05:46 am Wednesday, July 24, 2019
 • ತಳಮಟ್ಟದಲ್ಲಿ ಕೆಲಸ ಮಾಡಿದವರನ್ನು ವಿಧಾನಸಭೆಗೆ ಕಳಿಸಬೇಕು ; ಜಿಗ್ನೇಶ್

  By admin - Fri Dec 29, 5:49 pm

  • Comments Off on ತಳಮಟ್ಟದಲ್ಲಿ ಕೆಲಸ ಮಾಡಿದವರನ್ನು ವಿಧಾನಸಭೆಗೆ ಕಳಿಸಬೇಕು ; ಜಿಗ್ನೇಶ್
  • 0 views

  ಜನರಾಜಕಾರಣದ ಯುವನಾಯಕ ಜಿಗ್ನೇಶ್ ಮೇವಾನಿರವರ ಮಾತುಗಳು.

  ಸೌಹಾರ್ದ ಮಂಟಪ, ಚಿಕ್ಕಮಗಳೂರು.

  ವೇದಿಕೆಯ ಮೇಲಿರುವ ಸಂಗಾತಿಗಳಿಗೆ, ಕಕೋಸೌವೇಯ ಇಡೀ ತಂಡಕ್ಕೆ, ಆಗಿನಿಂದ ಸುದೀರ್ಘ ಕಾಲ ನಡೆದಿರುವ ಸಂಘರ್ಷದಲ್ಲಿ ಜೊತೆಗೂಡಿರುವ ಸಂಗಾತಿಗಳಿಗೆ ನಾನು  ಕ್ರಾಂತಿಕಾರಿ ಜೈ ಭೀಮ್ ಮತ್ತು ಲಾಲ್ ಸಲಾಂ ಅನ್ನು ಸಲ್ಲಿಸುತ್ತೇನೆ. ಈ ತಿಂಗಳು ನಡೆದ ಗುಜರಾತ್ ಚುನಾವಣೆಯಲ್ಲಿ ನನ್ನ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿ, ಗೆಲ್ಲಿಸಿಯೇ ಮರಳುವುದು ಎಂದು ಶಪಥ ಮಾಡಿದ್ದ, ಗೆಲುವಿನಲ್ಲಿ ಪಾತ್ರ ವಹಿಸಿದ ಕರ್ನಾಟಕದ ಸಂಪೂರ್ಣ ತಂಡ ಮತ್ತೊಮ್ಮೆ ಧನ್ಯವಾದಗಳು.

  ಈ ಸಂದರ್ಭದಲ್ಲಿ ಕೋಮುವಾದಿ ಪ್ರಚಾರ ನಡೆಯುತ್ತಿರುವ ಬಗ್ಗೆ ಮಾತಾಡುತ್ತೇನೆ. ಈ ಕರ್ನಾಟಕ ಯಾವುದೋ ಉಮಾಭಾರತಿಯದಲ್ಲ ಇದು ಗೌರಿ ಲಂಕೇಶರ ಕರ್ನಾಟಕ.
  ಕರ್ನಾಟಕವನ್ನು ಗುಜರಾತ್ ಮಾಡುತ್ತೇವೆ ಎನ್ನುತ್ತಾರೆ. ಅದು ಆಗಬಾರದು ಬದಲಿಗೆ ಕರ್ನಾಟಕದಲ್ಲಿನ ಬಾಬಾಬುಡನ್  ಮತ್ತು ದತ್ತಾತ್ರೆಯರ ಸೌಹಾರ್ದತೆಯನ್ನು ಗುಜರಾತ್‍ನಲ್ಲಿ ನೆಲೆಗೊಳ್ಳುವಂತೆ ಮಾಡಬೇಕಿದೆ. ನಾಳೆಯಿಂದ ಕರ್ನಾಟಕಕ್ಕೆ ಕೋಮುವಾದಿ ರಾಜಕಾರಣದ ಪ್ರಚಾರಕ್ಕೆ ಬರುತ್ತಿದ್ದಾರೆ. ಅವರು ಕೋಮು ವಾಂತಿ ಮಾಡುತ್ತಾರೆ. ಆದರೆ ಕರ್ನಾಟಕದ ನಾಗರೀಕ ಸಮಾಜ ಎಚ್ಚೆತ್ತಿದೆ, ಪ್ರಯತ್ನಶೀಲರಾಗಿದ್ದಾರೆ ಹಾಗಾಗಿ ನನಗೆ ನಂಬಿಕೆ ಇದೆ, ಕರ್ನಾಟಕ ಗುಜರಾತ್ ಆಗುವುದಿಲ್ಲ, ಕರ್ನಾಟಕ ಕರ್ನಾಟಕವಾಗಿಯೇ ಉಳಿದುಕೊಳ್ಳುತ್ತದೆ.

  ಈ ಸ್ವಲ್ಪ ಹೊತ್ತಿಗೆ ಮುಂಚೆ ತೀಸ್ತಾ ಅಕ್ಕ ಹೇಳಿದಂತೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸುದೀರ್ಘ ಪರಂಪರೆಯನ್ನು ಇನ್ನು ಬಲಗೊಳ್ಳುವಂತೆ ಮಾಡಬೇಕು. ಅವರು ಹೊಲಸು ಮಾಡಲು ಬರುತ್ತಿದ್ದಾರೆ. ಅದಕ್ಕೆ ಗಟ್ಟಿ ತಿರುಗೇಟು ಕೊಡೋಣ. ನಾಳೆಗೆ ಯೋಗಿ ಇನ್ನಿತ್ತರ ಕೋಮು ಕ್ರಿಮಿಗಳು ಬರುತ್ತಿದ್ದಾರೆ. ಆದರೆ ನಾವೇ ಗೆಲ್ಲಬೇಕು.

  ಅದಕ್ಕೆ ಇಷ್ಟು ಸುದೀರ್ಘ ಕಾಲ ಎಲ್ಲರನ್ನು ಒಳಗೊಳ್ಳುವ ಜೈ ಭೀಮ್ ಲಾಲ್ ಸಲಾಂ ಅನ್ನು ಕಾಪಾಡಿಕೊಳ್ಳಬೇಕು.
  ಕರ್ನಾಟಕದಲ್ಲಿ ನೋ ಜಾಬ್ ನೋ ವೋಟ್ ಆಂದೋಲನ ಚೆನ್ನಾಗಿ ನಡೆಯುತ್ತಿದೆ. ಇದು ಜನರ ಸಮಸ್ಯೆಗಳನ್ನು ಮುನ್ನಲೆಗೆ ತರುವ ಮಹತ್ವದ ರಾಜಕೀಯ ಚಳವಳಿಯಾಗಿದೆ. ಇದನ್ನು ಗುಜರಾತ್‍ವರೆಗೂ ತೆಗೆದುಕೊಂಡು ಹೋಗಬೇಕು. 2019ರ ಲೋಕಸಭಾ ಚುನಾವಣೆಗೆ ನಾವು ಫ್ಯಾಸಿಸಂ ಅನ್ನು ಸೋಲಿಸಲೇಬೇಕು.

  ಮೋದಿಗೆ ವಯಸ್ಸಾಗಿದೆ. ಹಾಗಾಗಿ ಎನೇನೋ ಒದರುತ್ತಾರೆ. ಅವರ ಮಾತುಗಳನ್ನು ಕೇಳುವುದು ಬೇಡ. ಬದಲಿಗೆ ನಾವು ಶೆಹ್ಲಾ ರಶಿದ್, ಕನ್ನಯ್ಯರ ಮಾತುಗಳನ್ನು ಕೇಳೋಣ. ಭಿನ್ನಾಭಿಪ್ರಾಯವಿದ್ದರೂ ಅಲ್ಪೇಶ್ ಠಾಕೂರ್ ಮತ್ತು ಹಾರ್ದಿಕ್ ಪಟೇಲ್ ರ ಮಾತುಗಳನ್ನು ಕೇಳೋಣ.

  ಗುಜರಾತ್ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿರುವುದು ಅನೇಕರಿಗೆ ಸ್ಪೂರ್ತಿಯಾಗಿದೆ. ಮುಖ್ಯವಾಗಿ ಯುವಕರಿಗೆ ಇವರಿಗೆ ನಾನು ಹೇಳುವುದು, ನಾನು ಕೇವಲ 2% ರಾಜಕಾರಣಿಯದರೆ ಇನ್ನ 98% ಚಳವಳಿಕಾರ.

  ಖಂಡಿತ ಜನಪರ ಆಲೋಚನೆಗಳನ್ನು ಹೊಂದಿರುವವರು ಅಧಿಕಾರಕ್ಕೆ ಬರಬೇಕು. ಆದರೆ ಒಂದು ನೆನಪಿಟ್ಟುಕೊಳ್ಳಿ. ಕ್ರಾಂತಿ ನಡೆಯುವುದು ಅಸೆಂಬ್ಲಿಯಲ್ಲಲ್ಲ ಬದಲಿಗೆ ರಸ್ತೆಗಳಲ್ಲಿ. ರೈತರು, ಕಾರ್ಮಿಕರು, ಯುವಕರು ಬೀದಿಗೆ ಬಂದು ಹೋರಾಡಿದರೆ ಕ್ರಾಂತಿಯಾಗುತ್ತದೆ. ಈಗಲೂ ನಮ್ಮ ಜನರಿಗೆ ನಾನು ಹೇಳುತ್ತೇನೆ ಬೀದಿಯಲ್ಲಿ ನೀವು ಹೋರಾಡಿದರೆ ನಾನು ನಿಮ್ಮೊಂದಿಗಿರುತ್ತೇನೆ. ನಾನು ಗೆದ್ದ ಮಾರನೇ ದಿನ ಕಲೆಕ್ಟರ್ ಆಫಿಸ್ ಎದುರು ಪ್ರತಿಭಟನೆ ನಡೆಸಿದೆ. ನಮ್ಮ ಕ್ಷೇತ್ರದ ರಸ್ತೆ ಸಮಸ್ಯೆಗಳ ಬಗ್ಗೆ. ಮುಂದಕ್ಕೂ ಕೂಡ ಹೋರಾಟದ ಕಣದಲ್ಲಿರುತ್ತೇನೆ.

  2002ರ ಗುಜರಾತ್ ಗಲಭೆಗಳ ಬಗ್ಗೆ ತೀಸ್ತಾ ಅಕ್ಕ ಮಾತಾಡಿದರು. ಆಗ ದಲಿತರು ಮತ್ತು ಮುಸ್ಲಿಂರು ಒಡೆದಾಡಿಕೊಂಡಿದ್ದು ನಿಜ. ಅದು ಆದರೆ ಅದು ಮುಗಿದು ಹೋಗಿರುವ ಅಧ್ಯಾಯ. ಈಗ 2002ರಿಂದ ಇಲ್ಲಿಯವರೆಗೆ, ಊನದಿಂದ ವಡ್ಗಾವ್‍ವರೆಗೆ ದಲಿತ ಮುಸ್ಲಿಂರ ದೊಡ್ಡ ಐಕ್ಯತೆ ರೂಪುಗೊಂಡಿದೆ. ನಮ್ಮ ವಡ್ಗಾವ್‍ನಲ್ಲಿ ದಲಿತರು ಹಾಕಿದ ವೋಟ್‍ಗಳಿಗಿಂತ ಮುಸ್ಲಿಂರು ಅತಿ ಹೆಚ್ಚಿನ ವೋಟ್‍ಗಳನ್ನು ಹಾಕಿದ್ದಾರೆ. ಅಲ್ಲಿನ ಮಹಿಳೆಯರು ನನಗಾಗಿ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಮಹಿಳೆಯರು ರೋಜ(ಉಪವಾಸ) ನಡೆಸಿದರು. ಅದನ್ನು ನಾನು ಮರೆಯುವುದಿಲ್ಲ.

  ಒಂದು ತಮಾಷೆಯ ವಿಚಾರವೆಂದರೆ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದೆ. ನಾನು ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿಲ್ಲ. ಯೋಗಿ ಮತ್ತು ರೂಪ್‍ವೇಣಿ ಬಂದು ನನ್ನ ಕ್ಷೇತ್ರದಲ್ಲಿ ಸಮಾವೇಶಗಳನ್ನು ಮಾಡಿದರು. ಎರಡು ರಾಜ್ಯದ ಮುಖ್ಯಮಂತ್ರಿಗಳು ಒಬ್ಬ ಸ್ವತಂತ್ರ ಅಭ್ಯರ್ಥಿಯ ವಿರುದ್ದ ಸಭೆಗಳನ್ನು ನಡೆಸಿದರು ಅಂದರೆ ಅವರಿಗೆಷ್ಟು ಭಯವಿದೆ ಯೋಚಿಸಿ.

  ಇದರಲ್ಲಿ ಗೆದ್ದ ನಂತರದಲ್ಲಿ ತಕ್ಷಣದಲ್ಲಿ ಹಲವು ಬಗೆಯ ಜನರ ಹೋರಾಟಗಳಲ್ಲಿ ತೊಡಗಿಕೊಂಡೆ. ಅದಕ್ಕೂ ಮುಂಚೆ 3 ಪೋಲೀಸ್ ಠಾಣೆಗಳ ಅಡ್ಡೆಗಳಲ್ಲಿ ಸಾರಾಯಿ ದಂಧೆಯಲ್ಲಿ ತೊಡಗಿಕೊಂಡೆ ಅವರು ಮೀಟಿಂಗ್ ಮಾಡಿ ಚಿಂತಿತರಾಗಿದ್ದರು. ಇದೇ ಫೆಬ್ರವರಿ 150 ಮುನಸಿಪಾಲಿಟಿ ಯಲ್ಲಿ ಪೌರಕಾರ್ಮಿಕರ ವಿಚಾರಗಳನ್ನಿಟ್ಟುಕೊಂಡು ದೊಡ್ಡ ಹೋರಾಟ ನಡೆಸಲಿದ್ದೇವೆ.

  2018ಕ್ಕೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆಗ ವಡ್ಗಮ್‍ನಲ್ಲಿ ಆದಂತೆ ಎಲ್ಲಾ ಶೋಷಿತರು ಬಿಜೆಪಿಯ ವಿರುದ್ದ ಹೇಗೆ 80% ಮತದಾನ ಮಾಡಿದರು ಅದೇ ರೀತಿ ಕರ್ನಾಟಕದಲ್ಲಿ 95%ಜನ ಆರ್.ಎಸ್.ಎಸ್ ಬಿಜೆಪಿ ವಿರುದ್ದ ಮತ ಚಲಾಯಿಸಬೇಕು.

  ನನ್ನ ಪರವಾಗಿ ಪ್ರಚಾರಕ್ಕೆ ಸಿಪಿಎಂ ಎಂ ಎಲ್ ನಿಂದ, ಯೋಗೇಂದ್ರ ಯಾದವ್, ಸೇರಿದಂತೆ ಪಕ್ಷಬೇದ ಮರೆತು ಎಲ್ಲಾ ಬಂದಿದ್ದರು. ಕರ್ನಾಟಕದಲ್ಲಿಯೂ ಇದು ಮರಕಳಿಸಬೇಕು. ಜನರ ಮಧ್ಯೆ ತಳಮಟ್ಟದಲ್ಲಿ ಕೆಲಸ ಮಾಡಿದವರನ್ನು ವಿಧಾನಸಭೆಗೆ ಕಳಿಸಬೇಕು. ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿದ್ದರೂ ಕುಡ ನಮ್ಮ ಮೂಲ ವೈರುದ್ಯ ಇರುವುದು ಆರ್‍ಎಸ್‍ಎಸ್ ಮತ್ತು ಬಿಜೆಪಿ ನಡುವೆ. ಹಾಗಾಗಿ ಬಿಜೆಪಿ ಸೋಲಿಸಲು ಕಾಂಗ್ರೆಸ್‍ಗೂ ಕೂಡ ಕೆಲವು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕಬೇಡಿ ಎಂದು ಕೂಡ ಹೇಳಬೇಕು .

  ಘರ್ ವಾಪಸ್, ಗೋಹತ್ಯೆ ಮತ್ತು ಲವ್ ಜಿಹಾದ್ ನಂತರ ವಿಚಾರಗಳು ನಡೆಯುತ್ತಿವೆ. ಕಾರ್ಮಿಕ ವಿರೋಧಿ ಕಾನೂನುಗಳನ್ನು ತರುತ್ತಿದ್ದಾರೆ. ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಅಬಿಪ್ರಾಯ ಬೇಧಗಳನ್ನು ತರಬಾರದು. ಪಕ್ಷ ಪಕ್ಷಗಳ ನಡುವೆ ಭಿನ್ನಾಭಿಪ್ರಾಯವಿದ್ದರೂ ದೂರದ ಸಮಾನ ಆಶಯಕ್ಕಾಗಿ ಚುನಾವಣಾ ಸಮಯದಲ್ಲಿ ಮತ್ತು ಮುಂದಿನ ಹೋರಾಟದಲ್ಲಿ ಒಂದಾಗೂಡಬೇಕು.

  ಮೋದಿಯವರು ಈ ದೇಶಧ ಪ್ರಧಾನಿ ಮಂತ್ರಿ ಆದ ನಂತರ ಅವರ ಆಡಳಿತವನ್ನು ನೋಡಿದ್ದೀವಿ. ಒಂದು ವಿಚಾರ ಸ್ಫಷ್ಟವಾಗಬೇಕು. ಫ್ಯಾಸಿಸಂಗಿಂತ ದೊಡ್ಡ ಶತ್ರು ಇಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಆ ಕಾಲದಿಂದ ಇಲ್ಲಿಯವರೆಗೆ ನಮ್ಮನ್ನು ಶೋಷಣೆ ಮಾಡಿದ್ದಾರೆ. ಆದರೆ ನಮ್ಮ ದೊಡ್ಡ ಶತ್ರು ಫ್ಯಾಸಿಸಂ. ಹಾಗಾಗಿ ಕರ್ನಾಟಕದಲ್ಲಿ, ಮಧ್ಯಪ್ರಧೇಶದಲ್ಲಿ, ರಾಜಸ್ಥಾನದಲ್ಲಿ ಪ್ರಚಾರ ಮಾಡುತ್ತೇನೆ. ನನ್ನ ಪ್ರಚಾರದಿಂದ ಯಾರಿಗೆ ನ್ಯಾಯ ಸಿಗುತ್ತದೆ ಎಂಬುದು ಮುಖ್ಯವಲ್ಲ ಬದಲಿಗೆ ಬಿಜೆಪಿ ಮತ್ತು ಆರ್‍ಎಸ್‍ಎಸ್ ಸೋಲಬೇಕು. ಗೌರಿ ಲಂಕೇಶ್ ರವರು ನನ್ನ ತಾಯಿಯ ಸಮಾನ. ಅವರ ಸಾವಿಗೆ ನ್ಯಾಯಕ್ಕೆ ಮತ್ತು ಬಿಜಾಪುರದಲ್ಲಿ ನನ್ನ ತಂಗಿಯ ಮೇಲಾದ ಅತ್ಯಾಚಾರ, ಕೊಲೆಗೆ ನ್ಯಾಯಕ್ಕೆ ಕಾಂಗ್ರೆಸ್ ಗಟ್ಟಿಯಾಗಿ ನಿಲ್ಲಬೇಕು. ನಾವು ಫ್ಯಾಸಿಸಂ ಸೋಲಬೇಕು ಎಂದರೆ ಕಾಂಗ್ರೆಸ್‍ನ ಮೌನವನ್ನು ಸಹಿಸುತ್ತೇವೆ ಎಂದಲ್ಲ ಬದಲಿಗೆ ಅದರ ವಿರುದ್ದವೂ ದನಿಯೆತ್ತುತ್ತೇವೆ.

  ಫ್ಯಾಸಿಸಂ ಅನ್ನು ಸೋಲಿಸುವುದು ನಮ್ಮೆಲ್ಲರ ಏಕಮಾತ್ರ ಗುರಿ ಮತ್ತು ಧ್ಯೇಯವಾಗಬೇಕು. ಆಗ ಮಾತ್ರ ಗೌರಿ ಲಂಕೇಶ್ ಸಾಯದೇ ಇರುವ ಹಾಗೆ ಮುಂದಕ್ಕೂ ಜೀವಂತವಿರುವ ಹಾಗೆ ಅವರ ಆಶಯಗಳನ್ನು ನಾವು ಈಡೇರಿಸಬೇಕು. ಜೈ ಭೀಮ್, ಲಾಲ್ ಸಲಾಂ.

  • Comments Off on ತಳಮಟ್ಟದಲ್ಲಿ ಕೆಲಸ ಮಾಡಿದವರನ್ನು ವಿಧಾನಸಭೆಗೆ ಕಳಿಸಬೇಕು ; ಜಿಗ್ನೇಶ್
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.