07:52 pm Tuesday, June 25, 2019
 • 5 ಕಡೆ ಆಧಾರ್ ಕೇಂದ್ರ : ಸಚಿವ ಯು.ಟಿ.ಖಾದರ್

  By admin - Sun Jun 11, 12:39 am

  •ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರೀಘ್ರವೇ 5 ಕಡೆ ಗಳಲ್ಲಿ ಆಧಾರ್ ಕೇಂದ್ರಗಳನ್ನು ಆರಂಭಿ ಸಲಾಗುವುದು. ಇದರಿಂದ ಪ್ರತಿಯೊ ಬ್ಬರೂ ಆಧಾರ್ ಕಾರ್ಡ್ ಹೊಂದುವ ಮೂಲಕ ಸರ್ಕಾರಿ ಸೌಲಭ್ಯವನ್ನು ಸುಲಭ ವಾಗಿ ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.

  ತೊಕ್ಕೊಟ್ಟು ಸಮೀಪದ ಖಾಸಗಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಜನ ಸಂಪರ್ಕ ಸಭೆ ಯಲ್ಲಿ  ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಅವರು ಮಾತನಾಡಿ, ‘ಸರ್ಕಾರ ಎಲ್ಲ ವರ್ಗದ ಜನರಿಗೂ ವಿವಿಧ ಸೌಲಭ್ಯ ಗಳನ್ನು ಜಾರಿಗೆ ತಂದಿದ್ದು, ಇದರ ಪ್ರಯೋಜನ ಪಡೆಯುವ ಮನೋಭಾವ ಎಲ್ಲರಲ್ಲೂ ಇರಬೇಕು  ಎಂದು ತಿಳಿಸಿದರು.

  ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆ ಯಡಿ 186 ಫಲಾನುಭವಿಗಳಿಗೆ ₹37. 60 ಲಕ್ಷ  ಹಾಗೂ ಅಂತ್ಯ ಸಂಸ್ಕಾರ ಸಹಾ ಯಧನವಾಗಿ 100 ಫಲಾನುಭವಿಗಳಿಗೆ ₹2.22 ಲಕ್ಷ ಮೊತ್ತದ ಚೆಕ್ ವಿತರಿಸ ಲಾಯಿತು.

  ಜಿಲ್ಲಾ ಪಂಚಾಯಿತಿ ಸದಸ್ಯೆ ರಶೀದಾ ಬಾನು, ತಾಲ್ಲೂಕು ಪಂಚಾಯಿತಿ ಸದಸ್ಯ ರಾದ ಅಬೂಬಕ್ಕರ್ ಸಿದ್ದೀಕ್ ಕೊಳಂ ಗೆರೆ, ಸುರೇಖ ಚಂದ್ರಹಾಸ್, ಅಬ್ದುಲ್ ಜಬ್ಬಾರ್ ಬೋಳಿಯಾರ್, ಪದ್ಮಾವತಿ ಪೂಜಾರಿ, ಶಶಿಪ್ರಭಾ ಶೆಟ್ಟಿ, ವಿಲ್ಮಾ ವಿಲ್ಫ್ರೆಡ್, ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಂಞಮೋನು, ಉಪಾಧ್ಯಕ್ಷೆ ಚಿತ್ರಕಲಾ, ಬೋಳಿಯಾರ್ ಅಧ್ಯಕ್ಷ ಸತೀಶ್ ಆಚಾರ್ಯ, ಮಂಜ ನಾಡಿ ಅಧ್ಯಕ್ಷ ಮೊಹಮ್ಮದ್ ಅಸೈ, ಎಪಿ ಎಂಸಿ ಉಪಾಧ್ಯಕ್ಷೆ ಮುತ್ತು ಶೆಟ್ಟಿ, ಕೆಎಸ್‍ ಆರ್‌ಟಿಸಿ ನಿರ್ದೇಶಕ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.

  ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು ಅವರು ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾನಂದ ವಂದಿಸಿದರು.
  ಮಾಸಿಕ ಪೆನ್ಷನ್ ಸಹಿತ ಜನಸಾಮಾನ್ಯರ ದೂರು ಆಲಿಸುವ ನಿಟ್ಟಿನಲ್ಲಿ ತಾಲ್ಲೂಕು ಕಚೇರಿ ಯಲ್ಲಿ ‘ದೂರು ಕೇಂದ್ರ’ ಆರಂಭಿಸುವಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿದೆ.
  -ಯು.ಟಿ.ಖಾದರ್,
  ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

  Leave a Reply

  Comments are closed on this post.