02:58 am Friday, June 21, 2019
 • ಸರ್ವಜ್ನ ನಗರ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಸ್ಪರ್ಧಿಸುತ್ತಿದ್ದಾರೆ

  By admin - Sun Feb 18, 10:27 am

  • Comments Off on ಸರ್ವಜ್ನ ನಗರ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಸ್ಪರ್ಧಿಸುತ್ತಿದ್ದಾರೆ
  • 0 views

  ಸರ್ವಜ್ನ ನಗರ ವಿಧಾನ ಸಭಾ ಕ್ಷೇತ್ರದ ಮತದಾರರಲ್ಲಿ ಎಸ್.ಡಿ.ಪಿ.ಐ ಪಕ್ಷದ ವಿನಂತಿ.

  ಕರ್ನಾಟಕ ವಿಧಾನ ಸಭೆಗೆ ಮತ್ತೊಮ್ಮೆ ಚುನಾವಣೆ ಬರುತ್ತಿದೆ. ಸ್ವತಂತ್ರ ಭಾರತದಲ್ಲಿ ನೂರಾರು ಬಾರಿ ನಾವು ಮತ ನೀಡಿ ನಮ್ಮ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದೇವೆ. ಆದರೆ ಬಡವರ ಮತ್ತು ಮಧ್ಯಮ ವರ್ಗಗಳ ಜೀವನ ಮಟ್ಟದಲ್ಲಿ ಯಾವುದೇ ಅಭಿವ್ರದ್ಧಿಯಾಗಿಲ್ಲ. ಹಸಿವು, ನಿರುದ್ಯೋಗ, ಬಡತನ, ಭ್ರಷ್ಟಾಚಾರ, ಅನಾರೋಗ್ಯ, ಕೋಮುವಾದ, ಜಾತಿವಾದ, ಭಾಷಾ ವೈಷಮ್ಯ, ಅಸಮಾನತೆ ಮೊದಲಾದ ನೂರಾರು ಸಮಸ್ಯೆಗಳಿಂದ ದೇಶ ತತ್ತರಿಸುತ್ತಿದೆ. ಅಂಬೇಡ್ಕರ್‌ರವರು ಕೊಟ್ಟ ಸಂವಿಧಾನದ ಆಶಯಗಳಾದ ಸಮಾನತೆ, ಜಾತ್ಯಾತೀತತೆ, ಸೌಹಾರ್ದತೆ ಮೊದಲಾದ ಆಶಯಗಳನ್ನು ಅನುಷ್ಠಾನ ಮಾಡಲು ನಮ್ಮನ್ನು ಆಳಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷವು ವಿಫಲವಾಗಿದೆ.

  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ 2009 ರಲ್ಲಿ ಸ್ಥಾಪಿಸಿದ ರಾಷ್ಟ್ರ ಮಟ್ಟದ ರಾಜಕೀಯ ಪಕ್ಷ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು, ದೇಶದ ಎಲ್ಲಾ ಶೋಷಿತ ವರ್ಗಗಳಾದ ಬಡವರು, ದಲಿತರು, ಮಸ್ಲಿಮರು, ಕ್ರೈಸ್ತರು, ಆದಿವಾಸಿಗಳು, ಕಾರ್ಮಿಕರು, ರೈತರು, ಮಹಿಳೆಯರು ಮುಂತಾದ ಮತ್ತಿತರ ಎಲ್ಲಾ ಅವಕಾಶ ವಂಚಿತ ಜನ ಸಮುದಾಯಗಳಿಗೆ ರಾಜಕೀಯ ಅಧಿಕಾರದಲ್ಲಿ ಸಮಾನ ಪಾಲು, ದೇಶದ ಉದ್ಯೋಗ, ಭೂ ಒಡೆತನ, ಶಿಕ್ಷಣ, ಆರೋಗ್ಯ, ನೀರು, ಮೂಲಭೂತ ಸೌಕರ್ಯಗಳು ಎಲ್ಲರಿಗೂ ಹಂಚಿಕೆಯಾಗಬೇಕು. ಕೇವಲ ರಾಜಕೀಯ ಕುಟುಂಬಗಳು, ಶ್ರೀಮಂತರು, ಬಂಡವಾಳ ಶಾಹಿಗಳು, ಮೇಲ್ವರ್ಗದವರು, ಭೂಮಾಲಕರು ಅಧಿಕಾರ-ಅವಕಾಶ ಮತ್ತು ಸಂಪನ್ಮೂಲಗಳನ್ನು ಬಾಚಿಕೊಂಡಿದ್ದಾರೆ. ಈ ಅನ್ಯಾಯವನ್ನು ಶಾಶ್ವತವಾಗಿ ಹೊಗಲಾಡಿಸಬೇಕು. ದೇಶದಲ್ಲಿ ಶಾಂತಿ, ಸೌಹಾರ್ದ ಮತ್ತು ಪ್ರಗತಿಗಳಿಗೆ ಎಸ್.ಡಿ.ಪಿ.ಐ ಕಳೆದ ಒಂಬತ್ತು ವರ್ಷಗಳಿಂದ ಹೋರಾಡುತ್ತಿದೆ.

  ಬೆಂಗಳೂರಿನ ಸರ್ವಜ್ನ ನಗರದ ಜನರು ದಶಕಗಳಿಂದ ನೂರಾರು ಸಮಸ್ಯೆಗಳಿಂದ ತತ್ತರಿಸುತ್ತಿದ್ದಾರೆ. ಸ್ಲಮ್ ಅಭಿವ್ರದ್ಧಿಯಾಗಿಲ್ಲ. ರಸ್ತೆ, ನೀರು, ನೈರ್ಮಲ್ಯ, ಆರೋಗ್ಯ, ಶಿಕ್ಷಣ ಮೊದಲಾದ ಸಮಸ್ಯೆಗಳನ್ನು ಈ ವರೆಗೆ ಜನರ ಮತ ಪಡೆದು ಗೆದ್ದವರು ಈಡೇರಿಸಿಲ್ಲ. ಜನರು ಉಸಿರುಗಟ್ಟಿದ ವಾತಾವರಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು, ಅವರ ಆಪ್ತರು, ಮತ್ತು ಅವರ ಕುಟುಂಬಸ್ಥರು ಮಾತ್ರ ಸರ್ಕಾರದ ಸೌಲಭ್ಯ-ಯೋಜನೆಗಳ ಫಲ ಉನ್ನುತ್ತಿದ್ದಾರೆ. ಎಸ್.ಡಿ.ಪಿ.ಐ ಪಕ್ಷ ಕ್ಷೇತ್ರದ ಎಲ್ಲಾ ಹಿಂದೂ-ಮುಸ್ಲಿಮ್, ಕ್ರೈಸ್ತ ಸಮುದಾಯಗಳ ಬಡವರು ಮತ್ತು ಮಧ್ಯಮ ವರ್ಗಗಳ ಸಮಗ್ರ ಅಭಿವ್ರದ್ಧಿಗೆ ಪಣ ತೊಟ್ಟಿದೆ. ಎಸ್.ಡಿ.ಪಿ.ಐ ಪಕ್ಷದ ನಾಯಕರು, ಅಭ್ಯರ್ಥಿಗಳು ಮತ್ತು ಎಲ್ಲಾ ಕಾರ್ಯಕರ್ತರು ಪ್ರಾಮಾಣಿಕರು ಮತ್ತು ಎಲ್ಲಾ ಧರ್ಮದವರನ್ನು ಪ್ರೀತಿಸುವವರು ಮತ್ತು ರಾತ್ರಿ-ಹಗಲು ಸಾಮಾಜಿಕ ಸೇವೆ ಹೋರಾಟದಲ್ಲಿ ನಿರತರಾಗಿದ್ದಾರೆ. ಇಂತಹ ನಿಸ್ವಾರ್ಥ ಪರ್ಯಾಯ ನಾಯಕರಿಗೆ ನಿಮ್ಮ ಮತ, ಬೆಂಬಲ ಬೇಕಿದೆ.

  ಸರ್ವಜ್ನ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರು ಸ್ಪರ್ಧಿಸುತ್ತಿದ್ದಾರೆ. ಇವರನ್ನು ಪ್ರಚಂಡ ಬಹುಮತದಲ್ಲಿ ಮತ ನೀಡಿ ವಿಧಾನ ಸಭಕ್ಕೆ ಕಳುಹಿಸಕೊಡಬೇಕಾಗಿ ಕ್ಷೇತ್ರದ ಎಲ್ಲಾ ಹಿಂದೂ, ಮುಸ್ಲಿಮ್, ಕ್ರೈಸ್ತ ಸಮುದಾಯದೊಂದಿಗೆ ವಿನಂತಿಸುತ್ತಿದ್ದೇವೆ. ಇಂತಹ ಪ್ರಾಮಾಣಿಕ ಜನ ನಾಯಕರು ಶಾಸಕರಾದರೆ ಖಂಡಿತವಾಗಿಯೂ ಕ್ಷೇತ್ರದಲ್ಲಿ ಸಮಗ್ರವಾದ ಬದಲಾವಣೆ ಮತ್ತು ಹೊಸ ಅಭಿವ್ರದ್ಧಿ ಸಾಧ್ಯ.

  • Comments Off on ಸರ್ವಜ್ನ ನಗರ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಸ್ಪರ್ಧಿಸುತ್ತಿದ್ದಾರೆ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.