ನಾರಿ ಶಕ್ತಿ ವಂದನ ಅಧಿನಿಯಮ-2023ರ ಜಾರಿ/ಅನುಷ್ಠಾನ ಬಿಲ್ ಲೋಕಸಭೆಯ ಅನುಮೋದನೆಯು ವಿಫಲವಾಗಿರುವುದಕ್ಕೆ ಭಾರತೀಯ ಜನತಾ ಪಾರ್ಟಿಯವರು ಕಾಂಗ್ರೆಸ್ ಮೊದಲುಗೊಂಡು ವಿರೋಧ ಪಕ್ಷವೇ ಕಾರಣ ಎಂಬ ಅಪಪ್ರಚಾಯ ಮಾಡುತ್ತಿದ್ದು, ಬಿಜೆಪಿಯವರಿಗೆ ಇದೊಂದು ರಾಜಕೀಯ ಅಸ್ತ್ರವಾಗಿದೆಯೇ ವಿನಃ ಮಸೂದೆಯನ್ನು (33 ಶೇ. ಮಹಿಳಾ ಮೀಸಲಾತಿ) ಸಮರ್ಪಕವಾಗಿ ಜಾರಿಗೊಳಿಸುವ ಕಡೆ ಗಮನವಿಲ್ಲ.
ಮಹಿಳೆಯರಿಗೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 33 ಮೀಸಲಾತಿ ಕಲ್ಪಿಸಿದ್ದೇ ದಿವಂಗತ ರಾಜೀವ್ ಗಾಂಧಿಯವರು ದೇಶದ ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ, ಇದು ಬಿಜೆಪಿಯವರಿಗೆ ತಿಳಿದಿರಲಿ, ಈಗ ಮಂಡನೆಯಾಗಿರುವ ಬಿಲ್ ನಲ್ಲಿರುವ ಲೋಪಗಳನ್ನು ಸರಿಪಡಿಸಬೇಕೆಂಬುದು ಕಾಂಗ್ರೆಸ್ ಪಕ್ಷದ ಆಗ್ರಹ
1) ಕ್ಷೇತ್ರ ಮರುವಿಂಗಡಣೆ ಕಡ್ಡಾಯ ಮಸೂದೆಯ ಪ್ರಕಾರ ಮೀಸಲಾತಿಯು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ನಂತರವೇ ಜಾರಿಗೆ ಬರುತ್ತದೆ. ಇದು ಜಾರಿಯಲ್ಲಾಗುವ ವಿಳಂಬ २९३.
2) ಮಸೂದೆ ತಕ್ಷಣ ಜಾರಿಯಾಗದೆ 2029ಕ್ಕೆ ಜಾರಿಯಾದಲ್ಲಿ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಅನ್ಯಾಯವಾಗುತ್ತದೆ, ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ.
3) ಓ.ಬಿ.ಸಿ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಇಲ್ಲದಿರುವುದು ಮತ್ತು ಆರ್ಥಿಕವಾಗಿ ಬಲಾಡ್ಯರಿಗೆ ಮಾತ್ರ ಅವಕಾಶಗಳಿರುವುದರಿಂದ ಸೂಕ್ತ ಮಾನದಂಡಗಳನ್ನು ಅಳವಡಿಸಿ ಸಮಾಜದ ಎಲ್ಲಾ ವರ್ಗದ ಹೆಣ್ಣು ಮಕ್ಕಳು ಈ ಶೇ. 33 ಮೀಸಲಾತಿಯೊಳಗೆ ಬರಬೇಕೆಂಬ ಸಂಕಲ್ಪ ಕಾಂಗ್ರೆಸ್ ಪಕ್ಷದ್ದಾಗಿದೆ.
ಹಾಗಾಗಿ ಕಾಂಗ್ರೆಸ್ ವಿರೋಧಿಸುತ್ತಿರುವುದು ಮಸೂದೆಯನ್ನಲ್ಲ ಬದಲಾಗಿ ಅದರಲ್ಲಿರುವ ಅನ್ಯಾಯದ ಸರಮಾಲೆಗಳನ್ನು ನ್ಯಾಯಯುತವಾಗಿ ಸರಿಪಡಿಸಿದ್ದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಈ ಮಸೂದೆಯನ್ನು ವಿರೋಧಿಸುವುದಿಲ್ಲ ಮತ್ತು ಈ ಪರಿಕಲ್ಪನೆ ಆರಂಭವಾಗಿದ್ದು ಕಾಂಗ್ರೆಸ್ ಪಕ್ಷದಿಂದಲೇ ಎಂದು ಹೆಮ್ಮೆಯಿಂದ ಈ ಪತ್ರಿಕಾ ಪ್ರಕಟಣೆ ಮೂಲಕ ಹೇಳ ಬಯಸುತ್ತೇನೆ.
ತಮ್ಮ ವಿಶ್ವಾಸಿ
ಆರತಿ ಕ್ರಷ್ಣ, ವಿಧಾನ ಪರಿಷತ್, ಸದಸ್ಯರು












