07:16 pm Thursday, March 21, 2019
  • ಬಹುಶಃ ಇದು ನನ್ನ ಕೊನೆಯ ಫೈಟ್ :ಹೆಚ್.ಎಸ್.ದೊರೆಸ್ವಾಮಿ,

    By admin - Fri Jan 12, 9:08 am

    • Comments Off on ಬಹುಶಃ ಇದು ನನ್ನ ಕೊನೆಯ ಫೈಟ್ :ಹೆಚ್.ಎಸ್.ದೊರೆಸ್ವಾಮಿ,
    • 0 views

    ಡೂ ಆರ್ ಡೈ ಹೋರಾಟ ಮಾಡೋಣ. ನಮ್ಮ ಹಕ್ಕುಗಳನ್ನು ಪಡೆಯೋಣ.

    _ ಎಸ್.ಆರ್. ಹಿರೇಮಠ್, ಜನಸಂಗ್ರಾಮ್ ಪರಿಷತ್,
    75 ಸಾವಿರ ಎಕರೆ ಅರಣ್ಯ ಭೂಮಿಯನ್ನು ಬಿರ್ಲಾಗೆ ಕೊಟ್ಟಿದಾರೆ. ಬಡವರಿಗೆ ಸಣ್ಣ ಮನೆ ನೀಡಲು ಸರ್ಕಾರಕ್ಕೆ ಸಾಧ್ಯವಾಗ್ತಿಲ್ಲ. ಕೊಟ್ಟ ಭರವಸೆಯನ್ನು ಈಡೇರಿಸುತ್ತಿಲ್ಲ. ಕರಾಳ ಕಾನೂನುಗಳು ಜಾರಿಯಾಗುತ್ತಲೇ ಇವೆ.

    ಭೂಗಳ್ಳರ ಮೇಲೆ ತಡೆಯಾಜ್ಞೆ ತಂದಿದ್ದೆವೆ. ಅದನ್ನು ತಿದ್ದುಪಡಿ ಮಾಡಿ ಮತ್ತೆ 7500 ಎಕರೆಯನ್ನು  ಸುಪ್ರೀಂಕೋರ್ಟು ಕೊಟ್ರು. ಆಗ ಗಂಭೀರ ಪ್ರಶ್ನೆ ನಮ್ಮೆದುರು ಬಂತು, ಸುಪ್ರಿಂಕೋರ್ಟಗೂ ಮೀರಿದ್ದು ಯಾವುದಿದೆ?

    ಅಂದೇ ತೀರ್ಮಾನ ಮಾಡಿದ್ದೇವೆ, ಈ ನಾಲಾಯಕ್, ಬದ್ಮಾಶ್ ಭೂಗಳ್ಳರಿಗೆ  ಒಂದಿಂಚು ಜಮೀನು ಸಿಗಬಾರದೆಂದು ತೀರ್ಮಾನಿಸಿದ್ದೇವೆ. ಕಾರ್ಯಪ್ರವೃತ್ತರಾಗಿದ್ದೇವೆ.

    ಹೋರಾಟಗಾರರು ಆತ್ಮಾವಲೋಕನ ಮಾಡಿಕೊಳ್ಳಬೇಕು, ಜನವಿರೋಧಿ ಜೆಸಿಬಿ ಪಕ್ಷಗಳು, ಈ ಮೂರು ಪಕ್ಷಗಳನ್ನು ಅಳಿಸಿ ಜನಪರ್ಯಾಯ ಚಳವಳಿಯನ್ನು/ರಾಜಕಾರಣವನ್ನು ಮಾಡಬೇಕಿದೆ. ಅಕ್ರಮಗಳಿಗೆ, ಅವ್ಯವಹಾರಗಳಿಗೆ ಕಡಿವಾಣ ಹಾಕಲೇಬೇಕಿದೆ.

    ರಾಜಕಾರಣಿಗಳು ಪ್ರಜಾಪ್ರಭುತ್ವದಲ್ಲಿ ಉದ್ಧಟತನ ಮಾಡುತ್ತಿದ್ದಾರೆ. ಯುವಕರು ಹೋರಾಟಕ್ಕೆ ಧುಮಕಬೇಕಿದೆ. ಎಲ್ಲ ಭೂಮಿಗಳನ್ನು ಕಾರ್ಪೋರೆಟ್‍ಗಳಿಗೆ ಧಾರೆ ಎರೆಯುತ್ತಿದ್ದಾರೆ. ಹೋರಾಟಗಳು ದಂತಕಥೆಗಳಲ್ಲ, ಜನಜೀವನದ ಆತ್ಮಗಳು, ಇವನ್ನು ಮರೆಯದಿರೋಣ. ನಿಮ್ಮ ಹೆಸರಿನಲ್ಲಿ ಗೆದ್ದವರು, ಸಾರ್ವಜನಿಕರ ಸೇವಕರನ್ನು ನಿಯಂತ್ರಿಸುವ ಬಗೆಯನ್ನು ಹೋರಾಟಗಳು ಕಲಿಸುವ ಅವಶ್ಯಕತೆ ಇದೆ. ಡೂ ಆರ್ ಡೈ ಹೋರಾಟ ಮಾಡೋಣ. ನಮ್ಮ ಹಕ್ಕುಗಳನ್ನು ಪಡೆಯೋಣ.

    – ಎಸ್.ಆರ್. ಹಿರೇಮಠ್, ಜನಸಂಗ್ರಾಮ ಪರಿಷತ್

    ಸರ್ಕಾರವೆಂಬ ಬೆಕ್ಕಿಗೆ ನಾವೇ ಗಂಟೆ ಕಟ್ಟಬೇಕಿದೆ.

    ಮಾಲಿ ಪಾಟೀಲ್, ಜನಸಂಗ್ರಾಮ್ ಪರಿಷತ್,

    ಬಾಬಾ ಸಾಹೇಬರ ರಚಿತ ಸಂವಿಧಾನ ನಮಗೆ ಹಕ್ಕುಗಳನ್ನು ಖಾತ್ರಿ ಪಡಿಸಿದೆ.

    ನಾಚಿಕೆ ಇಲ್ಲದೇ ಮತ ಕೇಳಲು ಮನೆ ಬಾಗಿಲಿಗೆ ಬರ್ತಾರೆ, ಸಮಸ್ಯೆಗಳನ್ನು ಆಲಿಸಲು ರಾಜಕಾರಣಿಗಳು ಕೈಗೆ ಸಿಗಲ್ಲ ಯಾಕೆ. ಹಕ್ಕುಗಳನ್ನು ಕೇಳದೇ ನಾವು ಸುಮ್ಮನೇ ಕೂತಿದ್ದೇವೆ. ಹಂಚಿಕೆಯಾಗಬೇಕಾದ ಮನೆಗಳನ್ನು ಹಿಂಬಾಲಕರಿಗೆ ಹಂಚಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಸರ್ಕಾರವೆಂಬ ಬೆಕ್ಕಿಗೆ ನಾವೇ ಗಂಟೆ ಕಟ್ಟಬೇಕಿದೆ. ನಾವೆಲ್ಲ ಒಗ್ಗಟ್ಟಾಗಿ ಹೋರಾಡೋಣ. ಈ ಹೋರಟಕ್ಕೆ ಸಂಪೂರ್ಣ ಬೆಂಬಲವನ್ನು ಜನಸಂಗ್ರಾಮ ಪರಿಷತ್ ಘೋಷಿಸುತ್ತದೆ.
    ನಮ್ಮ ಹಕ್ಕುಗಳನ್ನು ಕಳೆದುಕೊಳ್ಳಲು ನಾವೇ ಕಾರಣರಾಗಿದ್ದೇವೆ. ಜಾಗೃತರಾಗೋಣ.

    ಜಾನ್ ವೆಸ್ಲಿ, ಜನಸಂಗ್ರಾಮ್ ಪರಿಷತ್,

    ಹಲವು ಬಾರಿ ಭೂಮಿ ವಸತಿ ಹಕ್ಕಿಗಾಗಿ ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿ, ಮನವಿ ಪತ್ರಗಳನ್ನು ನೀಡಲಾಗಿದೆ. ಸಂವಿಧಾನ ನಮಗೆ ಸಮಬಾಳು ಮತ್ತು ಸಮಪಾಲನ್ನು ನೀಡಲಾಗಿದ್ದರೂ ಜಾರಿಮಾಡದೇ ನಮಗೆ ಮೋಸ ಮಾಡಲಾಗುತ್ತಿದೆ. ಸ್ವಾತಂತ್ರ್ಯ ನಮಗಿನ್ನೂ ಸಿಕ್ಕಿಲ್ಲ, ನಮ್ಮ ಸ್ವಾತಂತ್ರ್ಯವನ್ನು ಕಸಿದು ಇಟ್ಟುಕೊಳ್ಳಲಾಗಿದೆ.

    ನಮಗೆ ಓಟಿನ ಹಕ್ಕನ್ನು ನೀಡಲಾಗಿದೆ. ಯಾವುದೇ ಹೆಂಡ-ಖಂಡಗಳ ಆಮಿಷಗಳಿಗೆ ಬಲಿಯಾಗದೇ ಎಚ್ಚರದಿಂದ ನಮ್ಮದೇ ಜನಪ್ರತಿನಿಧಿಗಳನ್ನು ಆಯ್ಕೆಮಾಡಿಕೊಳ್ಳೊಣ. ನಮ್ಮ ದನಿ ಪ್ರತಿದ್ವನಿಸಲು ನಾವೆಲ್ಲಾ ಜಾಗೃತರಾಗೋಣ. ಭೂಮಿ ಕೊಡುವುದು ಭಿಕ್ಷೆಯಲ್ಲ ಅದು ನಮ್ಮ ಹಕ್ಕು.

    ಸರಳ ಮೂಲಭೂತ ಹಕ್ಕುಗಳನ್ನು ಸರ್ಕಾರ ನಿರಾಕರಣೆ ಮಾಡುತ್ತಿರುವುದನ್ನು ಮಾಧ್ಯಮಗಳು ಜನಸಾಮಾನ್ಯರ ಬಳಿಗೆ ಒಯ್ಯದೇ ಮೋಸ ಮಾಡುತ್ತಿವೆ

    ಜಿ.ಆರ್ ರಾಮಕೃಷ್ಣ.
    ಮಾಧ್ಯಮಗಳಿಗೆ ಜನಹೋರಾಟಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸರಳ ಮೂಲಭೂತ ಹಕ್ಕುಗಳನ್ನು ಸರ್ಕಾರ ನಿರಾಕರಣೆ ಮಾಡುತ್ತಿರುವುದನ್ನು ಮಾಧ್ಯಮಗಳು ಜನಸಾಮಾನ್ಯರ ಬಳಿಗೆ ಒಯ್ಯದೇ ಮೋಸ ಮಾಡುತ್ತಿವೆ.

    ನೂರಾರು ಎಕರೆ ಗುಳುಂ ಆಗುತ್ತಿರುವುದನ್ನು ಸ್ವತಃ ನಾವುನೀವೆಲ್ಲರೂ ಗಮನಿಸುತ್ತಿದ್ದೇವೆ. ಸರ್ಕಾರದ ಬೆಂಬಲವೂ ಸಿಗುತ್ತದೆ. ಅಧಿಕಾರಿಗಳಿಗೆ ಸಿಗುವ ಪ್ರತಿಫಲ ಏನು ಸಿಗುತ್ತಿದೆ. ಹೋರಾಟಗಳು ನಿರಂತರ ನಡೆಯುವಂತೆ ಮಾಡುವ ಪರಿಸ್ಥಿತಿಗೆ ದೂಡಿದ್ದಾರೆ. ಓಟು ನೀಡುವವರಲ್ಲಿ ನಾವೂ ಇದ್ದೇವೆ ಎಂಬುದನ್ನು ರಾಜಕಾರಣಿಗಳು ಮರೆತಿದ್ದಾರೆ. ನಮ್ಮೆಲ್ಲರ ಮೇಲೆ ಬಹಳ ಜವಾಬ್ದಾರಿ ಇದೆ. ಹೋರಾಟ ಯಾವ ರೀತಿ ಮುಂದುವರೆಯಬೇಕು ಎಂಬುದನ್ನು ತೀರ್ಮಾನಿಸೋಣ. ಸಂಧಾನ ಯಾವ ರೀತಿ ಸಾಧ್ಯ ಎಲ್ಲವನ್ನೂ ಚರ್ಚಿಸಿ ತೀರ್ಮಾನಿಸೋಣ.

    ಬ್ರೀಟೀಷರಿಗಿದ್ದಷ್ಟು ಸೂಕ್ಷತೆ ಪ್ರಜಾಪ್ರಭುತ್ವದ ಸರ್ಕಾರಗಳಿಗೆ ಇಲ್ಲ.

    – ಸಿ.ಎಸ್.ದ್ವಾರಕಾನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು.

    ನಾನು ನಿರಂತರ ನಿಮ್ಮ ಜೊತೆ ಇದ್ದೇನೆ. ಸೂಕ್ಷ್ಮಮತಿ ಸರ್ಕಾರವಾಗಿದ್ದರೆ ಇಷ್ಟೊತ್ತಿಗೆ ಸ್ಪಂದಿಸಬೇಕಾಗಿತ್ತು. ಬ್ರೀಟೀಷರ ವಿರುದ್ದ ಹೋರಾಡಿದ ದೊರೆಸ್ವಾಮಿಯವರು ನೇತೃತ್ವವಿದೆ. ಬ್ರೀಟೀಷರಿಗಿದ್ದಷ್ಟು ಸೂಕ್ಷತೆ ಪ್ರಜಾಪ್ರಭುತ್ವದ ಸರ್ಕಾರಗಳಿಗೆ ಇಲ್ಲ.

    ನಿರ್ಲಕ್ಷಿತ ತಳಸಮುದಾಯಗಳ ಅಸ್ತಿತ್ವವನ್ನು ಈ ಸರ್ಕಾರಗಳು ಗುರುತಿಸಿಯೇ ಇಲ್ಲ. ಕಾಡುಗೊಲ್ಲರ ಸಮುದಾಯದ ಹೋರಾಟ ಜಾರಿಯಲ್ಲಿದೆ. ಗಿರ್ಸಾಡಿ ಸಮುದಾಯವಿದೆ ಅದಕ್ಕೆ 25 ಸಾವಿರ ಸಾಲ ಕೊಡಲು ಸರ್ಕಾರ ತೀರ್ಮಾನಿಸಿದೆ. ಆದರೆ ಶಾಸಕರುಗಳು ಅವರಿಗೆ ಓಟ್ ಇಲ್ಲ ಅಂತ ನಿರಾಕರಿಸ್ತಿದಾರೆ. ನಮ್ಮ ಹೋರಾಟವನ್ನು ಸಂಸತ್ತಿನ ಒಳಗೆ/ ವಿಧಾನಸಭೆಯ ಒಳಗೆ ತೆಗೆದುಕೊಂಡು ಹೋಗಬೇಕು. ಬಹಳ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ. ಕಟ್ಟಕಡೆಯ ವರೆಗೂ ಹೋರಾಟ ಜಾರಿಯಲ್ಲಿಡೋಣ. ಗಾಂಧಿಜಿಯ ಮಾರ್ಗವೊಂದೆ ಸತ್ಯ. ಸಂವಿಧಾನವನ್ನು ಅನುಷ್ಠಾನಗೊಳಿಸಲು ಮುಂದಾಗೋಣ. ನಿಮ್ಮ ಜೊತೆ ನಿರಂತರವಾಗಿ ಇರುತ್ತೇನೆ.
    *ಬಹುಶಃ ಇದು ನನ್ನ ಕೊನೆಯ ಫೈಟ್*

    *ಸತ್ಯಾಗ್ರಹಿಗೆ ಸೋಲಿಲ್ಲ…*

    *ಗೌರವದಿಂದ ಬಾಳುವ ಸಮಾಜ ನಿರ್ಮಾಣ ನಮ್ಮ ಗುರಿ*

    – ಹೆಚ್.ಎಸ್.ದೊರೆಸ್ವಾಮಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರು.

    ಜನರ ಪ್ರತಿನಿಧಿಗಳು ಬರಬೇಕು. ಎಲ್ಲ ಪಕ್ಷಗಳ ಕ್ಯಾಂಡಿಡೇಟ್‍ಗಳು ಇಲ್ಲಿ ಬರ್ತಾರೆ. ಜನರ ಓಟನ್ನು ದುಡ್ಡು ಕೊಟ್ಟು ಕೊಂಡುಕೊಂಡಿದೀವೆ ಅನ್ನೋ ಮನಸ್ಥಿತಿಗಳನ್ನು ರಾಜಕಾರಣಿಗಳು ಹೊಂದಿದ್ದಾರೆ. ಇದು ಬದಲಾಗಬೇಕು.ಎಲ್ಲ ಕಡೆ ಮತದಾರರ ಸಂಘಟನೆಗಳಾಗಬೇಕು ನಮ್ಮ ಹಕ್ಕುಗಳನ್ನು ಕೇಳಬೇಕು. ಸತ್ಯಾಗ್ರಹಿಗೆ ಸೋಲಿಲ್ಲ, ನನಗೆ ಹೆದರಿಕೆ ಇಲ್ಲ, ಕೆಲಸ ಬೇಗ ಆಗದಿದ್ದರೆ ಧೃತಿಗೆಡದಿರೋಣ.

    ಅಧಿಕಾರ ಮದ ಹೊಂದಿದವರ ಮರ್ಜಿ ಒಂದಿದೆ. ಬಹಳ ಮುಖ್ಯವಾದ ಹೋರಾಟ ನಮ್ಮದಾಗಿದೆ. ಬಡವರಿಗೆ ಬದುಕುವ, ಕಲಿಯುವ ಅವಕಾಶವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಸರ್ಕಾರ.  ಸರ್ಕಾರಕ್ಕೆ  ನಿಮ್ಮೆದುರಿಗೆ ಎತ್ತಿಕಟ್ಟೋಣವೇ, ರೆಬಿಲಿಯನ್ ಆಗೋಣವೇ ಯೋಚನೆ ಮಾಡಿ. ಅಂತಿಮನಿಗೆ ಮೊದಲ ಆದ್ಯತೆ ಇರಬೇಕಾದದ್ದು, ನಗಣ್ಯ ಮಾಡುತ್ತಿದ್ದೀರಿ. ಬಡವನ ಸಮಸ್ಯೆ ಬಗೆಹರಿಯಲೇ ಬೇಕು. ಮೊದಲು ಬಡವನ ಕೆಲಸ ಆಗಬೇಕು.

    ಇದು ನನ್ನ ಕೊನೆಯ ಫೈಟ್ ಇದು. ಎಲ್ಲರೂ ಗೌರವದಿಂದ ಬಾಳುವ ಸಮಾಜ ನಿರ್ಮಾಣಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ. ಚಳವಳಿ ಮುಂದುವರೆಯುತ್ತದೆ. ಇನ್ನೊಂದು ಸಾರಿ ಅಧಿಕಾರಕ್ಕೆ ಬಂದ ಮೇಲೆ ಮಾಡ್ತೀರಾ.. ಕಾಂಗ್ರೆಸ್ ಹುಟ್ಟಿದ್ದು ಯಾಕೆ , ಗಾಂಧಿಯವರ ಆಶಯವನ್ನು ಮರೆತ ಕಾಂಗ್ರೆಸ್ ಸರ್ಕಾರ  ಇದಾಗಿದೆ. ಸತ್ಯಾಗ್ರಹ ಕೊಟ್ಟ ಮಾತು ಜಾರಿಯಾಗದ ತನಕ ನಿಲ್ಲುವುದಿಲ್ಲ. ರೆವಿನ್ಯೂ ಮಂತ್ರಿ ಬಾಯಿಬಡುಕರಾಗಿದ್ದಾರೆ. ಬಡವರ ಪರ ಹೋರಾಟ ನಿಲ್ಲುವುದಿಲ್ಲ. ವಿಶ್ವಾಸವಿರುವವರೆಲ್ಲಾ ಒಂದುಗೂಡೋಣ.

    ಪ್ರತಿ ಬಡವನಿಗೆ 2 ಎಕರೆ ಭೂಮಿ, ಅಕ್ರಮ – ಸಕ್ರಮ  ಈ ಎರಡೂ ನಮ್ಮ ಮುಖ್ಯ ಬೇಡಿಕೆಯಾಗಿವೆ. ಸಚಿವ ಮೀಟಿಂಗ್ ಕರೆಯೋ ಅಂತೇಳಿ ವರ್ಷ ಆಯ್ತು, ಎಲ್ಲಾಯ್ತು ಮೀಟಿಂಗು ಸಚಿವರೇ…

    ಪ್ರತಿ ಶನಿವಾರ ಮೀಟಿಂಗ್ ಅಂತ ಹೇಳಿದ್ದೀರಲ್ಲ ಅದನ್ನು ಆಗಲ್ಲ ಅಂತ ಶಾಸಕ ಹೇಳ್ತಿದಾನೆ. ಶಾಸಕರು ಯಾರೂ ನಮ್ಮ ಮಾತು ಕೇಳ್ತಿಲ್ಲ ಅಂತ ಕಂದಾಯ ಮಂತ್ರಿ ಬಾಯ್ ಬಡ್ಕೊತಿದ್ದಾಗ ಇಬ್ರಿದ್ರೂ ಮೀಟಿಂಗ್ ಮಾಡಲು ಸುತ್ತೋಲೆ ಕಳಿಸ್ತಾರೆ. ಆದ್ರೂ ಮೀಟಿಂಗ್ ನಡೀತಿಲ್ಲ. ಸುತ್ತೋಲೆ ಮೇಲೆ ಸುತ್ತೋಲೆ ಕಳಿಸ್ತಾನೆ ಇದಾರೆ. ಏನೂ ಜಾರಿ ಆಗ್ತಿಲ್ಲ.

    ಪ್ರತಿ ಶನಿವಾರದ ಸಭೆಗೆ ಶಾಸಕರು ಬರದೇ ಇದ್ರೆ ಪ್ರತಿ ತಾಲ್ಲೂಕಿನ ತಹಶೀಲ್ದಾರ ಕಛೇರಿಯಿಂದ ಶಾಸಕನ ಮನೆಗೆ ಜಾಥಾ ಹೊರಡಬೇಕು. ಇದು ಪ್ರತೀ ತಾಲ್ಲೂಕುಗಳಲ್ಲಿ ನಡೆಯಲಿ. ಇದು ಒಂದು ವ್ರತದ ರೀತಿ ನಡೆಯಲಿ.

    ಬಡವರ ಹಸಿವನ್ನ ಹಿಂಗಿಸುವ ಹೋರಾಟದ ಪಾಲುದಾರರು ನಾವು ನೀವೆಲ್ಲಾ ಆಗಿದ್ದೇವೆ.

    ಧೃತಿಗೆಡದಿರೋಣ.. ಬಡವರಿಗೆ ಕಷ್ಟ  ಹೊಸದಲ್ಲ, ಈ ಕಷ್ಟ ಇರದ ರೀತಿ ಹೋರಾಟ ಮಾಡೋಣ.

    _

    ಹೆಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು,

    • Comments Off on ಬಹುಶಃ ಇದು ನನ್ನ ಕೊನೆಯ ಫೈಟ್ :ಹೆಚ್.ಎಸ್.ದೊರೆಸ್ವಾಮಿ,
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.