07:57 pm Tuesday, June 25, 2019
 • ಫಾದರ್ ಡಾ: ಅಂಬ್ರೋಸ್ ಪಿಂಟೋ:ಶ್ರದ್ಧಾಂಜಲಿ

  By admin - Fri Jan 05, 6:52 pm

  • Comments Off on ಫಾದರ್ ಡಾ: ಅಂಬ್ರೋಸ್ ಪಿಂಟೋ:ಶ್ರದ್ಧಾಂಜಲಿ
  • 0 views
  ಫಾದರ್ ಡಾ: ಅಂಬ್ರೋಸ್ ಪಿಂಟೋ:ಶ್ರದ್ಧಾಂಜಲಿ
  ಬೆಂಗಳೂರು, ಜನವರಿ 5, 2018 (ಕರ್ನಾಟಕ ವಾರ್ತೆ)
     ಫಾದರ್ ಡಾ: ಅಂಬ್ರೋಸ್ ಪಿಂಟೋ, ನಿವೃತ್ತ ಪ್ರಾಂಶುಪಾಲರು, ಸೇಂಟ್ ಜೋಸೆಫ್ ಕಾಲೇಜು ಮತ್ತು ಸೇಂಟ್ ಅಲೋಷಿಯಸ್ ಪದವಿ ಕಾಲೇಜು, ಕಾಕ್ಸ್‍ಟೌನ್, ಬೆಂಗಳೂರು ಸಾಮಾಜಿಕ ನ್ಯಾಯದ ಹಿತಚಿಂತಕರು, ಲೇಖಕರೂ ಆದ ಇವರು ದಿನಾಂಕ 03-1-2018 ರಂದು ದೈವಾಧೀನರಾಗಿದ್ದಾರೆ.
    ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಂಬಂಧ ರಚಿಸಲಾಗಿದ್ದ ವಿಷಯ ತಜ್ಞರ ಸಮಿತಿಯು ಸದಸ್ಯರಾಗಿದ್ದು (ಆಗಸ್ಟ್ -2015 ರಿಂದ) ಇವರು ಹಲವು ವಿಷಯಗಳಲ್ಲಿ ಆಯೋಗಕ್ಕೆ ಅತ್ಯಮೂಲ್ಯವಾದ ಸಲಹೆ ಹಾಗೂ ಮಾರ್ಗದರ್ಶನವನ್ನು ನೀಡಿದ್ದರು.
   ಸಾಮಾಜಿಕ ನ್ಯಾಯಕ್ಕಾಗಿ ಇವರಲ್ಲಿ ಇದ್ದ ಬದ್ಧತೆ ಮತ್ತು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಆಯೋಗದ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ದಿನಾಂಕ            4-1-2018 ರಂದು ಅವರ ಆತ್ಮಕ್ಕೆ ಶಾಂತಿಯನ್ನು ಕೋರಿ ಶ್ರದ್ದಾಂಜಲಿ ಸಭೆಯನ್ನು ನಡೆಸಿದರು.
  • Comments Off on ಫಾದರ್ ಡಾ: ಅಂಬ್ರೋಸ್ ಪಿಂಟೋ:ಶ್ರದ್ಧಾಂಜಲಿ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.