02:50 am Friday, June 21, 2019
  • ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ*

    By admin - Sat Dec 16, 12:06 pm

    • Comments Off on ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ*
    • 0 views

     

    ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ*

    (ಒಂದು ಕುಟುಂಬದಿಂದ ಒಂದು ಅರ್ಜಿ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ)

    *ಅರ್ಜಿದಾರರ ಅರ್ಹತೆ:*
    👉🏽 ಕುಟುಂಬದ ವಾರ್ಷಿಕ‌ ಆದಾಯ ಗರಿಷ್ಠ ರೂ.87,000₹ ಮೀರಿರಬಾರದು.

    👉🏽 ಕನಿಷ್ಠ 5 ವರ್ಷಗಳಿಂದ ಮೇಲ್ಪಟ್ಟು ಬೆಂಗಳೂರು ನಿವಾಸಿಯಾಗಿರಬೇಕು.
    (BDA ವ್ಯಾಪ್ತಿಯಲ್ಲಿ)

    👉🏽 ಆಧಾರ್ ಕಾರ್ಡ್ ಹೊಂದಿರಬೇಕು.

    👉🏽 ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಯಾಗಿರಬಾರದು.

    👉🏽 ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಮನೆ ಹೊಂದಿರಬಾರದು.

    *ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳು:*
    (ಕಂದಾಯ ಇಲಾಖೆಯ RD ನಂಬರನ್ನು ಮಾತ್ರ ನಮೂದಿಸುವುದು)
    ⏩ ಜಾತಿ‌ ಪ್ರಮಾಣ ಪತ್ರ ಸಂಖ್ಯೆ
    ⏩ ಆದಾಯ ಪ್ರಮಾಣ ಪತ್ರ ಸಂಖ್ಯೆ
    ⏩ ವಾಸ ಸ್ಥಳ‌ ದೃಢೀಕರಣ ಪತ್ರ ಸಂಖ್ಯೆ
    ⏩ ಪಡಿತರ ಚೀಟಿ(ರೇಷನ್ ಕಾರ್ಡ್) ಸಂಖ್ಯೆ
    ⏩ ಆಧಾರ್ ಕಾರ್ಡ್ ಸಂಖ್ಯೆ
    ⏩ ಕಾರ್ಮಿಕ‌ ಇಲಾಖೆಯ ನೋಂದಣಿ ಸಂಖ್ಯೆ (ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದಲ್ಲಿ)
    ⏩ ಚುನಾವಣಾ ಆಯೋಗದ ಗುರುತಿನ ಚೀಟಿ ಸಂಖ್ಯೆ
    ⏩ ಬ್ಯಾಂಕ್ ಅಕೌಂಟ್ ನಂಬರ್

    *ಮೀಸಲಾತಿ:*
    👉🏽 ಪರಿಶಿಷ್ಟ ಜಾತಿಗೆ ಶೇ.30%,
    ಪರಿಶಿಷ್ಟ ಪಂಗಡಕ್ಕೆ ಶೇ.10%

    👉🏽 ಅಲ್ಪಸಂಖ್ಯಾತರಿಗೆ ಶೇ.10 ರಷ್ಟು, ಸಾಮಾನ್ಯ ವರ್ಗ ಶೇ.50%

    ★ ಪ್ರತೀ ಘಟಕದ ಅಂದಾಜು ವೆಚ್ಚ ರೂ. 5.50 ಲಕ್ಷದಿಂದ ರೂ.6 ಲಕ್ಷ ₹ರೂಪಾಯಿ. ಘಟಕ ವೆಚ್ಚದ ಬಾಕಿ ಮೊತ್ತವನ್ನು ಅರ್ಜಿದಾರರು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಸೂಚಿಸಿದ ಸಂದರ್ಭದಲ್ಲಿ ಪಾವತಿಸಬೇಕು.

    *ಸಹಾಯಧನ:*
    👉🏽 ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳಿಗೆ: ₹ 3.50 ಲಕ್ಷ

    👉🏽 ಸಾಮಾನ್ಯ‌ ವರ್ಗಗಳಿಗೆ: ₹ 2.70 ಲಕ್ಷ

    *ಅರ್ಜಿ ಶುಲ್ಕ: 100₹ ರೂ.*

    *ಅರ್ಜಿ ಶುಲ್ಕ ಪಾವತಿ:*
    ಆನ್ ಲೈನ್ ನ ಮೂಲಕ ಅರ್ಜಿ ಸಲ್ಲಿಸುವವರು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ನಗದಾಗಿ ಪಾವತಿಸುವವರು ಬೆಂಗಳೂರು ONE ಕೇಂದ್ರಗಳು, ಆ್ಯಕ್ಸಿಸ್, HDFC ಬ್ಯಾಂಕ್ ಗಳಲ್ಲಿ ಪಾವತಿಸಬಹುದಾಗಿದೆ‌.

    *ಅರ್ಜಿ ಸಲ್ಲಿಕೆ:*
    *ಬೆಂಗಳೂರು One ಕೇಂದ್ರಗಳು, BBMP ಯ ಎಲ್ಲಾ ವಾರ್ಡ್ ಕಚೇರಿಗಳಲ್ಲಿ, ಯಾವುದೇ ಬ್ರೌಸಿಂಗ್ ಸೆಂಟರ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.*
    ಯಾವುದೇ ಪ್ರಮಾಣ ಪತ್ರಗಳನ್ನು ನೀಡುವ ಅಗತ್ಯವಿರುವುದಿಲ್ಲ.
    *ಅರ್ಜಿ ಸಲ್ಲಿಕೆ, ಮನೆಯ ವಿನ್ಯಾಸ, ಮಾದರಿ, ಸ್ಥಳ, ಇತ್ಯಾದಿಗಳ‌ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ನೋಡಿ:*
    *http://www.ashraya.kar.nic.in/cmonelakh*

    *ಅರ್ಜಿ‌ ಸಲ್ಲಿಕೆಗೆ ಕೊನೆಯ ದಿನಾಂಕ: 05 ಜನವರಿ 2018*

    👉🏽 ಇದು ಆನ್ ಲೈನ್ ಅರ್ಜಿಯಾಗಿರುವುದರಿಂದ ಕೈಬರಹದ ಅರ್ಜಿ ಸಲ್ಲಿಸುವಂತಿಲ್ಲ.
    👉🏽 ಎಲ್ಲಾ ಸೂಚನೆಗಳನ್ನು ಕಾಲಕಾಲಕ್ಕೆ ವೆಬ್ ಸೈಟ್ ನಲ್ಲಿ ನೀಡಲಾಗುತ್ತದೆ.
    👉🏽 ಮಧ್ಯವರ್ತಿಗಳಿಗೆ ಯಾವುದೇ ಅವಕಾಶವಿರುವುದಿಲ್ಲ.
    👉🏽 ವಸತಿ ನಿರ್ಮಾಣ: ಲಭ್ಯವಿರುವ ಸರ್ಕಾರಿ‌ ಜಮೀನಿನಲ್ಲಿ.
    *ನವ ಕರ್ನಾಟಕ ‌ನಿರ್ಮಾಣಕ್ಕೆ ಸದಾ ಸಿದ್ಧ ಸರ್ಕಾರ*

    *ವಸತಿ ಇಲಾಖೆ, ಕರ್ನಾಟಕ ಸರ್ಕಾರ*

    • Comments Off on ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ*
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.