07:16 pm Tuesday, June 25, 2019
  • ಕೌಶಲ್ಯಾಭಿವೃದ್ಧಿ ಯೊಜನೆ ಅಲ್ಪಸಂಖ್ಯಾತರರಿಂದ 73.501 ಅರ್ಜಿಗಳು

    By admin - Fri Jun 16, 9:56 am

    ಕೌಶಲ್ಯಾಭಿವೃದ್ಧಿ ಯೋಜನೆಯಡಿ 73.501 ಅರ್ಜಿ ಸ್ವೀಕಾರ
    ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಯೊಜನೆಯಡಿಯಲ್ಲಿ ಅಲ್ಪಸಂಖ್ಯಾತರರಿಂದ 73.501 ಅರ್ಜಿಗಳು ಸ್ವೀಕರವಾಗಿದ್ದು ಅವರಿಗೆ ವಿವಿಧ ರೀತಿಯ ′ಉದ್ಯೋಗಕ್ಕೆ ಅನುಕೂಲವಾಗುವ ತರಬೇತಿಯನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಇಂದು ಕೆ. ಅಬ್ಬುಲ್ ಜಬ್ಬಾರ್ ಅವರ ಪ್ರಶ್ನೆಗೆ ಉತ್ತರಿಸುತ್ತಾ “ಕೌಶಲ್ಯ ಕರ್ನಾಟಕ ನೋಂದಣಿ ಅಭಿಯಾನ” ಕಾರ್ಯಕ್ರಮ ಪ್ರಾರಂಭಿಸಿದ್ದು, ಇಲಾಖೆಯ ವೆಬ್ ಪೋರ್ಟಲ್  ನಲ್ಲಿ ಅಭ್ಯರ್ಥಿಗಳ ಮತ್ತು ತರಬೇತಿ ಕೇಂದ್ರಗಳ ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದು ಸದನಕ್ಕೆ ತಿಳಿಸಿದರು. ನೋಂದಣಿಮಾಡಿಕೊಳ್ಳುವ ಪ್ರತಿ ಅಭ್ಯರ್ಥಿಗೆ ಅವರು ಇಚ್ಛಿಸುವ ಐದು ಕೋರ್ಸುಗಳ ಆಯ್ಕೆಗೆ ಅವಕಾಶ ನೀಡಲಾಗಿದೆ. ಎನ್.ಎಸ್.ಡಿ.ಸಿ. ವತಿಯಿಂದ ಅನುಮೋದಿಸಿದ 529 “ಜಾಬ್ ರೋಲ್ಸ್” ಗಳಲ್ಲಿ ತರಬೇತಿ ನೀಡಲಾಗುವುದು ಎಂದು ಸದಸ್ಯರಿಗೆ ತಿಳಿಸಿದರು.

    Leave a Reply

    Comments are closed on this post.