05:45 am Wednesday, July 24, 2019
 • ನಿಶ್ಚಯ ಮಾಡಿದ್ದೇನೆ. ವಿಧಾನಸಭಾ ಚುನಾವಣೆ

  By admin - Fri Sep 29, 12:45 am

  • Comments Off on ನಿಶ್ಚಯ ಮಾಡಿದ್ದೇನೆ. ವಿಧಾನಸಭಾ ಚುನಾವಣೆ
  • 0 views

  ಈ ಬಾರಿ ದೃಢ ನಿಶ್ಚಯ ಮಾಡಿದ್ದೇನೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ನಾನು ಯಾವುದಾದರೂ ಪಕ್ಷದಿಂದ ಇಲ್ಲವೇ ಪಕ್ಷೇತರನಾಗಿಯಾದರೂ ಚುನಾವಣೆಗೆ ನಿಲ್ಲಲ್ಲೇ ಬೇಕೆ೦ದು.
  ಏಕೆಂದರೆ, ನಮ್ಮ ತಾತ ಒಬ್ಬ ದೊಡ್ಡ ಜಮೀನ್ದಾರರು. ಸುಮಾರು 500 ಎಕರೆಯಷ್ಟು ಕೃಷಿಭೂಮಿ ನಮಗಿತ್ತು. ಇಡೀ ತಾಲ್ಲೂಕಿನಲ್ಲಿ ಮೊದಲಿಗೆ ಕಾರು ಕೊ೦ಡ ಮನೆತನ ನಮ್ಮದು. ನಮ್ಮ ಅಪ್ಪ ಅದನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸಿದ್ದರು. ನಾನು ಆ ಜಮೀನನ್ನು ಕೃಷಿಯೇತರ ಚಟುವಟಿಗೆಗಾಗಿ ಬದಲಾಯಿಸಿ Real Estate ಆರ೦ಭಿಸಿ ಸಾವಿರಾರು Site ಮಾಡಿ 500 ಕೋಟಿಗೂ ಹೆಚ್ಚು ಹಣ ಮಾಡಿದ್ದೇನೆ. ಬೇರೆ ಬೇರೆ ನಗರಗಳಲ್ಲಿ Apartments ಕಟ್ಡಿಸಿ ಮಾರಿದ್ದೇನೆ. Commercial Complex ಗಳಿಂದಲೇ ತಿ೦ಗಳಿಗೆ 20 ಲಕ್ಷಕ್ಕೂ ಹೆಚ್ಚು ಬಾಡಿಗೆ ಬರುತ್ತದೆ. ಆಗಾಗ ಥೈಲ್ಯಾಂಡ್ ಗೆ ಸ್ನೇಹಿತರನ್ನು ಜೊತೆಗೆ ಕರೆದುಕೊಂಡು ಹೋಗಿ Enjoy ಮಾಡಿ ಬರುತ್ತೇನೆ.
  ನನಗೀಗ 40 ವರ್ಷ. ಹೆ೦ಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅಲ್ಲದೆ ನಿಮ್ಮ ಬಳಿ ಮುಚ್ಚುಮರೆ ಏಕೆ ಒಬ್ಬಳು ಬ್ಯಾಂಕ್ ಉದ್ಯೋಗಿಯನ್ನು ಇಟ್ಟುಕೊ೦ಡು Maintain ಮಾಡುತ್ತಿದ್ದೇನೆ.
  ನಮ್ಮ ಏರಿಯಾದ ಗಲಾಟೆಗಳನ್ನು ಸಂಧಾನದ ಮೂಲಕ ಆದಷ್ಟು ಬಗೆಹರಿಸುತ್ತೇನೆ. ಪೋಲೀಸ್, ತಹಸೀಲ್ದಾರ್, ಸಬ್ ರಿಜಿಸ್ಟ್ರಾರ್ ಗಳು ನನಗೆ ಆಪ್ತರು. ಗಣೇಶ ಉತ್ಸವ, ಅಣ್ಣಮ್ಮನ ಉತ್ಸವ, ರಾಜ್ಯೋತ್ಸವ, ಅಂಬೇಡ್ಕರ್ ಜಯ೦ತಿ, ರಾಮನವಮಿ, ಸಾವು ಮದುವೆ ನಾಮಕರಣ ಹೀಗೆ ಪ್ರತಿಯೊಂದಕ್ಕೂ ಹಣ ಕೊಡುತ್ತಲೇ ಇರುತ್ತೇನೆ.
  ಒಮ್ಮೆ ಬಾರಲ್ಲಿ ಕುಳಿತು ಕುಡಿಯುತ್ತಿರುವಾಗ ನನ್ನ ಹಳೆಯ ಮಿತ್ರ ಈಗ ಟಿವಿ ಚಾನಲ್ ನ ಮುಖ್ಯಸ್ಥನಾಗಿರುವ ಆತ ನೀನೇಕೆ Election ಗೆ ನಿಲ್ಲಬಾರದು ಎಂದು ತಲೆಗೆ ಹುಳ ಬಿಟ್ಟ. ಅಲ್ಲದೆ ಆತ ನನಗೆ ಎಲ್ಲಾ ಪಕ್ಷಗಳಲ್ಲೂ Contacts ಇದೆ ಹೇಗಿದ್ದರೂ ನಿನ್ನ ಹತ್ತಿರ ಹಣ ಇದೆ ಒಂದಷ್ಟು ಜನ ಬಲವೂ ಇದೆ. ನಾನು ಯಾವುದಾದರೂ ಪಾರ್ಟಿಯವರ ಬಳಿ ಮಾತನಾಡಿ ಸೀಟು ಕೊಡಿಸುತ್ತೇನೆ ಎಂದ.ನನಗೂ ಸರಿ ಎನಿಸಿತು.
  ಆ ಕ್ಷಣದಿಂದಲೇ ಎಲ್ಲಾ ತಯಾರಿ ಮಾಡುತ್ತಿದ್ದೇನೆ. ಅದಕ್ಕಾಗಿ ಒಬ್ಬ ನಿವೃತ್ತ IAS ಅಧಿಕಾರಿಯನ್ಮು ತಿಂಗಳಿಗೆ ಒಂದು ಲಕ್ಷ ಸ೦ಬಳ ನೀಡಿ ನನ್ನ ಮ್ಯಾನೇಜರ್ ಆಗಿ Appointment ಮಾಡಿಕೊಂಡಿದ್ದೇನೆ. ಆತ ಅಧಿಕಾರದಲ್ಲಿದ್ದಾಗ ಮಹಾ ಭ್ರಷ್ಟ ಅಂತ ಹೆಸರು ಮಾಡಿದ್ದ. ಅದು ನನಗೆ ಒಳ್ಳೆಯದೇ ಆಯಿತು. ಆತ ನನಗೆ ಪ್ರಳಯಾಂತಕ ಐಡಿಯಾ ಕೊಡುತ್ತಾನೆ.
  ಅವರ ಸಲಹೆಯಂತೆ ಈಗಾಗಲೇ ನಮ್ಮ ಏರಿಯಾದ 6 ಜನ ಕಾರ್ಪೊರೇಟರ್ ಗಳ ಬಳಿ ವೈಯಕ್ತಿಕವಾಗಿ ಒಬ್ಬರಿಗೊಬ್ಬರಿಗೆ ಗೊತ್ತಾಗದಂತೆ ಮಾತನಾಡಿದ್ದೇನೆ.ಅವರು ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಚುನಾವಣಾ ಸಮಯಕ್ಕೆ ನನಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಒಬ್ಬೊಬ್ಬರು ಸುಮಾರು 5/6 ಕೋಟಿ ಹಣ ಕೇಳಿದ್ದಾರೆ. ನಾನು ಕೊಡುವುದಾಗಿ ಒಪ್ಪಿಕೊ೦ಡಿದ್ದೇನೆ. Good will gesture ಎ೦ಬ೦ತೆ ಈಗಾಗಲೇ ತಲಾ 50 ಲಕ್ಷ ನೀಡಿದ್ದೇನೆ. ನೀರು ಪೂರೈಸುವ ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ಹೇಳಿ ನೀರಿನ ಕೃತಕ ಅಭಾವ ಸೃಷ್ಡಿಸಿ ನನ್ನದೇ ಉಚಿತ ನೀರಿನ ಟ್ಯಾಂಕರ್ ಗಳನ್ನು ಬಳಸಿ ಮನೆಮನೆಗೂ ನೀರು ಪೂರೈಸುತ್ತಿದ್ದೇನೆ. ಆಗಾಗ ಸ್ಲಂಗಳಿಗೆ ಭೇಟಿನೀಡಿ ಸೀರೆ ಪ೦ಚೆ ಹಂಚಿ ಎಣ್ಣೆ ಬಾಡೂಟ ಹಾಕಿಸುತ್ತಿದ್ದೇನೆ. ಕನ್ನಡದವರ ಬಳಿ ಕನ್ನಡದಲ್ಲಿಯೂ, ತಮಿಳರ ಬಳಿ ತಮಿಳಿನಲ್ಲಿಯೂ, ಮುಸ್ಲಿಂಮರ ಬಳಿ ಉರ್ದುವಿನಲ್ಲಿಯೂ ಮಾತನಾಡುತ್ತಾ ಅವರ ಮನ ಗೆಲ್ಲುತ್ತಿದ್ದೇನೆ.
  ಒಟ್ಟಿನಲ್ಲಿ ಚುನಾವಣೆಗಾಗಿ 150 ಕೋಟಿಗಳನ್ನು ಎತ್ತಿಟ್ಡಿದ್ದೇನೆ. ಒ೦ದು ಓಟಿಗೆ 4/5 ಸಾವಿರ ಚೆಲ್ಲಲು ರೆಡಿಯಾಗಿದ್ದೇನೆ.ಆಯಾ ಜಾತಿಯ ನಾಯಕರುಗಳಿಗೆ ಸ್ಥಳೀಯವಾಗಿ ಒಂದೊಂದು ಲಕ್ಷ ಕೊಡುವುದಾಗಿ ಹೇಳಿದ್ದೇನೆ.
  ನಾನೇನು ದಡ್ಡನಲ್ಲ. ನಮ್ಮ ಮ್ಯಾನೇಜರ್ ಈ ಹಣದ ಹತ್ತುಪಟ್ಟು MLA ಆಗಿ ಗೆದ್ದರೆ ಸ೦ಪಾದನೆಗೆ ದಾರಿ ಹೇಳಿ ಕೊಡುವುದಾಗಿ ಐಡಿಯಾ ಕೊಟ್ಟಿದ್ದಾರೆ. ಕ್ಷೇತ್ರಕ್ಕೆ ಬರುವ ಎಲ್ಲಾ ರೀತಿಯ ಅನುದಾನಗಳಲ್ಲಿಯೂ ಕನಿಷ್ಠ 20% Commission ಬರುತ್ತದಂತೆ. ಇನ್ನು ನಮಗೆ ಬೇಕಾದ ತಹಸೀಲ್ದಾರ್, ಸಬ್ ರಿಜಿಸ್ಟ್ರಾರ್, ಪೊಲೀಸ್, ಸಹಕಾರಿ ಮುಂತಾದ ಅಧಿಕಾರಿಗಳನ್ನು ಹಾಕಿಸಿಕೊಂಡರೆ ತಿಂಗಳಿಗೆ ಲಕ್ಷಾ೦ತರ ಮಾಮೂಲಿ ಹಣ ಬರುತ್ತದಂತೆ. ಸರ್ಕಾರ ಯಾವುದಿದ್ದರೂ ಮಂತ್ರಿಗಳನ್ನು ಹಿಡಿದು ಡೀಲ್ ಮಾಡಿ ದೊಡ್ಡ ದೊಡ್ಡ Project ಗಳನ್ನು Approval ಮಾಡಿಸಿಕೊಟ್ಟರೆ ಕೋಟ್ಯಾಂತರ ಹಣ ಬರುತ್ತದೆ.
  ಪಕ್ಷ ಯಾವುದಾದರೂ ಮಾನ ಮರ್ಯಾದೆ ಬಿಟ್ಟು, ಸ್ವಾಭಿಮಾನ ಮಾರಿಕೊಂಡು ಭಂಡನಂತೆ ಎಲ್ಲರ ಬಳಿಯೂ ಚೆನ್ನಾಗಿದ್ದು ವಿಧಾನಸೌಧಕ್ಕೆ ನುಗ್ಗಿ ಕೆಲಸ ಮಾಡಿಸಿಕೊಳ್ಳುವ ಛಾತಿ ಬೆಳೆಸಿಕೊ೦ಡರೆ ಸಾಕು ಎಂದಿದ್ದಾರೆ.
  ದುಡ್ಡಿದ್ದರೆ ದುನಿಯಾ, ದುಡ್ಡು ಚೆಲ್ಲಿ ದುಡ್ಡು ಬೆಳೆ ಎ೦ಬ ಬುದ್ಧಿವಾದ ಹೇಳಿದ್ದಾರೆ. ಅದಕ್ಕೆ ನಾನು ಎಲ್ಲಾ ಸಿದ್ಧತೆ ಮಾಡಿಕೊಂಡು ಮುನ್ನುಗ್ಗುತ್ತಿದ್ದೇನೆ.2018 ರಿಂದ ನಮ್ಮ ಕ್ಷೇತ್ರದ MLA ನಾನೇ. ನೀವು ಕೂಡ ಯಾವುದಾದರೂ ಡೀಲ್ ಇದ್ದರೆ ತನ್ನಿ. ಆದರೆ ದುಡ್ಡು ಇರಬೇಕಷ್ಟೆ. ಧನ್ಯವಾದಗಳು.
  ಪ್ರಬುದ್ಧ ಮನಸ್ಸು ಪ್ರಬುದ್ದ ಸಮಾಜ,
  ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
  ಮನಸ್ಸುಗಳ ಅಂತರಂಗದ ಚಳವಳಿ
  ವಿವೇಕಾನ೦ದ. ಹೆಚ್.ಕೆ.

  • Comments Off on ನಿಶ್ಚಯ ಮಾಡಿದ್ದೇನೆ. ವಿಧಾನಸಭಾ ಚುನಾವಣೆ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.