08:09 pm Friday, January 18, 2019
  • ಜನಪ್ರತಿನಿಧಿಗಳು ವಾಗ್ದಾನ ಪೂರೈಸುವಲ್ಲಿ ನಿರ್ಲಕ್ಷ್ಯ ತೋರಿಸಿದ್ದಾರೆ: ಮುಸ್ಲಿಮ್ ಒಕ್ಕೂಟ

    By admin - Mon Jan 01, 8:56 am

    • Comments Off on ಜನಪ್ರತಿನಿಧಿಗಳು ವಾಗ್ದಾನ ಪೂರೈಸುವಲ್ಲಿ ನಿರ್ಲಕ್ಷ್ಯ ತೋರಿಸಿದ್ದಾರೆ: ಮುಸ್ಲಿಮ್ ಒಕ್ಕೂಟ
    • 0 views

     

     

    ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ

    ತಾ! 31/12/2017ರಂದು ಉಡುಪಿ ಬ್ರಹ್ಮಾವರದಲ್ಲಿ ನಡೆದ ಮುಸ್ಲಿಮ್ ಸಾಮುದಾಯಿಕ ಗಣ್ಯರ ಸಮಾವೇಶದಲ್ಲಿ ಅಂಗೀಕರಿಸಲಾದ ಠರಾವುಗಳು

    1. ಈ ಸಮಾವೇಶವು ಮುಸ್ಲಿಮ್ ಸಮುದಾಯ ರಾಜಕೀಯವಾಗಿ ಜಾಗೃತಗೊಳ್ಳಬೇಕು ಮತ್ತು ತಮ್ಮ ರಾಜಕೀಯ ಸ್ಥಾನಮಾನಗಳನ್ನು ಗಳಿಸಲು ಕ್ರಿಯಾಶೀಲರಾಗಬೇಕೆಂದು ಬಯಸುತ್ತೇವೆ.

    2. ಈ ಸಮಾವೇಶವು  ಮುಸ್ಲಿಮ್ ಸಮುದಾಯ ತಮ್ಮ ರಾಜಕೀಯ ಅಸ್ತಿತ್ವವನ್ನು ಸಾಬೀತು ಪಡಿಸಬೇಕು ಮತ್ತು ತಮ್ಮ ರಾಜಕೀಯ ವರ್ಚಸ್ಸನ್ನು ಪ್ರದರ್ಶಿಸುವ ಮೂಲಕ ರಾಜಕೀಯವಾಗಿ ಸಬಲಿಕರಣಗೊಳ್ಳಬೇಕು ಎಂದು ಬಯಸುತ್ತದೆ.

    3. ಸಮುದಾಯದ ಹಿತರಕ್ಷಣೆಗಾಗಿ ರಾಜಕೀಯ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಸಮುದಾಯದ ವಿವಿಧ ಸಂಘಟನೆ –  ಪಕ್ಷಗಳ ಪ್ರತಿನಿಧಿಗಳು ಒಂದು ವೇದಿಕೆಯಾಗಿ ಪರಸ್ಪರ ಸಹಕಾರ ಮನೋಭಾವ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳೊಂದಿಗೆ ಹೋರಾಡಬೇಕು ಎಂದು ಈ ಸಮಾವೇಶ ಅಪೇಕ್ಷಿಸುತ್ತದೆ.

    4. ಮುಸ್ಲಿಮ್ ಸಮುದಾಯದ ನ್ಯಾಯಬಧ್ಧ ಬೇಡಿಕೆಗಳನ್ನು ಪೂರೈಸುವ ಮತ್ತು ಸಮಸ್ಯೆಗಳನ್ನು ಬಗೆಹರಿಸುವ ವಾಗ್ದಾನ ನೀಡಿ ಸಮುದಾಯದ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಜನ – ಪ್ರತಿನಿಧಿಗಳು ತಮ್ಮ ವಾಗ್ದಾನವನ್ನು ಪೂರೈಸುವಲ್ಲಿ ತೀರ ನಿರ್ಲಕ್ಷ್ಯತನ ತೋರಿಸಿದ್ದಾರೆ ಎಂದು ಈ ಸಮಾವೇಶ ಪರಿಗಣಿಸಿದೆ.

    5.ಈ ಸಮಾವೇಶವು ಸಮುದಾಯ ಬೆಂಬಲದೊಂದಿಗೆ ಅಧಕಾರಗಳಿಸಿದ ಜನ-ಪ್ರತಿನಧಿಗಳು ಮತ್ತು ರಾಜಕೀಯ ಪಕ್ಷಗಳು ಈ ಸಮಾವೇಶದಲ್ಲಿ ಮಂಡನೆಯಾಗಿದ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಮುಂಬರುವ ಚುನಾವಣೆ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತದೆ.

    6. ಈ ಸಮಾವೇಶವು ಮುಂಬರುವ ಚುನಾವಣೆಯಲ್ಲಿ ಸಮುದಾಯದ ನಿಲುವು ಏನಾಗಿರಬೇಕೆಂಬ ಬಗ್ಗೆ ಮುಂದಿನ ದಿನಗಳಲ್ಲಿ ಸಮುದಾಯ ವಿವಿಧ ಸಂಘಟನೆಗಳೊಂದಿಗೆ ಸಮಾಲೋಚಿಸಿ, ವಿವಿಧ ಹಂತಗಳಲ್ಲಿ ಸಭೆಗಳನ್ನು ನಡೆಸಿ ಕೈಗೊಳ್ಳುವ ತೀರ್ಮಾನವನ್ನು ಮಾರ್ಚ್ 4ರಂದು ನಡೆಯಲಿರುವ ಸಮುದಾಯದ ಸಾರ್ವಜನಿಕ ಸಮಾವೇಶದಲ್ಲಿ ಘೋಷಿಸಲು ತೀರ್ಮಾನಿಸುತ್ತದೆ.

    Congress leader Oscar Fernandez and

    Ministers pramod madvaraj and other

    Political leaders attended the programme

    • Comments Off on ಜನಪ್ರತಿನಿಧಿಗಳು ವಾಗ್ದಾನ ಪೂರೈಸುವಲ್ಲಿ ನಿರ್ಲಕ್ಷ್ಯ ತೋರಿಸಿದ್ದಾರೆ: ಮುಸ್ಲಿಮ್ ಒಕ್ಕೂಟ
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.