12:08 am Thursday, January 17, 2019
  • ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ” ಎಸ್.ಡಿ.ಪಿ.ಐ

    By admin - Mon Jul 31, 7:26 am

    *ಎಸ್.ಡಿ.ಪಿ.ಐ ವತಿಯಿಂದ “ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ” ಎಂಬ ರಾಷ್ಟ್ರೀಯ ಅಭಿಯಾನ*

    ಬೆಂಗಳೂರು, ಜು31: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಆಗಸ್ಟ್ 1ರಿಂದ 25ರ ವರೆಗೆ “ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೊಧಿಸೋಣ” ಎಂಬ ಶಿರ್ಷಿಕೆಯಡಿಯಲ್ಲಿ ರಾಷ್ಟ್ರೀಯ ಅಭಿಯಾನ ನಡೆಸುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎ. ಸಯೀದ್ ಸಾಬ್‍ರವರು ಕರೆ ನೀಡಿರುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲೂ ಸಹ ಈ ಅಭಿಯಾನವನ್ನು ಯಶಸ್ವಿಗೂಳಿಸಲು ರಾಜ್ಯದ ಎಲ್ಲಾ ಶಾಂತಿ ಪ್ರಿಯ ನಾಗರೀಕರು ನಮ್ಮೂಂದಿಗೆ ಕೈ ಜೋಡಿಸ ಬೇಕಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯದ ಕಾರ್ಯದರ್ಶಿಯಾದ ಅಕ್ರಮ ಹಸನ್ ರವರು ಬೆಂಗಳೂರಿನ ಪ್ರಸ್ ಕ್ಲಬ್ ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
    ತಥಾ ಕಥಿತ ಗೋ ರಕ್ಷಕರು ದೇಶದಲ್ಲಿ ನಿರ್ಮಿಸಿರುವ ಅರಾಜಕತೆಯ ಪರಿಸ್ಥಿತಿಯನ್ನು ಪ್ರತಿರೋಧಿಸಲು ಮತ್ತು ಭಯಭೀತ ಜನರಲ್ಲಿ ಜಾಗೃತಿ ಮೂಡಿಸಿ ಜನರನ್ನು ಸಂಘಟಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ. ದೇಶದಲ್ಲಿ ನೂರಾರು ಮುಸ್ಲಿಂ ಮತ್ತು ದಲಿತ ಕುಟುಂಬಗಳು ಈ ಕೋಮುವಾದಿ ಗೂಂಡಾ ಪಡೆಗಳು ಸೃಷ್ಠಿಸಿದ ಭಯೋತ್ಪಾದನೆಯಿಂದ ನಾಶವಾಗಿದೆ. ಆರ್.ಎಸ್.ಎಸ್ ಮತ್ತು ಬಿಜೆಪಿ ಬೆಂಬಲಿತ ಗೋ ರಕ್ಷಕರು ನಡೆಸಿರುವ ಗುಂಪು ಹಿಂಸಾ ಹತ್ಯೆಯಿಂದಾಗಿ 29 ಮಂದಿ ಅಮಾಯಕ ಜೀವ ಬಲಿಯಾಗಿದ್ದು ನೂರಾರು ಮಂದಿ ಗಾಯಗೊಂಡು ದಯನೀಯ ಸ್ಥಿತಿಗೆ ತಲುಪಿದ್ದಾರೆ. ದೇಶದಾದ್ಯಂತ ಗುಂಪು ಹಿಂಸಾ ಹತ್ಯೆಯು ನಿರಂತರವಾಗಿ ವರದಿಯಾಗುತ್ತಿದ್ದರೂ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ಈ ಹಾವಳಿಯನ್ನು ತಡೆಗಟ್ಟುವ ಬಗ್ಗೆ ಕಿಂಚಿತ್ತು ಗಣನೆಗೆ ತೆಗೆದುಕೊಳ್ಳದಿರುವುದು ಜನತೆಯಲ್ಲಿ ಆಶ್ಚರ್ಯ ಉಂಟುಮಾಡುತ್ತಿದೆ.
    ಸಂಘಪರಿವಾರದ ತರಬೇತಿ ಮತ್ತು ಪ್ರೇರಣೆಯನ್ನು ಹೊಂದಿದ ಪರಿಣಿತ ಆಕ್ರಮಣಕಾರರಿಗೆ ಪಶು ವ್ಯಾಪರ, ಮಾರಟ, ಸಾಗಾಟ ಮತ್ತು ಮಾಂಸ ಸೇವನೆ ಮಾಡುವವರ ಮೇಲೆ ಸರಿಯಾದ ಶಿಕ್ಷೆ ನೀಡಬೇಕೆಂಬ ಆದೇಶದ ಮೇರೆಗೆ ಅವರು ಕೇಸರಿ ರಾಜಕೀಯದ ಬೆಂಬಲ ಮತ್ತು ರಕ್ಷಣೆಯೊಂದಿಗೆ ಬಡ ಅಮಾಯಕ ಮುಸ್ಲಿಮರ ಮೇಲೆ ಗುಂಪು ಹಿಂಸಾ ಹತ್ಯೆಯನ್ನು ಮತ್ತು ದರೋಡೆಯನ್ನು ನಡೆಸುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅವರ ಗುರಿ ಪಶು ವ್ಯಾಪರಸ್ಥರು ಅಥವಾ ಬೀಫ್ ಸಾಗಾಟಗಾರರು ಅಲ್ಲದೆ ಕೇವಲ ಮುಸ್ಲಿಮರು ಮಾತ್ರವೇ ಆಗಿರುವುದು ಕಂಡು ಬಂದಿದೆ. ಪ್ರಧಾನ ಮಂತ್ರಿಯವರ ಹಗುರ ಮತ್ತು ಜಾರಿಕೆಯ ಹೇಳಿಕೆಯು ಅವರಿಗೆ ಈ ದೇಶದ ಮುಸ್ಲಿಂ ಸಮಾಜದ ಹಿತವನ್ನು ಕಾಪಾಡುವ ಬಗ್ಗೆಯಾಗಲಿ ಮತ್ತು ಭಯೋತ್ಪಾದಕ ಗೋ ರಕ್ಷಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಉತ್ಸಾಹ ಇಲ್ಲದಿರುವುದು ಕಂಡುಬರುತ್ತದೆ.
    ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ದೇಶದ ಪ್ರತಿಯೊಂದು ಮೂಲೆ ಮೂಲೆಗಳಲ್ಲಿ ಸಂಚರಿಸಿ ಗುಂಪು ಹಿಂಸಾ ಹತ್ಯೆಯ ವಿರುದ್ದ ಜನರನ್ನು ಸಂಘಟಿಸುವ ಮತ್ತು ಪ್ರತಿರೋಧಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಇದರ ಅಂಗವಾಗಿ ರಾಷ್ಟ್ರದಾದ್ಯಂತ ಸ್ನೆಹ ಕೂಟ, ವಿಚಾರ ಸಂಕಿರಣ, ರ್ಯಾಲಿ, ಬೃಹತ್ ಸಾರ್ವಜನಿಕ ಸಭೆಗಳು, ಗ್ರಾಮ ಸುರಕ್ಷ ಸಮಿತಿಗಳ ರಚನೆ, ಸರ್ವೋಚ್ಚ ನ್ಯಾಯಲಯದ ಮುಖ್ಯ ನ್ಯಾಯಾಧೀಶರಿಗೆ ಆನ್‍ಲೈನ್ ಫಿರ್ಯಾದಿ ಸಲ್ಲಿಕೆ, ಪೋಸ್ಟರ್ ಅಭಿಯಾನ, ಕರಪತ್ರ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ದೇಶದಾದ್ಯಂತ ಸಂಘಟಿಸಲಾಗುವುದು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 34 ಬೃಹತ್ ಸಾರ್ವಜನಿಕ ಸಭೆಗಳು, 150ಕ್ಕೂ ಅಧಿಕ ಕಾರ್ನರ್ ಮೀಟ್‍ಗಳು ಮತ್ತು 10 ವಿಚಾರ ಸಂಕಿರಣಗಳು ನಡೆಯಲಿಕ್ಕಿದೆ.
    “ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೊಧಿಸೋಣ” ಎಂಬ ರಾಷ್ಟ್ರೀಯ ಅಭಿಯಾನವು ಆಗಸ್ಟ್ ಒಂದರಂದು ರಾಜಸ್ಥಾನದ ಜೈಪುರದಲ್ಲಿ ಉದ್ಘಾಟನೆ ಗೊಳ್ಳಲಿದ್ದು ಅಭಿಯಾನದ ಕೊನೆಯ ದಿನವಾದ ಆಗಸ್ಟ್ 25ರಂದು ಭಾರತದ ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ಸಂತ್ರಸ್ಥರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹಾಗೂ ಅವರ ನೋವಿನಲ್ಲಿ ನಾವು ಕೂಡ ಭಾಗಿದಾರರು ಎಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ದೇಶದ ವಿವಿಧ ಪ್ರದೇಶಗಳ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ *“ಮನೆಯಿಂದ ಹೊರಗೆ ಬನ್ನಿ”* ಎಂಬ ಸೂಚನ ಫಲಕವನ್ನು ಪ್ರದರ್ಶಿಸಿ ಕರಾಳತೆಯ ಸಂಕೇತವಾದ ಕಪ್ಪುಪಟ್ಟಿಯನ್ನು ತೋಳುಗಳಿಗೆ ಕಟ್ಟುವ ಮೂಲಕ ದೇಶದ ಗಮನವನ್ನು ಸೆಳೆಯುವುದರೊಂದಿಗೆ ಈ ಅಭಿಯಾನವು ಸಮಾರೋಪಗೊಳ್ಳಲಿದೆ.
    ಆದುದರಿಂದ ಭಯೋತ್ಪಾದಕ ಗೋ ರಕ್ಷಕರನ್ನು ಪ್ರತಿರೋಧಿಸುವ ಮೂಲಕ ಭಾರತದ ಭಾವೈಕ್ಯತೆ ರಕ್ಷಿಸುವ ಸಂದೇಶವನ್ನು ಸಾರುವ ಈ ಅಭಿಯಾನವನ್ನು ಯಶಸ್ವಿಗೂಳಿಸೋಣ ಎಂದು ಅಕ್ರಮ್ ಹಸನ್ ಕರೆ ನೀಡಿದರು.
    ಧನ್ಯವಾದಗಳೊಂದಿಗೆ,
    ಇಂತಿ
    ತಮ್ಮ ವಿಶ್ವಾಸಿ

    (ಮುಜಮಿಲ್)
    ಜಿಲ್ಲಾ ಮಾಧ್ಯಮ ಸಂಯೋಜಕರು,
    ಬೆಂಗಳೂರು.
    ಮೊ.9741505664

    *ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದವರು.*

    1) ಅಕ್ರಮ್ ಹಸನ್, ರಾಜ್ಯ ಕಾರ್ಯದರ್ಶಿ, ಎಸ್.ಡಿ.ಪಿ.ಐ
    2) ಫಯಾಜ್ ಅಹಮದ್, ಜಿಲ್ಲಾಧ್ಯಕ್ಷರು, ಬೆಂಗಳೂರು
    3) ಮುಜಾಹೀದ್ ಪಾಷ, ಕಾರ್ಪೋರೇಟರ್, ಎಸ್.ಡಿ.ಪಿ.ಐ ಸಿದ್ಧಾಪುರ ವಾರ್ಡ್, ಬೆಂಗಳೂರು.
    4) ಷರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬೆಂಗಳೂರು.
    5) ಗಂಗಪ್ಪ, ಜಿಲ್ಲಾ ಸಮಿತಿ ಸದಸ್ಯರು, ಎಸ್.ಡಿ.ಪಿ.ಐ ಬೆಂಗಳೂರು.
    6) ಮುಜಮಿಲ್, ಜಿಲ್ಲಾ ಮಾಧ್ಯಮ ಸಂಯೋಜಕರು, ಎಸ್.ಡಿ.ಪಿ.ಐ, ಬೆಂಗಳೂರು.

    Leave a Reply

    Comments are closed on this post.