07:39 pm Tuesday, June 25, 2019
 • ಮುಖ್ಯಮಂತ್ರಿಯಾದರೆ ದ.ಕ.ಜಿಲ್ಲೆಗೆ ಪ್ರಥಮ ಪ್ರಾಶಸ್ತ್ಯ: ಹೆಚ್.ಡಿ.ಕುಮಾರಸ್ವಾಮಿ

  By admin - Wed Mar 07, 5:41 pm

  • Comments Off on ಮುಖ್ಯಮಂತ್ರಿಯಾದರೆ ದ.ಕ.ಜಿಲ್ಲೆಗೆ ಪ್ರಥಮ ಪ್ರಾಶಸ್ತ್ಯ: ಹೆಚ್.ಡಿ.ಕುಮಾರಸ್ವಾಮಿ
  • 0 views

   

   

   

   

   

   

   

   

  *ಜನರ ಅಭಿಪ್ರಾಯ ಪಡೆದೇ ಸರಕಾರಗಳು ಕಾರ್ಯಾಚರಿಸುವಂತಾಗಬೇಕು.*

  ➖➖➖➖➖➖➖➖➖➖➖

  *ಪ್ರಜಾಪ್ರಭುತ್ವ ವೇದಿಕೆ ವತಿಯಿಂದ ಮಂಗಳೂರು ಹೋಟೆಲ್ ಗೇಟ್ ವೇ ಯಲ್ಲಿ,ಧಾರ್ಮಿಕ, ಸಾಮಾಜಿಕ ಮುಖಂಡರೊಂದಿಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರ ಸಂವಾದ ಕಾರ್ಯಕ್ರಮ ಆಹ್ವಾನಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಮೊನ್ನೆ ಮಂಗಳವಾರ ನಡೆದಿತ್ತು.*
  *ಕರ್ನಾಟಕದ ಆಡಳಿತ ಯಾವ ರೀತಿ ಇರಬೇಕು ಎಂಬ ಬಗ್ಗೆ ಮುಕ್ತ ಮಾತುಕತೆ ನಡೆಸುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶವಾಗಿತ್ತು.*
  *ಏನಾದರೂ ವಿಶೇಷ ಕಾರ್ಯಕ್ರಮಗಳಿದ್ದರೆ ನನ್ನನ್ನು ಆಹ್ವಾನಿಸುವ ಆತ್ಮೀಯರಾದ ಮಂಗಳೂರು ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್ ಸಲಹೆಗಾರರಾದ ರಫೀಖ್ ಮಾಸ್ಟರ್ ಪ್ರೀತಿಯಿಂದ ಆಹ್ವಾನಿಸಿದಾಗ ನಾನು ಕಾರ್ಯಕ್ರಮಕ್ಕೆ ಹೋಗಿದ್ದೆ.*
  *ಸಮಾರಂಭಕ್ಕೆ ಆಗಮಿಸಿದವರೆಲ್ಲ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆಯ ಕನಸು ಹೊತ್ತು ಬಂದಿದ್ದರು.*
  *ಮೊದಲನೆಯಾದಾಗಿ ತಮ್ಮ ಅಭಿಪ್ರಾಯ ಮಂಡಿಸಿದ ಮಂಗಳೂರಿನ ಖ್ಯಾತ ವೈದ್ಯರಾದ ಡಾ.ಶಾಂತಾರಾಮ ಶೆಟ್ಟಿ, ನಾಡಿನ ಒಳಿತಿಗೆ ಒಬ್ಬ ಜನಪ್ರತಿನಿಧಿ ಹೇಗೆ ಪ್ರಯತ್ನಿಸಬೇಕೆಂಬುದರ ಬಗ್ಗೆ ಮನಮುಟ್ಟುವಂತೆ ವಿವರಿಸಿದರು.*
  *ಮಂಗಳೂರು ಚರ್ಚ್ ನ ಧರ್ಮಗುರುಗಳು ತಮ್ಮ ಅಭಿಪ್ರಾಯ ಮಂಡಿಸಿ “ನಾವು ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿ ಸರ್ವ ಜನ ಬಾಂಧವರಿಗೆ ಬೇಕಾಗಿ ದುಡಿಯುವವರು, ನಮ್ಮ ಮೇಲೇಕೆ ದಾಳಿ,ವೈಷಮ್ಯ ಎಂದು ಆತಂಕ ವ್ಯಕ್ತಪಡಿಸಿದರು.*
  *ಮುಸ್ಲಿಂ ವಿದ್ವಾಂಸರಾದ ಯು.ಕೆ.ಅಬ್ದುಲ್ ಅಝೀಝ್ ದಾರಿಮಿಯವರು” ಮುಸ್ಲಿಮರು ಈ ನೆಲದೊಂದಿಗೆ ಕರುಳು ಬಳ್ಳಿಯ ಸಂಬಂಧವಿರುವವರು. ನಮ್ಮ ಮದ್ರಸಗಳ ಮೇಲೇಕೆ ಭಯೋತ್ಪಾದನೆಯ ಆರೋಪ ಎಂದು ಪ್ರಶ್ನಿಸಿ ಇತಿಹಾಸದ ವಿವಿಧ ಮಗ್ಗುಲುಗಳತ್ತ ಬೆಳಕು ಚೆಲ್ಲಿದರು.*
  *ಇನ್ನೋರ್ವ ಮುಸ್ಲಿಂ ವಿದ್ವಾಂಸ ಶಾಫಿ ಸ ಅದಿ ಬೆಂಗಳೂರು ರವರು ವಿವಿಧ ಸಮುದಾಯಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.*
  *ಹಲವಾರು ಮಂದಿ ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹೆಚ್.ಡಿ.ಕುಮಾರಸ್ವಾಮಿ ಯವರ ಮುಂದೆ ಮಂಡಿಸಿ* *ನಾಡಿನ ಅಭಿವೃದ್ಧಿಗಿರುವ*
  *ನಾನಾ ಮಗ್ಗುಲುಗಳನ್ನು ತೆರೆದಿಟ್ಟರು.*
  *ಇದಕ್ಕೆ ಉತ್ತರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಗಳು ” ತನಗೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಹಲವಾರು ಕನಸುಗಳಿದ್ದು ತಾನು ಮುಖ್ಯಮಂತ್ರಿಯಾದರೆ ದ.ಕ.ಜಿಲ್ಲೆಗೆ ಪ್ರಥಮ ಪ್ರಾಶಸ್ತ್ಯ ನೀಡುವ ಮೂಲಕ ಜನಪರ ಆಡಳಿತ ನೀಡುತ್ತೇನೆಂದು ಹೇಳಿದರು.*
  *ಮುಖ್ಯಮಂತ್ರಿ ಯಾಗುವವರು ಕೇವಲ ಜನಸೇವಕರಾಗಿದ್ದು ನಿಜವಾದ ಮುಖ್ಯಮಂತ್ರಿ ಗಳು ಕರ್ನಾಟಕದ ಆರುವರೆ ಕೋಟಿ ಜನರು ಎನ್ನುವ ವಿನಯದ ಮಾತುಗಳನ್ನಾಡುವ ಮೂಲಕ ನೆರೆದವರ ಪ್ರಶಂಸೆಗೆ ಹೆಚ್.ಡಿ.ಕುಮಾರಸ್ವಾಮಿ ಪಾತ್ರರಾದರು.*
  *ರಾಜಕಾರಣಿಗಳಿಗೆ ಭರವಸೆ ನೀಡುವುದು ಒಂದು ಹವ್ಯಾಸವಾದರೂ ಪಕ್ಷಾತೀತವಾಗಿ‌ ನಡೆದ ಪ್ರಸ್ತುತ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾದ ಅಭಿಪ್ರಾಯಗಳಂತೆ ಯಾವನೇ ಒಬ್ಬ ಮುಖ್ಯಮಂತ್ರಿ ಆಡಳಿತ ನಡೆಸಿದರೂ ಕರ್ನಾಟಕದಲ್ಲಿ ಸಮಸ್ಯೆಗಳೇ ಇರದು ಎಂಬುದು ಈ ಕಾರ್ಯಕ್ರಮದ ಮೂಲಕ ಸ್ಪಷ್ಟವಾಯಿತು.*
  *ವರ್ತಮಾನ ಸನ್ನಿವೇಶದಲ್ಲಿ ಜೆಡಿಎಸ್ ರಾಜ್ಯದಲ್ಲಿ ಸೊರಗಿದಂತೆ ಕಾಣುತ್ತಿದೆ.*
  *ಆದರೆ ಅನಿರೀಕ್ಷಿತವಾಗಿ ಹೆಚ್.ಡಿ.ಕುಮಾರಸ್ವಾಮಿ ಯವರು ಮುಖ್ಯಮಂತ್ರಿ ಯಾದರೆ ತಾನು ನೀಡಿರುವ ಭರವಸೆಗಳನ್ನು ಬಹುತೇಕ ಈಡೇರಿಸುವಲ್ಲಿ ಯಶಸ್ವಿಯಾಗುವರು.*
  *ಎಲ್ಲಾ ರಾಜಕೀಯ ನಾಯಕರುಗಳು ಕೂಡ ಇಂಥಾ ಪಕ್ಷಾತೀತ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಅಭಿಪ್ರಾಯ ಕೇಳಿ ಆಡಳಿತ ನಡೆಸುವಂತಾದರೆ ರಾಜ್ಯ ಅಭಿವೃದ್ಧಿಯ ಉತ್ತುಂಗ ಶಿಖರ ತಲುಪುವುದರಲ್ಲಿ ಸಂದೇಹವಿಲ್ಲ.*

  ✍🏻 *ಕೆ.ಎ.ಅಬ್ದುಲ್ ಅಝೀಝ್ ಪುಣಚ*

  🔴🔴🔴🔴🔴🔴🔴🔴🔴🔴🔴

  • Comments Off on ಮುಖ್ಯಮಂತ್ರಿಯಾದರೆ ದ.ಕ.ಜಿಲ್ಲೆಗೆ ಪ್ರಥಮ ಪ್ರಾಶಸ್ತ್ಯ: ಹೆಚ್.ಡಿ.ಕುಮಾರಸ್ವಾಮಿ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.