ಕರ್ನಾಟಕದಲ್ಲಿ ಈಗ ಒಂದು ಹೊಸ ಮಾಹಿತಿ ಹರಿದಾಡುತ್ತಿದೆ – “ಒಂದು ಕೋಟಿ ಮತದಾರರ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ” ಎಂಬುದು ಸಂಪೂರ್ಣ ಸುಳ್ಳು. ಎಂದು ನಾಡಿನ ಹಿರಿಯ ಪತ್ರಕರ್ತ ಮತ್ತು ಚಿಂತಕ ಅಬ್ದುಲ್ ಖಾಲಿಕ್ ಬೆಂಗಳೂರು ರವರು ಅಭಿಪ್ರಾಯಪಟ್ಟಿದ್ದಾರೆ. ಅವರು ತಮ್ಮ ಅಂಕಣದಲ್ಲಿ ವಿಷಯ ಈ ವಿಷಯ ಬರೆದಿದ್ದಾರೆ.
ನಾನು ಈ ವಿಷಯವನ್ನು ಪರಿಶೀಲಿಸಿದಾಗ, ಇದು ಕೇವಲ ವದಂತಿಯಷ್ಟೇ ಎಂಬುದು ಸ್ಪಷ್ಟವಾಗಿದೆ.
ಮುಖ್ಯ ಚುನಾವಣಾಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಕಾರ್ಯವನ್ನು ನಡೆಸುತ್ತಿದ್ದಾರೆ. ಅದರಂತೆ, ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ 51 ಲಕ್ಷ ಮತದಾರರಿಗೆ ಇನ್ನೂ ಫಾರ್ಮ್‌ಗಳು ತಲುಪಿಲ್ಲ ಎಂಬ ಮಾಹಿತಿ ಇದೆ. ಉದಾಹರಣೆಗೆ:
ಬೆಂಗಳೂರು ಉತ್ತರ – 9 ಲಕ್ಷ
ಬೆಂಗಳೂರು ದಕ್ಷಿಣ – 11 ಲಕ್ಷ
ಬೆಂಗಳೂರು ಗ್ರಾಮಾಂತರ – 17 ಲಕ್ಷ
ಬೆಂಗಳೂರು ನಗರ – 11 ಲಕ್ಷ
ಇದು ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ ಎಂಬುದಲ್ಲ.
ಇದಲ್ಲದೆ, ರಾಜ್ಯದಾದ್ಯಂತ ಸುಮಾರು 15 ಲಕ್ಷ ಮತದಾರರು ಮೃತಪಟ್ಟಿದ್ದಾರೆ, 63 ಲಕ್ಷ ಮತದಾರರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ, ಮತ್ತು 16 ಲಕ್ಷ ಮತದಾರರು ಮೃತರಾಗಿದ್ದಾರೆ ಎಂಬ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಒಟ್ಟು ಸುಮಾರು 5 ಕೋಟಿ 54 ಲಕ್ಷ ಮತದಾರರಲ್ಲಿ ಕೇವಲ ಒಂದು ಕೋಟಿ ಮತದಾರರ ಫಾರ್ಮ್‌ಗಳು ಇನ್ನೂ ಬಾಕಿಯಿವೆ. ಆದ್ದರಿಂದ, ಆ ಮತದಾರರ ಪಟ್ಟಿಯನ್ನು ದೃಢೀಕರಿಸಲು ಅವರ ಹೆಸರಿನ ಮುಂದೆ ಫಾರ್ಮ್ ಸಲ್ಲಿಸುವಂತೆ ಸೂಚಿಸಲಾಗಿದೆ.
ನೀವು ಕೂಡ ನಿಮ್ಮ ಮತದಾರರ ಫಾರ್ಮ್ ಅನ್ನು ಆಗಸ್ಟ್ 8ರೊಳಗೆ ಭರ್ತಿ ಮಾಡಿ ಸಲ್ಲಿಸಿ. ಫಾರ್ಮ್ ಸಲ್ಲಿಸದಿದ್ದರೆ ನಂತರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಸರ್ಕಾರದಿಂದ ನೀಡಿರುವ ಸೂಚನೆಗಳನ್ನು ಪಾಲಿಸಿ, ನಿಮ್ಮ ಮತದಾನದ ಹಕ್ಕನ್ನು ಸುರಕ್ಷಿತವಾಗಿರಿಸಿಕೊಳ್ಳಿ.












