08:05 pm Tuesday, June 25, 2019
 • ಶಿಕ್ಷಣ ಕ್ರಾಂತಿಯ ಹರಿಕಾರ ಕಣಚೂರು ಮೋನು ಹಾಜಿ

  By admin - Thu Sep 28, 2:07 am

  • Comments Off on ಶಿಕ್ಷಣ ಕ್ರಾಂತಿಯ ಹರಿಕಾರ ಕಣಚೂರು ಮೋನು ಹಾಜಿ
  • 0 views

  ಕಣಚೂರು ಮೋನು ಹಾಜಿ ಅಭಿಮಾ‌ನಿಗಳ ಸಭೆ*

  ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು ಅವರ ದೇರಳಕಟ್ಟೆ ಕಚೇರಿಯಲ್ಲಿ ಇಂದು ಅವರ ಷಷ್ಠಾಬ್ಧ ಕಾರ್ಯಕ್ರಮದ ಕುರಿತು ಮಾತನಾಡಲು ಸಭೆ ಕರೆಯಲಾಗಿತ್ತು.ಕಣಚೂರು ಷಷ್ಠಾಬ್ಧ ಸಮಿತಿ ಅಧ್ಯಕ್ಷ ಶ್ರೀ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಚಾಲಕ ಡಿ.ಐ.ಅಬೂಬಕರ್ ಕೈರಂಗಳ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
  ಸಾಹಿತಿ ಮುಳಿಯ ಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.


  ಸಭೆಯ ಕೇಂದ್ರ ಬಿಂದು ಹಾಜಿ ಯು.ಕೆ.ಮೋನು ಕಣಚೂರು ಅವರು ತಮ್ಮ ಭಾಷಣದಲ್ಲಿ ತನ್ನ ಗತಕಾಲದ ‌ನೆನಪುಗಳನ್ನು ಮೆಲುಕು ಹಾಕುತ್ತಾ ತಾನು ಸಾಗಿ ಬಂದ ಹಾದಿಗಳ ಬಗ್ಗೆ ಮನೋಜ್ಞವಾಗಿ ವಿವರಿಸಿದರು.
  ಮುಗ್ದತೆಯ ಪರ್ಯಾಯವೆಂಬಂತೆ ಅವರು ತನ್ನ ಮಾತಿನುದ್ದಕ್ಕೂ ಭಾವುಕತೆಯ ಸನ್ನಿವೇಶ ಸೃಷ್ಟಿಸಿದರು.
  ತಾನು ಕಷ್ಟದಿಂದ ಮೇಲೇರಿ ಇಂದು ಅಂತರಾಷ್ಟ್ರೀಯ ಮಟ್ಟದ ಉದ್ಯಮಿ,ಶಿಕ್ಷಣ ಕ್ರಾಂತಿಯ ಹರಿಕಾರನಾಗಿ ಖ್ಯಾತಿ ಪಡೆದಿದ್ದರೂ ಸರಳ ಶೈಲಿಯಲ್ಲಿ ತನ್ನ ಮಾತುಗಳಿಗೆ ಮಂತ್ರಮುಗ್ದತೆ ನೀಡುವ ಮೂಲಕ ನೆರೆದವರ ಪ್ರೀತ್ಯಾದರಗಳಿಗೆ ಪಾತ್ರರಾದರು.
  ತನಗೆ ಕಲಿಸಿದ ಗುರುಗಳ ಬಗ್ಯೆ ಅವರಿಗಿರುವ ಕಾಳಜಿ ಅವರ ಮಾತಿನುದ್ದಕ್ಕೂ ಕಂಡು ಬಂತು.
  ಝೈನಿ ಕಾಮಿಲ್,ಚಂದ್ರೇ ಗೌಡ ಮೂಡಿಗೆರೆ,ರಫೀಖ್ ಮಾಸ್ಟರ್, ಅಕ್ರಂ ಹಾಜಿ,ರಘುರಾಂ ಕಾಜವ,ಮಾಧವ ಬಗಂಬಿಲ,ಟಿ.ಎಸ್.ಅಬ್ದುಲ್ಲಾಹ್ ಸಾಮಣಿಗೆ, ನಾಗೇಶ್ ಮೂಡಿಗೆರೆ, ಚಾರ್ಮಾಡಿ ಹಸ‌‌ನಬ್ಬ ,ಹಾಜಿ ಹಮೀದ್ ಖಂದಕ್ ,ಕೆ.ಎ.ಅಬ್ದುಲ್ ಅಝೀಝ್ ಪುಣಚ ಮೊದಲಾದವರು ಉಪಸ್ಥಿತರಿದ್ದು ಅಭಿಪ್ರಾಯಗಳನ್ನು ಮಂಡಿಸಿದರು.

  ಯು.ಕೆ.ಮೋನು ಕಣಚೂರು ಅವರ ಅದ್ಭುತ ಸೇವಾಕಾರ್ಯಗಳ ಬಗ್ಗೆ ಮನ ತುಂಬಿ ಕೊಂಡಾಡಿದ ಗಣ್ಯರು ,ಸೇವಾರಂಗದಲ್ಲಿ ಕ್ರಾಂತಿಯ ಅಲೆಯೆಬ್ಬಿಸಿದ ಶಿಕ್ಷಣ ಸಾಧಕನ ಷಷ್ಠಾಬ್ಧ ಕಾರ್ಯಕ್ರಮದಲ್ಲಿ ಪ್ರದಾನ ಮಂತ್ರಿ ‌ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು,ರಾಜ್ಯಪಾಲ ವಜೂಬಾಯಿ ವಾಲ,ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ರಾಷ್ಟ್ರ ,ರಾಜ್ಯ ನಾಯಕರು ಭಾಗವಹಿಸುವ ಸಾಧ್ಯತೆ ನಿಚ್ಚಳವಾಗಿದ್ದು ಕಾರ್ಯಕ್ರಮದ ಯಶಸ್ಸಿಗೆ ಯಾವೆಲ್ಲಾ ಪ್ರಯತ್ನ ನಡೆಸಬಹುದೆಂಬುದರ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.

  Reported by aboobakar kairangala

  Editor  madrangi magazin

  • Comments Off on ಶಿಕ್ಷಣ ಕ್ರಾಂತಿಯ ಹರಿಕಾರ ಕಣಚೂರು ಮೋನು ಹಾಜಿ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.