07:29 pm Tuesday, June 25, 2019
 • ಸಮುದಾಯಪ್ರೇಮಿ ಹಾಜಿ ಹಮೀದ್ ಕಂದಕ್ ರನ್ನು ಸಮುದಾಯ ಕಳಕೊಂಡಿದೆ.

  By admin - Thu Jan 25, 7:21 am

  • Comments Off on ಸಮುದಾಯಪ್ರೇಮಿ ಹಾಜಿ ಹಮೀದ್ ಕಂದಕ್ ರನ್ನು ಸಮುದಾಯ ಕಳಕೊಂಡಿದೆ.
  • 0 views

  ಹಾಜಿ ಅಬ್ದುಲ್ ಹಮೀದ್ ಕಂದಕ ರವರ ಮರಣ :ಮುಸ್ಲಿಮ್ ಒಕ್ಕೂಟ ಸಂತಾಪ :
  ಹಾಜಿ ಕಂದಕ್ ರವರು ನಿನ್ನೆ ಅಪರಾಹ್ನ ಸಭಾ ಕಾರ್ಯಾಕ್ರಮ ವೊOದರಲ್ಲಿ ಮಾತನಾಡುತ್ತಿರುವಾಗ ಕುಸಿದುಬಿದ್ದು ಮೃತಪಟ್ಟಿರುತ್ತಾರೆ.ಈ ಬಗ್ಗೆ ಸಂತಾಪ ಸಲ್ಲಿಸುತ್ತದೆ
  ಮೃತ ಕಂದಕರವರು ವೋರ್ವ ಸಮುದಾಯದ ಮುಂದಾಳು ನಾಯಕರಾಗಿದ್ದರು.ಅಹ್ಲು ಸುನ್ನತ್ ಜಮಾತ್ ನ ವಿವಿದ ಸಂಘಟನೆಗಳ್ಳ ಸ್ತಾಪರಾಗಿದ್ದ ಅ ವರು ಒಕ್ಕೂಟದೊOದಿಗೆ ಗುರುತಿಸಿಕೊಂಡಿದ್ದರು.ಒಕ್ಕೂಟದ ಹಲವು ಕಾರ್ಯಕ್ರಮಗಲಲ್ಲಿ ಭಾಗವಹಿಸಿ ನಿಲುವು ವ್ಯಕ್ತ ಪಡಿಸಿದ್ದರು.ಅವರ ಮರಣ ಮುಸ್ಲಿಮ್ ಸಮುದಾಯಕ್ಕೆ ತುOಬಲಾರದ ನಷ್ಟವಾಗಿದೆ.
  ಕುಟುOಬಕ್ಕೆ ಮತ್ತು ಸಮುದಾ
  ಯಕ್ಕೆ ಅವರ ವಿಯೋಗ ವನ್ನು ತಡೆಯುವ ಶಕ್ತಿ ಯನ್ನು ಅಲ್ಲಾಹ್ ಕರುಣಿಸಲಿ ಎಂದು ಪ್ರಾರ್ತಿಸೋಣ.ಮಯ್ಯತ್ ಇಂದು ಅಸರ್ರ್ ಗೆ ಉಳ್ಳಾಲ ದರ್ಗಾ ಮಸೀದಿ ಯಲ್ಲಿ ದಫನ ಗೊಳಿಸಲಾಗುತ್ತದೆ.ಸರ್ವರು ಅವರ ಮಗ್ಫರತಗಾಗಿ ದುವಾಮಾಡಲು ಒಕ್ಕೂಟದ ಅದ್ಯಕ್ಷರಾದ ಕೆ .ಅಶ್ರಫ್ ರವರು ಸರ್ವ ಭಾಂದವರಲ್ಲಿ ವಿನOತಿಸಿರುತ್ತಾರೆ.

  Zzzzxxxzzxxxxxxxxxxxxx

  *ಹಮೀದ್ ಕಂದಕ್ ಅಂತ್ಯಸಂಸ್ಕಾರದಲ್ಲಿ ಸರ್ವರೂ ಭಾಗವಹಿಸಿ: ಮುಹಮ್ಮದ್ ಮಸೂದ್ ಮನವಿ*
  ಸಹ್ರದಯಿ ಸಮುದಾಯಪ್ರೇಮಿ ಹಾಜಿ ಹಮೀದ್ ಕಂದಕ್ ರನ್ನು ಮುಸ್ಲಿಮ್ ಸಮುದಾಯ ಕಳಕೊಂಡಿದೆ. ಸಾಮುದಾಯಿಕ ಐಕ್ಯ ಮತ್ತು ಸಮುದಾಯ ಸಬಲೀಕರಣ ಎಂಬುದು ಅವರ ಕನಸಾಗಿತ್ತು. ಅದರ ಸಾಕಾರಕ್ಕಾಗಿ ಹಲವು ವೇದಿಕೆಗಳಲ್ಲಿ ಹಲವು ಸಂಘಟನೆಗಳೊಂದಿಗೆ ಅವರು  ದುಡಿದಿದ್ದಾರೆ. ದ. ಕ. ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯಲ್ಲಿ 10 ವರ್ಷಗಳ ಕಾಲ  ಉಪಾಧ್ಯಕ್ಷ ರಾಗಿ ಸೇವೆ ಸಲ್ಲಿಸಿರುವುದು ಇದಕ್ಕೆ ಒಂದು ಉದಾಹರಣೆ ಮಾತ್ರ. ನಾಳೆ ಅಸರ್ ನಮಾಝ್ ನ ಬಳಿಕ ಉಳ್ಳಾಲದ ಸೈಯದ್ ಮದನಿ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಅವರ ಅಂತ್ಯಸಂಸ್ಕಾರ ಕಾರ್ಯ ನೆರವೇರಲಿದೆ. ಸಮುದಾಯದ ಎಲ್ಲರೂ ಎಲ್ಲ ಸಂಘಟನೆಗಳ ಜನರೂ ಈ ಸಂದರ್ಭದಲ್ಲಿ ಹಾಜರಿದ್ದು ಸಾಕ್ಷಿಗಳಾಗಬೇಕೆಂದೂ ಅವರ ಮಗ್ಫಿರತ್ ಗಾಗಿ ಪ್ರಾರ್ಥಿಸಬೇಕೆಂದೂ ದ. ಕ.ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ. ಎಸ್. ಮುಹಮ್ಮದ್ ಮಸೂದ್ ವಿನಂತಿಸಿದ್ದಾರೆ.

  Zzzzxxxxxxxxxx

   

  ರಾಜಕೀಯದಲ್ಲಿ ಯಶಸ್ವಿಕಾಣದ ಹಮೀದ್ ಕಂದಕ್

  ಹಮೀದ್ ಕಂದಕ್ ಅನಿರೀಕ್ಷಿತವಾಗಿ ತೀರಿಕೊಂಡಿದ್ದಾರೆ. ಹೌದು ಅವರು ನಿನ್ನೆ ‘ಅಹಿಂದ’ ವಿಚಾರ ಸಂಕಿರಣ ನಡೆಯುತ್ತಿದ್ದಾಗ ಭಾಷಣ ಮಾಡುವಾಗಲೇ ನೆಲಕ್ಕುರುಳಿದರು, ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಕೊನೆಯುಸಿರೆಳೆದರು. ಇದು ನಿಜಕ್ಕೂ ಆಕಸ್ಮಿಕ ಘಟನೆ.

  ಇಲ್ಲಿ ಹಮೀದ್ ಕಂದಕ್ ಅವರನ್ನು ಪ್ರಸ್ತಾಪಿಸಿದ ಉದ್ದೇಶವೆಂದರೆ ಅವರು ರಾಜಕಾರಣಿಯಾಗಿ ಗುರುತಿಸಿಕೊಂಡವರು ಮಾತ್ರವಲ್ಲ, ಒಬ್ಬ ಮನುಷತ್ವ ಇದ್ದವರು ಎನ್ನುವುದೇ ಮುಖ್ಯ. ಜನತಾ ದಳ ಉಚ್ಚ್ರಾಯಸ್ಥಿತಿಯಲ್ಲಿದ್ದಾಗ ಜನಪ್ರಿಯರಾಗಿದ್ದರು. ನಾನು ಅವರನ್ನು ಕಂಡದ್ದು 1982ರಲ್ಲಿ. ನನಗೆ ತೀರಾ ಬೇಕಾದವರಾಗಿದ್ದು 1983 ರಿಂದ. ಅಂದಿನಿಂದ ಕೊನೆಯದಿನಗಳತನಕವೂ ಅದೇ ಸ್ಥಿತಿಯಲ್ಲಿದ್ದರು.
  ಬಹಳ ಮಾತುಗಾರ, ಆದರೆ ಬೇಕಾಬಿಟ್ಟಿ ಮಾತನಾಡುತ್ತಿರಲಿಲ್ಲ. ರಾಜಕೀಯವಾಗಿ, ಸಮಾಜ ಚಳುವಳಿಯ ವಿಚಾರ, ಜಾತಿ-ಧರ್ಮದ ವಿಚಾರ ಹೀಗೆ ಅವರದು ಬಹುಮುಖ ಪ್ರತಿಭೆ ಎನ್ನಬಹುದು. ಆದರೆ ಎಲ್ಲಿ ಯಾವುದನ್ನು ಮಾತನಾಡಬೇಕು ಎನ್ನುವುದು ಅವರಿಗೆ ಗೊತ್ತಿತ್ತು.

  ರಾಮಕೃಷ್ಣ ಹೆಗಡೆ, ದೇವೇಗೌಡರು ಆತ್ಮೀಯರಾಗಿದ್ದಾಗ ಹಮೀದ್ ಕಂದಕ ಕೂಡಾ ಒಬ್ಬ ರಾಜಕಾರಾಣಿಯಾಗಿ ಗುರುತಿಸಿಕೊಂಡು ಜಿಲ್ಲೆಯ ಮೂಲೆ ಮೂಲೆಗಳನ್ನು ಅವರೊಂದಿಗೆ ತಿರುಗಿದವರು. ಜಿಲ್ಲೆಯಲ್ಲಿ ಜನತಾ ದಳ ರಾಜ್ಯ ಸಂಘವಾಗಿ, ಜಿಲ್ಲಾ ಸಂಘವಾಗಿ ತಾಕಲಾಟದಲ್ಲಿದ್ದರೂ ಹಮೀದ್ ಕಂದಕ್ ಅವರು ಮಾತ್ರ ಒಂದೇ ಎನ್ನುತ್ತಿದ್ದರು. ಆಗ ನನ್ನ ನೆನಪಿದ್ದ ಹಾಗೆ ಅವರು ಹಂಪನಕಟ್ಟೆಯಲ್ಲಿರುವ ಮಾರ್ಕೇಟ್ ಬಿಲ್ಡಿಂಗ್ ನಲ್ಲಿದ್ದರು.

  ಬಿ.ಎ.ಮೊಹಿದ್ದೀನ್, ಅಮರನಾಥ ಶೆಟ್ಟಿ, ಎಂ.ಸಂಜೀವ, ಮಹಮ್ಮದ್ ಹುಸೇನ್, ಎಚ್.ರಾಮಯ್ಯ ನಾಯ್ಕ್, ಸುರೇಶ್ ಬಲ್ಲಾಳ್, ಎಂ.ಬಿ.ಸದಾಶಿವ ಹೀಗೆ ಜನತಾ ದಳ ತುಂಬಿದ್ದಾಗ ಹಮೀದ್ ಕಂದಕ್ ಕೂಡಾ ಎದ್ದುಕಾಣುತ್ತಿದ್ದರು. ಆದರೆ ಅವರು ರಾಜಕೀಯದಲ್ಲಿ ಮಹತ್ವದ ಸ್ಥಾನ ಪಡೆಯಲಿಲ್ಲ ಎನ್ನುವುದನ್ನು ಉಲ್ಲೇಖಿಸಲೇ ಬೇಕು. ಈ ಕಾರಣಕ್ಕೆ ಅವರು ಟ್ರಾವೆಲಿಂಗ್ ಆರಂಭಿಸಿ ಹೊಟ್ಟೆತುಂಬಿಸಿಕೊಳ್ಳಲು ಸ್ವಂತ ಉದ್ಯೋಗ ಹೊಂದಿ ರಾಜಕಾರಣವನ್ನು ಬದಿಗಿಟ್ಟುಕೊಂಡಿದ್ದರು.

  ನನಗೂ ಹಮೀದ್ ಕಂದಕ್ ಅವರಿಗೂ ಆತ್ಮೀಯತೆ ಇತ್ತು. ಅವರು ಆಗಾಗ ದುಬೈ, ಸೌದಿಗೆ ಹೋಗಿ ಬರುತ್ತಿದ್ದರು. ಇದು ಬಹುಷ 2002 ಇಸವಿಯ ಘಟನೆ. ಆಗ ಮೊಬೈಲ್ ಬಳಕೆ ಬಂದಿತ್ತು. ಯಾರೊಬ್ಬರ ಬಳಿ ನೋಡಿದರು ಪುಟಾಣಿ ಮೊಬೈಲ್. ಆದರೆ ನನ್ನ ಬಳಿ ಇದ್ದುದು ದೊಡ್ಡದು. ನೋಡಲು ಒಂಥರಾ ವಾಕಿಟಾಕಿ ಇದ್ದ ಹಾಗೆ ಇತ್ತು. ಅದನ್ನು ಕಿಸೆಯಲ್ಲಿ ಇಟ್ಟುಕೊಳ್ಳುವುದೇ ಸಮಸ್ಯೆಯಾಗಿತ್ತು. ಹಾಗೆಂದು ಮೊಬೈಲ್ ಬೇಡವೆನ್ನಲು ಕೂಡಾ ಆಗುತ್ತಿರಲಿಲ್ಲ.

  ಇದನ್ನು ತುಂಬಾ ಸಲ ನೋಡಿದ್ದ ಹಮೀದ್ ಕಂದಕ್ ನನಗೆ ಚಿಕ್ಕ ಮೊಬೈಲ್ ಕೊಳ್ಳಲು ಹೇಳಿದ್ದರು ಕೂಡಾ. ಆದರೆ ಚಿಕ್ಕ ಮೊಬೈಲ್ ಬೆಲೆಯನ್ನು ಪಾವತಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅವರು ಉಮ್ರಾ ಪ್ರವಾಸ ಮುಗಿಸಿ ಬಂದವರೇ ಒಂದು ದಿನ ಕನ್ನಡ ಪ್ರಭ ಕಚೇರಿಗೆ ಬಂದರು. ಅವರ ಬಳಿ ಐದು ಮೊಬೈಲ್ ಗಳು. ಅವುಗಳನ್ನು ನನ್ನ ಮುಂದೆ ಇಟ್ಟು ಇವುಗಳಲ್ಲಿ ನಿಮಗೆ ಇಷ್ಟವಾದ ಒಂದನ್ನು ಆಯ್ಕೆಮಾಡಿಕೊಳ್ಳಿ ಎಂದರು.

  ಆ ಮೊಬೈಲ್ ನೋಡಿದವರು ಖಂಡಿತಕ್ಕೂ ಬೇಡ ಎನ್ನಲು ಸಾಧ್ಯವಿಲ್ಲ ಆ ರೀತಿಯಲ್ಲಿದ್ದವು. ಆದರೆ ನಾನು ಹೇಳಿದೆ ‘ಹಮೀದ್ ತುಂಬಾ ಥ್ಯಾಂಕ್ಸ್ ಮೊಬೈಲ್ ಕೊಡುವುದಕ್ಕೆ. ಆದರೆ ಇವುಗಳಲ್ಲಿ ನನಗೆ ಒಂದೂ ಬೇಡವೆಂದೆ’. ಆಗ ಅವರು ಇದನ್ನು ನಾನು ಗಿಫ್ಟ್ ಕೊಡುತ್ತಿದ್ದೇನೆ, ತಕ್ಕೊಳ್ಳಿ ಎಂದರು. ಬೇಡ ಬೇಡ ಹಮಿದ್ ಅವರೇ ನನಗಂತೂ ಮೊಬೈಲ್ ಬೇಡವೆಂದು ಹೇಳಿದೆ. ನನ್ನ ಈ ಮಾತಿಗೆ ಅವರಿಗೆ ಒಂದು ಕ್ಷಣಕ್ಕೆ ಬೇಸರವಾಗಿರಬಹುದು ಆದರೆ ಅವರಿಗೂ ಗೊತ್ತಿತ್ತು ನಾನು ಸ್ವೀಕರಿಸುವುದಿಲ್ಲ ಎನ್ನುವುದು. ಈ ಘಟನೆಯ ನಂತರ ಅವರು ಭೇಟಿಯಾದಾಗಲೆಲ್ಲಾ ಆ ಮೊಬೈಲ್ ಬಗ್ಗೆ ಮಾತನಾಡಿ ನನ್ನನ್ನು ಛೇಡಿಸುತ್ತಿದ್ದರು.

  ಇಂಥ ವ್ಯಕ್ತಿ ಈಗ ಇಲ್ಲ, ಆದರೆ ಅವರೊಂದಿಗೆ ಇದ್ದ ಪ್ರೀತಿ, ಸ್ನೇಹ ಖಂಡಿತಕ್ಕೂ ಮರೆಯುವಂತಿಲ್ಲ. ಹಮೀದ್ ಕಂದಕ್ ಸದಾ ನೆನಪಿಗೆ ಬರುತ್ತಾರೆ.

  -ಚಿದಂಬರ ಬೈಕಂಪಾಡಿ

  • Comments Off on ಸಮುದಾಯಪ್ರೇಮಿ ಹಾಜಿ ಹಮೀದ್ ಕಂದಕ್ ರನ್ನು ಸಮುದಾಯ ಕಳಕೊಂಡಿದೆ.
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.