02:52 am Friday, June 21, 2019
 • ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪ್ರತಿಭಟನಾ ಸಮಾವೇಶ

  By admin - Sat Oct 14, 12:03 am

  • Comments Off on ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪ್ರತಿಭಟನಾ ಸಮಾವೇಶ
  • 0 views

  *lಕುರ್‌ಆನ್‌ಗೆ ಅವಮಾನ ಆರೋಪ:

  *ಮಂಗಳೂರು, ಅ.13: ಪವಿತ್ರ ಗ್ರಂಥ ‘ಕುರ್‌ಆನ್’ಗೆ ಅವಮಾನ ಮಾಡಿರುವ ಪೊಲೀಸ್ ಅಧಿಕಾರಿ ರಕ್ಷಿತ್ ಗೌಡ ಸಹಿತ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಎಂದು ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ. ಡೇಸಾ ಆಗ್ರಹಿಸಿದ್ದಾರೆ.*

  *ಬಂಟ್ವಾಳ ಪೊಲೀಸರು ಮನೆಯ ತಪಾಸಣೆಯ ಸಂದರ್ಭದಲ್ಲಿ ಕುರ್‌ಆನ್‌ಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.*

  *ಮನೆಗೆ ಭೇಟಿ ನೀಡಿ ಪೊಲೀಸರು ತಪಾಸಣೆ ನಡೆಸುವ ಸಂದರ್ಭದಲ್ಲಿ ಪವಿತ್ರ ಗ್ರಂಥ ಕುರ್‌ಆನ್‌ಗೆ ಅವಮಾನ ಮಾಡಿರುವುದು ನಿಜ. ನಮ್ಮ ಸತ್ಯ ಶೋಧನಾ ಸಮಿತಿಯಿಂದ ಇದು ಬಹಿರಂಗವಾಗಿದೆ. ಕಳೆದ 50 ವರ್ಷಗಳಿಂದ ನಾನು ಮಾನವ ಹಕ್ಕುಗಳ ಹೋರಾಟದಲ್ಲಿದ್ದೇನೆ ಎಂದರು.*

  *ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮುಸ್ಲಿಮರು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಧಾರ್ಮಿಕವಾಗಿ ಎಲ್ಲಾ ಸಮುದಾಯಗಳಲ್ಲೂ ಭಿನ್ನಾಭಿಪ್ರಾಯಗಳು ಇವೆ. ಆದರೆ, ಇಂತಹ ವಿಷಯಗಳಲ್ಲಿ ಮುಸ್ಲಿಮರು ತಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಸಲಹೆ ನೀಡಿದರು.*

  ಕುರ್‌ಆನ್‌ಗೆ ಅವಮಾನ ಸಹಿಸೆವು: ಯಾಕೂಬ್ ಸಅದಿ

  *ಪವಿತ್ರ ಗ್ರಂಥ ಕುರ್‌ಆನ್‌ಗೆ ಅವಮಾನವನ್ನು ಸಹಿಸುವುದಿಲ್ಲ ಎಂದು ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಯಾಕೂಬ್ ಸಅದಿ ಹೇಳಿದರು. ಗೋ ಹತ್ಯೆ ವಿಚಾರ, ಮುಸ್ಲಿಂ ಹುಡುಗಿಯರ ಸ್ಕಾರ್ಪ್ ವಿಚಾರಕ್ಕೆ ಸಂಬಂಧಿಸಿ ಮುಸ್ಲಿಮರ ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ, ಈ ವಿಚಾರದಲ್ಲಿ ನ್ಯಾಯಕ್ಕಾಗಿ ಹೋರಾಟಗಳನ್ನು ಮಾಡಬೇಕಾದ ಸ್ಥಿತಿ ಬಂದಿರುವುದು ದುರದೃಷ್ಟಕರ. ಆಡಳಿತ ವರ್ಗ, ಪೊಲೀಸ್ ಇಲಾಖೆಯಿಂದ ಯಾವಾಗ ನ್ಯಾಯ ಸಿಗುವುದಿಲ್ಲವೋ ಅಂತಹ ಸಂದರ್ಭದಲ್ಲಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.*

  *ಪವಿತ್ರ ಗ್ರಂಥ ಕುರ್‌ಆನ್‌ಗೆ ಮಾಡಿರುವ ಅಗೌರವವನ್ನು ತುಚ್ಚವಾಗಿ ಪರಿಗಣಿಸಲಾಗದು. ಅದನ್ನು ಯಾರೋ ಸ್ವತಃ ಬರೆದ ಗ್ರಂಥವಲ್ಲ. ಅದು ಸಕಲ ಮಾನವ ಕುಲದ ಮಾರ್ಗದರ್ಶನಕ್ಕಾಗಿ ಸೃಷ್ಟಿಕರ್ತನಿಂದ ಅವತೀರ್ಣಗೊಂಡ ಗ್ರಂಥವಾಗಿದೆ. ಆದ್ದರಿಂದ ಯಾವ ಮುಸ್ಲಿಮನೂ ಕೂಡ ಕುರ್‌ಆನ್‌ನ್ನು ಮುಂದಿಟ್ಟು ರಾಜಕೀಯ ಮಾಡುವುದಿಲ್ಲ. ಕುರ್‌ಆನ್‌ನ ಮೇಲೆ ಕೈ ಇಟ್ಟು ಮಾತನಾಡಲು ಕೂಡ ಯಾರೂ ಧೈರ್ಯ ತೋರುವುದಿಲ್ಲ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಒಕ್ಕೂಟದ ತಂಡ ಮತ್ತು ಪಿ.ಬಿ. ಡೇಸಾ ನೇತೃತ್ವದ ಸತ್ಯ ಶೋಧನಾ ಸಮಿತಿಯ ತಂಡ ಮನೆಗೆ ತೆರಳಿದಾಗಲೂ ಮನೆಯವರು ಕುರ್‌ಆನ್ ನೆಲಕ್ಕೆಸೆದಿರುವುದನ್ನು ನಿಜ ಎಂದಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ತಪ್ಪಿತಸ್ಥ ಪೊಲೀಸ್‌ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.*

  *ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಸೈಯದ್ ಸೈಫುಲ್ಲಾ ತಂಙಳ್ ಮಂಜೇಶ್ವರ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೇಲ್ ಕಂದಕ್, ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಕಾರ್ಪೊರೇಟರ್ ಅಝೀಝ್ ಕುದ್ರೋಳಿ, ಆಲ್ ಇಂಡಿಯಾ ಇಮಾಂ ಕೌನ್ಸಿಲ್‌ನ ಝಫರ್ ಫೈಝಿ, ಪಿಎಫ್‌ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಹಮೀದ್ ಕುದ್ರೋಳಿ, ಹಮೀದ್ ಕಂದಕ್, ಸಿದ್ದೀಕ್ ತಲಪಾಡಿ, ಹಿದಾಯತ್ ಮಾರಿಪಳ್ಳ, ಅದ್ದು ಸುರತ್ಕಲ್, ಇಕ್ಬಾಲ್ ಮುಲ್ಕಿ, ಸಿ.ಎಂ.ಮುಸ್ತಫಾ, ಮೊಯ್ದಿನ್ ಮೋನು, ಅಹ್ಮದ್ ಬಾವ ಬಜಾಲ್, ಹಿದಾಯತ್ ಸುರತ್ಕಲ್, ಝಾಕಿರ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.*

   

  • Comments Off on ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪ್ರತಿಭಟನಾ ಸಮಾವೇಶ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.