ಬಿಜೆಪಿ ಬೆಳೆಯಲು ಸಹಕಾರ ನೀಡಿದ ಮತ್ತೊಂದು ಪಕ್ಷದ ಯುಗಾಂತ್ಯ!

ಪಶ್ಚಿಮ ಬಂಗಾಳ ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ನಡುವಿನ ಸಂಬಂಧ ಒಂದು ಕಾಲದಲ್ಲಿ ಅತ್ಯಂತ ಆಪ್ತವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ ಇಂದು ಬಂಗಾಳದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆದು ನಿಲ್ಲಲು ಅಡಿಪಾಯ ಹಾಕಿಕೊಟ್ಟಿದ್ದೇ ಮಮತಾ ಬ್ಯಾನರ್ಜಿ ಎಂದರೆ ತಪ್ಪಾಗಲಾರದು ಅಂಧಭಕ್ತರು ಇವತ್ತು ಯಾರನ್ನು ರಾಕ್ಷಸಿ ಎಂದು ಕರೆಯುತ್ತಾರೋ ಅದೇ ರಾಕ್ಷಸಿ ಕೈ ಬೆರಳು ಹಿಡಿದು ಬಂಗಾಳ ಪ್ರವೇಶ ಮಾಡಿದ್ದು ಬಿಜೆಪಿ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎಂಬ ಶಕ್ತಿ ಇಷ್ಟು ಬೃಹತ್ತಾಗಿ ಬೆಳೆಯಲು ಕಾರಣ ಯಾರು ಎಂಬ ಪ್ರಶ್ನೆಗೆ ಇತಿಹಾಸ ನೀಡುವ ಉತ್ತರ ಮಮತಾ ಬ್ಯಾನರ್ಜಿ!!

1990ರ ದಶಕದ ಅಂತ್ಯದಲ್ಲಿ ಬಂಗಾಳದಲ್ಲಿ ಬಿಜೆಪಿ ಒಂದು ಅಪ್ರಸ್ತುತ ಶಕ್ತಿಯಾಗಿತ್ತು ಅಂದು ಕಮ್ಯುನಿಸ್ಟ್ ಪಕ್ಷದ ಭದ್ರಕೋಟೆಯನ್ನು ಭೇದಿಸಲು ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರದ ಬೆಂಬಲ ಬೇಕಿತ್ತು ಈ ಕಾರಣಕ್ಕಾಗಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾದರು

ಬಿಜೆಪಿಯ ಬೆಳವಣಿಗೆಗೆ ಮಮತಾ ಅವರ ಕೊಡುಗೆಯನ್ನು ಈ ಕೆಳಗಿನ ಅಂಶಗಳಲ್ಲಿ ಗಮನಿಸಬಹುದು

ಮೊದಲನೆಯದಾಗಿ ರಾಜಕೀಯ ಮಾನ್ಯತೆ 1998 ಮತ್ತು 1999ರ ಚುನಾವಣೆಗಳಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿಯೊಂದಿಗೆ ಕೈಜೋಡಿಸಿದಾಗ ಬಂಗಾಳದ ಜನರಿಗೆ ಬಿಜೆಪಿಯ ಮೇಲಿದ್ದ ಅಸ್ಪೃಶ್ಯತೆ ಎಂಬ ಭಾವನೆ ದೂರವಾಯಿತು ಬಂಗಾಳದ ನೆಲದ ಮಗಳೇ ಬಿಜೆಪಿಯನ್ನು ಒಪ್ಪಿಕೊಂಡ ಮೇಲೆ ನಾವೇಕೆ ಒಪ್ಪಬಾರದು ಎಂಬ ಮನಸ್ಥಿತಿ ಜನರಲ್ಲಿ ಮೂಡಿತು ಇದು ಬಿಜೆಪಿಗೆ ರಾಜ್ಯದಲ್ಲಿ ಸಮ್ಮತಿ ಸಿಗುವಂತೆ ಮಾಡಿತು

ಎರಡನೆಯದಾಗಿ ರೈಲ್ವೆ ಸಚಿವ ಸ್ಥಾನದ ಪ್ರಭಾವ ಮಮತಾ ಬ್ಯಾನರ್ಜಿ ಅವರು ಎನ್‌ಡಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ಅಧಿಕಾರ ಅನುಭವಿಸಿದರು ಆ ಸಮಯದಲ್ಲಿ ಬಂಗಾಳಕ್ಕೆ ಹಲವಾರು ರೈಲ್ವೆ ಯೋಜನೆಗಳನ್ನು ತರುವ ಮೂಲಕ ಅವರು ಕೇಂದ್ರ ಸರ್ಕಾರದ ವರ್ಚಸ್ಸನ್ನು ಹೆಚ್ಚಿಸಿದರು ಇದು ಬಿಜೆಪಿಯ ಆಡಳಿತದ ಬಗ್ಗೆ ಬಂಗಾಳಿ ಜನರಲ್ಲಿ ಸಕಾರಾತ್ಮಕ ಭಾವನೆ ಮೂಡಲು ಸಹಕಾರಿಯಾಯಿತು

ಮೂರನೆಯದಾಗಿ ಎಡಪಕ್ಷಗಳ ಮತದಾರರ ವರ್ಗಾವಣೆ ಮಮತಾ ಬ್ಯಾನರ್ಜಿ ಅವರು ಎಡಪಕ್ಷಗಳನ್ನು ಬಂಗಾಳದಿಂದ ಕಿತ್ತೊಗೆಯುವ ಭರದಲ್ಲಿ ಆ ಪಕ್ಷಗಳ ವಿರೋಧಿ ಮತಗಳನ್ನೆಲ್ಲಾ ಕ್ರೋಢೀಕರಿಸಿದರು ಆದರೆ ಕಾಲಕ್ರಮೇಣ ತೃಣಮೂಲ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡ ಜನರಿಗೆ ಅಂದು ಮಮತಾ ಅವರೇ ಪರಿಚಯಿಸಿದ್ದ ಬಿಜೆಪಿ ಒಂದು ಬಲಿಷ್ಠ ಪರ್ಯಾಯವಾಗಿ ಕಾಣತೊಡಗಿತು ಮಮತಾ ಅವರು ನಿರ್ಮಿಸಿದ ಕಮ್ಯುನಿಸ್ಟ್ ಮುಕ್ತ ಬಂಗಾಳದ ಹಾದಿಯಲ್ಲಿ ಬಿಜೆಪಿ ಅತ್ಯಂತ ವೇಗವಾಗಿ ಸಂಚರಿಸಿತು

ನಾಲ್ಕನೆಯದಾಗಿ ರಾಜಕೀಯ ಧ್ರುವೀಕರಣ ಇಂದು ಮಮತಾ ಬ್ಯಾನರ್ಜಿ ಮಾಡುತ್ತಿರುವ ರಾಜಕೀಯ ತಂತ್ರಗಳೇ ಬಿಜೆಪಿಗೆ ಹಿಂದೂ ಮತಗಳನ್ನು ಒಗ್ಗೂಡಿಸಲು ಅಸ್ತ್ರಗಳಾಗಿ ಪರಿಣಮಿಸಿವೆ ಅವರು ಎಷ್ಟೇ ವಿರೋಧಿಸಿದರೂ ಇತಿಹಾಸದ ಪುಟಗಳಲ್ಲಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಬೆಳವಣಿಗೆಗೆ ಪರೋಕ್ಷವಾಗಿ ಶಕ್ತಿ ತುಂಬಿದ ನಾಯಕಿ ಎಂದೇ ಗುರುತಿಸಲ್ಪಡುತ್ತಾರೆ

ಇಂದು ಮಮತಾ ಬ್ಯಾನರ್ಜಿ ಬಿಜೆಪಿಯನ್ನು ಹೊರಗಿನ ಪಕ್ಷ ಎಂದು ಕರೆಯುತ್ತಿರಬಹುದು ಆದರೆ ಅದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಿದ ಇತಿಹಾಸವನ್ನು ಯಾರು ಅಳಿಸಲು ಸಾಧ್ಯವಿಲ್ಲ ಬಂಗಾಳದ ಇಂದಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಒಂದು ಕಾಲದಲ್ಲಿ ಬಿಜೆಪಿಗೆ ದಾರಿ ಮಾಡಿಕೊಟ್ಟ ತೃಣಮೂಲ ಕಾಂಗ್ರೆಸ್ ಪಕ್ಷವೇ ಇಂದು ಅದೇ ಬಿಜೆಪಿಯ ಎದುರು ಅಸ್ತಿತ್ವ ಕಳೆದುಕೊಂಡಿದೆ.

ಒಂದು ಸೋಲು ಅಸ್ತಿತ್ವ ಕಳೆದುಕೊಳ್ಳುವಂತೆ ಹೇಗೆ ಮಾಡುತ್ತದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಇದ್ದರೆ.

ಒಮ್ಮೆ ಬಿಜೆಪಿ ಗೆದ್ದರೆ ಇನ್ನೂ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ತನಕ ಬಿಜೆಪಿ ಅಧಿಕಾರ ಕಳೆದುಕೊಳ್ಳುವುದಿಲ್ಲ!

ಅದು ಹತ್ತು ವರ್ಷ ಇಲ್ಲವೇ ಇಪ್ಪತ್ತು ವರ್ಷ.

ಅಲ್ಲಿಯವರೆಗೆ ಅಧಿಕಾರ ಇಲ್ಲದ ಯಾವುದೇ ಪಕ್ಷ ಗಟ್ಟಿಯಾಗಿ ನಿಲ್ಲುವುದಿಲ್ಲ.

ಬರಹ – ಹರೀಶ್ ಕುಮಾರ್