07:33 pm Tuesday, June 25, 2019
 • ಅಲೆಮಾರಿ ಸಮುದಾಯಗಳ ಕುಂದುಕೊರತೆಗಳ ಅಹವಾಲು

  By admin - Wed Nov 22, 7:05 pm

  • Comments Off on ಅಲೆಮಾರಿ ಸಮುದಾಯಗಳ ಕುಂದುಕೊರತೆಗಳ ಅಹವಾಲು
  • 0 views

  ಅಲೆಮಾರಿ ಬುಡಕಟ್ಟು ಮಹಾಸಭಾ (ರಿ) ಮತ್ತು ರೆಹನುಮಾ ಕಾನೂನು ಕೇಂದ್ರ, ಕಲಬುರಗಿ ಹಾಗೂ ಇತರ ಸಮುದಾಯಗಳ ಸಹಯೋಗದೊಂದಿಗೆ ಅಲೆಮಾರಿ/ಅರೆಅಲೆಮಾರಿ ಸಮುದಾಯಗಳ ಕುಂದುಕೊರತೆಗಳ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ತಮ್ಮ ಸಮುದಾಯದ ಸಂಕಟಗಳನ್ನು ತೋಡಿಕೊಳ್ಳುತ್ತಿರುವ
  ಅಲೆಮಾರಿ ಸಮುದಾಯದ ಅತಿ ಸಣ್ಣ ಸಮುದಾಯ “ಬೈಲ್ ಪತ್ತಾರ್” ಸಮುದಾಯದ ಮಹಿಳೆ ಅನುಸೂಯ ಬೈಲ್ ಪತ್ತಾರ್. ಮತ್ತು ಇತರ ಆದಿವಾಸಿ ಅಲೆಮಾರಿ/ಅರೆಅಲೆಮಾರಿ ಸಮುದಾಯದ ಪ್ರತಿನಿಧಿಗಳು.
  ಇದೊಂದು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ. ಪ್ರತಿ ಸಮುದಾಯದ ಅಹವಾಲನ್ನು ಕೇಳಿಸಿಕೊಂಡು, ಸಾಧ್ಯವಾದಷ್ಟೂ ಸ್ಥಳದಲ್ಲೇ ಪರಿಹಾರ ಒದಗಿಸಲು ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದಾರೆ.
  ಸದರಿ ಕಾರ್ಯಕ್ರಮದಲ್ಲಿ ಬಹುತೇಕ ನಾವೆಂದೂ ಕಂಡೇ ಇಲ್ಲದ, ಕೇಳೇ ಇಲ್ಲದ, ಸಮುದಾಯಗಳಾದ “ಘಿಸಾಡಿ, ಘ್ಯಾರೆ, ಗಂಟಿಚೋರ್, ಬೋಯಿ, ಬಾಜಿಗರ, ಬುಡ್ಗ ಜಂಗಮ,ಡೊಂಬರ, ಜಾತಿಗಾರ್, ಎಳವ, ಅಲೆಮಾರಿ ಗೊಲ್ಲ, ಮಾಂಗ್ ಗಾರುಡಿ, ಸಿಂದೋಳ್, ದರ್ವೇಶಿ ಮುಂತಾದ ಸಮುದಾಯಗಳು ಬಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ.
  ಕರ್ನಾಟಕ ಸರ್ಕಾರದ ಘೋಷಣೆಗಳು ಹೇಳುವಂತೆ, ಪರಿಶಿಷ್ಟ ಜಾತಿ/ವರ್ಗ, ಆದಿವಾಸಿ, ಅಲೆಮಾರಿ/ಅರೆಅಲೆಮಾರಿಗಳ ಅಭಿವೃದ್ಧಿಗಾಗಿ ಇದುವರೆಗೂ ಖರ್ಚು ಮಾಡಲಾಗಿರುವ ಹಣ 87ಸಾವಿರ ಕೋಟಿ!?
  ಆದರೆ, ನಿಜವಾಗಿಯೂ ದುರಂತ ಎಂದರೆ ಈ ಸಮುದಾಯಗಳಿಗೆ ಈಗಲೂ ಒಂದು ಅಂಗುಲದಷ್ಟೂ ಜಾಗ ಸಿಕ್ಕಿಲ್ಲ ಅಂದಮೇಲೆ, ಇನ್ನು, ಮನೆ, ಕೃಷಿ ಭೂಮಿ , ವಿಧ್ಯಾಬ್ಯಾಸ, ಉದ್ಯೋಗ, ಆರೋಗ್ಯ ಕನಸಿನ ಮಾತಾಗೇ ಉಳಿದಿದೆ.
  ಬಹುಶಃ ನೀವು ನಂಬದಿರಬಹುದು! ಕರ್ನಾಟಕದ ಇನ್ನೂ ಸುಮಾರು 47ಕ್ಕೂ ಹೆಚ್ಚು ಸಮುದಾಯದ ಹೆಸರುಗಳು ಸರ್ಕಾರದ ಯಾವ ದಾಖಲೆಗಳಲ್ಲೂ ಕಂಡು ಬರುವುದಿಲ್ಲ. ಈ 47 ಸಮುದಾಯಗಳನ್ನು ಸಧ್ಯ ಗುರುತಿಸುವ ಕೆಲಸಕ್ಕೇ, ಸರ್ಕಾರ ಇನ್ನೂ ಕೈ ಹಾಕಿಲ್ಲ ಎಂದಮೇಲೆ ಇನ್ನು ಈ ಸಮುದಾಯಗಳಿಗೆ ಸವಲತ್ತು ತಲುಪಿಸೋದು ಹೇಗೆ? ಅವರ ಅಭಿವೃದ್ಧಿ ಹೇಗೆ? ಅವರ ಮಕ್ಕಳ ವಿಧ್ಯಾಬ್ಯಾಸ ಹೇಗೆ? ಅವರ ಆರೋಗ್ಯದ ಗತಿ ಏನು?
  ಮತ್ತೂ ದುರಂತವೆಂದರೇ, ಸರ್ಕಾರ ಈ ಸಮುದಾಯಗಳನ್ನು ಗುರುತಿಸದೆ ಇವರು ಸರ್ಕಾರದ ಯಾವ ದಾಖಲೆಗಳಲ್ಲೂ ಕಂಡುಬರದ ಕಾರಣ ಇವರಿಗೆ ಪಡಿತರ ಚೀಟಿ ಮತ್ತು ಮತದಾರರ ಗುರತಿನ ಚೀಟಿ, ಆದಾರ್, ಬ್ಯಾಂಕ್ ಖಾತೆ ಇವೆಲ್ಲ ಸಿಗೋದಾದರೂ ಹೇಗೆ?????? ಆದರೆ ಈ ಸಮುದಾಯಗಳ ಶ್ರಮ ಮತ್ತು ಕುಲಕಸಬುಗಳ ಹೊರತಾದ ಕರ್ನಾಟಕವನ್ನು ಊಹಿಸಿಕೊಳ್ಳುವುದೂ ಕಷ್ಟ. ಅಂದಮೇಲೆ ಸರ್ಕಾರದ 87ಸಾವಿರ ಕೋಟಿ ರೂಪಾಯಿಗಳು ಖರ್ಚಾಗಿರುವುದಾದರೂ ಯಾವ ಮಹತ್ಸಾಧನೆಗೆ ಎಂಬ ಲೆಕ್ಕವನ್ನು ನಾನು ಕೇಳಬೇಕಿದೆ. ಮತ್ತು ಸರ್ಕಾರ ಉತ್ತರಿಸಬೇಕಿದೆ.
  ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಸಮುದಾಯಗಳನ್ನು ಹೇಗಾದರೂ ಮಾಡಿ ಸರ್ಕಾರದ ದಾಖಲೆಗಳಲ್ಲಿ ಸೇರಿಸಬೇಕು ಮತ್ತು ಈಗಾಗಲೇ ಸರ್ಕಾರದ ದಾಖಲೆಗಳಲ್ಲಿ ಸೇರಿದ್ದರೂ ಎಲ್ಲ ಸರ್ಕಾರಿ ಸವಲತ್ತುಗಳಿಂದ ವಂಚನೆಗೊಳಗಾಗಿರುವ ಈ ವಂಚಿತ ಸಮುದಾಯಗಳಿಗೊಂದು ದ್ವನಿ ನೀಡಬೇಕೆಂದು ನಿರ್ಧರಿಸಿ, ಕಳೆದ ಎರಡು ತಿಂಗಳಿಂದ ಶ್ರಮ ವಹಿಸಿ ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸುತ್ತಾಡಿ, ಬಹುತೇಕ ಇಲ್ಲೇ ಉಳಿದು, ಈ ಕಾರ್ಯಕ್ರಮವನ್ನು ರೂಪಿಸಿ ಆದಿವಾಸಿ ಅಲೆಮಾರಿ/ಅರೆಅಲೆಮಾರಿಗಳ ಅಭಿವೃದ್ಧಿಗಾಗಿ ಹಲವಾರು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಆದಿವಾಸಿ ಅಲೆಮಾರಿ/ಅರೆಅಲೆಮಾರಿಗಳ ಬಂಧು ಡಾ॥ ಸಿ.ಎಸ್. ದ್ವಾರಕಾನಾಥ್ ರವರಿಗೆ ಹೃದಯಪೂರ್ವಕ ಧನ್ಯವಾದಗಳು.
  – ಬಿ.ಆರ್.ಭಾಸ್ಕರ್ ಪ್ರಸಾದ್
  ವಿ.ಆರ್. ಕಾರ್ಪೆಂಟರ್.

  • Comments Off on ಅಲೆಮಾರಿ ಸಮುದಾಯಗಳ ಕುಂದುಕೊರತೆಗಳ ಅಹವಾಲು
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.