05:44 am Wednesday, July 24, 2019
 • ಅಂತರಾಷ್ಟ್ರೀಯ ಪ್ರಶಸ್ತಿ ಸ್ವಿಕೃತ ಐ ಜಿ ಪಿ ಹರಿಶೇಕರನ್ ಗೆ ಸನ್ಮಾನ

  By admin - Wed Jan 24, 7:47 am

  • Comments Off on ಅಂತರಾಷ್ಟ್ರೀಯ ಪ್ರಶಸ್ತಿ ಸ್ವಿಕೃತ ಐ ಜಿ ಪಿ ಹರಿಶೇಕರನ್ ಗೆ ಸನ್ಮಾನ
  • 0 views

  ಅಂತರಾಷ್ಟ್ರೀಯ ಪ್ರಶಸ್ತಿ ಸ್ವಿಕೃತ ಐ ಜಿ ಪಿ ಹರಿಶೇಕರನ್ ಗೆ ಸನ್ಮಾನ

  ಬೆಂಗಳೂರು : ಅಂತರಾಷ್ಟ್ರೀಯ ಕಾನೂನು ಅನಿಷ್ಟಾನಕ್ಕೆ ಸಂಭದಿಸಿದಂತೆ ಅಮೇರಿಕನ್ ದೂತವಾಸದಿಂದ ಪ್ರಶಸ್ತಿ ಪಡೆದಿರುವ ಬೆಂಗಳೂರು ಐ ಜಿ ಪಿಯಾದ ಹರಿಶೇಕರನ್ ರವರನ್ನು ಮಾ ಜಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

  ಮುಂಬಯಿಯ ಲೀಲಾದಲ್ಲಿ ಇತ್ತೀಚಿಗೆ   ಕೆ.ಕೆ. ಪೌಂಡೆಷನ್  ಹರಿಶೇಕರನ್ ಪ್ರಶಸ್ತಿ ಪಡೆದಿದ್ದರು.  ನಗರದ ಖಾಸಗಿ ಹೋಟೆಲ್‍ನಲ್ಲಿ  ಮಾ ಚಾರಿಟೇಬಲ್ ಟ್ರಸ್ಟ್ (ಎನ್.ಜಿ.ಓ) ನ ವತಿಯಿಂದ ಸನ್ಮಾನಿಸಲಾಯಿತು.

  ಸನ್ಮಾನ ಸ್ವೀಕರಿಸಿ ಮಾತನಾಡಿದ ಹರಿಶೇಖರನ್ ರವರು ಪ್ರಶಸ್ತಿ ಪಡೆದುಕೊಂಡ ಮೇಲೆ ನನಗೆ ಜವಬ್ದಾರಿ ಹೆಚ್ಚಾಗಿದೆ. ಸಮಾಜಕ್ಕೆ ನನ್ನ ಕೊಡುಗೆ ಏನಾದರೂ ಕೊಡಬೇಕೆಂದು  ಕರ್ತವ್ಯ ನಿರ್ವಹಿಸುತ್ತೀದ್ದೇನೆ .   ನನ್ನ ನಿವೃತ್ತಿಯ ಒಳಗಾಗಿ  ಸಮಾಜದಲ್ಲಿ ನೆಡೆಯುತ್ತಿರುವ  ಕ್ರೈಮ್‍ಗಳನ್ನು  ಮಟ್ಟ ಹಾಕಿ ಸಮಾಜದಲ್ಲಿ ಶಾಂತಿ ನೆಲೆಸಿ ಶಾಂತ ಸಮಾಜವನ್ನು ನೋಡುವ ಕನಸು ಹೊಂದ್ದಿದ್ದೇನೆ. ನಾನು ನನ್ನ ಶಕ್ತಿ ಮೀರಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.

  ಈಗಾಗಲೇ ನಾನು  ಕರ್ತವ್ಯ ನಿರ್ವಹಿಸುತ್ತಿರುವ ಕಡೆಯಲೆಲ್ಲ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ . ಇದರ ಬಗ್ಗೆ ಸಮಾಧಾನ ಕೂಡ ನನಗೆ ಇದೆ .  ಸಮಾಜದ ನೆಮ್ಮದಿಗಾಗಿ ಹಗಲು ಇರುಳು ಎನ್ನದೆ ಕೆಲಸ ಮಾಡಲು ಸಿದ್ದನಿದ್ದೇನೆ ಎಂದರು . ಜನಸಾಮಾನ್ಯರು ಪೋಲಿಸರ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ . ನಿಮ್ಮ ಯಾವುದೇ ದೂರುಗಳಿದ್ದರೆ ಸಂಬಂದ ಪಟ್ಟ ಪೋಲಿಸ್ ಠಾಣೆಗೆ ದೂರು ನೀಡಿ ಅಧಿಕಾರಿಗಳು ನಿಮಗೆ ಸ್ಪಂದಿಸದಿದ್ದರೆ ನಮಗೆ ಬಂದು ತಿಳಿಸಬಹುದು. ಆ ಕೂಡಲೇ ಸಂಬಂದ ಪಟ್ಟ  ಇಲಾಖೆಯವರು  ಅಧಿಕಾರಿಗಳ ಮೇಲೆ  ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ  ಎಂದರು. ಈ ಕಾರ್ಯಕ್ರಮದಲ್ಲಿ ಈ ಟ್ರಸ್ಟನ ಅಧ್ಯಕ್ಷರಾದ  ಚಂದ್‍ಪಾಷಾ , ಬಿ.ಬಿ.ಎಂ.ಪಿ. ವಿರೋಧ ಪಕ್ಷದ ನಾಯಕ ಉದಯಶಂಕರ್ ,   ರಾಜ್ಯ ಗುಪ್ತವಾರ್ತೆ ಎಸ್ಪಿ, ಮಧುರ ವೀಣಾ,  ಕಾಂಗ್ರೇಸ್ ಮುಖಂಡ ಇಮ್ತೀಯಾಜ್ ಪಾಷಾ ,  ಹಾಗೂ ಸಮೀರ್ ಮಂಡ್ಯ ನವೀನ್ ಕುಮಾರ್  ಉಪಸ್ಥಿತರಿದ್ದರು.

  • Comments Off on ಅಂತರಾಷ್ಟ್ರೀಯ ಪ್ರಶಸ್ತಿ ಸ್ವಿಕೃತ ಐ ಜಿ ಪಿ ಹರಿಶೇಕರನ್ ಗೆ ಸನ್ಮಾನ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.