03:57 am Saturday, March 23, 2019
  • Muslim Unity Convention Launched by Janab bommanalli babu

    By admin - Tue Oct 03, 7:47 am

    • Comments Off on Muslim Unity Convention Launched by Janab bommanalli babu
    • 0 views

     

     

     

     

     

    Muslim Unity Convention
    Launched by Janab bommanalli babu saheb at Blore on 3 october. Attica gold company owner today launched the muslim unity and awareness movement.
    Muslim comunity leaders from different districts of karnataka attended. Babu said to media that I will contest and win the forthcoming mla election. Also support and try to send 40 Muslim MLAs

     

    .*ಮುಸ್ಲಿಂಮ್ಸ್ ಯೂನಿಟಿ*
    ಬೆಂಗಳೂರಿನ ಬೊಮ್ಮನಹಳ್ಳಿ ಬಾಬು ಎಂಬ ಸಾಮಾಜಿಕ ಕಾಳಜಿಉಳ್ಳ ಮದ್ಯ ವಯಸ್ಸಿನ ದೃಡಕಾಯ ಮುಸ್ಲಿಂ ನಾಯಕ ತನ್ನ ಸ್ವಂತ ದುಡಿದ ಹಣದಿಂದ ತನ್ನ ಸಮುದಾಯಕ್ಕೆ ತಾನು ಸೇರಿದಂತೆ ತನ್ನ ಕುಟುಂಬವೂ ಸೇವೆಗೆ ಗ್ರೀನ್ ಸಿಗ್ನಲ್. ಸಾಮಾಜಿಕ ನ್ಯಾಯಕ್ಕಾಗಿ ರಾಜ್ಯಾದ್ಯಂತ ಮುಸ್ಲಿಂಮರನ್ನು ಒಂದು ಗೂಡಿಸುವ ಪ್ರಯತ್ನ, ಅಟ್ಟಿಕಾ ಗೋಲ್ಡ್ ಕಂಪನಿಯ ಮೂಲಕ ರಾಷ್ಟ್ರದಲ್ಲಿ ಸ್ಥಾನ ಪಡೆದು ಸಾವಿರಾರು ಕೋಟಿ ಉದ್ಯಮಕ್ಕೆ ಬಂಡಾವಳ ಹೂಡಿ ಸುಮಾರು 650 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದ ದಾಖಲೆ, ಇಂದಿನ ಮುಸ್ಲಿಮರ ಶೋಚನೀಯ ಸ್ಥಿತಿ-ಗತಿ ಅರಿತು, ನ್ಯಾಯದ ಅಗತ್ಯತೆ ಮನಗಂಡು ಸಮಾಜದ ಕಳಕಳಿಯಿಂದ ಮುಸ್ಲಿಂಮ್ಸ್ ಯೂನಿಟಿ 03-10-2017 ರ ಬೆ.ಬೆಂಗಳೂರಿನ ಹೃದಯ ಭಾಗದ ರಾಜ್ ಭವನ ಬಳಿಯ ಕ್ಯಾಪಿಟಲ್ ಹೋಟೆಲಿನಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಆಯ್ದ ಪ್ರಮುಖ ನಾಯಕರು ಆಗಮಿಸಿ ನಗಾರಿ ಬಾರಿಸುವುದರ ಮೂಲಕ ಸಂಸ್ಥಾಪಕ ಬೊಮ್ಮನಹಳ್ಳಿ ಬಾಬು ಚಾಲನೆ ನೀಡಿದರು. ಮುಸ್ಲಿಮರ ಶಿಕ್ಷಣ, ಉದ್ಯೋಗ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ, ವಿಶೇಷ ಕಾಯಿದೆ 9 ನೇ ಪರಿಚ್ಛೇದದಡಿಯಲ್ಲಿ ಮೀಸಲಾತಿ, ರಂಗನಾಥ್ ಮಿಶ್ರ ವರದಿ ಆಧಾರದ ಮೇಲೆ ಮುಸ್ಲಿಮರ ಮೀಸಲಾತಿ ಜಾರಿ, ಹೆಚ್ಚು ಮುಸ್ಲಿಮ್ ಇರುವ ಪ್ರದೇಶದಲ್ಲಿ ಎಸ್ ಸಿ ಎಸ್ ಟಿ ಮೀಸಲು ನಿಗದಿಮಾಡಿ ಮುಸ್ಲಿಂ ಜನಾಂಗಕ್ಕೆ ಅನ್ಯಾಯವನ್ನು ಸರಿಪಡಿಸಲು ಹೋರಾಟ, ರಾಜ್ಯದ ಬಜೆಟಿನಲ್ಲಿ ರಾಜ್ಯದ ಮುಸ್ಲಿಮರಿಗೆ ಮೀಸಲಿಡುವುದು, ಎಲ್ಲಾ ಇಲಾಖೆಯ ಯೋಜನೆ ಏಕಗಾವಕ್ಷಿ ಯೋಜನೆಯಡಿಯಲ್ಲಿ ಜಾರಿಗೊಳಿಸುವುದು.
    ಅತ್ಯವಶ್ಯಕವಾಗಿ ಆಧುನಿಕ ಶಿಕ್ಷಣವನ್ನು ಮದರಸಗಳಲ್ಲಿ ಜಾರಿಗೊಳಿಸುವುದು, ಮದರಸದ ಆಧುನೀಕರಣದ ಹೊಣೆಯನ್ನು ಸರ್ಕಾರ ಭರಿಸಬೇಕು.
    ಮದರಸ ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆ ಎಂದು ಪರಿಗಣಿಸಿ ಈ ಮಾನದಂಡದ ಮೇಲೆ ಆಡಳಿತ ವರ್ಗ, ಶಿಕ್ಷಣ ವರ್ಗಕ್ಕೆ ಸಂಭಳ ನೀಡಬೇಕು, ಶಿಕ್ಷಣ ಜಾರಿಗೊಳಿಸಲು ಆಧುನಿಕ ಶಿಕ್ಷಣದ ತರಬೇತಿ ನೀಡಬೇಕು, ಮದರಸದಲ್ಲಿ ಓದುವ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೀಡುವ ಅಂಕ-ಪ್ರಮಾಣಪತ್ರ ಅವರ ಮುಂದಿನ ಶಿಕ್ಷಣ ಹಾಗೂ ಉನ್ನತ ವಿಧ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪ್ರಮಾಣ ಪತ್ರಗಳನ್ನು ನೀಡಬೇಕು.
    ವಕ್ಫ್ ಬೋರ್ಡ್ ಆಸ್ತಿಪಾಸ್ತಿ ರಕ್ಷಣೆಗೆ ವಿಶೇಷ ಕಾಳಜಿವಹಿಸಿ ಆದಾಯದ ಮೂಲ ಹೆಚ್ಚಿಸುವ ವಿಶೇಷ ಅಭಿವೃದ್ಧಿ ಸಮಿತಿ ರಚನೆ, ಅದರಲ್ಲಿ ಬರುವ ಆದಾಯ ವಿಶೇಷವಾಗಿ ಮುಸ್ಲಿಮ್ ಮಹಿಳೆಯರ ಅಭಿವೃದ್ಧಿಗಾಗಿ ಉಪಯೋಗಿಸುವುದು, ಸಂಪತ್ತಿನ ರಕ್ಷಣಾ ಕಾಯಿದೆ ಮತ್ತಷ್ಟು ಬಲಿಷ್ಠಗೊಳಿಸಬೇಕು ಹಾಗೂ ಅಮೂಲಾಗ್ರವಾಗಿ ಜಾರಿಯಾಗಲು ವಿಶೇಷ ಆದ್ಯತೆ ನೀಡಬೇಕು.
    ಮುಗ್ಧ ಮುಸ್ಲಿಮರ ಮೇಲೆ ಹಾಕಲಾಗಿರುವ ಸುಳ್ಳು ಪ್ರಕರಣವನ್ನು ಪ್ರತ್ಯೇಕವಾಗಿfast track ನ್ಯಾಯಾಲಯ ರಚಿಸಿ ಪ್ರತಿ ಜಿಲ್ಲೆಯಲ್ಲಿ ಪ್ರಕರಣಕ್ಕೆ ಅಂತ್ಯ ಮಾಡಬೇಕು, ನಿರಪರಾಧಿಗಳನ್ನು ಬಿಡುಗಡೆ ಗೊಳಿಸಿ ಪರಿಹಾರ ನೀಡಬೇಕು, ಸುಳ್ಳು ಪ್ರಕರಣ ದಾಖಲಿಸಿದ ಅಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಅವರ ಆಸ್ತಿ ಮುಟ್ಟುಗೊಲು ಹಾಕಿ, ಮುಗ್ಧ ನಿರಪರಾಧಿಗಳಿಗೆ ವಿಶೇಷ ಪರಿಹಾರ ನೀಡಬೇಕು, ರಾಜ್ಯದ ಪ್ರತಿ ಠಾಣೆಯಲ್ಲಿ ಕನಿಷ್ಟ ಇಬ್ಬರು ಮುಸ್ಲಿಮ್ ಸಿಬ್ಬಂದಿ ನೇಮಿಸಬೇಕು.
    ಮುಸ್ಲಿಂ ಮಹಿಳಾ ಸಬಲೀಕರಣದಲ್ಲಿ ವಿಶೇಷ ತೆರಿಗೆ ಸವಲತ್ತು, ಮಹಿಳಾ ಉದ್ಯಮಕ್ಕೆ ಉತ್ತೇಜನ ನೀಡಲು ವಿಶೇಷ ಯೋಜನೆ ಜಾರಿ, ಮುಸ್ಲಿಮ್ ವಿಶ್ವ ವಿದ್ಯಾಲಯ ಸ್ಥಾಪನೆ, ಪ್ರತಿ ವಿಶ್ವವಿದ್ಯಾಲಯದಲ್ಲಿ ಮುಸ್ಲಿಮ್ ಅಧ್ಯಯನ ಕೇಂದ್ರ ಸ್ಥಾಪನೆ.
    ಮುಸ್ಲಿಮ್ ಸ್ವಾತಂತ್ರ್ಯ ಹೋರಾಟಗಾರ ಚರಿತ್ರೆ ಪಠ್ಯಪುಸ್ತಕಗಳಲ್ಲಿ ಅಳವಡಿಕೆ, ಭಾರತದ ಸ್ವಾತಂತ್ರ್ಯದ ಮೊದಲು ಇದ್ದ ರಸ್ತೆ, ಉದ್ಯಾನವನ, ಶಾಲೆ, ನಗರ, ವೃತ್ತ ಹಾಗೂ ಇತರೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಇಡಲಾಗಿದ್ದ ಹಳೆಯ ಮುಸ್ಲಿಂ ಹೆಸರು ಮುಂದುವರಿಸಬೇಕು. ಗ್ರಾಮೀಣ ಭಾಗದಲ್ಲಿ ವಾಸಿಸುವ ಪ್ರತಿ ಬಡ ಕುಟುಂಬಕ್ಕೆ ಎರಡು ಎಕ್ಕರೆ ಜಮೀನು ನೀಡುವ ಕೆಲಸ, ನಗರ, ಪಟ್ಟಣದಲ್ಲಿ ವಾಸಿಸುವ ಬಡ ಮುಸ್ಲಿಮ್ ಕುಟುಂಬಕ್ಕೆ ನಿವೇಶನ, ವಸತಿ ನೀಡುವುದು.
    ಮೂಲಭೂತ ಸೌಕರ್ಯಗಳ ಅನುದಾನ ಹಾಗೂ ಯೋಜನೆ ಅಡಿಯಲ್ಲಿ ಅಭಿವೃದ್ಧಿಗೊಳಿಸುವುದು.
    ಈ ಎಲ್ಲಾ vision ಹೊತ್ತು ತಂದ ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಹಾಗೂ ಮುಸ್ಲಿಮ್ ಯೂನಿಟಿಯ ಸಂಸ್ಥಾಪಕ ಬೊಮ್ಮನಹಳ್ಳಿ ಬಾಬು ಈ ವೇದಿಕೆಯಲ್ಲಿ ಖ್ಯಾತ ನಾಮಂಕಿತರಾದ ಟಿವಿ9 ಖ್ಯಾತಿಯ ರಹಮಾನ್, ಚಲನಚಿತ್ರ ನಟ ಸತ್ಯಜೀತ್, ವರದಕ್ಷಿಣೆ ವಿರೋಧಿ ರಾಜ್ಯ ಅಧ್ಯಕ್ಷ ಹಾಜಿ ಹಮೀದ್ ಕಂದಕ್ ಸೇರಿದಂತೆ ರಾಜ್ಯದ ಖ್ಯಾತ ಉದ್ಯಮಿಯನ್ನು ಸನ್ಮಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮುಸ್ಲಿಮ್ ವಿಶ್ವವಿದ್ಯಾಲಯಕ್ಕೆ ರಾಜ್ಯದ ಎಲ್ಲೇ ಮಾಡಿದರು ಒಂದು ಕೋಟಿ ಹಣ ನೀಡುವುದಾಗಿ, ಮುಸಲ್ಮಾನ ಅಬ್ಯುದಯಕ್ಕೆ ನೂತನ ಟಿವಿ ಚಾನೆಲ್ ಪ್ರಾರಂಭಿಸುವ ಮಾತನಾಡಿದರಲ್ಲದೆ ಹಾಲಿ 11 ಮುಸ್ಲಿಮ್ ಶಾಸಕರೊಂದಿಗೆ ಇನ್ನೂ 40 ಶಾಸಕರನ್ನು ವಿಧಾನಸೌಧಕ್ಕೆ ಆಯ್ಕೆ ಮಾಡಬೇಕು ಎಂದರು, ಮುಸ್ಲಿಮ್ ನಾಯಕರು ಯಾವುದೇ ಪಕ್ಷದಲ್ಲಿದ್ದರೂ ಅವರಿಗೆ ನಮ್ಮ ಬೆಂಬಲ ಇದೆ ಎಂದು ಘೋಷಣೆ ಮಾಡಿದರು, ರಾಜಕೀಯ ಪಕ್ಷಗಳಾದ ಜೆಡಿಎಸ್,ಬಿಜೆಪಿ, ಕಾಂಗ್ರೆಸ್ ಮುಸ್ಲಿಂರನ್ನು ಅಲ್ಪಸಂಖ್ಯಾತ ಎಂದು ಬಿಂಬಿಸಿ ಓಟಿನ ರಾಜಕಾರಣ ಮಾಡುತ್ತದೆ ಎಂದರು. ನಮ್ಮ ಮುಸ್ಲಿಮ್ ಯೂನಿಟಿ ಯಾವುದೇ ಪಕ್ಷದ ಬೆಂಬಲ ಪಡೆಯದೆ ಹೋರಾಟ ಮಾಡಲಿದೆ, ನಮ್ಮ ಸಮುದಾಯದವರು ಎಚ್ಚೇತ್ತುಕೊಳ್ಳಿ ಎಂದರು, ರಾಜ್ಯದ ಮೂಲೆ ಮೂಲೆಗೆ ಪ್ರವಾಸ ಆರಂಭಿಸಿ ನಮ್ಮ ಸಮುದಾಯದವರನ್ನು ಸಂಪರ್ಕಿಸುವ ಭರವಸೆ ನೀಡಿದರು.
    Repoted by  ಶೇಕಬ್ಬ ಪತ್ರಕರ್ತರು.

    • Comments Off on Muslim Unity Convention Launched by Janab bommanalli babu
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.