07:16 pm Tuesday, June 25, 2019
 • ಸ್ತ್ರೀಶಕ್ತಿ, ಯುವಶಕ್ತಿ, ಮಿಗಿಲಾದ ಶಕ್ತಿ ಇಲ್ಲ-ಪ್ರಮೋದ್

  By admin - Sun Jul 02, 12:18 pm

  1. ಸ್ತ್ರೀಶಕ್ತಿ, ಯುವಶಕ್ತಿ, ಮಿಗಿಲಾದ ಶಕ್ತಿ ಇಲ್ಲ-
   , ಜೂನ್ 29 (ಕರ್ನಾಟಕ ವಾರ್ತೆ):- ರಾಜ್ಯ ಸರಕಾರ ತಾಯಂದಿರು ಮತ್ತು ಮಕ್ಕಳನ್ನು ಬಲಪಡಿಸಲು ಅನ್ನಭಾಗ್ಯ, ಕ್ಷೀರಧಾರೆ, ಕ್ಷೀರಭಾಗ್ಯದಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸ್ತ್ರೀಯರಿಗೆ ವಿಶೇಷ ಶಕ್ತಿ ನೀಡಲು ಸರ್ವ ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಜಿಲ್ಲಾ/ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಹಂದಾಡಿ ಗ್ರಾಮಪಂಚಾಯತ್ ಹತ್ತಿರ ಗಾಂಧಿ ಮೈದಾನದಲ್ಲಿ ನಡೆದ ಉಡುಪಿ ತಾಲೂಕು ಸ್ತ್ರೀಶಕ್ತಿ ಭವನ ಮಾರುಕಟ್ಟೆ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ, ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡರೆ ಸಮಾಜವು ಬಲಿಷ್ಠವಾಗುತ್ತದೆ. ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ತ್ರೀಶಕ್ತಿ ಭವನದ ಪಕ್ಕದಲ್ಲೇ 6.5 ಎಕರೆಯಲ್ಲಿ ಗಾಂಧಿ ಮೈದಾನವಿದ್ದು ತಮ್ಮ ಅಧಿಕಾರ ಅವಧಿಯಲ್ಲೇ ಇದನ್ನು ಯುವಜನ ಮತ್ತು ಕ್ರೀಡಾ ಇಲಾಖೆಯ ಸುಪರ್ಧಿಗೆ ತೆಗೆದುಕೊಂಡು ಉತ್ತಮ ಕ್ರೀಡಾಂಗಣವನ್ನು ಯುವಕರಿಗೋಸ್ಕರ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. 2.50 ಲಕ್ಷದಲ್ಲಿ ನಿರ್ಮಾಣಗೊಂಡಿರುವ ಸ್ತ್ರೀಶಕ್ತಿ ಭವನವು ‘ಸ್ತ್ರೀಯರಲ್ಲಿ ಶಕ್ತಿ’ ತುಂಬುವಂತಹ ಭವನವಾಗಲಿ ಎಂದು ಈ ಸಂದರ್ಭದಲ್ಲಿ ಸಚಿವರು ಹಾರೈಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಭವನದ ಅಗತ್ಯ ಮತ್ತು ಬಳಕೆಯ ಕುರಿತು ಮಾರ್ಗದರ್ಶನ ನೀಡಿದರು. ಹ5ಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರತಿಮಾ ಶೆಟ್ಟಿ., ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರಸ್ವತಿ, ಉಡುಪಿ ತಾಲೂಕು ಪಂಚಾಯತ್ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ದಿನಕರ ಹೇರೂರು, ಕುಸುಮಾ ಪೂಜಾರಿ, ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲಿಸ್ ಉಪಸ್ಥಿತರಿದ್ದರು. ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸ್ವಾಗತಿಸಿದರು.ಶೋಭಾ ಕಾರ್ಯಕ್ರಮ ನಿರೂಪಿಸಿದರು.
   ___________________________________

   ಮಲೇರಿಯಾ ಮುಕ್ತ ಉಡುಪಿಗೆ ಕೈ ಜೋಡಿಸಿ- ಪ್ರಮೋದ್ಉಡುಪಿ, ಜೂನ್ 30 (ಕರ್ನಾಟಕ ವಾರ್ತೆ):- ಉಡುಪಿ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಆರೋಗ್ಯ ಇಲಾಖೆ ಮತ್ತು ನಗರಸಭೆಯೊಂದಿಗೆ ಸಾರ್ವಜನಿಕರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ, ಉಡುಪಿ, ಏಳೂರು ಮೊಗವೀರ ಮಹಾಜನ ಸಂಘ(ರಿ), ರೋಟರಿ ಕ್ಲಬ್ ಮಲ್ಪೆ ಕೊಡವೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ -2017 ಕಾರ್ಯಕ್ರಮದಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ 2015 ರಲ್ಲಿ 1366 ಮಲೇರಿಯ ಪ್ರಕರಣ ವರದಿಯಾಗಿದ್ದು, 2016 ರಲ್ಲಿ 1168 ಹಾಗೂ ಈ ವರ್ಷ ಇದುವರೆಗೆ 111 ಪ್ರಕರಣ ವರದಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಮಲೇರಿಯಾ ರೋಗ ನಿಯಂತ್ರಣಕ್ಕೆ ಬರುತ್ತಿದೆ , ಆರೋಗ್ಯ ಇಲಾಖೆಯಿಂದ ಮಲೇರಿಯಾ ತಡೆಗಾಗಿ ಜಿಲ್ಲೆಯ 18000 ಕುಟುಂಬಳಿಗೆ ಸೊಳ್ಳೆ ಪರದೆಗಳನ್ನು ವಿತರಿಸಲಾಗುತ್ತಿದ್ದು, ನಗರಸಭೆಯಿಂದ ಪ್ರತಿ ವರ್ಷ ಮೇಲೇರಿಯಾ ನಿಯಂತ್ರಣಕ್ಕಾಗಿ 7 ಲಕ್ಷ ರೂ ಗಳನ್ನು ವೆಚ್ಚ ಮಾಡಲಾಗುತ್ತಿದೆ, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಗೊಂಡು , ನೀರು ನಿಲ್ಲದಂತೆ ಹಾಗೂ ಮನೆ ಸುತ್ತಮುತ್ತ ಸೊಳ್ಳೆಗಳ ಬೆಳವಣಿಗೆಯಾಗದಂತೆ ಮುಂಜಾಗ್ರತೆ ವಹಿಸುವುದರಿಂದ ಮಲೇರಿಯಾ ರೋಗದಿಂದ ಮುಕ್ತವಾಗಬಹುದು , ಉಡುಪಿಯನ್ನು ಮಲೇರಿಯಾ ಮುಕ್ತ ಜಿಲ್ಲೆಯಾಗಿಸಲು ಪ್ರತಿ ವ್ಯಕ್ತಿ, ಪ್ರತಿ ಕುಟುಂಬ ಹಾಗೂ ಇಡೀ ಸಮಾಜ ಕೈಜೋಡಿಸಬೇಕು , ಸಮಾಜದಲ್ಲಿ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಚಿವರು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಹಾಸ್ಟೆಲ್ ಗಳ ವಿದ್ಯಾರ್ಥಿಗಳಿಗೆ ಸಚಿವರು ಸೊಳ್ಳೆ ಪರದೆಗಳನ್ನು ವಿತರಿಸಿದರು. ಮುಖ್ಯ ಅತಿಥಿಯಾಗಿದ್ದ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾದವ ಬನ್ನಂಜೆ ಮಾತನಾಡಿ, ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ತ್ಯಾಜ್ಯ ಸೃಷ್ಠಿಯಾಗಿ ರೋಗಗಳು ಬರುತ್ತವೆ, ನಗರಸಭೆವತಿಯಿಂದ ಕೈಗೊಳ್ಳಲಾಗಿರುವ ಕಸ ವಿಲೇವಾರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಹಕರಿಸುವಂತೆ ಮತ್ತು ಮನೆಯ ಬಳಿ ಸ್ವಚ್ಚತೆ ಕಾಪಾಡುವಂತೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛತೆ ಮುಖ್ಯ, ಸ್ವಚ್ಛತೆಯನ್ನು ಕಾಪಾಡಿ , ಪೊಲಿಯೋ ರೀತಿಯಲ್ಲಿ ಮಲೇರಿಯವನ್ನು ನಿರ್ಮೂಲನೆಗೊಳಿಸಬೇಕು ಎಂದರು. ಉಡುಪಿ ಜಿ.ಪಂ.ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಪ್ರೇಮಾನಂದ್, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣಪತಿ ಭಟ್, ಏಳೂರು ಮೊಗವೀರ ಮಹಾಜನ ಸಂಘ(ರಿ) ನ ಉಪಾಧ್ಯಕ್ಷ ಗುಂಡು ಬಿ ಅಮೀನ್, ರೋಟರಿಯ ಮಹೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಸ್ವಾಗತಿಸಿದರು, ಆರೋಗ್ಯ ಮೇಲ್ವಿಚಾರಕ ಕೃಷ್ಣಪ್ಪ ವಂದಿಸಿದರು. ಆರೋಗ್ಯ ಇಲಾಖೆಯ ಆನಂದ ಗೌಡ ನಿರೂಪಿಸಿದರು. (ಪೋಟೋ ಲಗತ್ತಿಸಿದೆ)

   

  Leave a Reply

  Comments are closed on this post.