ ಪ್ರಜಾಸತ್ಯವನ್ನು ಹಾಗೂ ಜಾತ್ಯತೀತ ತತ್ವವನ್ನು ಬಲಪಡಿಸಲು ನಿರಂತರ ಹೋರಾಟವನ್ನು ಮಾಡುತ್ತಿದ್ದರು. ಪೀಸ್ ಆಂಡ್ ಜಸ್ಟೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಜಸ್ಟೀಸ್.ಸಾವಂತ್ ಹಾಗೂ ಜಸ್ಟೀಸ್. ಕೊಲ್ಸೇ ಪಾಟಿಲ್ ರವರ ನೇತೃತ್ವದಲ್ಲಿ ಭಾರತದ್ಯಾಂತ ನಿರಂತರ ಶೋಷಿತ ಜನವರ್ಗಗಳ ಐಕ್ಯತೆ ಹಾಗೂ ಪ್ರಜಾಸತ್ಯ ಉಳಿವಿಗಾಗಿ ಮತ್ತು ಶಾಂತಿ ಸೌರ್ಹದತೆಗಾಗಿ ಸಂಚರಿಸುತ್ತಿದ್ದರು. ಎಲ್ಲಾ ಧರ್ಮ ಗ್ರಂಥಗಳ ಅಗಾಧ ಪಾಂಡಿತ್ಯವಿರುವ ಸಜ್ಜಾದ್ ನೊಮಾನಿಯವರನ್ನು ಇವತ್ತು ಒಂದು ವ್ಯವಸ್ಥಿತ ಷಡ್ಯಂತರದ ಭಾಗವಾಗಿ ಅವರ ಮೇಲೆ ಸುಳ್ಳು ದೂರಿನ ಆಧಾರದ ಮೇಲೆ ಮೊಕದ್ದಮೆಯನ್ನು ದಾಖಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.*

  *ನಂತರ ಮುಂದುವರಿದು ಮಾತನಾಡುತ್ತ ಈ ಹಿಂದೆ ಇದೇ ರೀತಿ ಭೀಮ್ ಆರ್ಮಿ ಚಂದ್ರಶೇಖರ್ ಆಝಾದ್, ವಿಧ್ಯಾರ್ಥಿ ನಾಯಕ ಕನಯ್ಯ ಕುಮಾರ್, ಮೌಲನಾ ಝಾಕೀರ್ ನಾಯ್ಕ್, ಕೇರಳದ ಅಬ್ದುಲ್ ನಾಸೀರ್ ಮದನಿ ಇವರೆಲ್ಲರ ವಿರುದ್ಧ ಸುಳ್ಳು ದೂರಿನ ಆಧಾರದ ಮೇಲೆ ಮೊಕದ್ದಮೆ ದಾಖಲಿಸಿರುವುದು ಒಂದು ಷಡ್ಯಂತರ ವ್ಯವಸ್ಥಿತವಾಗಿ ಜನಪರ ಹೋರಾಟಗಾರರ ಮೇಲೆ ಮತ್ತು ಧಾರ್ಮಿಕ ಮುಖಂಡರ ಮೇಲೆ ನಡೆಯುತ್ತಿರುವಂತಹದ್ದು ಅತ್ಯಂತ ಖಂಡನೀಯವಾಗಿದೆ. ಆಗಾಗಿ ಕೂಡಲೇ ಎಫ್.ಐ.ಆರ್ ನ್ನು ಹಿಂಪಡೆಯಬೇಕು ಅದೇ ರೀತಿ ಅವರಿಗೆ ನ್ಯಾಯ ಒದಗಿಸಬೇಕೆಂದು ಹಾಗೂ “ವಿ ವಿಥ್ ನೊಮಾನಿ” ಎಂಬ ಘೋಷಣೆಯಿಂದ ನೈತಿಕವಾಗಿ ಮತ್ತು ಬೆಂಬಲ ಸೂಚಿಸುವ ಮುಖಾಂತರ ಈ ಪ್ರತಿಭಟನಾ ಸಭೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಇಡೀ ದೇಶದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.*


  ಪ್ರತಿಭಟನಾ ಸಭೆಯಲ್ಲಿ ಎಸ್.ಡಿ.ಪಿ.ಐ ಮೈಸೂರು ನಗರಾಧ್ಯಕ್ಷ ಅಝಾಮ್ ಪಾಷ, ನಗರ ಕಾರ್ಯದರ್ಶಿ ಕೌಶಾನ್ ಬೇಗ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕೋಶಾಧಿಕಾರಿ ಮುಹಮ್ಮದ್ ಫಾರೂಕ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೈಸೂರು ಜಿಲ್ಲಾಧ್ಯಕ್ಷ ಅಮೀನ್ ಸೇಠ್, ಮೈಸೂರು ಆಲ್-ಇಂಡಿಯಾ ಇಮಾಮ್ ಕೌನ್ಸಿಲ್ ಅಧ್ಯಕ್ಷರಾದ ಮೌಲಾನ ಇಸ್ಮಾಯಿಲ್, ಮೈಸೂರು ಆಲ್-ಇಂಡಿಯಾ ಇಮಾಮ್ ಕೌನ್ಸಿಲ್ ಕಾರ್ಯದರ್ಶಿಯಾದ ಮೌಲಾನ ಮುದಶ್ಸೀರ್, ಮೈಸೂರು ಆಲ್-ಇಂಡಿಯಾ ಇಮಾಮ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲನಾ ಅಬ್ದ್ರುಹ್‍ಮಾನ್ ಇರಾನಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

  • Comments Off on ಮೌಲನಾ ಸಜ್ಜಾದ್ ನೊಮಾನಿ ವಿರುದ್ಧ ಸುಳ್ಳು ಮೊಕದ್ದಮೆ ಖಂಡನೀಯ- ಅಬ್ದುಲ್ ಮಜೀದ್.
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.