04:02 am Tuesday, June 19, 2018
 • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಉತ್ತಮ ಹೆಜ್ಜೆ:

  By admin - Wed Jun 28, 2:23 pm

   

   

   

   

   

   

  *ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಉತ್ತಮ ಹೆಜ್ಜೆ:*

  *ಸರಕಾರಿ ಕೆಲಸ ಆಗಬೇಕಾದರೆ ನಾವು ಸರಕಾರಿ ಕಚೇರಿಗಳ ಬಾಗಿಲು ತಟ್ಟಲೇಬೇಕಾಗುತ್ತದೆ. ಈ ಮಧ್ಯೆ ಲಂಚ, ಭ್ರಷ್ಟಾಚಾರ ಅಂತೂ ಇದ್ದೇ ಇರುತ್ತದೆ. ಅದರಲ್ಲಿ ಯಾವುದೇ ಮುಲಾಜಿ ಇಲ್ಲದೆ, ಬಾಯಿಬಿಟ್ಟು ಕೇಳುವ ಅಧಿಕಾರಿಗಳು ನಮ್ಮ ನಡುವೆ ಸಾಕಷ್ಟು ಇರುವ ಈ ಸಂದರ್ಭದಲ್ಲಿ ಹಾಗೂ ಜೊತೆಗೆ ಅಲೆದಾಡುವ ಪರಿಸ್ಥಿತಿ ಬೇರೆ.‌ ಈ ಮಧ್ಯೆ ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯವು ಉತ್ತಮ ಹೆಜ್ಜೆಯನ್ನು ಮುಂದಿಟ್ಟಿದೆ. ತಮ್ಮ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ದ.ಕ.ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಕೇವಲ ಜಿಲ್ಲಾ ಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದ ಮಾಹಿತಿ ಕೇಂದ್ರವನ್ನು ಈ ವರ್ಷದಿಂದ ತಾಲೂಕು ಮಟ್ಟದಲ್ಲಿಯೂ‌ ಪ್ರಾರಂಭಿಸುವ ಮೂಲಕ ಜನಪರ ಇಲಾಖೆಯಾಗಿ ಗುರುತಿಸಿಕೊಂಡಿದೆ. ಈ ನಿರ್ಧಾರವು ಜನರಿಗೆ ಕಚೇರಿಯ ಅಲೆದಾಡುವ ಪರಿಸ್ಥಿತಿ ತಪ್ಪಿಸಲು ಸಹಾಯಕವಾಗಿದೆ. ಈ ನಿರ್ಧಾರ ತೆಗೆದುಕೊಂಡ ಅಲ್ಪಸಂಖ್ಯಾತರ ಇಲಾಖೆಯ ಸಚಿವರಾದ ತನ್ವೀರ್ ಸೇಠ್, ನಿರ್ದೇಶಕರಾಗಿರುವ ಅಕ್ರಂ‌‌ ಪಾಷಾ ಸರ್, ಸರಕಾರದ ಕಾರ್ಯದರ್ಶಿಯಾಗಿರುವ ಮುಹಮ್ಮದ್ ಮುಹ್ಸಿನ್ ಸರ್ ಹಾಗೂ ಎಲ್ಲಾ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೂ ಧನ್ಯವಾದಗಳು.*
  💐💐💐💐💐💐💐💐💐💐
  *ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳು ಇಂತಹ ಕೇಂದ್ರಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವ ಮೂಲಕ, ಸರಕಾರದ ಯೋಜನೆಯನ್ನು ಜಾರಿಗೆಗಾಗಿ ಸಹಕರಿಸಬೇಕು.*

  *ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಈ ಯೋಜನೆ ಸರಕಾರದ ಎಲ್ಲಾ ಇಲಾಖೆಗಳಿಗೂ ಮಾದರಿಯಾಗಲಿ ಎಂದು ಹಾರೈಸುತ್ತೇನೆ. ಅದಕ್ಕಾಗಿ ಯೋಜನೆ ಹಾಕಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಿ.*
  ಪ್ರೀತಿಯಿಂದ,
  ✍🏽 *ಇರ್ಷಾದ್ ವೇಣೂರ್*😍
  ★★★
  *ತಾಲೂಕು ಮಟ್ಟದಲ್ಲಿರುವ ಮಾಹಿತಿ ಕೇಂದ್ರದಲ್ಲಿ ಓರ್ವ ಮಾಹಿತಿ ಅಧಿಕಾರಿ ಹಾಗೂ ಓರ್ವ ಕಂಪ್ಯೂಟರ್ ಆಪರೇಟಿಂಗ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ‌.*
  *ದ.ಕ. ಜಿಲ್ಲೆಯಲ್ಲಿರುವ ಪ್ರಾರಂಭಿಸಿರುವ ತಾಲೂಕು ಮಾಹಿತಿ ಕೇಂದ್ರದ ವಿಳಾಸ & ದೂ.ಸಂಖ್ಯೆ:*

  *1. ಮಂಗಳೂರು ತಾಲೂಕು*
  (ಕೇಂದ್ರ ಕಚೇರಿ)
  ಮೌಲಾನಾ ಆಝಾದ್ ಭವನ, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು ದೂ.0824-2433078

  *2. ಬಂಟ್ವಾಳ ತಾಲೂಕು:*
  ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ,
  ಶಾಂತಿ ಅಂಗಡಿ, ಬಂಟ್ವಾಳ
  ದೂ.ಸಂ. 08255-232470,

  *3. ಬೆಳ್ತಂಗಡಿ ತಾಲೂಕು:*
  ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ,
  ಜಮೀಯ್ಯತುಲ್ ಫಲಾಹ್ ಕಟ್ಟಡ,
  ಸಂಜಯ ನಗರ,
  ಬೆಳ್ತಂಗಡಿ
  ದೂ.ಸಂ.: 08256-233336,

  *4. ಪುತ್ತೂರು ತಾಲೂಕು:*
  ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ,
  ಮೊದಲನೇ ಮಹಡಿ,
  ಜುಮಾ ಮಸೀದಿ ವಾಣಿಜ್ಯ ಕಟ್ಟಡ,
  ಮೊಳಹಳ್ಳಿ ಶಿವರಾಯ ರಸ್ತೆ, ಪುತ್ತೂರು
  ದೂ.ಸಂ.08251-237078

  *5. ಸುಳ್ಯ ತಾಲೂಕು:*
  ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ,
  1 ನೇ ಮಹಡಿ,
  ಜನತಾ ಕಾಂಪ್ಲೆಕ್ಸ್,
  ಗಾಂಧಿನಗರ, ಸುಳ್ಯ
  ದೂ.ಸಂ: 08257-230666
  ★★★★★★

  *ಈ‌ ಮಾಹಿತಿಯನ್ನು ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಹಾಗೂ ಪಾರ್ಸಿ ಬಾಂಧವರಿಗೆ ತಲುಪಿಸಿ.*

  *ಸಾರ್ವಜನಿಕರ ಮಾಹಿತಿಗಾಗಿ:*
  *ಇರ್ಷಾದ್ ವೇಣೂರ್,*
  ಸಂಯೋಜಕರು,
  ಸರಕಾರಿ ಸೌಲಭ್ಯಗಳ ಮಾಹಿತಿ ವಿಭಾಗ,
  ಸಮಾಜ ಸೇವಾ ಘಟಕ,
  ಜಮಾಅತೆ ಇಸ್ಲಾಮೀ ಹಿಂದ್,
  ದ.ಕ‌. ಜಿಲ್ಲೆ, ಮಂಗಳೂರು
  9844963059
  7676413059

  ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ 2017-18ನೇ ಸಾಲಿನ ವಿದ್ಯಾರ್ಥಿ ವೇತನ:~*

  *ಅಲ್ಪ ಸಂಖ್ಯಾತ ಸಮುದಾಯದ ಪ್ರಶಂಸನೀಯ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಯೋಜನೆಯಡಿ 2017-18ನೇ ಸಾಲಿನ ವಿದ್ಯಾರ್ಥಿ ವೇತನ ನೀಡಲು ಆನ್-ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.*

  *ಮುಸ್ಲಿಂ, ಸಿಖ್, ಕ್ರೈಸ್ತ, ಬೌದ್ಧ ಮತ್ತು ಪಾರ್ಸಿ ವರ್ಗದ ವಿದ್ಯಾರ್ಥಿಗಳಿಗೆ ಪ್ರಿ-ಮೆಟ್ರಿಕ್, ಪೋಸ್ಟ್ ಮೆಟ್ರಿಕ್ ಮತ್ತು ಮೆರಿಟ್ ಕಂ ಮೀನ್ಸ್ ಸ್ಮಾತಕೋತ್ತರ ಮತ್ತು ಟೆಕ್ನಿಕಲ್ ಕೋರ್ಸ್ಗಳನ್ನು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.*

  *ವಿದ್ಯಾರ್ಥಿ ವೇತನಕ್ಕೆ ಹೊಂದಿರಬೇಕಾದ ಅರ್ಹತೆಗಳು:*

  *ಪ್ರಿ ಮೆಟ್ರಿಕ್ ವಿದ್ಯಾರ್ಥಿ ವೇತನ:*

  *ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರುವಿದ್ಯಾರ್ಥಿಯ ವಾರ್ಷಿಕ ಆದಾಯವು ರೂ.1 ಲಕ್ಷ ಮೀರಿರಬಾರದುವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಯು ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.*

  *ಈ ವಿದ್ಯಾರ್ಥಿ ವೇತನವು ಒಂದು ಕುಟುಂಬದ ಇಬ್ಬರು ಮಕ್ಕಳಿಗೆ ಮಾತ್ರ ದೊರೆಯುತ್ತದೆ.*

  *ಒಂದು ವರ್ಷದಲ್ಲಿ ವಿದ್ಯಾರ್ಥಿ ವೇತನದ ಸಂಖ್ಯೆ ಸ್ಥಿರವಾಗಿ ಮತ್ತು ಸೀಮಿತವಾಗಿರುತ್ತದೆ. ಶೇ.30 ವಿದ್ಯಾರ್ಥಿ ವೇತನವನ್ನು ಹೆಣ್ಣು ಮಕ್ಕಳಿಗಾಗಿ ಮೀಸಲಿಟ್ಟಿದ್ದು, ಒಂದು ವೇಳೆ ಅರ್ಹ ವಿದ್ಯಾರ್ಥಿನಿಯರು ಇಲ್ಲದಿದ್ದಲ್ಲಿ ಗಂಡು ಮಕ್ಕಳಿಗೆ ನೀಡಲಾಗುವುದು.*

  *ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ:*

  *ಮಾಧ್ಯಮಿಕ ಶಾಲೆ/ಕಾಲೇಜು/ವಿಶ್ವವಿದ್ಯಾಲಯ/ವಸತಿ ಸಂಸ್ಥೆಗಳು/ಅರ್ಹ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 11 ಮತ್ತು 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಹಾಗೂ ವೃತ್ತಿಪರ ಕೋರ್ಸುಗಳಾದ ಐಟಿಐ, ಟೆಕ್ನಿಕಲ್ ಕೋರ್ಸ್ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.*

  *ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಕನಿಷ್ಠ 50% ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕು.ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ರೂ.2.00 ಲಕ್ಷ ಮೀರಿರಬಾರದು.*

  *ಮೆರಿಟ್ ಕಂ ಮೀನ್ಸ್ ಬೇಸ್ಟ್ ವಿದ್ಯಾರ್ಥಿ ವೇತನ:*

  *ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ ಕೋರ್ಸುಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.*

  *ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು ರೂ.2.50 ಲಕ್ಷ ಮೀರಿರಬಾರದು.ವಿದ್ಯಾರ್ಥಿಯು ಆಧಾರ್ ಕಾರ್ಡ್ ಜೊತೆಗೆ ಒಂದು ವರ್ಷದೊಳಗೆ ಮಾಡಿಸಿರುವ ಆದಾಯ ಪ್ರಮಾಣ ಪತ್ರ ಹೊಂದಿರಬೇಕು.*

  *ಪ್ರಮುಖ ದಿನಾಂಕಗಳು:*

  *ಪ್ರಿ-ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ: 30-09-2017*

  *ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ: 31-10-2017*

  *ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನಕ್ಕೆ: 31-10-2017*

  *ಅರ್ಜಿ ಸಲ್ಲಿಕೆ:*

  *ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಯ ಹೊಸ 15 ಕಾರ್ಯಕ್ರಮಗಳನ್ನು ಜೂನ್ 2006 ರಂದು ಘೋಷಿಸಲಾಯಿತು. ಈ ವಿದ್ಯಾರ್ಥಿ ವೇತನವು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನೀಡಲಾಗುತ್ತಿದ್ದು, ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರಿಗಾಗುವ ಹಣಕಾಸಿನ ಹೊರೆಗಳನ್ನು ತಗ್ಗಿಸುತ್ತದೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಶಿಕ್ಷಣವನ್ನು

  Leave a Reply

  Comments are closed on this post.