ಬಾಗಲಕೋಟೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ಅಗಲಿಕೆ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಸದಾ ಜನಕಲ್ಯಾಣಕ್ಕಾಗಿ ದುಡಿಯುತ್ತಿದ್ದ ಅವರ ಅಭಿವೃದ್ಧಿಯ ಕನಸುಗಳು ನನಸಾಗಲು ಈ ಉಪಚುನಾವಣೆ ನಿರ್ಣಾಯಕವಾಗಿದ್ದು, ಕ್ಷೇತ್ರದಲ್ಲಿ ಪ್ರಗತಿಯ ಹಾದಿಯನ್ನು ಮುಂದುವರಿಸಲು ಮತ್ತು ಬಾಗಲಕೋಟೆಯ ಧ್ವನಿಯಾಗಿ ಕೆಲಸ ಮಾಡಲು ಅವರ ಪುತ್ರ ಉಮೇಶ್ ಮೇಟಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಅವಕಾಶ ನೀಡಲಾಗಿದೆ.
ನುಡಿದಂತೆ ನಡೆದ ನಮ್ಮ ಸರ್ಕಾರದ ಕೈ ಬಲಪಡಿಸಲು ಈ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಅವರಿಗೆ ಮತ ನೀಡಿ ಆಶೀರ್ವದಿಸಬೇಕೆಂದು ಬಾಗಲಕೋಟೆಯ ಸಮಸ್ತ ಮತದಾರರಲ್ಲಿ ವಿನಂತಿಸುತ್ತೇನೆ.
#BagalkotByElection #Congress #UmeshMeti #SatishJarkiholi












